ಆರೇಂಜ್ಡ್ ಮ್ಯಾರೇಜ್ (Arranged Marriage) ಅಂದ್ರೆ ಕೇಳ್ಬೇಕಾ. ಹುಡುಗ ಹುಡುಗಿ ಇಬ್ಬರಿಗೂ ಟೆನ್ಶನ್ ಇದ್ದದ್ದೇ. ಮೊದಲು ಭೇಟಿಯಾಗುವ ಎಂದು ಹೊರಟ್ರೂ ಯಾವತ್ತೂ ನೋಡಿದರ ವ್ಯಕ್ತಿ ಜತೆ ಏನು ಮಾತನಾಡುವುದು ಎಂಬ ಭಯ (Fear). ಹಾಗಿದ್ರೆ ಆರೇಂಜ್ಡ್ ಮ್ಯಾರೇಜ್ ನಲ್ಲಿ ಹುಡುಗ-ಹುಡುಗಿ ಭೇಟಿಯಾದಾಗ ಏನ್ ಮಾತನಾಡಬಾರದು ಎಂಬುದನ್ನು ಮೊದಲು ತಿಳಿಯೋಣ.
ಭಾರತೀಯ ಸಂಸ್ಕೃತಿಯಲ್ಲಿ ಮದುವೆ (Marriage)ಯನ್ನು ಪವಿತ್ರ ಬಂಧವೆಂದು ಪರಿಗಣಿಸಲಾಗುತ್ತದೆ. ಮದುವೆಯು ಇಬ್ಬರು ವ್ಯಕ್ತಿಗಳು ತಮ್ಮ ಸಂಬಂಧವನ್ನು ಸಾರ್ವಜನಿಕ, ಅಧಿಕೃತ ಮತ್ತು ಶಾಶ್ವತಗೊಳಿಸುವ ಪ್ರಕ್ರಿಯೆಯಾಗಿದೆ. ಮದುವೆ ಎಂಬುದು ತಾಳಿಕಟ್ಟುವ ಪ್ರಕ್ರಿಯೆಯ ಮೂಲಕ ಇಬ್ಬರು ವ್ಯಕ್ತಿಗಳನ್ನು ಬಂಧದಲ್ಲಿ ಸೇರಿಸುತ್ತದೆ, ಇಬ್ಬರ ಅಪೂರ್ಣ ವ್ಯಕ್ತಿತ್ವವನ್ನು ಪೂರ್ಣಗೊಳಿಸುತ್ತದೆ. ಮದುವೆಯ ಮೂಲಕ ಕೇವಲ ಹುಡುಗ-ಹುಡುಗಿ ಮಾತ್ರವಲ್ಲ ಎರಡೂ ಕುಟುಂಬಗಳು ಒಂದಾಗುತ್ತವೆ. ಮದುವೆಯ ವಿಷಯಕ್ಕೆ ಬಂದಾಗ ಲವ್ ಮ್ಯಾರೇಜ್, ಆರೇಂಜ್ಡ್ ಮ್ಯಾರೇಜ್ (Arranged Marriage)ಎರಡು ರೀತಿಯಲ್ಲಿ ಮದುವೆಯಾಗುವುದನ್ನು ನೋಡಬಹುದು. ಹುಡುಗ-ಹುಡುಗಿ ಪರಸ್ಪರ ಪ್ರೀತಿಸಿ ಮದುವೆಯಾಗುವುದು ಒಂದೆಡೆಯಾದರೆ, ಹಿರಿಯರೇ ಮಾತನಾಡಿ ಮದುವೆ ಮಾಡಿಸುವುದು ಇನ್ನೊಂದು ರೀತಿ.
ಲವ್ (Love)ಮ್ಯಾರೇಜ್ ಆಗಿದ್ದಲ್ಲಿ ಹುಡುಗ-ಹುಡುಗಿ ಪರಸ್ಪರ ತಿಳಿದಿರುತ್ತಾರೆ. ಆದರೆ, ಆರೇಂಜ್ಡ್ ಮ್ಯಾರೇಜ್ ಆಗಿದ್ದಾಗ ಹೆಚ್ಚು ಗುರುತು ಪರಿಚಯವಿಲ್ಲದ ಕಾರಣ ಹುಡುಗ-ಹುಡುಗಿ ಇಬ್ಬರೂ ಆತಂಕಕ್ಕೆ ಒಳಗಾಗುತ್ತಾರೆ. ಫೋಟೋ ಎಕ್ಸೇಂಜ್ ಮಾಡಿ ಮೊದಲ ಬಾರಿ ಭೇಟಿಯಾಗುವಾಗಲೂ ಟೆನ್ಶನ್ ತಪ್ಪುವುದಿಲ್ಲ. ಎಂದೂ ನೋಡಿರದ, ಮಾತನಾಡಿರದ ವ್ಯಕ್ತಿಯೊಂದಿಗೆ ಏನು ಮಾತನಾಡುವುದು, ಹೇಗೆ ಮಾತನಾಡುವುದು, ಏನು ಪ್ರಶ್ನೆ ಕೇಳುವುದು, ಅವರು ನನಗೆ ಸರಿಯಾಗಿ ಹೊಂದುತ್ತಾರೋ ಇಲ್ಲವೋ ಎಂದು ತಿಳಿಯುವುದು ಹೇಗೆ ಎಂಬೆಲ್ಲಾ ವಿಚಾರದ ಬಗ್ಗೆ ಗೊಂದಲ ಮೂಡುತ್ತದೆ.
ಆರೇಂಜ್ಡ್ ಮ್ಯಾರೇಜ್? ಮೊದಲ ಭೇಟಿಯಲ್ಲಿ ಏನೇನು ಪ್ರಶ್ನೆ ಕೇಳ್ಬೇಕು!
ಹುಡುಗ-ಹುಡುಗಿ ಇಬ್ಬರಿಗೂ ಪರಸ್ಪರ ಹಲವು ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಆದರೆ ತಿಳಿದುಕೊಳ್ಳುವ ತವಕದಲ್ಲಿ ಎದುರಿಗಿದ್ದವರನ್ನು ಮುಜುಗರಕ್ಕೀಡು ಮಾಡುವಂತೆ ಏನೇನೋ ಪ್ರಶ್ನೆ ಕೇಳಬೇಡಿ. ಇದರಿಂದ ನಿಮ್ಮ ಸಂಬಂಧ ಅಲ್ಲಿಗೇ ಕೊನೆಗೊಳ್ಳಬಹುದು. ಮಾತನಾಡುವಾಗ ಚೆನ್ನಾಗಿ ಆಲೋಚಿಸಿ, ವಿವೇಚನೆಯಿಂದ ಮಾತನಾಡಿ. ಹಾಗಿದ್ರೆ ಫಸ್ಟ್ ಟೈಂ ಮೀಟ್ ಆದಾಗ ಹುಡುಗ-ಹುಡುಗಿ ಪರಸ್ಪರ ಏನು ಮಾತನಾಡಬಾರದು ಎಂಬುದನ್ನು ತಿಳಿಯೋಣ.
ದೇಹದ ಮಚ್ಚೆಗಳ ಕುರಿತಾದ ಮಾಹಿತಿ
ದೇಹದ ಬಗ್ಗೆ ಯಾವುದೇ ಪ್ರಶ್ನೆ ಕೇಳುವುದು ಸರಿಯಲ್ಲ. ಇದು ವೈಯುಕ್ತಿಕವಾಗಿ ವ್ಯಕ್ತಿಗೆ ಮುಜುಗರ ತರುವಂಥಾ ವಿಷಯ. ಹಾಗೆಯೇ ದೇಹದಲ್ಲಿ ಮಚ್ಚೆಗಳಿವೆಯೇ ? ಎಲ್ಲೆಲ್ಲಿ ಮಚ್ಚೆಯಿದೆ ಎಂಬ ಪ್ರಶ್ನೆಯನ್ನು ಕೇಳಲು ಹೋಗಬೇಡಿ. ಈ ರೀತಿಯ ಪ್ರಶ್ನೆ ಕೇಳಿದರೆ ನಿಮ್ಮ ವ್ಯಕ್ತಿತ್ವದ ಬಗ್ಗೆಯೇ ಕೆಟ್ಟ ಅಭಿಪ್ರಾಯ ಮೂಡಬಹುದು. ಜೀವನದಲ್ಲಿ ಇದನ್ನು ಹೊರತಡುಪಡಿಸಿ ಅದೆಷ್ಟೋ ಮುಖ್ಯ ವಿಚಾರಗಳಿವೆ.
Arranged Marriage: ದಾಂಪತ್ಯದಲ್ಲಿ ಸಮಸ್ಯೆಯಾದಾಗ ಬಗೆಹರಿಸಿಕೊಳ್ಳುವುದು ಹೇಗೆ ?
ಸ್ನಾನದ ವೇಳಾಪಟ್ಟಿ ಮತ್ತು ಮುಟ್ಟಿನ ಕುರಿತಾದ ಪ್ರಶ್ನೆಗಳು
ಆರೋಗ್ಯಕರ ಜೀವನಕ್ಕೆ ಮೂಲಭೂತ ನೈರ್ಮಲ್ಯವು ನಿರ್ಣಾಯಕವಾಗಿದ್ದರೂ, ಸ್ನಾನ (Bath) ಮಾಡುವ ಸಮಯ, ಎಷ್ಟು ಹೊತ್ತು ಸ್ನಾನ ಮಾಡುತ್ತೀರಿ ಮೊದಲಾದ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ. ಅಥವಾ ಹುಡುಗರು, ಹುಡುಗಿಯರಿಗೆ ಮುಟ್ಟಿನ ಕುರಿತಾದ ಪ್ರಶ್ನೆಗಳನ್ನು ಕೇಳಲು ಹೋಗಬಾರದು. ಈ ಬಗ್ಗೆ ಕುತೂಹಲವಿದ್ದರೂ ಮೊದಲ ಭೇಟಿಯಲ್ಲಿ ವೈಯುಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಸರಿಯಲ್ಲ.
ಮೂಢನಂಬಿಕೆಯ ಆಚರಣೆ
ಕೆಲವೊಮ್ಮೆ ಜನರು ಮೂಢನಂಬಿಕೆಗಳು ಮತ್ತು ಜ್ಯೋತಿಷ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸಂಭಾವ್ಯ ವಧು ಅಥವಾ ವರನ ಕುಟುಂಬವು ಜನ್ಮದಲ್ಲಿನ ದೋಷವನ್ನು ತೊಡೆದುಹಾಕಲು ನೀವು ಅವರನ್ನು ಮದುವೆಯಾಗುವ ಮೊದಲು ನಾಯಿ ಅಥವಾ ಮರವನ್ನು ಮದುವೆಯಾಗಲು ನಿಮ್ಮನ್ನು ಕೇಳುತ್ತಾರೆ. ಈ ರೀತಿಯ ಬೇಡಿಕೆಯಿಟ್ಟಾಗ ಇದನ್ನು ಮುಲಾಜಿಲ್ಲದೆ ನಿರಾಕರಿಸಬಹುದು. ಅಂಥಹಾ ಮೂಢನಂಬಿಕೆ ಜೀವನದಲ್ಲಿ ನಿಮ್ಮನ್ನು ಯಾವತ್ತೂ ಖುಷಿಯಾಗಿಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಿ.
ಆಸ್ತಿಯ ಕುರಿತಾದ ಪ್ರಶ್ನೆಗಳು
ಹಣಕಾಸಿನ ಪರಿಹಾರವು ತಮ್ಮ ಪಾಲುದಾರರನ್ನು ಆಯ್ಕೆಮಾಡುವಾಗ ಜನರು ಪರಿಗಣಿಸುವ ನಿರ್ಣಾಯಕ ಅಂಶವಾಗಿದೆ. ಆದರೆ ಅಂತಹ ಪ್ರಶ್ನೆಗಳು ಅವರು ನಿಮಗಿಂತ ನಿಮ್ಮ ಆಸ್ತಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರಬಹುದು ಎಂದು ಸ್ಪಷ್ಟಪಡಿಸುತ್ತದೆ. ಹೀಗಾಗಿ ನಿಮ್ಮ ಎದುರಿದ್ದವರ ಬಳಿ ಎಷ್ಟು ಮನೆಯಿದೆ, ಎಷ್ಟು ಆಸ್ತಿ (Property)ಯಿದೆ, ಎಷ್ಟು ಆಸ್ತಿಯನ್ನು ನಿಮ್ಮ ಹೆಸರನ್ನು ಬರೆಯಲಾಗಿದೆ ಈ ಮೊದಲಾದ ಪ್ರಶ್ನೆಯನ್ನು ಕೇಳಬೇಡಿ. ಅಥವಾ ಎದುರಿದ್ದವರು ಈ ರೀತಿಯ ಪ್ರಶ್ನೆಯನ್ನು ಕೇಳಿದರೆ ನೀವು ಆ ಸಂಬಂಧ (Relationship)ವನ್ನು ಮತ್ತೇನು ಯೋಚಸದೆ ನಿರಾಕರಿಸಬಹುದು. ಯಾಕೆಂದರೆ ಅವರು ನಿಮಗಿಂತ ಜಾಸ್ತಿ ನಿಮ್ಮ ಆಸ್ತಿಯ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದರ್ಥ