ವಧು ಸಿಗ್ಲಿಲ್ಲವೆಂದ ಮ್ಯಾಟ್ರಿಮೋನಿ ಮೇಲೆ‌ ಕೇಸ್! ಸಿಕ್ಕ ಪರಿಹಾರವೆಷ್ಟು ಗೊತ್ತಾ?

By Roopa Hegde  |  First Published Jun 20, 2024, 11:32 AM IST

ವಧು – ವರರ ವೇದಿಕೆ ಮ್ಯಾಟ್ರಿಮೋನಿ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಜನರು ಸಂಗಾತಿ ಹುಡುಕುವ ಆಸೆಯಲ್ಲಿ ಲಾಗಿನ್ ಆಗ್ತಾರೆ. ಆದ್ರೆ ಎಲ್ಲರ ಆಸೆ ಇಲ್ಲಿ ಈಡೇರೋದಿಲ್ಲ. ಭರವಸೆ ನೀಡಿ ಮೋಸ ಮಾಡಿದ ಮ್ಯಾಟ್ರಿಮೋನಿ ಸೈಟ್ ಒಂದರ ವಿರುದ್ಧವೇ ದೂರು ದಾಖಲಿಸಿ ವ್ಯಕ್ತಿಯೊಬ್ಬ ಜಯಗಳಿಸಿದ್ದಾನೆ. 
 


ನಿಮ್ಮ ಮದುವೆ ಕನಸನ್ನು ನಾವು ನನಸು ಮಾಡ್ತೇವೆ…  (We will make your Marriage Dream True)ನಿಮಗೆ ಯೋಗ್ಯವಾದ ಸಂಗಾತಿ ಹುಡುಕಿಕೊಡುವ ಜವಾಬ್ದಾರಿ ನಮ್ಮದು…ಹೀಗೆ ಮ್ಯಾಟ್ರಿಮೋನಿ ಸೈಟ್ (Matrimony sites) ಗಳು ಆಕರ್ಷಕ ಜಾಹೀರಾತನ್ನು ನೀಡುತ್ತವೆ. ಈಗಿನ ದಿನಗಳಲ್ಲಿ ಜಾತಕ ಹಿಡಿದು, ಹುಡುಗ – ಹುಡುಗಿಯನ್ನು ಹುಡುಕುವ ಪದ್ಧತಿ ಇಲ್ಲ. ಬಹುತೇಕ ಎಲ್ಲರೂ ಮ್ಯಾಟ್ರಿಮೋನಿಯಲ್ಲಿ ಖಾತೆ ಹೊಂದಿರುತ್ತಾರೆ. ಅಲ್ಲಿಯೇ ವಧು – ವರನ ಅನ್ವೇಷಣೆ ನಡೆಯುತ್ತದೆ. ಹಾಗಾಗಿಯೇ ಮ್ಯಾಟ್ರಿಮೋನಿ ಸೈಟ್ ಸಂಖ್ಯೆ ಕೂಡ ಸಾಕಷ್ಟಿದೆ. ಜನರು ತಮಗೆ ಯೋಗ್ಯ ಸಂಗಾತಿ ಇದ್ರಲ್ಲಿ ಸಿಗಬಹುದು ಎನ್ನುವ ಭರವಸೆ ಮೇರೆಗೆ ಮ್ಯಾಟ್ರಿಮೋನಿ ಸೈಟ್ ಗೆ ಲಾಗಿನ್ ಆಗ್ತಾರೆ. ಒಂದೊಂದು ಸೈಟ್ ಒಂದೊಂದು ನಿಯಮವನ್ನು ಹೊಂದಿದೆ. ಇದ್ರ ಮೆಂಬರ್ ಶಿಪ್ ಗೆ ಜನರು ಹಣ ಪಾವತಿ ಮಾಡ್ಬೇಕಾಗುತ್ತದೆ. ಮ್ಯಾಟ್ರಿಮೋನಿ ಸೈಟ್ ಗೆ ಲಾಗಿನ್ ಆದ ತಕ್ಷಣ ಸಂಗಾತಿ ಸಿಕ್ಕಿ ಮದುವೆ ಆಗುತ್ತೆ ಎಂದಲ್ಲ. ಅನೇಕರಿಗೆ ಈಗ್ಲೂ ಸೈಟ್ ಮೂಲಕ ಸಂಗಾತಿ ಸಿಕ್ಕಿಲ್ಲ. ಮತ್ತೆ ಕೆಲವರು ಕೆಲವೇ ತಿಂಗಳಲ್ಲಿ ಯೋಗ್ಯ ಸಂಗಾತಿಯನ್ನು ಹುಡುಕಿಕೊಂಡದ್ದಿದೆ. ಈ ಮಧ್ಯೆ ಈಗ ಮ್ಯಾಟ್ರಿಮೋನಿ ಸೈಟ್ ಹಾಗೂ ವ್ಯಕ್ತಿಯೊಬ್ಬ ಸುದ್ದಿಗೆ ಬಂದಿದ್ದಾರೆ. ಮ್ಯಾಟ್ರಿಮೋನಿ ಸೈಟ್ ನಲ್ಲಿ ಖಾತೆ ತೆರೆದ್ರೂ ಸಂಗಾತಿ ಸಿಗದ ಕಾರಣ ವ್ಯಕ್ತಿ ಮ್ಯಾಟ್ರಿಮೋನಿ ಸೈಟ್ ವಿರುದ್ಧ ದೂರು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದ. ಈಗ ಜಯ ಸಿಕ್ಕಿದೆ. ಮ್ಯಾಟ್ರಿಮೋನಿ ಸೈಟ್ ನಿಂದ ವ್ಯಕ್ತಿ ಪರಿಹಾರ ಕೂಡ ಪಡೆದಿದ್ದಾನೆ. 

