Success Story: ಮನೆಯಲ್ಲೇ ಕೆಲಸ ಶುರು ಮಾಡಿ ಆದಾಯ ಗಳಿಸಬಲ್ಲ ವ್ಯಾಪಾರವಿದು!
ಕೆಲವೊಂದು ವ್ಯವಹಾರವನ್ನು ನಾವು ಅತೀ ಚಿಕ್ಕದು ಅಂತಾ ಭಾವಿಸ್ತೇವೆ. ಆದ್ರೆ ಈ ಸಣ್ಣ ವ್ಯಾಪಾರ – ವ್ಯವಹಾರಗಳೇ ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತೆ. ತಾಳ್ಮೆ ಜೊತೆ ಪ್ರಾಮಾಣಿಕತೆ ಇಲ್ಲಿ ಮುಖ್ಯ,
ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ, ಪ್ರತಿಯೊಬ್ಬ ಹಿಂದೂ ಮನೆಯಲ್ಲಿ, ದೇವಸ್ಥಾನದಲ್ಲಿ ಅಗರಬತ್ತಿ ಸವಾಸನೆ ಹೊರ ಬರ್ತಿರುತ್ತದೆ. ಹಬ್ಬದ ಸಮಯದಲ್ಲಿ ಈ ಅಗರಬತ್ತಿಗೆ ಬೇಡಿಕೆ ಹೆಚ್ಚು, ಜನರು ಸುವಾಸನೆಯುಳ್ಳ ಹಾಗೂ ಕೆಮಿಕಲ್ ಇಲ್ಲದ ಅಗರಬತ್ತಿಯನ್ನು ಹೆಚ್ಚು ಇಷ್ಟಪಡ್ತಾರೆ. ಈಗ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿಯ ಅನೇಕ ಕಂಪನಿ ಅಗರಬತ್ತಿಯನ್ನು ನೀವು ನೋಡ್ಬಹುದು. ಮಾರುಕಟ್ಟೆಯಲ್ಲಿ ಎಷ್ಟೇ ಅಗರಬತ್ತಿ ಇದ್ರೂ ಅದಕ್ಕೆ ಬೇಡಿಕೆ ಕೂಡ ಹೆಚ್ಚೇ ಇದೆ. ಮನೆಯಲ್ಲಿ, ಅತಿ ಕಡಿಮೆ ಬೆಲೆಗೆ ಶುರು ಮಾಡಬಹುದಾದ ಬ್ಯುಸಿನೆಸ್ ನಲ್ಲಿ ಈ ಅಗರಬತ್ತಿ ಬ್ಯುಸಿನೆಸ್ ಕೂಡ ಒಂದು. ಇದಕ್ಕೆ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ. ಮಹಿಳೆಯರು ಕೂಡ ಸಣ್ಣ ಪ್ರಮಾಣದಲ್ಲಿ ಅಗರಬತ್ತಿ ತಯಾರಿಸಿ ಅದನ್ನು ಮಾರಾಟ ಮಾಡಿ ಸ್ವಾವಲಂಭಿ ಜೀವನ ನಡೆಸುತ್ತಿರುವವರಿದ್ದಾರೆ. ಅಗರಬತ್ತಿ ತಯಾರಿ ಬಗ್ಗೆ ಅನೇಕ ಸಂಸ್ಥೆಗಳು ಮಕ್ಕಳಿಗೆ ತರಬೇತಿ ಕೂಡ ನೀಡುತ್ತವೆ. ಕೋಟ್ಯಾಂತರ ಮೌಲ್ಯದ ಮಾರುಕಟ್ಟೆಯನ್ನು ಅಗರಬತ್ತಿ ಕಬಳಿಸಿಕೊಂಡಿದೆ.
ಅಗರಬತ್ತಿ (Incense Stick) ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನರಲ್ಲಿ ಪವನ್ ಕುಮಾರ್ ಕೂಡ ಒಬ್ಬರು. ಲಕ್ಷ್ಮಿ ಗ್ರೂಪ್ ಹೆಸರಿನಲ್ಲಿ ಅಗರಬತ್ತಿ ತಯಾರಿಸುತ್ತಿರುವ ಅವರ ಕೆಲಸ ಅನೇಕರಿಗೆ ಸ್ಫೂರ್ತಿ (Inspiration). ಪವನ್ ಕುಮಾರ್, ಜಾರ್ಖಂಡ (Jharkhand) ದ ಬೊಕಾರೊ ಚಾಸ್ ಶಿವಪುರಿ ಕಾಲೋನಿಯ ನಿವಾಸಿ. ಅವರು ಅಗರಬತ್ತಿ ತಯಾರಿಸಿ ಬರೀ ತಮ್ಮ ಜೀವನವನ್ನು ಮಾತ್ರವಲ್ಲ ಅನೇಕ ಮಹಿಳೆಯರ ಜೀವನವನ್ನು ಆರ್ಥಿಕವಾಗಿ ಭದ್ರಗೊಳಿಸಿದ್ದಾರೆ. ಪವನ್ ಕುಮಾರ್ ಅವರ ತಂದೆಯಿಂದ ವ್ಯಾಪಾರದ ಕಲೆ ಕಲಿತ್ರು. ಅವರ ತಂದೆ ವಿನೋದ್ ಪ್ರಸಾದ್, ಸಕ್ಕರೆ ಮಿಠಾಯಿ ಮತ್ತು ಏಲಕ್ಕಿ ಸೇರಿದಂತೆ ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ನಡೆಸುತ್ತಿದ್ದರು. ಆದ್ರೆ ಪವನ್ ಕುಮಾರ್ ಆಹಾರದ ಬದಲು ಅಗರಬತ್ತಿ ಕ್ಷೇತ್ರಕ್ಕೆ ಸಾಗಿದ್ರು. ಸತತ ಶ್ರಮದ ನಂತ್ರ ಪವನ್ ಕುಮಾರ್ ಅಗರಬತ್ತಿ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದಾರೆ.
ಸ್ಟಾಕ್ ಸ್ಪ್ಲಿಟ್, 8.85 ರೂಪಾಯಿ ಮಧ್ಯಂತರ ಡಿವಿಡೆಂಡ್ ಘೋಷಣೆ ಮಾಡಿದ ಸರ್ಕಾರಿ ಕಂಪನಿ, ಈ ಷೇರು ನಿಮ್ಮಲ್ಲಿದ್ಯಾ?
ಪವನ್ ಕುಮಾರ್ 21 ವರ್ಷಗಳ ಹಿಂದೆಯೇ ತಮ್ಮ ಮನೆಯಲ್ಲಿ ಅಗರಬತ್ತಿ ತಯಾರಿಕೆ ಶುರು ಮಾಡಿದ್ರು. ಸಣ್ಣ ಪ್ರಮಾಣದಲ್ಲಿ ಅಗರಬತ್ತಿ ತಯಾರಿಸುತ್ತಿದ್ದ ಅವರು ಅದನ್ನು ಸ್ಥಳೀಯ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುತ್ತಿದ್ದರು. ಆದ್ರೀಗ ಅವರು ತಯಾರಿಸಿದ ಅಗರಬತ್ತಿ, ಸ್ಥಳೀಯ ಪಟ್ಟಣವಲ್ಲದೆ ಬೇರೆ ಜಿಲ್ಲೆಗಳಿಗೆ ಹೋಗ್ತಿದೆ.
ಪವನ್ ಕುಮಾರ್ ತಮ್ಮ ಅಗರಬತ್ತಿ ಕಂಪನಿಯಲ್ಲಿ ಪ್ರತಿದಿನ 200 ರಿಂದ 300 ಡಜನ್ ಅಗರಬತ್ತಿಗಳನ್ನು ತಯಾರಿಸುತ್ತಿದ್ದಾರೆ. ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೂ ಇವರ ಅಗರಬತ್ತಿ ಹೋಗ್ತಿದೆ. ಪವನ್ ಕುಮಾರ್ ವ್ಯವಹಾರ ದೊಡ್ಡ ಮಟ್ಟದಲ್ಲಿದೆ. ಅವರು 12 ರಿಂದ 15 ಲಕ್ಷ ರೂಪಾಯಿ ಮೌಲ್ಯದ ಅಗರಬತ್ತಿಯನ್ನು ಪ್ರತಿ ತಿಂಗಳು ಮಾರಾಟ ಮಾಡುತ್ತಿದ್ದಾರೆ.
ಪವನ್ ಕುಮಾರ್ ತಮ್ಮ ಕಂಪನಿಯಲ್ಲಿ ಎಂಟು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಪವನ್ ಕುಮಾರ್ ಅವರು ಅಗರಬತ್ತಿಗೆ ಕಡ್ಡಿ, ಮರದ ಪುಡಿ, ಕಲ್ಲಿದ್ದಿಲಿನ ಪುಡಿ ಸೇರಿದಂತೆ ಕೆಲ ವಸ್ತುಗಳನ್ನು ಬಳಸುವುದಾಗಿ ಹೇಳಿದ್ದಾರೆ. ಅಗರಬತ್ತಿ ತಯಾರಿಸಿದ ನಂತ್ರ ಅದನ್ನು ಯಂತ್ರದ ಸಹಾಯದಿಂದ ಪ್ಯಾಕ್ ಮಾಡ್ತಾರೆ.
75 ಕೋಟಿ ರೂ.ಗೆ ಮಾರಾಟವಾದ ಮುಖೇಶ್ ಅಂಬಾನಿಯ ಮ್ಯಾನ್‌ಹಟನ್ ಬಂಗಲೆ ಹೇಗಿದೆ?
ಈಗ ಜನರಿಗೆ ದಿಢೀರ್ ಆದಾಯ ಬೇಕು. ಆದ್ರೆ ಯಾವುದೇ ವ್ಯವಹಾರದಲ್ಲಿ ದಿಢೀರ್ ಲಾಭ ಸಾಧ್ಯವಿಲ್ಲ. ಸತತ ಶ್ರಮ ಹಾಗೂ ಶ್ರದ್ಧೆ ಮುಖ್ಯ. ಗುಣಮಟ್ಟದ ಉತ್ಪನ್ನಗಳಿಗೆ (Quality Products) ಸದಾ ಬೇಡಿಕೆ ಇರುತ್ತದೆ. ಸತತ ಇಪ್ಪತ್ತೊಂದು ವರ್ಷಗಳಿಂದ ಇದೇ ಕೆಲಸ ಮಾಡ್ತ ಬಂದ್ರೂ ಗುಣಮಟ್ಟದಲ್ಲಿ ರಾಜಿಯಾಗದ ಹಾಗೂ ಕೆಲಸದಲ್ಲಿ ಬೇಸರಗೊಳ್ಳದ ಪವನ್, ಸತತ ಪರಿಶ್ರಮ ಬಹಳ ಮುಖ್ಯ ಎಂದು ಯುವ ಉದ್ಯಮಿಗಳಿಗೆ ಕಿವಿಮಾತು ಹೇಳಿದ್ದಾರೆ.