ಲೈಂಗಿಕ ಕ್ರಿಯೆಯ ಮಧ್ಯೆ ದಂಪತಿ ಹೊಸ ಹೊಸ ಪೊಸಿಶನ್‌ಗಳನ್ನು ಪ್ರಯತ್ನಿಸುವುದು ಸಾಮಾನ್ಯ. ಹಾಗೆಯೇ ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಅಪಾಯಕಾರಿ ಸೆಕ್ಸ್ ಪೊಸಿಶನ್ ಟ್ರೈ ಮಾಡಲು ಹೋಗಿ ಶಿಶ್ನ ಮುರಿತವಾಗಿದೆ. ಏನೋ ಮಾಡಲು ಹೋಗಿ ಇನ್ನೇನೋ ಆಯ್ತಲ್ಲ ಅಂತ ಅಲವತ್ತುಕ್ಕೊಳ್ಳುತ್ತಿದ್ದಾನೆ.
ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಅಪಾಯಕಾರಿ ಲೈಂಗಿಕ ಸ್ಥಾನವನ್ನು ನಿರ್ವಹಿಸುವಾಗ ತನ್ನ ಶಿಶ್ನ ಮುರಿತದ ನಂತರ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಕುರಿತಾದ ಕೇಸ್ ಸ್ಟಡಿ ಇತ್ತೀಚೆಗೆ ಯುರಾಲಜಿ ಕೇಸ್ ರಿಪೋರ್ಟ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಲೈಂಗಿಕ ಕ್ರಿಯೆಯ ಸಂದರ್ಭ ಬಿರುಕು ಬಿಡುವ ಸದ್ದಿನೊಂದಿಗೆ ವ್ಯಕ್ತಿಯ ಶಿಶ್ನದಲ್ಲಿ ರಕ್ತಸ್ತ್ರಾವವಾಗಲು ಆರಂಭವಾಯಿತು. ಮಾತ್ರವಲ್ಲ ವ್ಯಕ್ತಿ ಮೂತ್ರ ವಿಸರ್ಜಿಸಲು ಸಾಧ್ಯವಾಗಲ್ಲಿಲ್ಲ. ತಕ್ಷಣ ಪತ್ನಿ, ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಪಶ್ಚಿಮ ನುಸಾ ತೆಂಗರಾ ಪ್ರಾಂತ್ಯದ ಜನರಲ್ ಆಸ್ಪತ್ರೆಗೆ ಧಾವಿಸಿದರು.
ವ್ಯಕ್ತಿ ಆಸ್ಪತ್ರೆಯನ್ನು ತಲುಪುವ ಹೊತ್ತಿಗೆ, ಅವರ ಶಿಶ್ನವು (Penis) ಊದಿಕೊಂಡಿತು ಮತ್ತು ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ವಿರೂಪತೆಯನ್ನು ಪಡೆದುಕೊಂಡು ಬಣ್ಣ ಬದಲಾಯಿತು ಎಂದು ವೈದ್ಯರು (Doctors) ಹೇಳಿದ್ದಾರೆ. ಪರೀಕ್ಷೆಯ ಸಮಯದಲ್ಲಿ, ರೋಗಿಯು ಶಿಶ್ನಕ್ಕೆ ಅಗಲವಾದ ಮತ್ತು ಆಳವಾದ ಮುರಿತವನ್ನು ಹೊಂದಿರುವುದು ಕಂಡುಬಂದಿದೆ ಮತ್ತು ಅವನ ಶಿಶ್ನ ಅಂಗಾಂಶವೂ ಛಿದ್ರಗೊಂಡಿದೆ. ಶಿಶ್ನವು ತಾಂತ್ರಿಕವಾಗಿ ಮೂಳೆರಹಿತವಾಗಿದೆ. ಶಿಶ್ನ ಮುರಿತವು ಸಂಭವಿಸಿದಾಗ, ಶಿಶ್ನವನ್ನು ವಿಸ್ತರಿಸಲು ಮತ್ತು ನೆಟ್ಟಗೆ ಮಾಡಲು ಅನುಮತಿಸುವ ಅಂಗಾಂಶ ಇಲ್ಲವಾಗಿದೆ ಎಂದರ್ಥ ಎಂದು ವೈದ್ಯರು ಮಾಹಿತಿ ನೀಡಿದರು.
ಅಬ್ಬಬ್ಬಾ..ಬಾಲಕನ ಶಿಶ್ನದಲ್ಲಿ ಸಿಲುಕಿಕೊಂಡಿತ್ತು ಅಷ್ಟುದ್ದದ ಥರ್ಮೋಮೀಟರ್ !
ಕರಣ್ ರಾಜ್ ಅವರ ಪ್ರಕಾರ, ವ್ಯಕ್ತಿ ಪ್ರಯತ್ನಿಸಲು ಮುಂದಾಗಿದ್ದು 'ವಿಶ್ವದ ಅತ್ಯಂತ ಅಪಾಯಕಾರಿ' ಲೈಂಗಿಕ (Sex position). ಹೀಗಾಗಿ ಇದು ಶೇಕಡಾ 50 ರಷ್ಟು ಮುರಿತಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಶಸ್ತ್ರಚಿಕಿತ್ಸಕರ ತಂಡ ರೋಗಿಯ ಮುರಿತದ ಶಿಶ್ನವನ್ನು ಸರಿಪಡಿಸಲು ಸಾಧ್ಯವಾಯಿತು. ಮೂತ್ರನಾಳವನ್ನು ಹೊಲಿದು ಗಾಯಕ್ಕೆ ಬ್ಯಾಂಡೇಜ್ ಮಾಡಲಾಯಿತು. ಶಿಶ್ನದಲ್ಲಿ ಯಾವುದೇ ಸೋರಿಕೆ ಅಥವಾ ಅಸಹಜ ವಕ್ರತೆ ಇದೆಯೇ ಎಂದು ಪರಿಶೀಲಿಸಲು ಕೃತಕ ನಿಮಿರುವಿಕೆ ಪರೀಕ್ಷೆ ನಡೆಸಲಾಯಿತು. ಮೂರು ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಜನನಾಂಗದ ಭಾಗ ನೀಲಿಯಾಗಿತ್ತು. ಮುಂದಿನ ವಾರಗಳಲ್ಲಿ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು ಎಂದು ವೈದ್ಯರು ತಿಳಿಸಿದ್ದಾರೆ.
ಸಂಭೋಗದ ವೇಳೆ ಶಿಶ್ನ ಮುರಿತಕ್ಕೆ ಇದೇ ಕಾರಣ
ಸಂಭೋಗದ ಸಮಯದಲ್ಲಿ ಅಪರೂಪದ ಶಿಶ್ನ ಮುರಿತಕ್ಕೊಳಗಾಗಲು ಕಾರಣವೂ ಇದೆ. ಆ ವ್ಯಕ್ತಿಗೆ Eggplant Deformity ಸಮಸ್ಯೆ ಎದುರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಇದು ಅಪರೂಪದ ಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ಲೈಂಗಿಕ ಸಮಯದಲ್ಲಿ ಶಿಶ್ನಕ್ಕೆ ಗಾಯವಾದಾಗ ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ (Reports) ನಲ್ಲಿ ಪ್ರಕಟವಾದ ವರದಿಯಲ್ಲಿ, ವ್ಯಕ್ತಿಯ ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಹೇಳಲಾಗಿದೆ. ಹಾಗೆಯೇ ಇದಕ್ಕೆ ಹೇಗೆ ಚಿಕಿತ್ಸೆ ನೀಡಲಾಯ್ತು ಎಂಬುದನ್ನು ಕೂಡ ತಿಳಿಸಲಾಗಿದೆ.
ಪುರುಷರೇ ಹುಷಾರ್ ! ಶಿಶ್ನ ಬಾಗುವಂತೆ ಮಾಡುತ್ತೆ ಈ ವಿಚಿತ್ರ ಕಾಯಿಲೆ !
ಸಂಗಾತಿ ಜೊತೆ ಸಂಬಂಧ ಬೆಳೆಸುವ ವೇಳೆ ಸಮಸ್ಯೆ : ರೋಗಿ (Patient) ಯು ತನ್ನ ಸಂಗಾತಿಯೊಂದಿಗೆ ಶಾರೀರಿಕ ಸಂಬಂಧ (Physical Relationship ) ಬೆಳೆಸುವಾಗ ಶಿಶ್ನ (penis) ದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆತ ತನ್ನ ನಿಮಿರುವಿಕೆ ಕಳೆದುಕೊಂಡಿದ್ದಾನೆ ಮತ್ತು ಅವನ ಖಾಸಗಿ ಭಾಗಗಳಲ್ಲಿ ರಕ್ತ ಸಂಗ್ರಹವಾಗಿದೆ ಎಂದು ಆತ ಭಾವಿಸಿದ್ದನಂತೆ. ಆದ್ರೆ ವೈದ್ಯರು ಪರೀಕ್ಷೆ ನಡೆಸಿದಾಗ ಸಮಸ್ಯೆ ತಿಳಿದಿದೆ. ವೈದ್ಯರು ವ್ಯಕ್ತಿಯ ಖಾಸಗಿ ಅಂಗವನ್ನು ಪರೀಕ್ಷಿಸಿದಾಗ, ಶಿಶ್ನದ ತುದಿಯಿಂದ ಸ್ಕ್ರೋಟಮ್ ವರೆಗೆ ರಕ್ತ ಹೆಪ್ಪುಗಟ್ಟುವುದು ತಿಳಿದಿದೆ. ಇದಲ್ಲದೆ ಮೂತ್ರನಾಳದಲ್ಲಿ ಬಿರುಕು ಕೂಡ ಕಂಡುಬಂದಿದೆ. ಚಿಕಿತ್ಸೆ ನೀಡದೆ ಹೋದ್ರೆ ಮೂತ್ರ ವಿಸರ್ಜನೆ ಕಷ್ಟವಾಗ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.