ಘಟನೆ ನಡೆದಿರೋದು ಕೇರಳ (Kerala) ದ ಎರ್ನಾಕುಲಂ ಜಿಲ್ಲೆಯಲ್ಲಿ. ದೂರು ದಾಖಲಿಸಿದ್ದ ವ್ಯಕ್ತಿಗೆ ಈಗ 25 ಸಾವಿರ ರೂಪಾಯಿ ಪರಿಹಾರ ಸಿಕ್ಕಿದೆ. ಅಲ್ಲದೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ (DCDRC), ಕೋರ್ಟ್ ಖರ್ಚು, ವೆಚ್ಚವನ್ನು ಭರಿಸುವಂತೆ ಸೈಟ್ ಗೆ ಸೂಚನೆ ನೀಡಿದೆ.

Latest Videos

undefined

ಹೈ ಹೀಲ್ಸ್​, ಟೈಟ್​ ಡ್ರೆಸ್​ ಧರಿಸಿ ಬಂದ ಗರ್ಭಿಣಿ ದೀಪಿಕಾ! ಮತ್ತೊಂದು ಜೋಕರ್​ ಹುಟ್ಟಿಸ್ಬೇಡಮ್ಮಾ ಅಂದ ಫ್ಯಾನ್ಸ್​...

ಚೆರ್ತಾಲ ಮೂಲದ ವ್ಯಕ್ತಿ ಮೇ 2019 ರಲ್ಲಿ ದೂರು ದಾಖಲಿಸಿದ್ದ. ಈ ವ್ಯಕ್ತಿ, 2018ರಲ್ಲಿ ಕೇರಳದ ಮ್ಯಾಟ್ರಿಮೋನಿ (Matrimony) ಸೈಟಿನಲ್ಲಿ ತನ್ನ ಬಯೋಡೇಟಾ ದಾಖಲಿಸಿದ್ದ. ನಂತ್ರ ಮ್ಯಾಟ್ರಿಮೋನಿ ಸೈಟ್ ಸಿಬ್ಬಂದಿಯೊಬ್ಬರು ಈತನನ್ನು ಸಂಪರ್ಕಿಸಿದ್ದರು. ಹುಡುಗಿಯನ್ನು ಹುಡುಕಿಕೊಡಲು ಮೂರು ತಿಂಗಳ ಸದಸ್ಯತ್ವ ಪಡೆಯಬೇಕು. ಅದಕ್ಕೆ 41 ಸಾವಿರ ರೂಪಾಯಿ ನೀಡಬೇಕು ಎಂದಿದ್ದರು. ಆದ್ರೆ ಕೇರಳ ಮ್ಯಾಟ್ರಿಮೋನಿ ಸೈಟ್ ವ್ಯಕ್ತಿಗೆ ಸಂಗಾತಿ ಹುಡುಕಿಕೊಡಲು ವಿಫಲವಾಗಿದೆ. ವ್ಯಕ್ತಿ ಪ್ರೊಫೈಲ್ ಹೇಗಿರಬೇಕು ಎನ್ನುವ ಬಗ್ಗೆಯೂ ಅದು ಸರಿಯಾದ ಮಾಹಿತಿ ನೀಡಿರಲಿಲ್ಲ. ಮ್ಯಾಟ್ರಿಮೋನಿ ಸೈಟ್ ಆಕರ್ಷಕ ಹೇಳಿಕೆ ನೀಡಿದ್ದೇ ವಿನಃ ಅಗತ್ಯ ಸೇವೆಗಳನ್ನು ಒದಗಿಸಲಿಲ್ಲ. ಇದ್ರಿಂದ ಬೇಸರಗೊಂಡ ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದರು.

