ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ತನ್ನ ಅತ್ತೆ ಮಾವನನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು.ಹೀಗಲ್ಲದೆ ಆಕೆ ಗಂಡನನ್ನು ಪೋಷಕರಿಂದ ದೂರ ಮಾಡಲು ಯತ್ನಿಸಿದರೆ ಆಕೆ ಡಿವೋರ್ಸ್‌ಗೆ ಅರ್ಹಳು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನವದೆಹಲಿ: ಹೆತ್ತವರಿಂದ ಪ್ರತ್ಯೇಕವಾಗಿ ವಾಸ ಮಾಡುವಂತೆ ಪತ್ನಿ ಒತ್ತಾಯಿಸಿದರೆ ವಿಚ್ಛೇದನ ಮಾಡಿಕೊಳ್ಳುವ ಹಕ್ಕು ಪತಿಗೆ ಇರುತ್ತದೆ ಎಂದು ಕೋಲ್ಕತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೆತ್ತವರನ್ನು ನೋಡಿಕೊಳ್ಳುವುದು ಮಗನ ಕರ್ತವ್ಯವಾಗಿರುತ್ತದೆ ಎಂದು ಕೋರ್ಟ್ ಹೇಳಿದೆ. ವಿವಾಹದ ಬಳಿಕ, ಮಹಿಳೆಯೊಬ್ಬಳು ಸೂಕ್ತ ಕಾರಣವಿಲ್ಲದೇ ತನ್ನ ಪತಿಯನ್ನು ಆತನ ಅಪ್ಪ-ಅಮ್ಮನಿಂದ ಬೇರೆಯಾಗುವಂತೆ ಬಲವಂತ ಮಾಡುವುದು ಆತ ವಿಚ್ಛೇದನ ಕೋರಲು ಅರ್ಹ ಕಾರಣವಾಗಬಲ್ಲದು ಎಂದು ತಿಳಿಸಲಾಗಿದೆ.
ಭಾರತದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ರೀತಿ ಬದುಕಲು ಆಗದು. ವಿವಾಹದ ಬಳಿಕ ಹೆಣ್ಣು ತನ್ನ ಅತ್ತೆ ಮಾವನನ್ನು ತಂದೆ ತಾಯಿಯಂತೆ ನೋಡಿಕೊಳ್ಳಬೇಕು. ಗಂಡನ (Husband) ಆದಾಯದ ಆಸೆಗೋಸ್ಕರ ವೃದ್ಧ ತಂದೆ ತಾಯಿಯನ್ನು ದೂರ ಮಾಡುವುದು ಸರಿಯಲ್ಲ. ಪೋಷಕರು ಹುಟ್ಟಿನಿಂದಲೂ ತಾವು ದುಡಿದ ಹಣದಲ್ಲಿ ಮಕ್ಕಳನ್ನು ಸಾಕಿರುತ್ತಾರೆ. ಅವರ ನಿವೃತ್ತಿ ಜೀವನದಲ್ಲಿ ಆದಾಯ ಇಲ್ಲದಾಗ ಅವರನ್ನು ಮಗನಿಂದ ಬಲವಂತವಾಗಿ ಬೇರ್ಪಡಿಸಿದರೆ ಅದು ತಪ್ಪು. ಅವರ ಕೊನೆ ಕ್ಷಣದಲ್ಲಿ ಮಕ್ಕಳು ಸಾಕಿ ಸಲಹಬೇಕು ಎಂದು ಕೋರ್ಚ್ ಹೇಳಿದೆ.
25 ವರ್ಷಗಳಿಂದ ಮನೆಗೆಲಸ ಮಾಡಿದ ಮಾಜಿ ಪತ್ನಿಗೆ 1.75 ಕೋಟಿ ರೂ. ಪಾವತಿಗೆ ಕೋರ್ಟ್ ಆದೇಶ
ವಿಚ್ಛೇದನ ನೀಡಲು ಪತಿಗೆ ಅನುಮತಿ ಕೊಟ್ಟಿರುವ ಕೌಟುಂಬಿಕ ಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಮಹಿಳೆ (Women)ಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೌಮೇನ್ ಸೇನ್ ಮತ್ತು ಉದಯ್ ಕುಮಾರ್ ಇದ್ದ ವಿಭಾಗೀಯ ಪೀಠ ತಳ್ಳಿ ಹಾಕಿ ಕೆಳ ಕೋರ್ಟ್ನ ತೀರ್ಪನ್ನು ಎತ್ತಿ ಹಿಡಿದಿದೆ. ಪಶ್ಚಿಮ ಮೇದಿನಿಪುರ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯ, ಪ್ರಶಾಂತ್ ಕುಮಾರ್ ಮಂಡಲ್ ಎಂಬಾತ ಪತ್ನಿ ಝುರ್ನಾಗೆ ವಿಚ್ಛೇದನ (Divorce) ನೀಡಲು ಅನುಮತಿಸಿತ್ತು. ಪತಿಯನ್ನು ತಂದೆ-ತಾಯಿಯಿಂದ ದೂರ ಮಾಡಲು ಪೀಡಿಸಿ ಹೆಂಡತಿ (Wife) ಮಾನಸಿಕ ಹಿಂಸೆ ನೀಡಿದರೆ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಸಕಾರಣವಿರಬಹುದು ಎಂದು ಅದು ಅಭಿಪ್ರಾಯಪಟ್ಟಿದೆ. ಹೆತ್ತವರು ಮಗನೊಂದಿಗೆ ವಾಸಿಸುವುದು 'ಭಾರತೀಯ ಸಂಸ್ಕೃತಿಯಲ್ಲಿ ಸಹಜವಾಗಿದೆ' ಎಂದೂ ಕೋರ್ಟ್ ಹೇಳಿದೆ.
ಅಮ್ಮನ ಬದಲು ಅಪ್ಪನ ಆಯ್ಕೆ ಮಾಡಿದ ಮಗ: 13 ವರ್ಷದ ಬಾಲಕನ ತಂದೆ ಕಸ್ಟಡಿಗೆ ನೀಡಿದ ಕೋರ್ಟ್
ಜೀವನಾಂಶ ಕೇಳಿದ ಮಹಿಳೆಗೆ ಎಂಬಿಎ ಓದಿದ್ದೀರಿ, ದುಡಿದು ತಿನ್ನಿ ಎಂದ ಕೋರ್ಟ್
ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಜೀವನಾಂಶ ನೀಡುವಂತೆ ಪತ್ನಿ ಸಲ್ಲಿಸಿದ ಅರ್ಜಿಯನ್ನು ದೆಹಲಿಯ ನ್ಯಾಯಾಲಯ ತಿರಸ್ಕರಿಸಿದೆ. ಮದುವೆಯಾಗಿ ವಿಚ್ಛೇದನ ಪಡೆದ ಬಳಿದ ಕಾನೂನಿನ ಪ್ರಕಾರ, ಪತಿಯಾದವನು ಮಾಜಿ ಪತ್ನಿಗೆ ಜೀವನಾಂಶ ನೀಡಬೇಕು. ಕೆಲವು ಸಂದರ್ಭಗಳಲ್ಲಿ ಜೀವನಾಂಶ ನೀಡಲು ಪತಿಯು ನಿರಾಕರಿಸುವ ಕಾರಣ ಪತ್ನಿಯು ಕೋರ್ಟ್ ಮೊರೆ ಹೋಗುತ್ತಾರೆ. ಹಾಗೆಯೇ ಮಹಿಳೆಯೊಬ್ಬರು ಪತಿಯಿಂದ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಮಹಿಳೆ ಎಜುಕೇಟೆಡ್ ಮತ್ತು ದುಡಿಯಲು ಶಕ್ತಳಾಗಿದ್ದಾಳೆ ಎಂದು ತಿಳಿಸಿದೆ.
ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ವಯಂ ಸಿದ್ಧ ತ್ರಿಪಾಠಿ ಈ ಕಾಯ್ದೆಯಡಿ ತಿಂಗಳಿಗೆ 50,000 ಮಧ್ಯಂತರ ಜೀವನಾಂಶ (Alimony) ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು (Judge), 'ಪತ್ನಿ ಹೆಚ್ಚು ಅರ್ಹತೆ ಹೊಂದಿದ್ದಾರೆ ಮತ್ತು ತನಗಾಗಿ ಆದಾಯದ ಮೂಲವನ್ನು (Income source) ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ.ನಿರ್ವಹಣೆಗೆ ಅವಕಾಶ ನೀಡುವುದು ಕೇವಲ ಆಲಸ್ಯ ಮತ್ತು ಗಂಡನ (Husband) ಮೇಲೆ ಅವಲಂಬನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ಆಕೆಯ ಗಳಿಸುವ ಸಾಮರ್ಥ್ಯದ ದೃಷ್ಟಿಯಿಂದ ನಾನು ಯಾವುದೇ ನಿರ್ವಹಣೆಯನ್ನು ನೀಡಲು ಒಲವು ತೋರುತ್ತಿಲ್ಲ' ಎಂದು ತಿಳಿಸಿದರು.
ಕೆಲವು ಸಂದರ್ಭಗಳಲ್ಲಿ ಜೀವನಾಂಶ ನೀಡಲು ಪತಿಯು ನಿರಾಕರಿಸುವ ಕಾರಣ ಪತ್ನಿಯು ಕೋರ್ಟ್ ಮೊರೆ ಹೋಗುತ್ತಾರೆ. ಅಲ್ಲಿ ನ್ಯಾಯ ಪಡೆಯುತ್ತಾರೆ. ಆದರೆ, ದೆಹಲಿಯಲ್ಲಿ ಮಹಿಳೆಯೊಬ್ಬರು ಪತಿಯಿಂದ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಹಾಗೆಯೇ, ದುಡಿದು ತಿನ್ನಿ ಎಂಬ ಸಲಹೆ (Suggestion) ನೀಡಿದೆ.