ಕ್ರೆಡಿಟ್ ಕಾರ್ಡ್ ಈಗ ಪ್ರತಿಯೊಬ್ಬರಿಗೂ ಅಗತ್ಯ. ಒಬ್ಬರ ಬಳಿ ಮೂರ್ನಾಲ್ಕು ಕಾರ್ಡ್ ಇರುತ್ತೆ. ಈ ಕಾರ್ಡ್ ಹೇಗೆ ಬಳಸಬೇಕು ಎಂಬುದು ಗೊತ್ತಿಲ್ಲದೆ ಹೋದ್ರೆ ಸಾಲದ ಅಪಾಯ ಇರುತ್ತೆ. ಅದೇನೇ ಇರಲಿ ಇಲ್ಲೊಬ್ಬ ವ್ಯಕ್ತಿ ಕಾರ್ಡ್ ಕಳೆದ್ರೂ ಎಫ್ ಐಆರ್ ದಾಖಲಿಸಿಲ್ಲ. ಕಾರಣ ದಂಗಾಗಿಸುತ್ತದೆ.
ಶಾಪಿಂಗ್ ಅಂದ್ರೆ ಮಹಿಳೆಯರು…ಮಹಿಳೆಯರೆಂದ್ರೆ ಶಾಪಿಂಗ್ ಎನ್ನುವ ಮಾತಿದೆ. ಬಹುತೇಕ ಎಲ್ಲ ಮಹಿಳೆಯರು ಶಾಪಿಂಗ್ ಮಾಡೋದ್ರಲ್ಲಿ ಮುಂದಿದ್ದಾರೆ. ಜನರು ಕ್ಯಾಶ್ ಬಳಸೋದು ಈಗಿನ ದಿನಗಳಲ್ಲಿ ಅಪರೂಪ ಎನ್ನುವಂತಾಗಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸುವವರೇ ಹೆಚ್ಚಾಗಿದ್ದಾರೆ. ಇದೇ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಖರೀದಿ ಮಾಡುವಂತೆ ಬ್ಯಾಂಕ್ ಸಿಬ್ಬಂದಿ ಪದೇ ಪದೇ ಕರೆ ಮಾಡಿ ಹಿಂಸೆ ನೀಡ್ತಿರುತ್ತಾರೆ. ಕ್ರೆಡಿಟ್ ಕಾರ್ಡ್ ವಿಷ್ಯದಲ್ಲಿ ಗಂಡಂದಿರ ನೋವೊಂದಿದೆ. ಗಂಡನ ಕ್ರೆಡಿಟ್ ಕಾರ್ಡ್ ಹೆಸರಿಗೆ ಮಾತ್ರ. ಅದನ್ನು ಪತ್ನಿ ಬಳಸೋದೆ ಹೆಚ್ಚು. ಕ್ರೆಡಿಟ್ ಕಾರ್ಡ್ ಉಜ್ಜಿ ಉಜ್ಜಿ ನಾನು ಬೀದಿಗೆ ಬಂದೆ ಅಂತ ಅದೆಷ್ಟೋ ಪುರುಷರು ತಮಾಷೆ ಮಾಡೋದನ್ನು ನೀವು ಹೇಳಿರಬಹುದು.
ಇಲ್ಲೊಬ್ಬ ವ್ಯಕ್ತಿ ಕ್ರೆಡಿಟ್ ಕಾರ್ಡ್ (Credit Card) ಗೆ ಸಂಬಂಧಿಸಿದಂತೆ ವಿಚಿತ್ರ ವಿಷ್ಯವನ್ನು ಹೇಳಿದ್ದಾನೆ. ಆತನ ಮಾತು ಕೇಳಿದ ಜನರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅಷ್ಟಕ್ಕೂ ಆತ ಹೇಳಿದ್ದೇನು ಎಂಬ ವಿವರ ಇಲ್ಲಿದೆ.
ಒಂದೇ ದಿನ 3 ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಕಲ್ಯಾಣ್ ಜ್ಯೂವೆಲ್ಲರಿ ಮುಖ್ಯಸ್ಥ, ಬೆಲೆ 25 ಕೋಟಿ ರೂ!
81 ವರ್ಷದ ಫ್ರಾಂವೆಲ್‌ಗೇಟ್‌ನ ಲಾರ್ಡ್ ಮೆಕೆಂಜಿ ಕ್ರೆಡಿಟ್ ಕಾರ್ಡ್ ಕಳೆದಾಗ ಯಾಕೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ. ಅವರು ಹೌಸ್ ಆಫ್ ಲಾರ್ಡ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಷ್ಯ ತಿಳಿಸಿದ್ದಾರೆ. ಡರ್ಹಾಮ್ ಕಾನ್‌ಸ್ಟಾಬ್ಯುಲರಿಯ ಮಾಜಿ ಮುಖ್ಯ ಅಧೀಕ್ಷಕ ಮತ್ತು ಪೊಲೀಸ್ ಅಧೀಕ್ಷಕರ ಸಂಘದ ದೀರ್ಘಕಾಲದ ಅಧ್ಯಕ್ಷ ಲಾರ್ಡ್ ಮೆಕೆಂಜಿ, ಎಲೆಕ್ಟ್ರಾನಿಕ್ ಪಾವತಿ ಯಂತ್ರಗಳ ಕುರಿತು ಮಾತನಾಡಿದ್ದಾರೆ. ಲಾರ್ಡ್ ಮೆಕೆಂಜಿ ಪತ್ನಿ ಲಂಡನ್ (London) ಟ್ರಿಪ್ ವೇಳೆ ಕ್ರೆಡಿಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಪತ್ನಿ, ಕ್ರೆಡಿಟ್ ಕಾರ್ಡ್ ಕಳೆದುಕೊಂಡ ನಂತ್ರ ಮುಂದೆ ತಾನೇನು ಮಾಡಿದೆ ಎಂಬ ವಿಷ್ಯವನ್ನು ಕೂಡ ಲಾರ್ಡ್ ಮೆಕೆಂಜಿ ಹೇಳಿದ್ದಾರೆ.
ಕ್ರೆಡಿಟ್ ಕಾರ್ಡ್ ಕಳೆದುಕೊಂಡ್ಮೇಲೆ ಪತ್ನಿ (Wife) ಮೇಲೆ ಲಾರ್ಡ್ ಕೋಪಗೊಂಡಿಲ್ಲ. ನಾನು ಯಾವುದೇ ದೂರು ನೀಡಿಲ್ಲ. ಎಫ್ ಐಆರ್ ದಾಖಲಿಸಿಲ್ಲ. ಆತ ಕಾರ್ಡ್ ಹೇಗೆ ಬಳಸ್ತಾನೆ ಎನ್ನುವ ಬಗ್ಗೆ ನಾನು ಪರಿಶೀಲನೆ ನಡೆಸಿದೆ. ಆತನ ಕೆಲಸವನ್ನು ಸೂಕ್ಷ್ಮವಾಗಿ ಪಟ್ಟಿ ಮಾಡಿದೆ. ಆತ ಎಷ್ಟು ಖರ್ಚು ಮಾಡ್ತಾನೆ ಎಂಬುದನ್ನು ಪರಿಶೀಲಿಸಿದ ನಂತ್ರ ನಾನು ಸುಮ್ಮನಾದೆ. ಯಾಕೆ ಅಂತ ನೀವು ಕೇಳ್ಬಹುದು, ಆತ ನನ್ನ ಪತ್ನಿ ಮಾಡಿದ್ದಕ್ಕಿಂತ ಕಡಿಮೆ ಖರ್ಚು ಮಾಡುತ್ತಿದ್ದ. ಹಾಗಾಗಿ ನಾನು ಸ್ವಲ್ಪ ನೆಮ್ಮದಿಯಾಗಿದ್ದೆ ಎಂದು ಲಾರ್ಡ್ ಮೆಕೆಂಜಿ ಹೇಳಿದ್ದಾರೆ.
ಲಾರ್ಡ್ ಮೆಕೆಂಜಿ ಮಾತು ಕೇಳಿದ ಜನರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅಲ್ಲದೆ ಕ್ರೆಡಿಟ್ ಕಾರ್ಡನ್ನು ಮಹಿಳೆಯರು ಹೇಗೆ ಬಳಸ್ತಾರೆ ಎನ್ನುವುದನ್ನು ಈ ಒಂದು ಮಾತಿನ ಮೂಲಕವೇ ಅವರು ಅರಿತಿದ್ದಾರೆ. ಅದೇ ಕಾರ್ಯಕ್ರಮದಲ್ಲಿದ್ದ ಕೆಲವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ನಾರ್ಬಿಟನ್‌ನ ಖಜಾನೆ ಸಚಿವ ಬ್ಯಾರನೆಸ್ ವೆರೆ, ಕ್ರೆಡಿಟ್ ಕಾರ್ಡ್ ಕಳೆದ ಸಮಯದಲ್ಲಿ ಪ್ರತಿಯೊಬ್ಬರೂ ಎಫ್‌ಐಆರ್ ದಾಖಲಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
Success Story: ಮನೆಯಲ್ಲೇ ಕೆಲಸ ಶುರು ಮಾಡಿ ಆದಾಯ ಗಳಿಸಬಲ್ಲ ವ್ಯಾಪಾರವಿದು!
ಕ್ರೆಡಿಟ್ ಕಾರ್ಡ್ ಕಳೆದಾಗ ಏನು ಮಾಡ್ಬೇಕು? : ಕ್ರೆಡಿಟ್ ಕಾರ್ಡ್ ಕಳೆದಾಗ ತಕ್ಷಣ ಜನರು ಬ್ಯಾಂಕ್ ಗೆ ದೂರು ನೀಡಬೇಕು. ಆನ್ಲೈನ್ ನಲ್ಲಿ ಕಾರ್ಡ್ ಬ್ಲಾಕ್ ಮಾಡುವ ಅವಕಾಶವಿದ್ದು ಅದನ್ನು ಮಾಡ್ಬೇಕು. ಇದಾದ್ಮೇಲೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನೀವು ಎಫ್ ಐಆರ್ ದಾಖಲಿಸಬೇಕು. ಇದು ಅತ್ಯುತ್ತಮ ಕೆಲಸವಾಗಿದೆ. ಇದಲ್ಲದೆ ಕ್ರೆಡಿಟ್ ಬ್ಯೂರೋವನ್ನು ಸಂಪರ್ಕಿಸಬೇಕು ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಕಳೆದಿರುವ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು.