ಪಾರ್ಟೀಲಿ ಮಾಡಿದ ಒಂದೇ ಒಂದು ತಪ್ಪಿಗೆ ಪತ್ನಿ, ಮನೆ, ಕೆಲಸ ಎಲ್ಲವೂ ಕಳೆದುಕೊಂಡ!

By Suvarna News  |  First Published Jan 4, 2024, 2:18 PM IST

ಈ ಕ್ಷಣದಲ್ಲಿ ನಾವು ಮಾಡುವ ಕೆಲಸ ಮುಂದೆ ದೊಡ್ಡ ನೋವು ನೀಡ್ಬಹುದು. ಅದರ ಅರಿವು ನಮಗಿರೋದಿಲ್ಲ. ಈ ವ್ಯಕ್ತಿ ಕೂಡ ಆಗ ಮಾಡಿದ ತಪ್ಪಿಗೆ ಈಗ್ಲೂ ಶಿಕ್ಷೆ ಅನುಭವಿಸುತ್ತಿದ್ದಾನೆ. ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾನೆ.
 


ಹವ್ಯಾಸವೊಂದು ಚಟವಾಗೋಕೆ ಹೆಚ್ಚು ಸಮಯಬೇಕಾಗೋದಿಲ್ಲ. ಅದ್ರಲ್ಲೂ ಮದ್ಯಪಾನ, ಧುಮಪಾನ, ಡ್ರಗ್ಸ್ ಅತಿ ಬೇಗ ಚಟವಾಗುತ್ತದೆ. ಅದನ್ನು ಬಿಟ್ಟಿರೋಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ನಾವು ಕೆಟ್ಟ ಚಟಕ್ಕೆ ದಾಸರಾಗಿದ್ದೇವೆ ಎಂಬ ಅರಿವೇ ಅನೇಕರಿಗೆ ಇರೋದಿಲ್ಲ. ಹಾಗಾಗಿ ಅದನ್ನು ಬಿಡುವ ಪ್ರಯತ್ನಕ್ಕೆ ಕೈ ಹಾಕೋದಿಲ್ಲ. ಪರಿಸ್ಥಿತಿ ಮುಂದುವರೆದಂತೆ ಎತ್ತರದಲ್ಲಿದ್ದ ವ್ಯಕ್ತಿ ಬೀದಿಗೆ ಬರ್ತಾನೆ. ಪ್ರೀತಿಸುವವರು ದೂರವಾಗ್ತಾರೆ. ಕೈನಲ್ಲಿ ಹಣವಿಲ್ಲದೆ ಹೊತ್ತಿನ ಊಟಕ್ಕೆ ಸಮಸ್ಯೆಯಾಗಲು ಶುರುವಾಗುತ್ತದೆ. ಚಟ ತೀರಿಸಿಕೊಳ್ಳಲು ಕಳ್ಳತನ, ಮೋಸ, ವಂಚನೆ ಮಾಡುವ ಅನಿವಾರ್ಯತೆ ಬರುತ್ತದೆ. ಈ ವ್ಯಕ್ತಿ ಕೂಡ ತನ್ನ ಒಂದು ಚಟದಿಂದ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಮನೆ, ಕೆಲಸ, ಪತ್ನಿ, ಪಾಲಕರಿಂದ ದೂರವಾದವನಿಗೆ ಕೊನೆಗೂ ಬುದ್ಧಿ ಬಂದಿದೆ. ತನ್ನ ತಪ್ಪಿನ ಅರಿವಾಗಿದೆ. ಹೊಸ ದಾರಿಯಲ್ಲಿ ನಡೆಯಲು ನಿರ್ಧರಿಸಿದ್ದಲ್ಲೆ ಈಗಾಗಲೇ ಈ ದುಶ್ಚಟದಿಂದ ಬಳಲುತ್ತಿರುವ ಜನರಿಗೆ ಕಿವಿಮಾತು ಹೇಳಿದ್ದಾನೆ.

ಆತನ ಹೆಸರು ಲೀ ಡೌಲಿಂಗ್. ಈತನಿಗೆ 44 ವರ್ಷ ವಯಸ್ಸು. ಬ್ರಿಟನ್ (Britain)  ನಿವಾಸಿ. ಒಂದೇ ಒಂದು ನೈಟ್ ಪಾರ್ಟಿ (Night Party) ಈತನ ಜೀವನವನ್ನು ಸಂಪೂರ್ಣ ಬದಲಿಸಿತು. ಎಲ್ಲವನ್ನೂ ಕಳೆದುಕೊಂಡು ಈತ ಬೀದಿಗೆ ಬಂದ. ಲೀ ಡೌಲಿಂಗ್, ನೈಟ್ ಪಾರ್ಟಿ ಒಂದಕ್ಕೆ ಹೋಗಿದ್ದಾನೆ. ಅಲ್ಲಿ ಆತನಿಗೆ ಕೊಕೇನ್ (Cocaine) ನೀಡಲಾಗಿದೆ. ಅದನ್ನು ಸೇವಿಸಿ ನಶೆಯಲ್ಲಿದ್ದ ಲೀ ಡೌಲಿಂಗ್ ಗೆ ಕೊಕೇನ್ ಕಿಕ್ ನೀಡಿದೆ. ಅದನ್ನು ಪ್ರತಿ ದಿನ ಸೇವಿಸಲು ಶುರು ಮಾಡಿದ್ದಾನೆ. ಇದೇ ಆತನ ಜೀವನ ಹಾಳು ಮಾಡಿದೆ.

Tap to resize

Latest Videos

ಹೊಸ ವರ್ಷಕ್ಕೆ ದಾಖಲೆಯ ಓಯೋ ರೂಮ್ ಬುಕ್ಕಿಂಗ್‌, ಪ್ರತಿ ಗಂಟೆಗೆ ಸೇಲ್ ಆದ ಕಾಂಡೋಮ್ ಎಷ್ಟ್‌ ಗೊತ್ತಾ?

ಕೊಕೇನ್ ಸೇವನೆಯಿಂದಾಗಿ ಮೊದಲು ಕೆಲಸ ಕಳೆದುಕೊಂಡಿದ್ದಾನೆ. ನಂತ್ರ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಮಾರಲು ಮುಂದಾಗಿದ್ದಾನೆ. ಮನೆ ಖಾಲಿಯಾಗ್ತಿದ್ದಂತೆ ಕೋಪಗೊಂಡ ಪತ್ನಿ, ಆತನನ್ನು ಮನೆಯಿಂದ ಹೊರತಳ್ಳಿ ಡೈವೋರ್ಸ್ ನೀಡಿದ್ದಾಳೆ. 

ಇಷ್ಟಾದ್ರೂ ಲೀ ಡೌಲಿಂಗ್ ಗೆ ತಾನೇನು ಮಾಡ್ತಿದ್ದೇನೆ ಎಂಬ ಅರಿವಿರಲಿಲ್ಲ. ತಾಯಿ ಮನೆಯಲ್ಲಿ ವಾಸ ಶುರು ಮಾಡಿದ್ದಾನೆ. ಅಲ್ಲಿಯೂ ಮನೆಯಲ್ಲಿದ್ದ ಒಂದೋಂದೇ ವಸ್ತು ಮಾಯವಾಗಲು ಶುರುವಾಗಿದೆ. ಮಗನ ಚಟಕ್ಕೆ ಬೇಸತ್ತ ತಾಯಿ, ಲೀಯನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ. ತುರ್ತುಪರಿಸ್ಥಿತಿಯಲ್ಲಿ ಸ್ನೇಹಿತ ಮನೆಯಲ್ಲಿದ್ದ ಲೀ ಡೌಲಿಂಗ್ ನಂತ್ರ 2019 ರಿಂದ 2021 ರವರೆಗೆ ನಿರಾಶ್ರಿತರಿಗೆ ನಿರ್ಮಿಸಲಾದ ಆಶ್ರಯದಲ್ಲಿ ವಾಸವಾಗಿದ್ದ. ಮ್ಯಾಕ್ರಿ ಸೆಂಟರ್‌ಗೆ ಬರುವ ಮೊದಲು ನಾನು ನಾರ್ತ್‌ವುಡ್‌ನಲ್ಲಿ ಸುಮಾರು ಒಂದು ವಾರ ಸ್ನೇಹಿತನೊಂದಿಗೆ ಇದ್ದೆ ಎಂದಿದ್ದಾನೆ. 

ಮದ್ವೆ ಅಂದ್ರೆ ಸುಮ್ನೆನಾ: 32 ವರ್ಷಗಳ ನಂತರವೂ ಪತ್ನಿ ರೂಲ್ಸ್‌ನ ಚಾಚುತಪ್ಪದೇ ಪಾಲಿಸ್ತಾರೆ ನಟ ಶಾರುಖ್ ಖಾನ್

ದುಶ್ಚಟಕ್ಕೆ (Addiction) ಬಲಿಯಾಗುವ ಜನರಿಗಾಗಿ ಸೆಂಟರ್ ಗಳಿವೆ. ಅಲ್ಲಿ ದುಶ್ಚಟಕ್ಕೆ ದಾಸರಾದ ಜನರಿಗೆ ಆಶ್ರಯ ಸಿಗುವುದಲ್ಲದೆ ಅವರಿಗೆ ಈ ಚಟದಿಂದ ಹೊರಬರಲು ಸಹಾಯ ಮಾಡಲಾಗುತ್ತದೆ. ಅಲ್ಲಿ ಲೀ ಡೌಲಿಂಗ್, ಹೇರ್ ಕಟ್ಟಿಂಗ್ (Hair Cutting) ಕೆಲಸ ಕಲಿತ. ಸೆಂಟರ್ ನಲ್ಲಿಯೇ ಹೇರ್ ಕಟ್ಟಿಂಗ್ ಮಾಡ್ತಾ ಹಣ ಗಳಿಸುತ್ತಿದ್ದಾನೆ. ಎರಡು ವರ್ಷಗಳಿಂದ ನಾನು ಡ್ರಗ್ಸ್ (Drugs) ತೆಗೆದುಕೊಂಡಿಲ್ಲ ಎಂದು ಲೀ ಡೌಲಿಂಗ್ ಹೇಳಿದ್ದಾನೆ. ನಾನು ಡ್ರಗ್ಸ್ ಚಟಕ್ಕೆ ಬಿದ್ದಿದ್ದೇನೆ ಎಂಬುದು ನನಗೆ ಗೊತ್ತೇ ಇರಲಿಲ್ಲ. ಈ ಸೆಂಟರ್ ನಲ್ಲಿ ನನಗೆ ಅದ್ರ ಬಗ್ಗೆ ಮಾಹಿತಿ ಸಿಕ್ಕಿತು. ಅಲ್ಲಿಂದ ನಾನು ಬದಲಾಗುವ ನಿರ್ಧಾರಕ್ಕೆ ಬಂದೆ ಎನ್ನುತ್ತಾನೆ ಲೀ.

ಲೀ ಪ್ರಕಾರ, ಡ್ರಗ್ಸ್ ಆತನನ್ನು ಹಾಳು ಮಾಡಿಲ್ಲ. ಆತನೇ ಆತನ ಈ ಸ್ಥಿತಿಗೆ ಕಾರಣ. ಇಂಥ ಜನರ ಸಹಾಯಕ್ಕೆ ಅನೇಕರು ಬರ್ತಾರೆ. ಆದ್ರೆ ದುಶ್ಚಟಕ್ಕೆ ಬಲಿಯಾದವರು ತಮ್ಮ ಚಟ ಬಿಡುವ ಮನಸ್ಸು ಮಾಡೋದಿಲ್ಲ. ದುಶ್ಚಟ ಬಿಡುವ ಮನಸ್ಸು ಮಾಡಿದ್ದು ನನ್ನ ಮೊದಲ ಹೆಜ್ಜೆ. ನನಗೆ ಗೊತ್ತಿತ್ತು ನಾನು ಡ್ರಗ್ಸ್ ನಿಂದ ದೂರವಿರಬಲ್ಲೆ ಎಂಬುದು. ಈಗ ಅದನ್ನು ಸಾಧಿಸಿದ್ದೇನೆ ಎನ್ನುತ್ತಾನೆ ಲೀ. 
 

click me!