ಜರ್ಮನಿ ಗಾಯಕಿ ಬಾಯಲ್ಲೂ ಸುಲಲಿತವಾಗಿ ಮೂಡಿದ “ರಾಮ್ ಆಯೇಂಗೆ’: ವೀಡಿಯೋಕ್ಕೆ ಭಾರತೀಯರು ಫಿದಾ

By Suvarna News  |  First Published Jan 19, 2024, 6:46 PM IST

“ರಾಮ್ ಆಯೇಂಗೆ’ ಹಾಡಿಗೆ ಇಡೀ ದೇಶವೇ ತಲೆದೂಗಿದೆ. ಇದೀಗ, ವಿದೇಶಗಳ ಗಾಯಕರೂ ಸಹ ಈ ಹಾಡನ್ನು ಹಾಡುತ್ತಿರುವುದು ಕಂಡುಬರುತ್ತಿದೆ. ಜರ್ಮನಿ ಗಾಯಕಿ ಕಸ್ಸಂದ್ರ ಮೇ ಅವರು ಸಹ ಹಿಂದಿ ಭಾಷೆಯಲ್ಲಿರುವ ಈ ಹಾಡನ್ನು ಸುಲಲಿತವಾಗಿ ಹಾಡಿದ್ದಾರೆ.
 


ಇಡೀ ದೇಶವೇ ಇಂದು ಅಯೋಧ್ಯೆಯ ಮೇಲೆ ಕಣ್ಣಿಟ್ಟಿದೆ. ಅಲ್ಲಿನ ಪ್ರತಿಯೊಂದು ಆಗುಹೋಗುಗಳು ಕುತೂಹಲ ಮೂಡಿಸುತ್ತಿವೆ. ರಾಮಭಕ್ತರ ಸಾಹಸಗಳು ಜನಮನ ಗೆಲ್ಲುತ್ತಿವೆ. ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಕ್ಷಣಗಣಗೆ ಶುರುವಾಗಿರುವ ಈ ಸಮಯದಲ್ಲಿ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹಲವಾರು ರೀತಿಯ ಸಂಚಲನ ಕಂಡುಬರುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ “ರಾಮ್ ಆಯೇಂಗೆ’ ಹಾಡಂತೂ ಇಡೀ ವಿಶ್ವಾದ್ಯಂತ ಹವಾ ಮೂಡಿಸಿದೆ ಎಂದರೆ ತಪ್ಪಲ್ಲ. ಅನೇಕ ವಿದೇಶಿ ಗಾಯಕರು ಕೂಡ ಈ ಹಾಡನ್ನು ಹಾಡಲು ಮುಗಿಬೀಳುತ್ತಿದ್ದಾರೆ. ಇದೀಗ, ಜರ್ಮನಿಯ ಗಾಯಕಿ ಕಸ್ಸಂದ್ರ ಮೇ ಸ್ಪಿಟ್ ಮನ್ ಅವರು ಸಹ ಈ ಹಾಡನ್ನು ಹಾಡಿ ರಾಮನಿಗೆ ಸ್ವಾಗತ ಕೋರಿದ್ದಾರೆ. 

ದೇಶಕ್ಕೆ ದೇಶವೇ (Nation) ಭಕ್ತಿಯ ಸಾಗರದಲ್ಲಿ ಮಿಂದೇಳುತ್ತಿರುವ ಈ ಸಮಯದಲ್ಲಿ “ರಾಮ್ ಆಯೇಂಗೆ’ (Ram Ayenge) ಹಾಡು ಎಲ್ಲೆಡೆ ಅಭೂತಪೂರ್ವ ಮನ್ನಣೆ ಗಳಿಸುತ್ತಿದೆ. ಜನರು ಎಲ್ಲೆಲ್ಲೂ ಸಾಮೂಹಿಕವಾಗಿ, “ರಾಮ್ ಆಯೇಂಗೆ’ ಹಾಡನ್ನು (Song) ಹಾಡುತ್ತ ಧನ್ಯತೆ ಮೆರೆಯುತ್ತಿದ್ದಾರೆ. ಇದೀಗ ಜರ್ಮನಿಯ (Germany) ಗಾಯಕಿ (Singer) ಕಸ್ಸಂದ್ರ ಮೇ (Cassandra Mae Spittmann) ಕೂಡ ಈ ಹಾಡನ್ನು ಹಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ವೈರಲ್ (Viral) ಆಗಿದೆ. ಅವರು ಈ ಹಾಡನ್ನು ಅತ್ಯದ್ಭುತವಾಗಿ ಹಾಡಿದ್ದು, ಭಾರತೀಯರಂತೂ (Indians) ಫಿದಾ ಆಗಿದ್ದಾರೆ. 
ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಶೇರ್ ಮಾಡಲಾಗಿದೆ. ಅಲ್ಲಿನ ದೃಶ್ಯದಲ್ಲಿ ಯಾರೋ ಒಬ್ಬರು “ರಾಮ್ ಆಯೇಂಗೆ’ ಹಾಡನ್ನು ಹಾಡುವಂತೆ ಮನವಿ ಮಾಡುತ್ತಾರೆ. ಅದಕ್ಕೆ ಖುಷಿಯಿಂದ ಸ್ಪಂದಿಸುವ ಆಕೆ ಹಾಡನ್ನು ಸಹ ಅಷ್ಟೇ ಚೆನ್ನಾಗಿ ಹಾಡುತ್ತಾರೆ. ಒಟ್ಟಿನಲ್ಲಿ ಭಾರತೀಯರ ಮನ ಗೆದ್ದಿರುವ ಈ ಹಾಡು ವಿದೇಶದ (Foreign) ಗಾಯಕರನ್ನೂ ಆವರಿಸಿಕೊಂಡಿದೆ. 

Latest Videos

undefined

ಕರ್ನಾಟಕದಲ್ಲಿ ಪ್ರಭು ಶ್ರೀರಾಮನ ಹೆಜ್ಜೆ ಗುರುತು, ಸೀತೆಯನ್ನು ಹುಡುಕಿ ಬಂದ ರಾಮನ ಕುರುಹುಗಳು..!

ಈ ಪೋಸ್ಟ್ (Post) ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶೇರ್ ಮಾಡಿದ ಒಂದೇ ದಿನದಲ್ಲಿ 2 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 10 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ನೂರಾರು  ಜನ ಕಾಮೆಂಟ್ ಮಾಡಿದ್ದು, ಈ ಎಲ್ಲವುಗಳ ಸಂಖ್ಯೆ ಏರುತ್ತಲೇ ಇದೆ. ಕಸ್ಸಂದ್ರ ಮೇ ಸ್ಪಿಟ್ ಮನ್ ಅವರ ಪ್ರತಿಭೆಯನ್ನು (Talent) ಎಲ್ಲರೂ ಹೊಗಳುತ್ತಿದ್ದಾರೆ. ಎ ಎನ್ ಐ ಸುದ್ದಿಸಂಸ್ಥೆ ಇದನ್ನು ಪೋಸ್ಟ್ ಮಾ

| Duisburg, Germany | German Singer Cassandra Mae Spittmann sings the devotional song ‘Ram Aayenge’.

Her rendition of the Ram Bhajan has gone viral on social media. pic.twitter.com/tAYYRP9SCW

— ANI (@ANI)

 

ಕಾಮೆಂಟ್ ಗಳು ಬ್ಯೂಟಿಫುಲ್:  ಒಬ್ಬ ಸೋಷಿಯಲ್ ಮೀಡಿಯಾ ಬಳಕೆದಾರರು “ಅಮೇಜಿಂಗ್, ಹಿಂದಿ (Hindi) ಭಾಷೆಯನ್ನು ಹಾಡಲು ಅತ್ಯಂತ ಸೂಕ್ತವಾದ ಸ್ವರ. ಏರಿಳಿತಗಳನ್ನು ಅಷ್ಟು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಈಕೆ ನಿಜಕ್ಕೂ ಅಮೇಜಿಂಗ್’ ಎಂದು ಹೇಳಿದ್ದಾರೆ.

ರಾಮಮಂದಿರ ಕಟ್ಟಲು ಮೋದಿಗೆ ದೀಕ್ಷೆ ಕೊಟ್ಟನಂತೆ ಶ್ರೀರಾಮ: ರಾಮ ಸತ್ಯ ಬಿಚ್ಚಿಟ್ಟ ಬಿಜೆಪಿ ಭೀಷ್ಮ..!

ಹಲವರು ಈಕೆಯ ದನಿಯನ್ನು “ಅದ್ಭುತ’ ಎಂದು ಮೆಚ್ಚಿಕೊಂಡಿದ್ದಾರೆ. ಯಾರೋ ಒಬ್ಬರು “ಭಾರತ (India) ಮತ್ತು ಜರ್ಮನಿಯ ಬಾಂಧವ್ಯವನ್ನು (Relationship) ಇಂತಹ ಸಣ್ಣಪುಟ್ಟ ಸಂಗತಿಗಳೇ ಬಿಂಬಿಸುತ್ತವೆ’ ಎಂದು ಹೇಳಿದ್ದಾರೆ. “ಸುಂದರ ಸ್ವರ’ ಎಂದಿರುವ ನೆಟ್ಟಿಗರು ಆಕೆ ಹಿಂದಿಯನ್ನು ಅತ್ಯಂತ ಸ್ಫುಟವಾಗಿ (Perfect)  ಹಾಡಿರುವುದಕ್ಕೆ ಮೆಚ್ಚುಗೆ ಸೂಸಿದ್ದಾರೆ. 

click me!