ಒಂದೇ ಒಂದು ಗುರಿ ಸಾಧನೆಗೆ 20 ಬಾಯ್‌ಫ್ರೆಂಡ್‌ ಮಾಡ್ಕೊಂಡ ಚಾಲಾಕಿ ಯುವತಿ

By Mahmad Rafik  |  First Published Jul 9, 2024, 11:44 AM IST

ದುಬಾರಿ ಬೆಲೆಯ ಐಫೋನ್ ನೀಡಿದ ಗೆಳೆಯರು ಯುವತಿಯನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿರಬಹುದು. ಮರಳಿ ಆಕೆಯಿಂದ  ಅದೇ ರೀತಿಯ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿರಬಹುದು.


ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಯುವತಿಯೊಬ್ಬಳು ತನ್ನ 20 ಬಾಯ್‌ಫ್ರೆಂಡ್‌ಗಳಿಂದ ಐಫೋನ್‌ಗಳನ್ನು ಗಿಫ್ಟ್ (i phone gift) ರೂಪದಲ್ಲಿ ಪಡೆದುಕೊಂಡಿದ್ದಾಳೆ. ಗೆಳೆಯರಿಂದ ಪಡೆದ ಐಫೋನ್‌ಗಳನ್ನು ಮಾರಾಟ ಮಾಡಿ ಮನೆ ಖರೀದಿಸುವ (House Purchase) ಉದ್ದೇಶವನ್ನು ಯುವತಿ ಹೊಂದಿದ್ದಾಳೆ. @tech_grammm ಎಂಬ ಇನ್‌ಸ್ಟಾಗ್ರಾಂನಲ್ಲಿ ಯುವತಿಯ ಕುರಿತ ಪೋಸ್ಟ್ ಮಾಡಲಾಗಿದೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ (Social Media) ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಪೋಸ್ಟ್ 171 ಮಿಲಿಯನ್‌ ವ್ಯೂವ್ ಪಡೆದುಕೊಂಡಿದ್ದು, 1,60,000ಕ್ಕೂ ಅಧಿಕ ಬಾರಿ ಶೇರ್ ಆಗಿದೆ. ನೂರಾರು ನೆಟ್ಟಿಗರು ಈ ಪೋಸ್ಟ್‌ಗೆ ಕಮೆಂಟ್ ಸಹ ಮಾಡಿದ್ದಾರೆ. ಪಲಕ್ ಎಂಬ ಯುಸರ್, ಈ ಯುವತಿ ಸರಿಯಾದ ಕೆಲಸ ಮಾಡಿದ್ದಾಳೆ. ಪ್ರತಿದಿನ ಬಳಕೆಗೆ ಒಂದು ಫೋನ್ ಸಾಕು. ಉಳಿದ 19 ಐಫೋನ್ ಮಾಡೋದು ಏನು? ಫೋನ್ ಮಾರಾಟ ಮಾಡಿ ಮನೆ ಖರೀದಿಸೋದು ಒಳ್ಳೆಯ ಆಲೋಚನೆ ಎಂದು ಯುವತಿಗೆ ಬೇಷ್ ಎಂದಿದ್ದಾಳೆ. ಇತ್ತೀಚೆಗೆ ಕಡಿಮೆ ಬೆಲೆಯ ಮನೆಗಳ ಖರೀದಿಗೆ ಜನರು ಮುಂದಾಗುತ್ತಿದ್ದಾರೆ. ಈ ಎಲ್ಲಾ ಫೋನ್ ಮಾರಾಟ ಮಾಡಿದ್ರೆ ಯುವತಿಗೆ ಒಂದು ಮನೆ ಖರೀದಿ ಮಾಡಬಹುದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Tap to resize

Latest Videos

ಸೋಶಿಯಲ್ ಮೀಡಿಯಾದಲ್ಲಿ ಪರ -ವಿರೋಧ ಚರ್ಚೆ

ಇನ್ನು ಬಹುತೇಕರು ಯುವತಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದುಬಾರಿ ಬೆಲೆಯ ಐಫೋನ್ ನೀಡಿದ ಗೆಳೆಯರು ಯುವತಿಯನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿರಬಹುದು. ಮರಳಿ ಆಕೆಯಿಂದ  ಅದೇ ರೀತಿಯ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿರಬಹುದು. ಹಾಗಾಗಿ ಯುವತಿ ಮೋಸ ಮಾಡುತ್ತಿದ್ದಾಳೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹೀಗೆ ಯುವತಿಯ ಪರ ಮತ್ತು ವಿರೋಧವಾಗಿ ಚರ್ಚೆಗಳು ಕಮೆಂಟ್ ರೂಪದಲ್ಲಿ ಬಂದಿವೆ. 

ಏರ್ಪೋರ್ಟ್‌ನಲ್ಲಿ ಸೆಕ್ಸ್ ಟಾಯ್ ಇದೆಯಾ ಅಂತ ಕೇಳಿದ್ರು, ವಿಚಿತ್ರ ಘಟನೆ ಹಂಚಿಕೊಂಡ ಮಹಿಳೆ

ಯಾರು ಈ ಯುವತಿ?

ಕೆಲ ದಿನಗಳ ಹಿಂದೆ ಯುವತಿ ಕುರಿತಾದ ಪೋಸ್ಟ್‌ನ್ನು @tech_grammm ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದ್ರೆ ಈ ಘಟನೆ 2016ರಲ್ಲಿ ನಡೆದಿತ್ತು. ಚೀನಾದ ಬ್ಲಾಗರ್ ಪ್ರೌಡ್‌ ಕಿಯಾಬಾ (Qiaoba) ಎಂಬವರು ಯುವತಿಯ ಕಥೆಯನ್ನು ರಿವೀಲ್ ಮಾಡಿದ್ದರು. ಯುವತಿಯ ಹೆಸರು ಕ್ಷಿಯೋಲಿ (Xiaoli) ಎಂದು ಹೇಳಲಾಗಿದೆ. ಈ ಯುವತಿ ಬ್ಲಾಗರ್ ಪ್ರೌಡ್‌ ಕಿಯಾಬಾ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಳು. ಸ್ನೇಹಿತರ ಮನವೊಲಿಸಿ ಹೇಗೆ ಐಫೋನ್ ಪಡೆದುಕೊಂಡೆ ಎಂಬ ವಿಚಾರವನ್ನು ಯುವತಿ ಹೇಳಿಕೊಂಡಿದ್ದಳು. ನಂತರ ಐಫೋನ್ ಮಾರಾಟ ಮಾಡಿದ್ದರಿಂದ ಮನೆಯೊಂದರ ಖರೀದಿಗೆ ಬೇಕಾಗುವಷ್ಟು ಡೌನ್‌ ಪೇಮೆಂಟ್ ಹಣವನ್ನು ಪಡೆದುಕೊಂಡಿದ್ದಳು ಎಂದು ಬ್ಲಾಗರ್ ಹೇಳಿದ್ದರು. 

14 ಲಕ್ಷಕ್ಕೂ ಅಧಿಕ ಹಣ ಸಂಗ್ರಹ 

ಯುವತಿ ಕ್ಷಿಯೋಲಿ ಎಲ್ಲಾ 20 ಐಫೋನ್ ಮಾರಾಟ ಮಾಡಿ $17,815 (14 ಲಕ್ಷ 87 ಸಾವಿರದ 93 ರೂಪಾಯಿಗಳು) ಹಣ ಪಡೆದುಕೊಂಡಿದ್ದಳು. ಯುವತಿ ಕ್ಷಿಯೋಲಿ ಬಡ ಕುಟುಂಬದಿಂದ ಬಂದ ಯುವತಿ. ಮನೆ ಖರೀದಿಗಾಗಿ ಈ ಮಾರ್ಗವನ್ನು ಯುವತಿ ಆಯ್ಕೆ ಮಾಡಿಕೊಂಡಿದ್ದಳು. ಈ ಬಗ್ಗೆ ಯುವತಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯ ಬಹಿರಂಗವಾದಾಗ ಆಕೆಗೆ ಐಫೋನ್ ಗಿಫ್ಟ್ ನೀಡಿದ ಗೆಳೆಯರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ಟೈಟ್ ಜೀನ್ಸ್ ಧರಿಸಿ ಬೈಕ್ ಏರಿ ಬಂದ ಯುವತಿಯನ್ನು ಓರೆಗಣ್ಣಿನಲ್ಲಿ ನೋಡಿದ ಅಂಕಲ್ 

 
 
 
 
 
 
 
 
 
 
 
 
 
 
 

A post shared by Tech Grammm (@tech_grammm)

click me!