'ಸ್ಟ್ರಾಂಗ್ ಆಗಿರು': ಅಭಿಷೇಕ್ ಬಚ್ಚನ್‌ಗೆ ಅಕ್ಕ ಶ್ವೇತಾ ಕಾಳಜಿ ಮಾತುಗಳಿವು

Suvarna News   | Asianet News
Published : Aug 05, 2020, 04:58 PM ISTUpdated : Aug 05, 2020, 06:38 PM IST
'ಸ್ಟ್ರಾಂಗ್ ಆಗಿರು': ಅಭಿಷೇಕ್ ಬಚ್ಚನ್‌ಗೆ ಅಕ್ಕ ಶ್ವೇತಾ ಕಾಳಜಿ ಮಾತುಗಳಿವು

ಸಾರಾಂಶ

ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್‌ಗೆ ಅಕ್ಕ ಶ್ವೇತಾ ಬಚ್ಚನ್ ಧೈರ್ಯ ತುಂಬಿದ್ದಾರೆ. ಧೃತಿಗೆಡಬೇಡ ತಮ್ಮನಿಗೆ ಕಾಳಜಿ ತೋರಿಸಿದ್ದಾರೆ.

ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಅಭಿಷೇಕ್ ಬಚ್ಚನ್‌ಗೆ ಅಕ್ಕ ಶ್ವೇತಾ ಬಚ್ಚನ್ ಧೈರ್ಯ ತುಂಬಿದ್ದಾರೆ. ಧೃತಿಗೆಡಬೇಡ, ಧೈರ್ಯವಾಗಿರು ಎಂದು ಹೇಳಿದ್ದಾರೆ.

ಮಂಗಳವಾರ ಸಂಜೆ ಆಸ್ಪತ್ರೆಯಿಂದ ಫೋಟೋ ಶೇರ್ ಮಾಡಿದ ನಟ, ಜೀವನದ ಪಾಸಿಟಿವ್ ಭಾಗದತ್ತ ನೋಡುವಂತೆ ತಿಳಿಸಿದ್ದಾರೆ. ನಿಸರ್ಗದ ಬಣ್ಣ ಯಾವತ್ತೂ ನಮ್ಮನ್ನು ಮೆಚ್ಚಿಸುವಲ್ಲಿ ಸೋಲುವುದಿಲ್ಲ ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅಮಿತಾಭ್‌ಗೆ ಈಗ ಮಗ ಅಭಿಷೇಕ್‌ನದ್ದೇ ಚಿಂತೆ..!

ಇದಕ್ಕೆ ಅಭಿಷೇಕ್ ಅಭಿಮಾನಿಗಳು ಕಮೆಂಟ್ ಮಾಡಿದ್ದು, ನಟ ಅಕ್ಕ ಶ್ವೇತಾ ಬಚ್ಚನ್ ಅವರೂ ಕಮೆಂಟ್ ಮಾಡಿ, ದೈರ್ಯವಾಗಿರುವಂತೆ ತಿಳಿಸಿದ್ದಾರೆ. ರಕ್ಷಾ ಬಂಧನ ದಿನ ಅಭಿಷೇಕ್ ಈ ಬಾರಿ ಕುಟುಂಬದ ಜೊತೆಗಿರಲಿಲ್ಲ. ಈ ಸಂದರ್ಭ ಅಕ್ಕ ಶ್ವೇತಾ ಬಚ್ಚನ್ ಜೊತೆಗಿನ ಬಾಲ್ಯದ ಫೋಟೋವನ್ನು ಅಭಿಷೇಕ್ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಶ್ವೇತಾ ಬಚ್ಚನ್, ನೈನಾ, ನಮೃತಾ ಅವರೂ ಇದ್ದಾರೆ.

ಕೋವಿಡ್‌ನಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಕ್ಲಾಸ್..!

ಬೆಸ್‌ ಸಿಸ್ಟರ್ಸ್‌ಗೆ ರಕ್ಷಾ ಬಂಧನದ ಶುಭಾಶಯಗಳು. ಲವ್‌ ಯೂ ಆಲ್, ಈ ಫೋಟೋ ಶೇರ್ ಮಾಡಿದ್ದಕ್ಕೆ ನನ್ನ ಕೊಲ್ಬೇಡಿ ಎಂದು ಹಾಸ್ಯಾಸ್ಪದವಾಗಿ ಬರೆದಿದ್ದಾರೆ. ಅಭಿಷೇಕ್ ಹಾಗೂ ಅಮಿತಾಭ್ ಬಚ್ಚನ್‌ಗೆ ಜುಲೈ 11ರಂದು ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ನನಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮಿತಾಭ್ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?