ಒಂದ್ ಮದ್ವೆಯಾದವ್ರೇ ಸಾಕಪ್ಪಾ ಸಾಕು ಒಬ್ಳು ಹೆಂಡ್ತಿಯನ್ನೇ ಸುಧಾರಿಸಾಕೋಗಲ್ಲ ಅಂತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ 100 ಕ್ಕೂ ಅಧಿಕ ವಿವಾಹಗಳನ್ನು ಮಾಡಿಕೊಂಡಿದ್ದಾನೆ. ಇನ್ನೂ ಅಚ್ಚರಿಯ ವಿಚಾರ ಅಂದ್ರೆ ಇದ್ರಲ್ಲಿ ಯಾರಿಗೂ ಡಿವೋರ್ಸ್ ಕೊಟ್ಟಿಲ್ವಂತೆ.
ಮದುವೆ ಅನ್ನೋದು ಒಂದು ಅರ್ಥಪೂರ್ಣವಾದ ಸಂಬಂಧ. ಹೀಗಾಗಿ ಜೀವನದಲ್ಲಿ ಒಬ್ಬರು ಒಂದು ಬಾರಿಯಷ್ಟೇ ವಿವಾಹವಾಗುತ್ತಾರೆ. ಕೆಲವು ಅನಿವಾರ್ಯ ಕಾರಣಗಳಿಂದ ಸಂಗಾತಿ ದೂರವಾದಾಗ, ಮೃತಪಟ್ಟಾಗ ಕೆಲವೊಬ್ಬರು ಎರಡನೇ ವಿವಾಹವಾಗುತ್ತಾರೆ. ಆದ್ರೆ ಇನ್ನೂ ಕೆಲವರು ಇಂಥಾ ಯಾವ ಕಾರಣವೂ ಇಲ್ಲದೆ ಎರಡು ಮೂರು ಮದುವೆಯಾಗಿರುತ್ತಾರೆ. ಕೆಲವೊಂದು ಪ್ರದೇಶ ಹಾಗೂ ಸಮುದಾಯದಲ್ಲಿ ವ್ಯಕ್ತಿ ಎಷ್ಟು ಬೇಕಾದರೂ ಮದುವೆಯಾಗಲು ಅವಕಾಶ ಇರುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮದುವೆಯಾಗಿರುವುದು ಒಂದೆರಡು ಬಾರಿಯಲ್ಲ ಈ ವ್ಯಕ್ತಿ 100ಕ್ಕೂ ಹೆಚ್ಚು ಮಹಿಳೆಯರ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ.
ಹೌದು ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಗಿಯೋವಾನಿ ವಿಜಿಲಿಟ್ಟೋ ಎಂಬ ಹೆಸರಿನಲ್ಲಿ ಗುರುತಿಸಲಾಗಿರುವ ವ್ಯಕ್ತಿಯೊಬ್ಬ 1949ರಿಂದ 1981ರ ನಡುವೆ ವಿಚ್ಛೇದನವನ್ನೇ ಪಡೆಯದೇ ನೂರಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದಾನೆ. ಈತನ ಸಾಧನೆಯನ್ನು ಗಿನ್ನೆಸ್ ವಿಶ್ವ ದಾಖಲೆ ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ತ ಇದುವರೆಗೆ ಗರಿಷ್ಠ ಸಂಖ್ಯೆಯ ವಿವಾಹಗಳನ್ನು ಮಾಡಿಕೊಂಡ ದಾಖಲೆಯನ್ನು ತನ್ನ ಹೆಸರಿನ ಮೇಲೆ ಹೊಂದಿದ್ದಾನೆ. ತನ್ನ ಕೊನೆಯ ಪತ್ನಿಯನ್ನು ಮದುವೆಯಾದ ಸಂದರ್ಭದಲ್ಲಿ ಗಿಯೋವಾನಿ ಎಂಬ ಹೆಸರಿಟ್ಟುಕೊಂಡಿದ್ದಾನೆ.
ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಗೆ ಈಗಾಗ್ಲೇ ಮದ್ವೆ ಆಗಿದ್ಯಾ? ಹೀಗೆ ತಿಳ್ಕೊಳಿ…
ಅಮೆರಿಕದ 27 ವಿವಿಧ ರಾಜ್ಯಗಳು ಹಾಗೂ 14 ದೇಶಗಳಲ್ಲಿ ಮದುವೆ
ಇಟಲಿಯ ಸಿರಾಕ್ಯೂಸಾದಲ್ಲಿ ಏಪ್ರಿಲ್ 3, 1929ರಲ್ಲಿ ಜನಿಸಿರುವುದಾಗಿ ಹೇಳಿಕೊಂಡಿರುವ ಗಿಯೋವಾನಿ ತನ್ನ 53ನೇ ವರ್ಷದಲ್ಲಿ ಈ ರೀತಿ ಮಾಡುವಾಗ ಸಿಕ್ಕಿ ಹಾಕಿಕೊಂಡಿದ್ದ. ತನ್ನ ನಿಜ ಹೆಸರು ನಿಕೋಲಾಯ್ ಪೆರುಸ್ಕೋವ್ ಎಂದು ಹೇಳಿಕೊಂಡಿದ್ದ ಈತನ ನಿಜನಾಮ ಫ್ರೆಡ್ ಜಿಪ್ಪ್ ಆಗಿದ್ದು, ಈತ ಏಪ್ರಿಲ್ 3, 1936ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜನಿಸಿದ್ದಾನೆ ಎಂದು ವಕೀಲರೊಬ್ಬರು ವಾದ ಮಾಡಿದ್ದರು. 32 ವರ್ಷಗಳ ಅವಧಿಯಲ್ಲಿ 104 ಅಥವಾ 105 ಮಹಿಳೆಯರನ್ನು ವಿಜಿಲಿಟೋ ಮದುವೆಯಾಗಿದ್ದಾನೆ. ಆದರೂ ಸಹ ಈತನ ಯಾವೊಬ್ಬ ಪತ್ನಿಗೂ ಈತನದೇ ಮತ್ಯಾವುದೇ ಪತ್ನಿಯ ಬಗ್ಗೆ ಪರಸ್ಪರ ಗೊತ್ತೇ ಇರಲಿಲ್ಲ! ಅಮೆರಿಕದ 27 ವಿವಿಧ ರಾಜ್ಯಗಳು ಹಾಗೂ 14 ದೇಶಗಳಲ್ಲಿ ವಿಜಿಲಿಟೋ ಇಷ್ಟೆಲ್ಲಾ ಮದುವೆಗಳನ್ನು ಆಗಿದ್ದಾನೆ.
ಇದರ ವಿಡಿಯೋವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ವ್ಯಕ್ತಿಯ ಹೆಸರು ಜಿಯೋವಾನಿ ವಿಗ್ಲಿಯೊಟೊ. ಇದು ಆತನ ನಿಜವಾದ ಹೆಸರಲ್ಲ ಎನ್ನಲಾಗಿದೆ. ಅವನು ತನ್ನ ಕೊನೆಯ ಪತ್ನಿಯೊಂದಿಗಿನ ಮದುವೆಯ ಸಮಯದಲ್ಲಿ ಅದೇ ಹೆಸರನ್ನು ಬಳಸಿದ್ದನು ಎನ್ನಲಾಗಿದೆ.
ಪತ್ನಿಯಾಗಿ ನಟಿಸಲು ಬಂದಿದ್ದವಳ ಮೇಲೇನೆ ಲವ್ವಾಯ್ತು, ಬಿಟ್ಹೋಗ್ಬೇಡ ಎಂದು ಗೋಳಾಡಿದ ಭೂಪ!
