ಯಪ್ಪಾ..ಎಂಥವರೆಲ್ಲಾ ಇರ್ತಾರೆ ನೋಡಿ. ಹಾಸಿಗೆಗೆ ಅಬ್ಬಬ್ಬಾ ಅಂದ್ರೆ ಒಬ್ರು ಎಷ್ಟು ಖರ್ಚು ಮಾಡ್ತಾರೆ. ಹೆಚ್ಚೆಂದರೆ ಸಾವಿರಗಳಲ್ಲಿ ಇರಬಹುದು ಅಲ್ವಾ. ಆದ್ರೆ ಇಲ್ಲೊಬ್ಬ ಭೂಪ ತನ್ನ ಆರು ಹೆಂಡ್ತಿರ ಜೊತೆ ಒಟ್ಟಿಗೆ ಮಲಗೋಕೆ ಭರ್ತಿ 81 ಲಕ್ಷ ಖರ್ಚು ಮಾಡಿದ್ದಾನೆ.
ಆರು ಪತ್ನಿಯರನ್ನು ಹೊಂದಿರುವ ಬ್ರೆಜಿಲಿಯನ್ ವ್ಯಕ್ತಿಯೊಬ್ಬ ಎಲ್ಲರ ಜೊತೆ ಒಟ್ಟಿಗೇ ಮಲಗ್ಬೇಕು ಅಂತ 20 ಅಡಿ ಹಾಸಿಗೆಯನ್ನು ತಯಾರಿಸಿಕೊಂಡಿದ್ದಾನೆ. ಮಾತ್ರವಲ್ಲ ಇದಕ್ಕಾಗಿ ಭರ್ತಿ 80,000 ರೂ. ಖರ್ಚು ಮಾಡಿದ್ದಾನೆ. ಇಷ್ಟು ಉದ್ದದ ಹಾಸಿಗೆಯನ್ನು ಸಿದ್ಧಪಡಿಸುವ ಮೂಲಕ ಎಲ್ಲಾ ಪತ್ನಿಯರ ಜೊತೆ ಜೊತೆಯಲ್ಲೇ ಮಲಗಬಹುದು ಅನ್ನೋದು ಈತನ ಪ್ಲಾನ್. ಬ್ರೆಜಿಲ್‌ನ ಸಾವೊ ಪಾಲೊದ ಆರ್ಥರ್ ವೊರ್ಸೊ (37) ಎಂಬ ವ್ಯಕ್ತಿಗೆ ಒಟ್ಟು 9 ಹೆಂಡತಿ (Wife)ಯರಿದ್ದರಂತೆ. ಈ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದಾನೆ. ಈಗ ಆರ್ಥರ್ 21ರಿಂದ 51 ವರ್ಷದ ತನಕ ಇರುವ 6 ಜನ ಹೆಂಡತಿಯರನ್ನು ಹೊಂದಿದ್ದಾನೆ. ಆದರೆ ಅಷ್ಟುದ್ದದ ಹಾಸಿಗೆ ಇಲ್ಲವಾಗಿದ್ದ ಕಾರಣ ಈತ ಎಲ್ಲರ ಜೊತೆ ಒಟ್ಟಿಗೆ ಮಲಗಲು ಸಾಧ್ಯವಾಗುತ್ತಿರಲ್ಲಿಲ್ಲ. ಹೀಗಾಗಿಯೇ ಈ ರೀತಿ ಉದ್ದದ ಹಾಸಿಗೆ ಸಿದ್ಧಪಡಿಸಿಕೊಂಡಿದ್ದಾನೆ.
'ಇಷ್ಟುದ್ದದ ಹಾಸಿಗೆ ತಯಾರಿಸುವ ಪ್ಲಾನ್ ಮಲಗಲು ಸ್ಥಳ ಇಲ್ಲದೆ, ಸ್ಥಳಾವಕಾಶದ ಕಾರಣದಿಂದಾಗಿ ಹುಟ್ಟಿಕೊಂಡಿತು' ಎಂದು ಬ್ರೆಜಿಲ್‌ನ ಸಾವೊ ಪಾಲೊದ ಆರ್ಥರ್ ತಿಳಿಸಿದ್ದಾನೆ. 'ನಾನು ಅನೇಕ ಬಾರಿ ಸೋಫಾ, ನನ್ನ ಬಳಿ ಇದ್ದ ಡಬಲ್ ಬೆಡ್ ಅನ್ನು ಹಂಚಿಕೊಳ್ಳಬೇಕಾಗಿತ್ತು ಮತ್ತು ನನ್ನ ಹೆಂಡತಿಯರಿಗೆ ಸ್ಥಳಾವಕಾಶ ಕಲ್ಪಿಸಲು ನೆಲದ ಮೇಲೆ ಮಲಗಬೇಕಾಗಿತ್ತು. ಹೀಗಾಗಿ ಇಂಥಾ ದೊಡ್ಡ ಹಾಸಿಗೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ' ಎಂದಿದ್ದಾರೆ.
undefined
ಮೂವರು ಹೆಂಡಿರ ಮುದ್ದಿನ ಗಂಡ, 'ನಾನ್ ಕೆಲ್ಸ ಮಾಡಲ್ಲ, ಅವರೇ ಮನೆ ನಡೆಸ್ತಿದ್ದಾರೆ' ಎಂದ ಭೂಪ!
