ವಿರಾಟ್‌ ಕೈ ಹಿಡಿಯಲು ಬಂದ್ರೆ, ಮುನಿಸಿಕೊಂಡು ದರದರನೇ ಓಡಿದ ಅನುಷ್ಕಾ ಶರ್ಮಾ! ಇಂಥ ಸಿಟ್ಯಾಕೆ?

Published : May 08, 2025, 10:37 AM ISTUpdated : May 08, 2025, 12:08 PM IST
ವಿರಾಟ್‌ ಕೈ ಹಿಡಿಯಲು ಬಂದ್ರೆ, ಮುನಿಸಿಕೊಂಡು ದರದರನೇ ಓಡಿದ ಅನುಷ್ಕಾ ಶರ್ಮಾ! ಇಂಥ ಸಿಟ್ಯಾಕೆ?

ಸಾರಾಂಶ

ನಟಿ ಅವನೀತ್ ಕೌರ್ ಫೋಟೋಗೆ ವಿರಾಟ್ ಕೊಹ್ಲಿ ಲೈಕ್ ಒತ್ತಿದ ನಂತರ ಪತ್ನಿ ಅನುಷ್ಕಾ ಶರ್ಮಾ ಮುನಿಸಿಕೊಂಡಿದ್ದಾರಾ ಎಂಬ ವದಂತಿಗಳ ನಡುವೆ, ಬೆಂಗಳೂರಿನ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ವೀಡಿಯೋ ವೈರಲ್ ಆಗಿದೆ. 

ಇನ್ಸ್ಟಾಗ್ರಾಮ್‌ನಲ್ಲಿ ನಟಿ ಅವನೀತ್ ಕೌರ್‌ ಫೋಟೋಗೆ ವಿರಾಟ್ ಕೊಹ್ಲಿ ಲೈಕ್ ಒತ್ತಿದ ನಂತರ ಪತ್ನಿ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಮೇಲೆ ಮುನಿಸಿಕೊಂಡಿದ್ದಾರಾ? ಇದಕ್ಕೆ ಪುಷ್ಠಿ ನೀಡುವಂತಹ ವೀಡಿಯೋವೊಂದು ವೈರಲ್ ಆಗುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ನಟಿ ಅವನೀತ್ ಕೌರ್‌ ಪೋಟೋಗೆ ಲೈಕ್ ಒತ್ತಿದ್ದು, ಭಾರಿ ಸುದ್ದಿಯಾಗಿತ್ತು. ನಟಿ ಅನುಷ್ಕಾ ಶರ್ಮಾ ವಿದೇಶದಲ್ಲಿದ್ದಾಗ ಈ ಘಟನೆ ನಡೆದಿತ್ತು. ತಮ್ಮ ಒಂದು ಲೈಕ್ ಬಗ್ಗೆ ಇಷ್ಟು ದೊಡ್ಡ ಸುದ್ದಿಯಾಗಿದ್ದು ನೋಡಿ ವಿರಾಟ್‌ ಕೊಹ್ಲಿ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು. ತಾನು ಉದ್ದೇಶಪೂರ್ವಕವಾಗಿ ಲೈಕ್ ಕೊಟ್ಟಿಲ್ಲ, ಇದು ಇನ್ಸ್ಟಾಗ್ರಾಮ್ ತಾಂತ್ರಿಕ ಎಡವಟ್ಟಿನಿಂದ ಹೀಗಾಗಿದೆ ಎಂದು ಕೊಹ್ಲಿ ಸ್ಪಷ್ಟನೆಯನ್ನು ನೀಡಿದ್ದರು. ಈ ವಿವಾದದ ನಂತರ ಮೊದಲ ಬಾರಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬೆಂಗಳೂರಿನ ರೆಸ್ಟೋರೆಂಟ್‌ವೊಂದಕ್ಕೆ ಜೊತೆಯಾಗಿ ಊಟಕ್ಕೆ ಬಂದಿದ್ದರು. ಇವರು ಜೊತೆಯಾಗಿ ಆಗಮಿಸಿದ ವೀಡಿಯೋವೊಂದು ಈಗ ವೈರಲ್ ಆಗುತ್ತಿದ್ದು, ಈ ವೀಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಮುನಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಹಾಗಿದ್ರೆ ವೀಡಿಯೋದಲ್ಲೇನಿದೆ. 

ವೀಡಿಯೋದಲ್ಲಿ ಕಾಣಿಸುವಂತೆ ವಿರಾಟ್ ಕೊಹ್ಲಿ ಆಗಲೇ ಕಾರಿನಿಂದ ಇಳಿದಿದ್ದು, ಕಾರೊಳಗಿದ್ದ ಪತ್ನಿ ಅನುಷ್ಕಾ ಶರ್ಮಾಗಾಗಿ ಕಾರಿನ ಡೋರನ್ನು ತೆಗೆದು ಅವರನ್ನು ಕಾರಿನಿಂದ ಕೆಳಗೆ ಇಳಿಸಿಕೊಳ್ಳಲು ಕೈ ನೀಡಿದ್ದಾರೆ. ಆದರ ವಿರಾಟ್ ಸ್ವಾಗತವನ್ನು ಧಿಕ್ಕರಿಸಿ ಅವರ ಕೈಯನ್ನು ಹಿಡಿದುಕೊಳ್ಳದೇ ಕಾರಿನಿಂದ ದಡದಡನೇ ಇಳಿದು ಅನುಷ್ಕಾ ಶರ್ಮಾ ರೆಸ್ಟೋರೆಂಟ್ ಒಳಗೆ ಹೋಗಿದ್ದರೆ, ಇತ್ತ ವಿರಾಟ್ ಕೊಹ್ಲಿ ಅವರು ಆಕೆಯನ್ನು ಹಿಂಬಾಲಿಸಿಕೊಂಡು ರೆಸ್ಟೋರೆಂಟ್ ಒಳಗೆ ಹೋಗಿದ್ದಾರೆ. ಈ ವೀಡಿಯೋವನ್ನು @KohliSensation ಎಂಬ ಕೊಹ್ಲಿ ಫ್ಯಾನ್‌ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ.  ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಲೂಪಾ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡರು ಎಂದು ಬರೆದು ಅವರಿಬ್ಬರಿರುವ 15 ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಈ ವೀಡಿಯೋ ಗಂಡ ಹೆಂಡತಿಯ ಸಾಮಾನ್ಯ ವರ್ತನೆಯಂತೆಯೇ ಕಂಡರು ನೆಟ್ಟಿಗರು ಇದರಲ್ಲಿ ಗಂಡ ಹೆಂಡತಿ ಮಧ್ಯೆ ಏನೋ ಮುನಿಸಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ. 

ನೆಟ್ಟಿಗರು ಹೇಳಿದ್ದೇನು?

ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅತ್ತಿಗೆ ಮುನಿಸಿಕೊಂಡಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಹಾಗೆಯೇ ಮತ್ತೆ ಕೆಲವು ವಿರಾಟ್‌ ಅಭಿಮಾನಿಗಳು ಈ ವೀಡಿಯೋವನ್ನು ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ. ಅತ್ತಿಗೆಗೂ ವಿರಾಟ್ ಕೊಹ್ಲಿಯ ಅಲ್ಗೋರಿದಮ್ ತಿಳಿದು ಬಿಡ್ತು ಎಂದು ಒಬ್ಬರು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ತಮ್ಮ ಸ್ವಂತ ರೆಸ್ಟೋರೆಂಟ್‌ಗೆ ಏಕೆ ಹೋಗುವುದಿಲ್ಲ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ವೀಡಿಯೋ ಡಿಲೀಟ್ ಮಾಡಿ 5 ನಿಮಿಷದ ವೀಡಿಯೋದಲ್ಲಿ ನೀವು ಹೇಗೆ ಜಡ್ಜ್‌ ಮಾಡಿಬಿಡುತ್ತೀರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾಗೆ ಆಟಿಟ್ಯೂದ್ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಏನ್ ನೋಡ್ತಿದ್ದೇನೆ, ಅನುಷ್ಕಾ ಶರ್ಮಾ ವಿರಾಟ್ ಕೈಹಿಡಿದುಕೊಂಡಿಲ್ಲ ಎಂದು ಮತ್ತೊಬ್ಬರು ಅಚ್ಚರಿಯಿಂದ ಪ್ರಶ್ನಿಸಿದ್ದಾರೆ.

ಈ ವೀಡಿಯೋದಲ್ಲಿ ಅನುಷ್ಕಾ ಶರ್ಮಾ ಪೀಚ್ ಕಲರ್‌ನ ಜೆಮ್‌ಸೂಟ್ ಧರಿಸಿದ್ದು, ಕೂದಲನ್ನು ಅರ್ಧ ಕಟ್ಟಿದ್ದು, ಕೈಯಲ್ಲಿ ಪುಟ್ಟದಾದ ಬ್ಯಾಗೊಂದನ್ನು ಹಿಡಿದುಕೊಂಡಿದ್ದರು.  ಇತ್ತ ಕೊಹ್ಲಿ ಕ್ಯಾಶುವಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಬಿಳಿ ಟೀ ಶರ್ಟ್‌ ಹಾಗೂ ಟ್ರ್ಯಾಕ್ ಟ್ರೌಸರ್ ಧರಿಸಿದ್ದರು.  ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಶಾಶ್ವತವಾಗಿ ಲಂಡನ್‌ನಲ್ಲಿ ನೆಲೆಸುತ್ತಾರೆ ಎಂಬ ಸುದ್ದಿಯೊಂದು ಬಹುದಿನಗಳಿಂದ ಹರಿದಾಡುತ್ತಿದೆ. ತಮ್ಮಿಬ್ಬರು ಮಕ್ಕಳಾದ ವಮೀಕಾ ಹಾಗೂ ಆಕಾಯ್‌ ಅವರನ್ನು ಲೈಮ್‌ಲೈಟ್‌ನಿಂದ ದೂರ ಇಡುವುದಕ್ಕಾಗಿ ಅವರು ಈ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು