ಚಂದ ಉಂಟೆಂದು ಹೆಂಡ್ತಿ ಮೂಗನ್ನೇ ಕಚ್ಚಿದ ಗಂಡ!

Published : May 09, 2025, 04:59 PM ISTUpdated : May 09, 2025, 05:16 PM IST
ಚಂದ ಉಂಟೆಂದು ಹೆಂಡ್ತಿ ಮೂಗನ್ನೇ ಕಚ್ಚಿದ ಗಂಡ!

ಸಾರಾಂಶ

ಪತ್ನಿಯ ಸೌಂದರ್ಯವನ್ನು ಇತರರು ಹೊಗಳಿದ್ದಕ್ಕೆ ಅಸೂಯೆಪಟ್ಟ ಪಶ್ಚಿಮ ಬಂಗಾಳದ ಶಾಂತಿಪುರದ ಬಪನ್ ಶೇಖ್, ನಿದ್ದೆ ಮಾಡುತ್ತಿದ್ದ ಪತ್ನಿ ಮಧು ಖತುನ್ ಮೂಗನ್ನು ಕಚ್ಚಿ ತಿಂದು, ಕತ್ತು ಹಿಸುಕಲು ಯತ್ನಿಸಿದ್ದಾನೆ. 

ಹೆಂಡತಿ ಚೆನ್ನಾಗಿದ್ದಾಳೆಂದರೆ ಖುಷಿ ಪಡುವ ಗಂಡಂದಿರೇ ಹೆಚ್ಚು. ಆದರೆ ಇಲ್ಲೊಬ್ಬ ಭೂಪ ತನ್ನ ಹೆಂಡತಿಯನ್ನು ಇತರರು ಪ್ರಶಂಸಿಸಿದ್ದಕ್ಕೆ ಆಕೆಯ ಮೂಗನ್ನೇ ಕಚ್ಚಿ ತಿಂದ ಘಟನೆ ನಡೆದಿದೆ. ಹೌದು, ಇದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸದರೂ ಇದೇ ಸತ್ಯ. ನೆರೆಹೊರೆಯವರು ಪತ್ನಿಯನ್ನು ಹೊಗಳುತ್ತಿದ್ದನ್ನು ಕೇಳಿ ಕೇಳಿ ಬೇಸತ್ತ ಆತ ಮೂಗನ್ನೇ ಕಚ್ಚಿ ತಿಂದಿದ್ದಾನೆ. ಆಕೆಯನ್ನು ಕತ್ತು ಹಿಸುಕಿ ಕೊಲ್ಲಲು ಸಹ ಪ್ರಯತ್ನಿಸಿದ್ದಾನೆ. ಆದರೆ ವಿಫಲವಾದಾಗ ಮನೆಯಿಂದ ಓಡಿಹೋಗಿದ್ದಾನೆ. ಪಶ್ಚಿಮ ಬಂಗಾಳದ ನಾಡಿಯಾದ ಶಾಂತಿಪುರದಲ್ಲಿ ಈ ಆಘಾತಕಾರಿ ಪ್ರಸಂಗ ನಡೆದಿದೆ.  ಮೂಗನ್ನು ಕಚ್ಚಿಸಿಕೊಂಡ ಆ ಮಹಿಳೆಯ ಹೆಸರು ಮಧು ಖತುನ್. ಆಕೆ 
ಶಾಂತಿಪುರ ರಾಜ್ಯ ಜನರಲ್ ಆಸ್ಪತ್ರೆಯಲ್ಲಿ ಮೂಗಿನ ಗಾಯಗಳಿಗೆ ಚಿಕಿತ್ಸೆ ಪಡೆದು, ಶಾಂತಿಪುರ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಬಪನ್ ಶೇಖ್ ವಿರುದ್ಧ ದೂರು ದಾಖಲಿಸಿದ್ದಳು.   

ಮಹಿಳೆಯ ದೂರಿನ ಆಧಾರದ ಮೇಲೆ, ಪೊಲೀಸರು ಆಕೆಯ ಪತಿ ಬಾಪನ್ ಶೇಖ್ ನನ್ನು ಬಂಧಿಸಿದ್ದಾರೆ. ಮಧು ಖತುನ್ ಪ್ರಕಾರ, ಆಕೆಯ ಪತಿ ಕುಡಿದ ಅಮಲಿನಲ್ಲಿ ಮೂಗನ್ನು ನೋಡಿ  ಹೆಚ್ಚಾಗಿ ಹೊಗಳುತ್ತಿದ್ದ. ಮೂಗು ಕತ್ತರಿಸಿ ತಿನ್ನುತ್ತೇನೆ ಎಂದು ಬೆದರಿಕೆಯೂ ಹಾಕಿದ್ದ. ದೂರಿನ ಪ್ರಕಾರ, ಮೇ 3 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಾಪನ್ ತನ್ನ ಪತ್ನಿ ನಿದ್ದೆ ಮಾಡುತ್ತಿದ್ದಾಗ ಆಕೆಯ ಮೂಗನ್ನು ಕಚ್ಚಿ, ಆಕೆಯ ಎದೆ, ಎಡಗೈನ ಒಂದು ಬೆರಳನ್ನು ಗಾಯಗೊಳಿಸಿ, ನಂತರ ಆಕೆಯ ಗಂಟಲು ಹಿಸುಕಲು ಪ್ರಯತ್ನಿಸಿದ್ದಾನೆ. ನೋವಿನಿಂದ ಎಚ್ಚರಗೊಂಡ ಮಹಿಳೆ ಅವನನ್ನು ದೂರ ತಳ್ಳಿ ಸಹಾಯಕ್ಕಾಗಿ ಕಿರುಚಿದ್ದಾಳೆ. ಮುಂದಿನ ಕೋಣೆಯಲ್ಲಿ ಮಲಗಿದ್ದ ಅವಳ ಅಣ್ಣ ಧಾವಿಸಿ ಬಂದು ಅವಳನ್ನು ರಕ್ಷಿಸಿದ್ದಾನೆ. ಬಾಪನ್  ತಕ್ಷಣ ತಪ್ಪಿಸಿಕೊಂಡಿದ್ದಾನೆ.

" ಮೂಗನ್ನು ಇತರರು ಹೊಗಳುವುದನ್ನು ನೋಡಿ ನನ್ನ ಗಂಡನಿಗೆ ಅಸೂಯೆಯಾಗುತ್ತಿತ್ತು. ನನ್ನ ಮೂಗು ಏಕೆ ಇಷ್ಟೊಂದು ಸುಂದರವಾಗಿ ಕಾಣುತ್ತದೆ ಎಂದು ಅವರು ಆಗಾಗ್ಗೆ ಕೇಳುತ್ತಿದ್ದರು, ನನ್ನ ಮೂಗು ಕಚ್ಚುವ ಬಗ್ಗೆಯೂ ಮಾತನಾಡುತ್ತಿದ್ದರು. ಅವರು ಅಷ್ಟು ಗಂಭೀರವಾಗಿದ್ದಾರೆಂದು ನಾನು ಎಂದಿಗೂ ಭಾವಿಸಿರಲಿಲ್ಲ. ಗಂಡ ಕೆಲವೊಮ್ಮೆ ಮದ್ಯಪಾನವನ್ನೂ ಮಾಡುತ್ತಿದ್ದ. ಆಗ ಅವನು ನಿನ್ನ ಮುಖ ಏಕೆ ಇಷ್ಟೊಂದು ಸುಂದರವಾಗಿದೆ ಎಂದು ಕೇಳುತ್ತಿದ್ದ! ನಿನ್ನ ಮೂಗು ಇನ್ನೂ ಸುಂದರವಾಗಿದೆ. ಆದ್ದರಿಂದ, ನಾನು ನಿನ್ನ ಮೂಗು ಕಚ್ಚಿ ತಿನ್ನುತ್ತೇನೆ ಎನ್ನುತ್ತಿದ್ದ. ಈಗ ಇದ್ದಕ್ಕಿದ್ದಂತೆ  ರಾತ್ರಿ ಹೀಗೆ ನಡೆದುಕೊಂಡಿದ್ದಾನೆ. ನನ್ನ ಗಂಡ ನನ್ನ ಮೇಲೆ ಆಸಿಡ್ ಸುರಿಯುವುದಾಗಿಯೂ ಬೆದರಿಕೆ ಹಾಕಿದ್ದನು. ಎಂಟು ವರ್ಷದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ತನ್ನ ಪತಿ ಸೇರಿದಂತೆ ತನ್ನ ಅತ್ತೆ-ಮಾವಂದಿರು ಕೂಡ ಹಿಂಸೆ ನೀಡುತ್ತಿದ್ದರು" ಎಂದು ಮಧು ಆರೋಪಿಸಿದ್ದಾಳೆ.   

ಮಧು ಗಂಡನ ಚಿತ್ರಹಿಂಸೆ ತಾಳಲು ಸಾಧ್ಯವಾಗದೆ ಕಳೆದ ಎರಡು ವರ್ಷಗಳಿಂದ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾಳೆ. ಘಟನೆ ನಡೆಯುವವರೆಗೂ ಆಕೆಯ ಪತಿ ಕೂಡ ಆ ಮನೆಯಲ್ಲಿಯೇ ಇದ್ದ.  

ಈ ಸಂಬಂಧ ರಾಣಾಘಾಟ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಆಶಿಶ್ ಮೈಜ್ಯಾ ಮಾತನಾಡಿ, "ನಮಗೆ ಕುಟುಂಬದಿಂದ ಲಿಖಿತ ದೂರು ಬಂದಿದೆ. ಅದರ ಆಧಾರದ ಮೇಲೆ ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.  
 
ಶಿಕ್ಷೆಗೆ ಆಗ್ರಹ: ಈ ಸಂಬಂಧ ಮಧುವಿನ ತಾಯಿ, ತನ್ನ ಮಗಳು ಪ್ರತಿದಿನದಂತೆ ಮನೆಯಲ್ಲಿ ಮಲಗಿದ್ದಳು. ಇದ್ದಕ್ಕಿದ್ದಂತೆ ಕಿರುಚಾಡುತ್ತಿರುವುದು ಕೇಳಿಬಂತು. ನಾನು ಅಲ್ಲಿಗೆ ಹೋಗಿ ನೋಡಿದಾಗ, ಮಗಳ ಮೂಗು ಮತ್ತು ಕೈಯಿಂದ ರಕ್ತ ಬರುತ್ತಿತ್ತು. ತನ್ನ ಮಗಳನ್ನು ಉಳಿಸಲು ಪ್ರಯತ್ನಿಸಿದಾಗ ನನಗೂ ಹೊಡೆದನು. ಅಳಿಯನಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.   

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು