ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟೆಲಿವಿಷನ್ ಶೋ 8ನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ಇದರ ಅಂತಿಮ ಎಪಿಸೋಡ್‌ನಲ್ಲಿ ಅತಿಥಿಗಳಾಗಿ ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ಅವರು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟೆಲಿವಿಷನ್ ಶೋ 8ನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ಇದರ ಅಂತಿಮ ಎಪಿಸೋಡ್‌ನಲ್ಲಿ ಅತಿಥಿಗಳಾಗಿ ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ಅವರು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಆಮೀರ್ ಖಾನ್ ಕಿರಣ್ ರಾವ್ ವಿಚ್ಛೇದನದ ನಂತರ ಈ ತಾರಾ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಮೊದಲ ಶೋ ಇದಾಗಿದೆ. ಆಮೀರ್ ಆನ್ ಹಾಗೂ ಕಿರಣ್ ರಾವ್ ಇಬ್ಬರೂ ಈ ಶೋಗೆ ಜೊತೆಯಾಗಿ ಆಗಮಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಇವರ ಬಹುನಿರೀಕ್ಷಿತ ಚಲನಚಿತ್ರ 'ಲಾಪತಾ ಲೇಡೀಸ್' ಅನ್ನು ಪ್ರಚಾರ ಮಾಡಲು ಇದೊಂದು ಉತ್ತಮ ವೇದಿಕೆ ಎಂದು ಅವರು ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಷ್ಟದಲ್ಲಿದ್ದಾರಾ ನಟ : ಸಲ್ಮಾನ್ ಖಾನ್ ಮನೆಯಲ್ಲೇಕೆ ನಡೀತಿದೆ ಆಮೀರ್ ಖಾನ್ ಮಗಳ ಮದ್ವೆ?
ಈ ಟಾಕ್‌ಶೋಗೆ ಕರೆದಾದ ಈ ಇಬ್ಬರೂ ಮೊದಲಿಗೆ ಬರುವುದಕ್ಕೆ ನಿರಾಕರಿಸಿದರು ನಂತರ ಕಾರ್ಯಕ್ರಮ ನಡೆಸಿಕೊಡುವ ಕರಣ್ ಜೋಹರ್ ಮತ್ತೆ ಇವರಿಬ್ಬರನ್ನು ಕೇಳಿಕೊಂಡಾಗ ಇಬ್ಬರೂ ಒಪ್ಪಿಕೊಂಡರು ಎಂದು ತಿಳಿದು ಬಂದಿದೆ. ಈ ಮಾಜಿ ದಂಪತಿ ಈ ಶೋ ತಮ್ಮ ಮುಂಬರುವ ಸಿನಿಮಾ ಲಾಪತಾ ಲೇಡೀಸ್ ಅನ್ನು ಪ್ರಚಾರ ಮಾಡಲು ಒಳ್ಳೆ ವೇದಿಕೆ ಎಂದು ಭಾವಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಲಾಪತಾ ಲೇಡೀಸ್ ಸಿನಿಮಾವನ್ನು ಕಿರಣ್ ರಾವ್ ನಿರ್ದೇಶನ ಮಾಡುತ್ತಿದ್ದರೆ ಆಮೀರ್ ಖಾನ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಕಿರಣ್ ರಾವ್ ಹಾಗೂ ಆಮೀರ್ ಖಾನ್ ಭಾಗವಹಿಸಿರುವ ಈ ಕಾಫಿ ವಿತ್ ಕರಣ್ ಎಪಿಸೋಡ್ ಜನವರಿ 18 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಈ ಶೋದಲ್ಲಿ ಆಮೀರ್ ಖಾನ್ ಹಾಗೂ ಕಿರಣ್ ರಾವವ್ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಬಹುದು ಹಾಗೂ ವಿಚ್ಛೇದನದ ನಂತರವೂ ಹೇಗೆ ಸ್ನೇಹಿತರಾಗಿಯೇ ಉಳಿದರು ಎಂಬುದರ ಬಗ್ಗೆ ಚರ್ಚಿಸಲಿದ್ದಾರೆ ಎಂದು ವೀಕ್ಷಕರು ಕುತೂಹಲದಿಂದ ಕಾಯ್ತಿದ್ದಾರೆ.
ಅಮೀರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವಾಗಲೂ ಪ್ರಾಮಾಣಿಕವಾಗಿ ತೆರೆದ ಹೃದಯದಿಂದ ಮಾತನಾಡುವುದಕ್ಕೆ ಸಿದ್ಧರಿರುವ ವ್ಯಕ್ತಿ ಎಂಬುದು ಬಹುತೇಕರಿಗೆ ಗೊತ್ತು. ಆದರೆ ಕಿರಣ್ ರಾವ್ ಜನಮನದಿಂದ ಸದಾ ದೂರವಿರಲು ಬಯಸುತ್ತಾರೆ. ಹೀಗಾಗಿ ಈ ಟಾಕ್ ಶೋದಲ್ಲಿ ಅವರು ಹೇಗೆ ಮಾತನಾಡಬಹುದು ಎಂಬುದರ ಬಗ್ಗೆ ವೀಕ್ಷಕರು ಉತ್ಸಾಹದಿಂದ ಕಾಯ್ತಿದ್ದಾರೆ.
2005ರಲ್ಲಿ ಆಮೀರ್ ಖಾನ್ ಹಾಗೂ ಕಿರಣ್ ರಾವ್ ಮದ್ವೆಯಾದಾಗ ಇದೊಂದು ಬಹುಚರ್ಚಿತವಾದ ವಿಚಾರವಾಗಿತ್ತು. ಈ ದಂಪತಿಗಳು ತಮ್ಮ ತಮಾಷೆ ತಮಾಷೆಯ ಮತ್ತು ಪರಸ್ಪರರ ಸೃಜನಾತ್ಮಕ ದೃಷ್ಟಿ ಮತ್ತು ಅಭಿಪ್ರಾಯಗಳಿಂದಾಗಿ ಪರಸ್ಪರ ಗೌರವಕ್ಕೆ ಹೆಸರುವಾಸಿಯಾಗಿದ್ದರು. ಆದರೂ 2021ರಲ್ಲಿ ಅವರು ಪರಸ್ಪರ ದೂರವಾದಾಗ ಇದು ಅವರ ಅನೇಕ ಅಭಿಮಾನಿಗಳನ್ನು ಬೇಸರಗೊಳಿಸಿತು. ಜೋಡಿ ಪರಸ್ಪರ ದೂರಾಗಿ ಪ್ರತ್ಯೇಕ ದಾರಿಯಲ್ಲಿ ಸಾಗುತ್ತಿದ್ದರೂ ಅವರ ಅಭಿಮಾನಿಗಳು ಮಾತ್ರ ಅವರನ್ನು ಒಟ್ಟಿಗೆ ನೋಡಲು ಬಯಸುತ್ತಾರೆ. ಇಬ್ಬರೂ ಜೊತೆಯಾಗಿ ವೀಡಿಯೋ ಮಾಡಿ ತಮ್ಮ ವಿಚ್ಛೇದನವನ್ನು ಘೋಷಣೆ ಮಾಡಿದ್ದರು.
ವಿಚ್ಛೇದನವಾದರೂ ಕಿರಣ್ ರಾವ್ ಆಮೀರ್ ಕುಟುಂಬದೊಂದಿಗೆ ಒಳ್ಳೆಯ ಭಾಂದವ್ಯವನ್ನು ಹೊಂದಿದ್ದಾರೆ. ಆಮೀರ್ ಮೊದಲ ಪತ್ನಿ ರೀನಾ ದತ್ ಪುತ್ರಿ ಇರಾ ಖಾನ್ ಮದುವೆ ನಿನ್ನೆ ನಡೆದಿದ್ದು, ಈ ಸಮಾರಂಭದಲ್ಲಿ ಕಿರಣ್ ಲಗುಬಗೆಯಿಂದ ಪಾಲ್ಗೊಂಡಿದ್ದರು.