ಮೊದಲ ಡೇಟ್ ನಲ್ಲಿಯೇ ಪ್ರಪೋಸ್ ಮಾಡುತ್ತಿದ್ದ
ವಿಗ್ಲಿಯೊಟೊ ಮಹಿಳೆಯರನ್ನು ಚೋರ್ ಬಜಾರ್‌ನಲ್ಲಿ ಭೇಟಿಯಾಗಿ ಮದುವೆಯ ಪ್ರಸ್ತಾಪ ಮುಂದಿಡುತ್ತಿದ್ದ. ನಂತರ ಮದುವೆಯಾಗಿ ಅವರಿಂದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ. ವಿಗ್ಲಿಯೊಟೊ ತನ್ನ ಮನೆ ದೂರದಲ್ಲಿದೆ ಎಂದು ಮಹಿಳೆಯರಿಗೆ ಆಗಾಗ್ಗೆ ಹೇಳುತ್ತಿದ್ದ, ಆದ್ದರಿಂದ ಅವರು ತಮ್ಮ ಎಲ್ಲಾ ವಸ್ತುಗಳನ್ನು ಅವನ ಬಳಿಗೆ ತರಬೇಕು ಎಂಬ ಕಂಡೀಶನ್ ಹಾಕುತ್ತಿದ್ದ ಎನ್ನಲಾಗಿದೆ. ಇದಾದ ನಂತರ ಮಹಿಳೆಯರ ಸಾಮಾನುಗಳನ್ನು ಪ್ಯಾಕ್ ಮಾಡುತ್ತಿದ್ದು, ಲಾರಿಯಲ್ಲಿ ಸಾಮಾನುಗಳನ್ನು ಹಾಕಿಕೊಂಡು ಪರಾರಿಯಾಗುತ್ತಿದ್ದ. ಇದಾದ ಬಳಿಕ ಆತ ಸಿಗುತ್ತಿರಲ್ಲಿಲ್ಲ. ನಂತರ ಕಳ್ಳ ಮಾರುಕಟ್ಟೆಯಲ್ಲಿ ಸಾಮಾನುಗಳನ್ನು ಮಾರಿ ತನ್ನ ಮುಂದಿನ ಹೆಂಡತಿಗಾಗಿ ಹುಡುಕಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಫ್ಲೋರಿಡಾದಲ್ಲಿ ಶರೋನ್ ಕ್ಲಾರ್ಕ್ ಎಂಬ ಮಹಿಳೆಯೊಬ್ಬಳು ಆತನನ್ನು ಸೆರೆ ಹಿಡಿದಿದ್ದಳು. ವಿಗ್ಲಿಯೊಟ್ಟೊವನ್ನು 28 ಡಿಸೆಂಬರ್ 1981ರಂದು ಬಂಧಿಸಲಾಯಿತು. ಆತನ ವಿರುದ್ಧದ ವಿಚಾರಣೆಯು ಜನವರಿ 1983ರಲ್ಲಿ ಪ್ರಾರಂಭವಾಯಿತು, ಇದರಲ್ಲಿ ಅವರಿಗೆ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ತಾನೊಬ್ಬ ಹೆಣ್ಣಿನ ವಿಚಾರದಲ್ಲಿ ದೌರ್ಬಲ್ಯ ಹೊಂದಿದ್ದ ಹತಾಶ ರೊಮ್ಯಾಂಟಿಕ್ ವ್ಯಕ್ತಿ ಎಂದೇ ವಿಜಿಲಿಯೋಟೋ ತನ್ನ ಬಗ್ಗೆ ತಾನು ಹೇಳಿಕೊಳ್ಳುತ್ತಿದ್ದ.. ಆತ ತನ್ನ ಜೀವನದ ಕೊನೆಯ 8 ವರ್ಷಗಳನ್ನು ಅರಿಜೋನಾದ ಜೈಲಿನಲ್ಲಿ ಕಳೆದಿದ್ದ ಮತ್ತು 1991 ರಲ್ಲಿ ತನ್ನ 61ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಎನ್ನಲಾಗುತ್ತದೆ.