ಮಂಡಿಯೂರಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಾದಿತ್ತು ಅಚ್ಚರಿ, ತಲೆ ಎತ್ತಿ ನೋಡಿದಾಗ ಗೆಳತಿ ನಾಪತ್ತೆ!

By Chethan Kumar  |  First Published Jul 9, 2024, 4:04 PM IST

ಗೆಳತಿಯನ್ನು ಕರೆದುಕೊಂಡು ಸುಂದರಣ ತಾಣಕ್ಕೆ ತೆರಳಿದ್ದಾನೆ. ಈ ಪ್ರವಾಸಿ ತಾಣದಲ್ಲಿ ಎಲ್ಲರ ಮುಂದೆ ಮಂಡಿಯೂರಿ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ನಾಚಿಕೊಂಡೇ ಪ್ರಪೋಸ್ ಮಾಡಿದ ಗೆಳಯನಿಗೆ ಅಚ್ಚರಿ ಕಾದಿತ್ತು. ಕಾರಣ ತಲೆ ಎತ್ತಿ ನೋಡಿದಾಗ ಎದುರಿಗಿದ್ದ ಗೆಳತಿ ನಾಪತ್ತೆಯಾಗಿದ್ದಳು
 


ಪ್ಯಾರಿಸ್(ಜು.09) ಪ್ರೀತಿ ನಿವೇದನೆ ಮಾಡಿಕೊಳ್ಳುವುದು ದೊಡ್ಡ ಸವಾಲು. ಒಪ್ಪಿಕೊಂಡೆ ಸ್ವರ್ಗಕ್ಕೆ ಮೂರೇ ಗೇಣು, ತಿರಸ್ಕರಿಸಿದರೆ ದೇವದಾಸನಿಗೆ ಮೂರು ಪೆಗ್ ಗತಿ. ಗೆಳತಿಯನ್ನು ಇಂಪ್ರೆಸ್ ಮಾಡಿ ಪ್ರಪೋಸ್ ಮಾಡಲು ಹಲವರು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಈ ರೀತಿಯ ಹಲವು ವಿಡಿಯೋಗಳು ವೈರಲ್ ಆಗಿದೆ. ಇದೇ ವೇಳೆ ಪ್ರಪೋಸ್ ಮಾಡಿದ ಬೆನ್ನಲ್ಲೇ ಸಿಟ್ಟಿಗೆದ್ದ ಘಟನೆಗಳು ನಡೆದಿದೆ. ಇದೀಗ ಪ್ರಣಯ ಹಕ್ಕಿಗಳ ನೆಚ್ಚಿನ ತಾಣವಾಗಿರುವ ಪ್ಯಾರಿಸ್‌ನಲ್ಲಿ ಗೆಳತಿ ಮುಂದೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾನೆ. ಆತಂಕ, ದುಗುಡದೊಂದಿಗೆ ತಲೆಬಾಗಿ ಪ್ರಪೋಸ್ ಮಾಡಿದ್ದಾನೆ. ಆದರೆ ಫಲಿತಾಂಶ ಎಲ್ಲರಿಗೂ ಅಚ್ಚರಿಯಾಗಿದೆ. ಕಾರಣ ಆತ ತಲೆ ಎತ್ತಿನೋಡಿದಾಗ  ಎದುರಿಗೆ ಗೆಳತಿಯೇ ಇರಲಿಲ್ಲ.

ಗೆಳತಿಯನ್ನು ಕರೆದುಕೊಂಡು ಪ್ಯಾರಿಸ್‌ನ ಸುಂದರ ತಾಣಕ್ಕೆ ತೆರಳಿದ್ದಾನೆ. ಇದೇ ತಾಣಕ್ಕೆ ಹಲವು ಪ್ರವಾಸಿಗರು ಆಗಮಿಸಿದ್ದಾರೆ. ಕೆಂಪು ಬಣ್ಣದ ಸ್ಯೂಟ್ ಧರಿಸಿದ್ದ ಈತ ಹಾಗೂ ಗೆಳತಿ ಇಬ್ಬರು ತಾಣದ ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದರು. ಇದರ ನಡುವೆ ಈತ ಮೆಲ್ಲನೇ ಹಿಂದೆ ಸರಿದು ಧರಿಸಿದ್ದ ಸ್ಯೂಟ್ ಬಿಚ್ಚಿದ್ದಾನೆ. ಅತ್ತ ಗೆಳತಿ ಪ್ರಕೃತಿ ಸುಂದರ ಫೋಟೋ ತಗೆಯುತ್ತಾ ತಲ್ಲೀನನಾಗಿದ್ದಾಳೆ.

Tap to resize

Latest Videos

ನನ್ನ ಮದುವೆಯಾಗುತ್ತೀಯಾ? ಸಲ್ಮಾನ್ ಖಾನ್ ಪ್ರಪೋಸಲ್ ತಿರಸ್ಕರಿಸಿದ್ದೇಕೆ ಹೀರಾಮಂಡಿ ನಟಿ?

ಗೆಳೆಯ ಆಕೆಯ ಹಿಂಭಾಗದಲ್ಲಿ ಮಂಡಿಯೂರಿ ಒಂದು ಕೈಯಲ್ಲಿ ರಿಂಗ್ ಹಿಡಿದು ಕುಳಿತಿದ್ದಾನೆ. ಸಿನಿಮಾಗಳಲ್ಲಿನ ಪ್ರೇಮ ನಿವೇದನೆ ರೀತಿಯಲ್ಲೇ ಇಲ್ಲೂ ಎಲ್ಲವೂ ಸೆಟ್ ಆಗಿದೆ. ಮಂಡಿಯೂರಿ ಕೈಚಾಚಿ ರಿಂಗ್ ಮುಂದಕ್ಕೆ ಹಿಡಿಯುತ್ತಿದ್ದಂತೆ ಇತ್ತ ನೆರೆದಿದ್ದ ಪ್ರವಾಸಿಗರು ಚಪ್ಪಾಳೆ ತಟ್ಟಲು ಆರಂಭಿಸಿದ್ದಾರೆ. 

ಚಪ್ಪಾಳೆ ಸದ್ದಿಗೆ ಹಿಂತಿರುಗಿ ನೋಡಿದಾಗ ಗೆಳೆಯ ಪ್ರೇಮ ನಿವೇದನೆ ಮಾಡಿದ್ದ. ಒಂದು ಕ್ಷಣ ಆಕೆ ಗಾಬರಿಯಾಗಿದ್ದಾಳೆ. ಸುತ್ತ ನೋಡಿದ್ದಾಳೆ. ಆತಂಕ, ಹೆಚ್ಚಾಗಿದೆ. ಇತ್ತ ಗೆಳೆಯನಿಗೆ ಆತಂಕವೂ ಹೆಚ್ಚಾಗಿದೆ. ಎಲ್ಲಿ ತರಿಸ್ಕರಿಸುತ್ತಾಳೆ ಅನ್ನೋ ಭಯ. ಇತ್ತ ಈಕೆ ಮೌನವಾಗಿ ದಿಟ್ಟಿಸಿ ನೋಡುತ್ತಾ ನಿಂತಿದ್ದಾಳೆ. ಪ್ರವಾಸಿಗರ ಚಪ್ಪಾಳೆ, ಶಿಳ್ಳೆ ಜೋರಾಗಿದೆ. ಒಂದೆಡೆರು ಹೆಜ್ಜೆ ಮುಂದೆ ಬಂದ ಗೆಳತಿ ಒಂದೇ ಸಮನೆ ಅಲ್ಲಿಂದ ಓಡಿದ್ದಾಳೆ.

 

 

ಗೆಳತಿಯ ನಡೆ ಈತನಿಗೆ ಅಚ್ಚರಿ ತಂದಿದೆ. ಜೊತೆಗೆ ಅಲ್ಲೆ ಅಳುತ್ತಾ ಕುಸಿದಿದ್ದಾನೆ. ತಕ್ಷಣವೇ ನೆರೆದಿದ್ದ ಪ್ರವಾಸಿಗರು ಆತನ ಬಳಿ ಬಂದು ಸಂತೈಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.  ಗೆಳತಿಯ ತಪ್ಪಿಲ್ಲ. ಆಕೆಗೆ ಪ್ರೀತಿ ಇಲ್ಲ ಎಂದಲ್ಲ, ಆಕೆ ಈ ಸಂದರ್ಭಕ್ಕೆ ಮಾನಸಿಕವಾಗಿ ಸಿದ್ಧವಾಗಿಲ್ಲ. ಈ ಕುರಿತು ಆಕೆ ಆಲೋಚಿಸಿರಲು ಸಾಧ್ಯವಿಲ್ಲ. ಆಕೆಗೆ ಕೆಲ ದಿನಗಳ ಸಮಯ ಅವಶ್ಯಕತೆ ಇದೆ ಎಂದು ಯವಕನಿಗೆ ಸಮಾಧಾನ ಹೇಳಿದ್ದಾರೆ. ಮತ್ತೆ ಕೆಲವರು ಒಂದೆರೆಡು ಹೆಜ್ಜೆ ಮುಂದೆ ಬಂದ ಗೆಳತಿ ರಿಂಗ್ ಡೈಮಂಡ್ ಅಥವಾ ಇನ್ಯಾವುದೋ ಎಂದು ನೋಡಿದ್ದಾಳೆ. ರಿಂಗ್ ಮೌಲ್ಯ ಗೊತ್ತಾಗುತ್ತಿದ್ದಂತೆ ಸ್ಥಳದಿಂದ ಓಡಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ.

ಬಾನೆತ್ತರದ ಪ್ರೀತಿ, ವಿಮಾನದಲ್ಲಿ ಗಗನಸಖಿಗೆ ಲವ್ ಪ್ರಪೋಸ್ ಮಾಡಿದ ಪೈಲೆಟ್, ಮುಂದೇನಾಯ್ತು?
 

click me!