ಪರ – ವಿರೋಧ ವಾದಗಳನ್ನು ಆಲಿಸಿದ ಕೋರ್ಟ್, ಈ ವರ್ಷ ಅಂತಿಮ ತೀರ್ಪು ನೀಡಿದೆ. ನೊಂದ ವ್ಯಕ್ತಿ ಪರ ಕೋರ್ಟ್ ನಿಂತಿದೆ. ದೂರುದಾರ ಸಾಕ್ಷ್ಯವಾಗಿ ಸಾಮಾಜಿಕ ಜಾಲತಾಣ ಬಳಕೆದಾರರ ಅಭಿಪ್ರಾಯ ಕೇಳಿದ್ದ. ಆತನಲ್ಲದೆ ಕೇರಳ ಮ್ಯಾಟ್ರಿಮೋನಿ ಸೈಟ್ ನಲ್ಲಿ ಖಾತೆ ತೆರೆದಿದ್ದ ಇನ್ನೂ ಅನೇಕರು ಮೋಸ ಹೋಗಿರುವುದಾಗಿ ಹೇಳಿದ್ದರು. ಇದು ಆತನ ಕೇಸನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು.

ನಾವೇನು ನೋಡುತ್ತೇವೋ ಹುಡುಕುತ್ತೇವೋ ಅದನ್ನೇ ಪಡೆಯುತ್ತೇವೆ; ಕೆಜಿಎಫ್ ಸ್ಟಾರ್ ಯಶ್!

ವಿಚಾರಣೆ ಸಮಯದಲ್ಲಿ ಕೇರಳ ಮ್ಯಾಟ್ರಿಮೋನಿ, ದೂರುದಾರನಿಗೆ ಅಗತ್ಯ ಸೌಲಭ್ಯ ಕಲ್ಪಿಸಿರೋದಾಗಿ ಯಾವುದೇ ಸಾಕ್ಷ್ಯ ನೀಡಲಿಲ್ಲ. ಅಲ್ಲದೆ ದೂರುದಾರ ನೀಡಿದ್ದ, ಇತರ ಬಳಕೆದಾರರ ಅಭಿಪ್ರಾಯವನ್ನು ಮ್ಯಾಟ್ರಿಮೋನಿ ಅಲ್ಲಗಳೆಯಲು ಸಾಧ್ಯವಾಗ್ಲಿಲ್ಲ. ಇದೆಲ್ಲವನ್ನೂ ಪರಿಗಣಿಸಿದ ಕೋರ್ಟ್, ದೂರುದಾರನಿಗೆ 25 ಸಾವಿರ ನೀಡುವಂತೆ ಮ್ಯಾಟ್ರಿಮೋನಿ ಸೈಟ್ ಗೆ ಸೂಚನೆ ನೀಡಿದೆ. ಅಲ್ಲದೆ ಎಲ್ಲ ಖರ್ಚಿನ ವೆಚ್ಚ ನೀಡುವಂತೆ ಆದೇಶ ನೀಡಿದೆ. 

click me!