ಆರ್ಥರ್ ತನ್ನ Instagram ಹ್ಯಾಂಡಲ್‌ನಲ್ಲಿ 20 ಅಡಿ ಹಾಸಿಗೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆಯಾಗಿ 'ಸಂಬಂಧದಲ್ಲಿ ಕೆಲವು ತಿಂಗಳ ಕೆಟ್ಟ ಅನುಭವಗಳ ನಂತರ, ನಾನು ಅನೇಕರಿಗೆ ಅಸಾಧ್ಯವಾದುದನ್ನು ವಾಸ್ತವಕ್ಕೆ ತರಲು ಪ್ರಯತ್ನಿಸಿದೆ. ವಿಶ್ವದ ಅತಿದೊಡ್ಡ ಹಾಸಿಗೆಯನ್ನು ಸಿದ್ಧಪಡಿಸಿಕೊಂಡೆ' ಎಂದು ಬರೆದುಕೊಂಡಿದ್ದಾರೆ.
ಆರ್ಥರ್ ಮತ್ತು ಅವರ ಮೊದಲ ಪತ್ನಿ ಲುವಾನಾ 2021ರಲ್ಲಿ ತಮ್ಮ ಸಂಬಂಧವನ್ನು ಆಂಭಿಸಿದರು.. ಇತರ ಮಹಿಳೆಯರೊಂದಿಗೆ ವಿವಾಹಗಳನ್ನು ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆಸಲಾಯಿತು, ಆದರೆ, ಬಹುಪತ್ನಿತ್ವವು ಈ ದೇಶದಲ್ಲಿ ಕಾನೂನುಬಾಹಿರವಾಗಿರುವುದರಿಂದ ಈ ವಿವಾಹವು ಕಾನೂನುಬದ್ಧವಾಗಿಲ್ಲ. ಆರ್ಥರ್, ಒಟ್ಟು ಒಂಬತ್ತು ಪತ್ನಿಯರನ್ನು ಹೊಂದಿದ್ದರು. ಆದರೆ ಅವರು ಮೂವರಲ್ಲಿ ವಿಚ್ಛೇದನ (Divorce) ಪಡೆದಿದ್ದಾರೆ. ಸದ್ಯ ಸಾವೊ, ಲುವಾನಾ ಕಝಾಕಿ, 27, ಎಮೆಲ್ಲಿ ಸೌಜಾ, 21, ವಲ್ಕ್ವಿರಿಯಾ ಸ್ಯಾಂಟೋಸ್, 24, ಒಲಿಂಡಾ ಮರಿಯಾ, 51, ಡಾಮಿಯಾನಾ, 23, ಮತ್ತು ಅಮಂಡಾ ಅಲ್ಬುಕರ್ಕ್, 28 ಎಂಬ ಪತ್ನಿಯನ್ನು ಹೊಂದಿದ್ದಾರೆ.
ಇಬ್ಬರು ಹೆಂಡಿರ ಮುದ್ದಿನ ಯುಟ್ಯೂಬರ್: ವೆಲಂಟೈನ್ಸ್ ಡೇ ಗಿಫ್ಟಿಗೆ ಪತ್ನಿಯರ ಹೊಡೆದಾಟ
ಇತ್ತೀಚಿಗಷ್ಟೇ ಅವರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದ್ದರು. 'ನಾನು ನನ್ನ ಎಲ್ಲಾ ಹೆಂಡತಿಯರೊಂದಿಗೆ ಮಗುವನ್ನು ಹೊಂದಲು ಬಯಸುತ್ತಾನೆ, ಇದರಿಂದ ಅವರಲ್ಲಿ ಯಾರಿಗೂ ಅಸಮಾಧಾನ ಉಂಟಾಗುವುದಿಲ್ಲ ಎಂದ ಆರ್ಥರ್ ಹೇಳಿದ್ದಾನೆ. ನನ್ನ ಆರು ಹೆಂಡತಿಯರಲ್ಲಿ ಯಾರನ್ನು ಮೊದಲು ಗರ್ಭಿಣಿಯಾಗಬೇಕೆಂದು ಆಯ್ಕೆ ಮಾಡುವ ಮೂಲಕ ಅಸಮಾಧಾನಗೊಳ್ಳಲು ನಾನು ಬಯಸುವುದಿಲ್ಲ, ಆದ್ದರಿಂದ ನಾವು ಬಾಡಿಗೆ ತಾಯ್ತನವನ್ನು ಆರಿಸಿಕೊಂಡಿದ್ದೇವೆ' ಎಂದು ತಿಳಿಸಿದ್ದರು.
'ಆರಂಭದಲ್ಲಿ, ಇದು ತುಂಬಾ ಸೂಕ್ಷ್ಮವಾದ ವಿಷಯವಾಗಿತ್ತು, ವಿಶೇಷವಾಗಿ ನಾನು ಪ್ರತಿಯೊಬ್ಬರೊಂದಿಗೂ ಮಗುವನ್ನು ಬಯಸುತ್ತೇನೆ. ಈ ಸಮಯದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರವೆಂದರೆ ಬಾಡಿಗೆ ತಾಯ್ತನ. ನಾವು ನಮ್ಮ ಬಾಡಿಗೆದಾರರಾಗಬಹುದಾದ ನಂಬಿಕಸ್ತ ಯಾರನ್ನಾದರೂ ಹುಡುಕುತ್ತಿದ್ದೇವೆ ಮತ್ತು ನಮಗೆ ಆತ್ಮವಿಶ್ವಾಸವನ್ನು ನೀಡುವ ವ್ಯಕ್ತಿಯನ್ನು ನಾವು ಬಯಸುತ್ತೇವೆ' ಎಂದು ಆರ್ಥರ್ ಹೇಳಿದರು. ಭವಿಷ್ಯದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಸಹ ನಾವು ಸಿದ್ಧರಾಗಿದ್ದೇವೆ ಎಂದು ಆರ್ಥರ್ ಹೇಳಿದರು.