ಬರ್ತಾ ಇದೆ ಗಂಡಸರಿಗೂ ಗರ್ಭ ನಿರೋಧಕ ಮಾತ್ರೆ! ಯಾವಾಗ ತಗೋಬೇಕು, ಹೇಗೆ ಕೆಲಸ ಮಾಡುತ್ತೆ?

Published : Feb 15, 2023, 03:04 PM IST
ಬರ್ತಾ ಇದೆ ಗಂಡಸರಿಗೂ ಗರ್ಭ ನಿರೋಧಕ ಮಾತ್ರೆ! ಯಾವಾಗ ತಗೋಬೇಕು, ಹೇಗೆ ಕೆಲಸ ಮಾಡುತ್ತೆ?

ಸಾರಾಂಶ

ಪ್ರೇಮಿಗಳ ದಿನವೇ ಹೊಸದೊಂದು ಸಂಶೋಧನೆಯನ್ನು ವಿಜ್ಞಾನಿಗಳು ಪ್ರಕಟಿಸಿದ್ದಾರೆ. ಅದು ಪುರುಷರ ಗರ್ಭ ನಿರೋಧಕ ಮಾತ್ರೆಗಳ ಆವಿಷ್ಕಾರ. ಇದುವರೆಗೂ ಮಹಿಳೆಯರು ಅನಪೇಕ್ಷಿತ ಗರ್ಭಧಾರಣೆ ತಡೆಯೋಕೆ ಮಾತ್ರೆ ಸೇವಿಸಬೇಕಾಗಿತ್ತು. ಇನ್ನು ಮುಂದೆ ಗಂಡಸರೂ ಸೇವಿಸಬಹುದಂತೆ.  

ಹೆಚ್ಚಿನ ಯುವಕ- ಯುವತಿಯರು ಕಾಂಡೋಮ್‌ (condom) ಬಳಕೆಯನ್ನು ಇಷ್ಟಪಡುವುದಿಲ್ಲ. ಅದು ಸೆಕ್ಸ್‌ನಲ್ಲಿ (sex) ಮುಕ್ತತೆಗೆ ಅಡ್ಡಿಯಾಗುತ್ತದೆ ಎಂಬುದು ಕಾರಣ. ಇನ್ನು ಕೆಲವೊಮ್ಮೆ ಅವಸರದ ವೇಳೆಯಲ್ಲಿ ಕಾಂಡೋಮ್‌ ಧರಿಸಲೂ ಮರೆತುಹೋಗುತ್ತದೆ.

ಇದಕ್ಕಾಗಿಯೇ ಸ್ತ್ರೀಯರು ಸೇವಿಸಬಹುದಾದ ಕಾಂಟ್ರಾಸೆಪ್ಟಿವ್‌ (contraceptive pill) ಪಿಲ್‌ಗಳು ಬಂದವು. ಇವು ಗರ್ಭದಲ್ಲಿರುವ ಅಂಡವನ್ನು ನಿಷ್ಕ್ರಿಯಗೊಳಿಸಿ, ಅನ್‌ವಾಂಟೆಡ್‌ ಪ್ರೆಗ್ನೆನ್ಸಿಯನ್ನು (unwanted pregnancy) ತಡೆಯುತ್ತಿದ್ದವು. ಆದರೆ ಇದು ಕೂಡ ಸಾಕಷ್ಟು ಸೈಡ್‌ ಎಫೆಕ್ಟ್‌ ಹೊಂದಿದೆ ಎನ್ನುವ ಕಾರಣಕ್ಕಾಗಿ ಮಹಿಳೆಯರು ಇಷ್ಟಪಡುತ್ತಿಲ್ಲ. ಹಾಗಾದರೆ ದಾರಿಯೇನು? ಗಂಡಸರೇ ಮಾತ್ರೆ ಸೇವಿಸುವಂತಾದರೆ? ಅದೂ ಬಂತು!  ವಾಸ್ತವವಾಗಿ ಇದಕ್ಕೆ ಬೇಡಿಕೆಯಿತ್ತು. ಈ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಅಭಿವೃದ್ಧಿಯಾಗಬೇಕಿದೆಯಾದರೂ, ಪುರುಷರ ವೀರ್ಯವನ್ನು ಯಶಸ್ವಿಯಾಗಿ ಮಧ್ಯದಲ್ಲೇ ತಡೆದು ನಿಲ್ಲಿಸಲು ಸಾಧ್ಯ ಎಂಬುದಂತೂ ರುಜುವಾತಾಗಿದೆ. ಈ ಅಧ್ಯಯನದ ಫಲಿತಾಂಶಗಳನ್ನು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ವೆಯಿಲ್ ಕಾರ್ನೆಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಅಧ್ಯಯನದ ಸಹ-ಹಿರಿಯ ಲೇಖಕರಾದ ಡಾ ಜೋಚೆನ್ ಬಕ್ ಮತ್ತು ಡಾ ಲೋನಿ ಲೆವಿನ್ ಇಬ್ಬರೂ ಪ್ರಾಧ್ಯಾಪಕರು, ಈ ಆವಿಷ್ಕಾರವು ಅಸಾಮಾನ್ಯ ಸಂಗತಿಯಾಗಿದೆ ಎಂದಿದ್ದಾರೆ. ಪ್ರಸ್ತುತ 2000 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಸಂತಾನಹರಣಗಳು ಮತ್ತು ಕಾಂಡೋಮ್‌ಗಳು ಮಾತ್ರ ಗರ್ಭನಿರೋಧಕ ವಿಧಾನಗಳಾಗಿದ್ದವು. ಹಿಂದೆ ಪುರುಷರಿಗಾಗಿ ಮೌಖಿಕ ಗರ್ಭನಿರೋಧಕಗಳ ಬಗ್ಗೆ ಸಂಶೋಧನೆ ನಡೆದಿದ್ದರೂ, ಅದು ಕೊನೆಗಂಡಿರಲಿಲ್ಲ.

ಇಲ್ಲಿ ಮದ್ವೆಯಾದ ನಂತ್ರ, ಹುಡುಗನ್ನು ಹೆಂಡ್ತಿ ಮನೆಗೆ ಕಳುಹಿಸ್ತಾರೆ!

ಈ ಸಂಭಾವ್ಯ ಗರ್ಭನಿರೋಧಕಗಳ ಪರಿಣಾಮ ಖಚಿತ. ಆದರೆ ಸುರಕ್ಷತೆ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕಿದೆ. ಅವರ ಅಭಿಪ್ರಾಯದಲ್ಲಿ, ಇದು ಗರ್ಭಧಾರಣೆಯ ಅಪಾಯಗಳನ್ನು ನಿವಾರಿಸುತ್ತದೆ. ಜತೆಗೆ, ಸಂಭಾವ್ಯ ಅಡ್ಡ ಪರಿಣಾಮಗಳು ಪುರುಷರಿಗೆ ಆಗಬಹುದಾದದ್ದು ಕಡಿಮೆ. ಯಾಕೆಂದರೆ ಅವರಲ್ಲಿ ಗರ್ಭವಿಲ್ಲ. ಗರ್ಭವಿರುವುದು ಹೆಣ್ಣಿನಲ್ಲಿ. ಈ ಮಾತ್ರೆ ವೀರ್ಯವನ್ನಷ್ಟೇ ತಡೆಯುತ್ತದೆ. ಅದು ಹೇಗೆ?

ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಈ ಮಾತ್ರೆಯನ್ನು ಪ್ರಯೋಗಿಸಲಾಯಿತು. ಈ ಔಷಧವು ಎರಡೂವರೆ ಗಂಟೆಗಳವರೆಗೆ ವೀರ್ಯವನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ತೋರಿಸಿದೆ. ಇದರ ಪರಿಣಾಮಗಳು ಸಹ ನಿರಂತರವಾಗಿ ಕಂಡುಬಂದಿವೆ. ಸ್ತ್ರೀ ಸಂತಾನೋತ್ಪತ್ತಿ ಪ್ರದೇಶದಲ್ಲಿ ಪ್ರವೇಶಿಸಿದ ಮೂರು ಗಂಟೆಗಳ ಅವಧಿಯ ವರೆಗೂ ಈ ನಿಷ್ಕ್ರಿಯತೆ ಮುಂದುವರಿಯಿತಂತೆ. ಅಂದರೆ ಇದೇ ಗರ್ಭಧಾರಣೆಯ ಅಪಾಯದ ಅವಧಿ. ಈ ಅವಧಿ ದಾಟಿದರೆ ಯಾವುದೇ ಅಪಾಯವಿಲ್ಲ. ಇದೊಂದು ಮೌಖಿಕವಾಗಿ ತಗೊಳ್ಳಬಹುದಾದ ಔಷಧ. ಅಂದರೆ ಮಾತ್ರೆಯಂತೆ ಬಾಯಿಯಲ್ಲಿ ಸೇವಿಸಬಹುದು.

ಆದರೆ ಇದು ಪುರುಷನ ಸೆಕ್ಸ್‌ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆಯಾ? ಅಂಥದೇನೂ ಕಂಡುಬಂದಿಲ್ಲ. ಇದರಿಂದ ಇಲಿಗಳ ಸಂಯೋಗದ ನಡವಳಿಕೆಯ ಮೇಲೆ ಪರಿಣಾಮ ಬೀರಲಿಲ್ಲ. ಈ ಅವಲೋಕನಗಳು 52 ವಿಭಿನ್ನ ಸಂಯೋಗದ ಪ್ರಯತ್ನಗಳನ್ನು ಅವಲಂಬಿಸಿ ದಾಖಲಾದವು. ಸುಮಾರು ಮೂರನೇ ಒಂದು ಭಾಗದಷ್ಟು ಮಿಲನದಲ್ಲಿ ಸಂಗಾತಿಗಳಿಗೆ ಈ ಮಾತ್ರೆಯ ಡೋಸ್‌ ಕೊಡಲಾಯಿತು. ಗರ್ಭನಿರೋಧಕವು 30ರಿಂದ 60 ನಿಮಿಷಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು. 

ಸೆಕ್ಸ್ ಮೂರು ಗಂಟೆಗಳ ನಂತರವೂ ಈ ಮಾತ್ರೆಯ ಪರಿಣಾಮ ಆಕ್ಟಿವ್ ಆಗಿತ್ತು, ಅಂದರೆ ಇನ್ನು ಮುಂದೆ ಗರ್ಭ ತಡೆಯುವ ಭಾರ ಮಹಿಳೆಯದೇ ಆಗಿರಬೇಕಿಲ್ಲ. ಗಂಡಸರೂ ತಮಗೆ ಮಗು ಬೇಡ ಎಂದಿದ್ದರೆ ಗುಳಿಗೆ ಸೇವಿಸಿಯೇ ಗೆಳತಿಯ ಬಳಿಗೆ ಹೋಗಬಹುದು. ಆದರೂ ಇದು ಮಾತ್ರೆಯಾಗಿ ಮಾರುಕಟ್ಟೆಗೆ ಬರೋದಕ್ಕೆ ಇನ್ನೊಂದಷ್ಟು ದಿನಗಳು ಹೋಗಬೇಕಿದೆ.

Arranged Marriage ಆಗ್ತಿದ್ದೀರಾ? ಹಾಗಿದ್ರೆ ಇದನ್ನ ನೀವು ಓದ್ಲೇಬೇಕು…
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?