ಶ್.... ಲೈಂಗಿಕತೆ ವೇಳೆ ನೀವೂ ಹೀಗೆಲ್ಲಾ ಹೇಳ್ತೀರಾ ಚೆಕ್ ಮಾಡಿಕೊಳ್ಳಿ!

By Suvarna News  |  First Published Apr 11, 2023, 3:31 PM IST

ಲೈಂಗಿಕತೆ ವೇಳೆ ಕೆಲವೊಮ್ಮೆ ಅನಿವಾರ್ಯವಾಗಿ ಸುಳ್ಳು ಉದ್ಗಾರ, ಸುಳ್ಳು ಸಂಗತಿಗಳನ್ನು ಹೇಳಬೇಕಾಗುತ್ತೆ. ಅದಕ್ಕೆ ಕಾರಣವೂ ಇದೆ. ನೀವೂ ಇಂಥ ಸುಳ್ಳು ಹೇಳಿದ್ದೀರ ಚೆಕ್ ಮಾಡ್ಕೊಳ್ಳಿ,


ಸೀಮಾ ಸಂಜಯ್‌ ಇಬ್ಬರೂ ಉದ್ಯೋಗಿಗಳು. ಕೆಲಸದ ಒತ್ತಡದ ನಡುವೆ ಅವರಿಗೆ ಸೆಕ್ಸ್ ಮಾಡೋಕೆ ಸಮಯ, ಮೂಡ್ ಇರೋದಿಲ್ಲ. ಸೋ ಹೆಚ್ಚಿನವರ ಹಾಗೆ ಅವರದೂ ಒಂಥರ ವೀಕೆಂಡ್ ಸೆಕ್ಸ್. ಇತ್ತೀಚೆಗೆ ಸೀಮಾ ಒಂದು ಸಂಗತಿ ಗಮನಿಸಿದಳು. ಆ ವಿಚಾರ ಆ ಕ್ಷಣಕ್ಕೆ ಅವಳಿಗೆ ನಗೆ ತರಿಸಿದರೂ ಕೊಂಚ ಯೋಚಿಸೋ ಹಾಗೆ ಮಾಡಿತು. ತಾನು ಹಾಗೆ ಸುಳ್ಳು ಹೇಳೋ ಮೂಲಕ ಅವನಿಗೂ ತನಗೂ ಮೋಸ ಮಾಡಿಕೊಂಡ ಹಾಗೆ ಆಗಿಲ್ವಾ ಅನ್ನೋದು ಅವಳನ್ನು ಕಾಡತೊಡಗಿತು. ತನ್ನ ಕ್ಲೋಸ್ ಫ್ರೆಂಡ್‌ ಹತ್ರ ಇದನ್ನು ಶೇರ್ ಮಾಡ್ಕೊಂಡಳು. ಆ ಫ್ರೆಂಡ್ ಇದಕ್ಕೆ ನಗುತ್ತಾ ತಾನೂ ಇಂಥಾ ಕೆಲವು ಸುಳ್ಳು ಹೇಳೋದಾಗಿ ಹೇಳಿದಳು. ಹೀಗೆ ಅವರಿಬ್ಬರ ನಡುವೆ ಸೆಕ್ಸ್ ವೇಳೆ ತಾವು ಏನೆಲ್ಲ ಸುಳ್ಳು ಹೇಳ್ತೀವಿ ಅನ್ನೋ ಡಿಸ್‌ಕಶನ್ ನಡೀತು. ಆ ವೇಳೆ ಅವರ ಮಾತಿನ ನಡುವೆ ಇಂಟರೆಸ್ಟಿಂಗ್ ಅನಿಸಿದ ಕೆಲವು ವಿಚಾರಗಳೂ ಬಂದವು. ಆ ಸಂಗತಿಗಳು ಏನು ಅನ್ನೋ ಡೀಟೇಲ್ ಇಲ್ಲಿದೆ.

1. ಸುಳ್ಳು ಉದ್ಗಾರಗಳು
ಲೈಂಗಿಕತೆ ವೇಳೆ ಸಂಭೋಗಿಸುವಾಗ ಎಷ್ಟೋ ಸಲ ಆ ಕ್ರಿಯೆ ಖುಷಿ ಕೊಡುತ್ತಿರಲ್ಲ. ಆದರೆ ಸಂಗಾತಿಗೆ ಉದ್ರೇಕವಾಗಲಿ ಅನ್ನೋ ಕಾರಣಕ್ಕೆ ಸುಳ್ಳು ಉದ್ಗಾರ ತೆಗೆಯುತ್ತಾರೆ. ಈ ಉದ್ಗಾರಗಳು ಸಂಗಾತಿಗಂತೂ ಉದ್ರೇಕ ತರಿಸುತ್ತೆ. ಆದರೆ ನಿಜಕ್ಕೂ ಸುಖ ಸಿಕ್ಕಿರಲ್ಲ. ಇದರಿಂದ ತಾನು ಸುಖ ನೀಡಿದ್ದೇನೆ ಅಂತ ಸಂಗಾತಿ ಅಂದುಕೊಂಡು ಆ ಭಂಗಿಯನ್ನು ರಿಪೀಟ್ ಮಾಡಬಹುದು. ಹೀಗಾದಾಗ ಸುಖ ಅನ್ನೋದು ಸಿಗದೇ ಹೋಗಬಹುದು.

Tap to resize

Latest Videos

2. ಚಿಂದಿ ಉಡಾಯಿಸಿಬಿಟ್ಟೆ!
ಸೆಕ್ಸ್ ಅಂಥಾ ತೃಪ್ತಿ ಕೊಡದಿದ್ದರೂ, ಸಿಕ್ಕಾಪಟ್ಟೆ ಖುಷಿ ಕೊಟ್ಟ ಹಾಗೆ, ಸಂಪೂರ್ಣ ತೃಪ್ತಿ ಹೊಂದಿದ ಹಾಗೆ ಕೆಲವರು ಆಕ್ಟ್ ಮಾಡ್ತಾರೆ. ಆ ಕ್ಷಣಕ್ಕೆ ಇದು ಸಂಗಾತಿ ಉಬ್ಬಿ ಹೋಗೋ ಹಾಗೆ ಮಾಡಬಹುದು. ಆದರೆ ನೆಕ್ಸ್ಟ್ ಲೆವೆಲ್‌ಗೆ ಹೋಗೋದನ್ನು ತಡೀಬಹುದು. ಅದರ ಬದಲು ನಿಜ ಹೇಳಿದರೆ ಸೂಕ್ತ ಮಾರ್ಪಾಡು ಮಾಡೋ ಮೂಲಕ ಇಬ್ಬರಿಗೂ ಖುಷಿ, ತೃಪ್ತಿ ಸಿಗೋ ಹಾಗಾಗುತ್ತೆ.

Personality Tips: ಜನರನ್ನು ಆಕರ್ಷಿಸಬೇಕು ಅಂದ್ರೆ ನಿಮ್ಮ ವ್ಯಕ್ತಿತ್ವ ಹೀಗಿರಲಿ!

3. ಕಾಂಡೋಮ್ ಧರಿಸಿದ್ರೆ ಸುಖ ಸಿಗಲ್ಲ
ಸಂಭೋಗದ ಸಮಯದಲ್ಲಿ ಉತ್ತುಂಗಕ್ಕೇರಿದಾಗ ಲೈಂಗಿಕ ಪರಾಕಾಷ್ಠೆ ಹೊಂದುತ್ತಾರೆ. ಅದು ಕಾಂಡೋಮ್ ಧರಿಸಿದವರಾಗಿರಲಿ ಅಥವಾ ಕಾಂಡೋಮ್ ಧರಿಸದವರೇ ಆಗಿರಲಿ, ಆ ಸುಖ ಸಿಗುತ್ತೆ. ಆದರೆ ಪುರುಷರಲ್ಲಿರೋ ಒಂದು ಮಿಥ್ ಅಂದರೆ ಕಾಂಡೋಮ್ ಧರಿಸಿದ್ರೆ ಪರಾಕಾಷ್ಠೆಗೆ ಸಿಗಲ್ಲ ಅಂತ. ಆದರೆ ಸುಳ್ಳು ಅನ್ನೋದು ಪ್ರೂವ್ ಆಗಿದೆ. ಅವರ ಮಾತು ಕೇಳಿಕೊಂಡು ಕಾಂಡೋಮ್ ತೆಗೆಯಲು ಹೇಳಬೇಡಿ. ಅಸುರಕ್ಷಿತ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಹಾಗಾಗಿ ನಿಮ್ಮ ಬಾಯ್‌ಫ್ರೆಂಡ್‌ ನಿಮ್ಮನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಬೀಳದಿರಿ.

4. ಫಸ್ಟ್ ಸೆಕ್ಸ್ (First Sex)
ಅನೇಕರು ತಮ್ಮ ಸಂಗಾತಿಯ ಮೊದಲ ಸೆಕ್ಸ್‌(First sex) ಬಗ್ಗೆ ಕುತೂಹಲದಿಂದಿರುತ್ತಾರೆ. ಫನ್ನಿ(Funny) ಅಂದರೆ ಮೊದಲ ಸೆಕ್ಸ್ ಅದ್ಭುತವಾಗಿತ್ತು ಅಂತಾರೆ. ಸೋ ಅದಕ್ಕಿಂತ ಹೆಚ್ಚು ನೆನಪಿಟ್ಟುಕೊಳ್ಳುವಂಥಾ ಲೈಂಗಿಕತೆ ತಮ್ಮಿಬ್ಬರ ನಡುವೆ ಆಗಬೇಕು ಅಂತ ಎದುರಿರುವವರು ಅಂದುಕೊಳ್ಳೋದು ಹೆಚ್ಚು. ಆಗ ಸೆಕ್ಸ್ ಇನ್ನಷ್ಟು ಚೆನ್ನಾಗಾಗುತ್ತೆ ಅಂತಾರೆ ಫಾರಿನ್ ಜೋಡಿಯೊಂದು.

5. ಸೆಕ್ಸ್‌ ವೇಳೆ ಬರೋ ಅಳು
ಅನೇಕರು ಸೆಕ್ಸ್ (Sex)ವೇಳೆ ಅಳೋದಿದೆ. ಇದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣ ಇರುತ್ತೆ. ಆದರೆ ಇದಕ್ಕೆ ಕಾರಣ ಕೇಳಿದಾಗ ಹಲವರು ಸುಳ್ಳು ಹೇಳ್ತಾರೆ. ಒಬ್ಬಾಕೆಗೆ ತನ್ನ ಮಾಜಿ ಪ್ರಿಯಕರನ ನೆನಪಾಗಿ ಅಳುಬಂತು. ಆದರೆ ಅವಳು ಸೆಕ್ಸ್‌ನಲ್ಲಿ ಪರಾಕಾಷ್ಠೆ ಹೊಂದಿದ್ದರಿಂದ ಅಳು ಬಂತು ಅಂತ ಸುಳ್ಳು ಹೇಳಿದಳು.

ಪೋಷಕರಿಂದ ಪತಿಯನ್ನು ದೂರ ಮಾಡುವ ಯತ್ನ, ಡೈವೋ​ರ್ಸ್‌ಗೆ ಅರ್ಹ ಕಾರಣ: ಸುಪ್ರೀಂ

click me!