ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋ, ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಜನರು ತಮ್ಮ ಖಾಸಗಿ ಜೀವನವನ್ನು ನೆಟ್ಟಿಗರ ಮುಂದೆ ಹಂಚಿಕೊಳ್ತಿದ್ದಾರೆ. ಈಗ ತಂದೆ ಹಾಗೂ ಮಾವ ನಿದ್ರೆ ಮಾಡ್ತಿರುವ ಫೋಟೋವನ್ನು ಹಂಚಿಕೊಂಡಿರುವ ವ್ಯಕ್ತಿಯೊಬ್ಬರು ನೀಡಿದ ಶೀರ್ಷಿಕೆ ಆಕರ್ಷಕವಾಗಿದೆ.
ರಸ್ತೆ ಪ್ರಯಾಣವನ್ನು ಅನೇಕರು ಇಷ್ಟಪಡ್ತಾರೆ. ರಸ್ತೆ ಸುತ್ತಮುತ್ತ ಕಾಣುವ ಪರಿಸರವನ್ನು ಕಣ್ತುಂಬಿಕೊಳ್ತಾ, ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ತಾ ಎಂಜಾಯ್ ಮಾಡ್ತಾ ಪ್ರಯಾಣ ಬೆಳೆಸ್ತಾರೆ. ಮತ್ತೆ ಕೆಲವರಿಗೆ ರಾತ್ರಿ ಪ್ರಯಾಣ ಇಷ್ಟವಾಗುತ್ತದೆ. ಇನ್ನು ಕೆಲವರು ಸಾರ್ವಜನಿಕ ಸಾರಿಗೆಯನ್ನು ರಾತ್ರಿ ಹತ್ತಿ ಬೆಳಿಗ್ಗೆ ಗಮ್ಯ ಸ್ಥಾನ ತಲುಪುತ್ತಾರೆ.
ಈ ಎಲ್ಲ ಪ್ರಯಾಣ (Travel) ದಲ್ಲಿ ಕಾರ್ (Car) ಪ್ರಯಾಣ ಸ್ವಲ್ಪ ವಿಶೇಷವಾಗಿರುತ್ತದೆ. ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕಾರ್ ಪ್ರಯಾಣದಲ್ಲಿ ಮಕ್ಕಳಿದ್ದಾರೆಂದ್ರೆ ಬ್ರೇಕ್ ಹೆಚ್ಚು. ಅವರು ಒಂದಷ್ಟು ಸಮಯ ಮಲಗಿದ್ರೆ ಮತ್ತೊಂದಿಷ್ಟು ಸಮಯ ಅಳ್ತಾರೆ. ಇನ್ನೊಂದಿಷ್ಟು ಸಮಯ ಆಟವಾಡ್ತಾರೆ. ಅವರಿಗೆ ಆಹಾರ (Food) ಸೇವನೆ, ಮೂತ್ರ ವಿಸರ್ಜನೆ ಅಂತಾ ಬ್ರೇಕ್ ಕೂಡ ಬೇಕಾಗುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳನ್ನು ನೆನಪಿಸುವ ದೊಡ್ಡವರ ಫೋಟೋ (Photo) ವೈರಲ್ ಆಗಿದೆ.
undefined
MOM TIPS: ಡೈಪರ್ ಹಾಕಿ ಮಕ್ಕಳ ಆರೋಗ್ಯ ಹಾಳ್ಮಾಡೋ ಬದಲು ಬೆತ್ತಲೆ ಬಿಡಿ
ಕಾರ್ ಪ್ರಯಾಣದ ವೇಳೆ ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ನಿದ್ರೆ ಮಾಡ್ತಾರೆ. ಕೆಲವರಿಗೆ ಕಾರು ಹತ್ತಿದ ತಕ್ಷಣ ನಿದ್ರೆ ಬರುತ್ತೆ. ಪ್ರಯಾಣ ಪೂರ್ತಿ ನಿದ್ರೆಯಲ್ಲಿರ್ತಾರೆ. ನೀವೂ ಕಾರ್ ನಲ್ಲಿ ನಿದ್ರೆ ಮಾಡೋರಾದ್ರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿರುವ ಫೋಟೋ ನಿಮಗೆ ಇಷ್ಟವಾಗದೆ ಇರೋದಿಲ್ಲ.
ಮಂದರ್ ನಾಟೇಕರ್ ಎಂಬುವವರು ಟ್ವಿಟರ್ (Twitter) ನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ತಂದೆ ಮತ್ತು ಮಾವ ಇಬ್ಬರೂ ರಸ್ತೆ ಪ್ರವಾಸಕ್ಕೆ ಹೋಗುವಾಗ ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಮಲಗಿರುವ ಫೋಟೋ ಹಂಚಿಕೊಂಡಿದ್ದಾರೆ. ಇಂಟರ್ನೆಟ್ ಬಳಕೆದಾರರು ಇದನ್ನು ಇಷ್ಟಪಟ್ಟಿದ್ದಾರೆ. ಈ ಫೋಟೋ ಪೋಸ್ಟ್ ಮಾಡಿದ್ದಲ್ಲದೆ ಮಂದರ್ ನಾಟೇಕರ್ ಅವರು ಅದ್ಭುತ ಶೀರ್ಷಿಕೆಯನ್ನು ಕೂಡ ಹಾಕಿದ್ದಾರೆ.
Hindu Religion : ಪತಿಯ ಯಾವ ಭಾಗದಲ್ಲಿ ಪತ್ನಿ ಮಲಗ್ಬೇಕು ಗೊತ್ತಾ?
ಎರಡೂ ಅಪ್ಪಂದಿರನ್ನು ರೋಡ್ ಟ್ರಿಪ್‌ಗೆ ಕರೆದುಕೊಂಡು ಹೋಗುವುದು ಇಬ್ಬರು ಮಕ್ಕಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದಕ್ಕಿಂತ ಕಡಿಮೆಯಿಲ್ಲ. ಸಾಕಷ್ಟು ನಿದ್ದೆ. ಅವರು ಎದ್ದಾಗ ಅವರಿಗೆ ಆಹಾರ, ಚಹಾ, ಲೂ ಬ್ರೇಕ್. ನಂತರ ನಿದ್ರೆ ಮತ್ತು ನಂತರ ಮತ್ತೆ ಅದೇ ಸೈಕಲ್ ಪುನರಾವರ್ತನೆಯಾಗುತ್ತದೆ. ನಡು ನಡುವೆ ಹಳೆಯ ಕಥೆಗಳು ... ವಿನೋದ ! ಎಂದು ಮಂದರ್ ನಾಟೇಕರ್ ಶೀರ್ಷಿಕೆ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಟ್ವಿಟರ್ ನಲ್ಲಿ ಹಂಚಿಕೊಂಡ ಈ ಫೋಟೋ ಜನರಿಗೆ ಇಷ್ಟವಾಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.
ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಳಕೆದಾರರೊಬ್ಬರು, ಎಲ್ಲಿಯವರೆಗೆ ಬಂದ್ವಿ ಎಂದು ನಿದ್ರೆಯಿಂದ ಎದ್ದ ತಕ್ಷಣ ಪ್ರಶ್ನೆ ಕೇಳ್ತಾರೆ ಎಂದು ಕಮೆಂಟ್ ಹಾಕಿದ್ದಾರೆ. ಇಂಥ ಮಾವ ಹಾಗೂ ಅಪ್ಪನನ್ನು ಪಡೆದಿರುವ ನೀವು ಧನ್ಯರು ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಸುರಕ್ಷಿತ ಪ್ರಯಾಣದ ಬಗ್ಗೆ ಮತ್ತೊಬ್ಬ ಬಳಕೆದಾರ ಸಲಹೆ ನೀಡಿದ್ದು, ಅದಕ್ಕೆ ಮಂದರ್ ಕಮೆಂಟ್ ಮಾಡಿದ್ದಾರೆ. ಇಲ್ಲ ಎಲ್ಲರೂ ಸೀಟ್ ಬೆಲ್ಟ್ ಹಾಕಿದ್ದಾರೆ. ಫೋಟೋದಲ್ಲಿ ಕಾಣ್ತಿಲ್ಲವೆಂದು ಅವರು ಬರೆದಿದ್ದಾರೆ. ಎಲ್ಲರ ಮನೆಯ ಕಥೆಯೂ ಇದೇ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ಅತ್ಯುತ್ತಮ ಫೋಟೋ. ನಾನು ಪ್ರವಾಸಕ್ಕೆ ತಂದೆ ಹಾಗೂ ಮಾವನನ್ನು ಕರೆದುಕೊಂಡು ಹೋಗ್ತೇನೆ. ಅವರು ಕೂಡ ಹೀಗೆ ವರ್ತಿಸುತ್ತಾರೆಂದು ಬರೆದಿದ್ದಾರೆ. ಎಲ್ಲ ತಂದೆಯಂದಿರೂ ಕ್ಯೂಟ್ ಆಗಿರ್ತಾರೆ ಎಂದು ಒಬ್ಬರು ಬರೆದ್ರೆ ಮತ್ತೊಬ್ಬರು ಫೋಟೋ ಫೋಸ್ಟ್ ಮಾಡುವ ಮೊದಲು ಅವರ ಒಪ್ಪಿಗೆ ಪಡೆದಿದ್ದಾರಾ ಎಂದು ಕಮೆಂಟ್ ಮಾಡಿದ್ದಾರೆ.
Taking both dads on a road trip is nothing short of taking two kids along. Naps galore, when they wake up they want food, chai, loo break then nap again and then the cycle repeats. In between peppered with anecdotes and old stories…mazaa ! pic.twitter.com/zxK8IGIjvu
— Mandar Natekar (@mandar2404)