
ಇಂದು ಡಿವೋರ್ಸ್ ಎನ್ನುವುದು ಸಿಕ್ಕಾಪಟ್ಟೆ ಸಹಜ ಆಗಿಬಿಟ್ಟಿದೆ. ಚಿಕ್ಕಪುಟ್ಟ ವಿಷಯಕ್ಕೂ ಗಂಡ-ಹೆಂಡಿರ ನಡುವೆ ಮನಸ್ತಾಪ ಆಗುತ್ತಿದ್ದು, ಅದು ವಿಚ್ಛೇದನದವರೆಗೂ ಹೋಗುತ್ತಿದೆ. ಒಂದೆರಡು ದಶಕದಿಂದ ಡಿವೋರ್ಸ್ ಪ್ರಮಾಣ ವಿಪರೀತ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯಾಗಿ ನಿಂತಿರೋದು ಕೌಟುಂಬಿಕ ಕೋರ್ಟ್ಗಳ ಪ್ರಮಾಣದಲ್ಲಿ ದಿಢೀರ್ ಏರಿಕೆ ಆಗುತ್ತಿರುವುದು. ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಹಿಂದೆಲ್ಲಾ ಪತಿಯೇ ಪರದೈವ, ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ, ಮದುವೆಯಾಗಿ ಅಮ್ಮನ ಮನೆಯ ಹೊಸಿಲಿನಿಂದ ಹೋದಾಕೆ, ವಾಪಸ್ ಅಮ್ಮನ ಮನೆಯ ಹೊಸಿಲು ತುಳಿಯುವುದು ಹೆಣವಾದ ಬಳಿಕವಷ್ಟೇ, ಅಲ್ಲಿಯವರೆಗೂ ಆಕೆ ಗಂಡನ ಮನೆಯಲ್ಲಿ ಏನೇ ಬಂದರೂ ಸಹಿಸಿಕೊಂಡು ಹೋಗಬೇಕು ಎನ್ನುವ ಮಾತೆಲ್ಲಾ ಇತ್ತು. ಇಂದಿಗೂ ಕೆಲವು ಕಡೆಗಳಲ್ಲಿ ಹೆಣ್ಣುಮಕ್ಕಳಿಗೆ ಈ ಮಾತುಗಳನ್ನು ಹೇಳುತ್ತಲೇ ಬರುತ್ತಿರುವುದು ಕೂಡ ಅಷ್ಟೇ ಸತ್ಯ.
ಆದರೆ, ದೌರ್ಜನ್ಯ ಸಹಿಸಿಕೊಳ್ಳುವುದು ದೂರದ ಮಾತು, ಇಂದು ಎಷ್ಟೋ ಪ್ರಕರಣಗಳಲ್ಲಿ ಡಿವೋರ್ಸ್ಗೆ ಕಾರಣ ಕೇಳಿದರೆ ನಗು ಬರುವಂಥ ಕಾರಣಗಳೂ ಇರುತ್ತವೆ. ಚಿಕ್ಕಪುಟ್ಟ ವಿಷಯಕ್ಕೆ ಗಂಡ-ಹೆಂಡತಿಯರ ನಡುವೆ ವೈಮನಸ್ಸು ಶುರು ಆಗುವುದು ಇದೆ. ಇಬ್ಬರ ನಡುವೆ ಇಗೋ ಹೆಚ್ಚು ಇಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಎಲ್ಲದಕ್ಕೂ ವಿಚ್ಛೇದನವೇ ಮದ್ದು ಎನ್ನುವ ಮನಸ್ಥಿತಿಯೂ ಶುರುವಾಗಿದೆ. ಕೆಲವು ಡಿವೋರ್ಸ್ ಪ್ರಕರಣಗಳ ಹಿಂದಿನ ಕಾರಣಗಳು ಭಯಾನಕ ಆಗಿರುವುದು ಇರುವುದು ನಿಜವಾಗಿದ್ದರೂ, ಚಿಕ್ಕ-ಪುಟ್ಟ ಸಮಸ್ಯೆ ಬಂದಾಗ ಅದನ್ನು ಪರಿಹರಿಸುವವರು ಇಲ್ಲದೇ ಇರುವುದು ಕೂಡ ಈ ಮನಸ್ಥಿತಿಗೆ ಕಾರಣವಾಗುತ್ತಿದೆ. ಹತ್ತಾರು ವರ್ಷಗಳು ಲವರ್ ಆಗಿದ್ದ ಸಂದರ್ಭದಲ್ಲಿ ಖುಷಿಯಿಂದ ಇರುವ ಜೋಡಿಗಳು ಮದುವೆಯಾದ ಕೆಲವೇ ತಿಂಗಳೋ ಅಥವಾ ವರ್ಷದಲ್ಲಿಯೇ ಬೇರೆ ಬೇರೆಯಾಗಿರುವ ಉದಾಹರಣೆಗಳೂ ಇವೆ.
ನಿಮಗೆಲ್ಲಾ ರೋಲ್ ಇಲ್ಲ ಅಂತ ಕೆಜಿಎಫ್ ನಿರ್ದೇಶಕ ಮಾಳವಿಕಾಗೆ ವಾಪಸ್ ಕಳಿಸೇ ಬಿಡೋದಾ? ಗರಂ ಆಗಿದ್ದ ನಟಿ
ಈಗ ಇವೆಲ್ಲವುಗಳ ಬಗ್ಗೆ ಮಾತನಾಡಿದ್ದಾರೆ ನಟಿ ಮಾಳವಿಕಾ ಅವಿನಾಶ್. ಬದುಕು ಜಟಕಾಬಂಡಿ ಕಾರ್ಯಕ್ರಮದಲ್ಲಿ ಅವರು ಹಲವು ಕೌಟುಂಬಿಕ ಸಮಸ್ಯೆಗಳನ್ನು ಸರಿಮಾಡಿದ್ದು ಇದೆ. ಅದರ ಬಗ್ಗೆ ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುವ ವೇಳೆ, ಡಿವೋರ್ಸ್ ಬಗ್ಗೆ ಉಲ್ಲೇಖಿಸಿದ್ದಾರೆ. ಹೇಗೆ ಇಂದಿನವರ ಮನಸ್ಥಿತಿಗಳು ವರ್ಕ್ ಆಗುತ್ತಿವೆ ಎಂಬ ಬಗ್ಗೆ ಹೇಳಿದ್ದಾರೆ. ನನ್ನ ಸಮಕಾಲೀನ ನಟಿಯರ ವಿಷಯದಲ್ಲಿ ಹೇಳುವುದಾದರೆ, ಬಹುಶಃ 25 ವರ್ಷಗಳಿಂದ ಒಬ್ಬನೇ ಗಂಡನ ಜೊತೆ ಇರುವವಳು ನಾನೊಬ್ಬಳೇ ಎನ್ನಿಸುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ತೆರನಾಗಿ ಕಮೆಂಟ್ಗಳು ಬರುತ್ತಿವೆ. ಮಾಳವಿಕಾ ಅವರ ಸಮಕಾಲೀನ ನಟಿಯರ ಹೆಸರುಗಳನ್ನು ಉಲ್ಲೇಖಿಸಿ, ಅವರ ವಿಷಯವಾಗಿಯೇ ಮಾಳವಿಕಾ ಹಾಗೆ ಹೇಳಿರಬಹುದು ಎನ್ನಲಾಗುತ್ತಿದೆ. ಆದರೆ ಈ ವಿಡಿಯೋದಲ್ಲಿ ಮಾಳವಿಕಾ ಅವರು, ಹೇಗೆ ಮದುವೆಗಳು ಮುರಿದು ಬೀಳುತ್ತಿವೆ ಎಂಬ ಬಗ್ಗೆ ಹೇಳುವಾಗ ತಮ್ಮ ವಿಷಯವನ್ನು ಪ್ರಸ್ತಾಪಿಸಿದ್ದಾರಷ್ಟೇ.
ಇದೇ ವೇಳೆ, ತಮ್ಮ ಮತ್ತು ಅವಿನಾಶ್ ಭೇಟಿ ಹೇಗೆ ಆಗಿದ್ದು, ಮದುವೆ ಹೇಗೆ ನಡೆದಿದ್ದು ಎಂಬ ಬಗ್ಗೆ ಕುತೂಹಲಕಾರಿಯಾಗಿ ನಟಿ ವಿವರಿಸಿದ್ದಾರೆ. ತಮ್ಮದು ಲವ್ ಆ್ಯಟ್ ಫಸ್ಟ್ ಸೈಟು, ಸೆಕೆಂಡ್ ಸೈಟು ಅಂತೇನೂ ಇಲ್ಲ. ಮನೆಯಲ್ಲಿ ನೋಡಿ ಮಾಡಿದ ಮದುವೆ ಎನ್ನುತ್ತಲೇ ದಾಂಪತ್ಯ ಜೀವನ ಚೆನ್ನಾಗಿ ಇರಬೇಕು ಎಂದರೆ, ಪತಿ-ಪತ್ನಿ ಇಬ್ಬರೂ ಹೇಗೆ ಇರಬೇಕು ಎನ್ನುವ ಬಗ್ಗೆಯೂ ನಟಿ ತಿಳಿಸಿದ್ದಾರೆ. ಅದರ ಸಂಪೂರ್ಣ ಸಂದರ್ಶನ ಈ ಕೆಳಗಿನ ಲಿಂಕ್ನಲ್ಲಿದೆ.
ಕೆಜಿಎಫ್-3 ಬಿಗ್ ಅಪ್‌ಡೇಟ್! ಯಶ್ ಫ್ಯಾನ್ಸ್ ಕುಣಿದು ಕುಪ್ಪಳಿಸೋ ಸುದ್ದಿ ಕೊಟ್ಟ ಮಾಳವಿಕಾ ಅವಿನಾಶ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.