Intimate Health: ಮುನಿಸಿಕೊಂಡ ಸಂಗಾತಿ ಜೊತೆ ಸೆಕ್ಸ್ ಎಷ್ಟು ಸುರಕ್ಷಿತ?

By Suvarna News  |  First Published Feb 17, 2024, 2:35 PM IST

ಸಂಗಾತಿ ಮುನಿಸಿಕೊಂಡಾಗ ಅವರನ್ನು ಶಾಂತಗೊಳಿಸಲು ಕೆಲವರು ಸೆಕ್ಸ್ ಸಹಾಯ ಪಡೆಯುತ್ತಾರೆ. ಇದು ಇಬ್ಬರ ಮಧ್ಯೆ ಬಿಸಿ ಹೆಚ್ಚಿಸುತ್ತೆ ಎನ್ನುವ ನಂಬಿಕೆ ಇದೆ. ಆದ್ರೆ ಇದ್ರಿಂದಾಗುವ ಲಾಭ ಎಷ್ಟು? ನಷ್ಟ ಎಷ್ಟು?


ಸಂಗಾತಿ ಮಧ್ಯೆ ಜೋರಾಗಿ ಗಲಾಟೆ ನಡೆಯುತ್ತಿರುತ್ತೆ. ಇನ್ನೇನು ಒಬ್ಬರು ಕೈ ಎತ್ತಿ ಹೊಡೆಯುತ್ತಾರೆ ಎನ್ನುವ ಹಂತದಲ್ಲಿ ಅಪ್ಪಿಕೊಂಡು ಆಳವಾದ ಕಿಸ್ ನೀಡೋದಲ್ಲದೆ ಇಬ್ಬರು ಬೆಡ್ ರೂಮ್ ಸೇರುತ್ತಾರೆ. ಇದು ಈಗಿನ ಸಿನಿಮಾ, ಸಿರಿಯಲ್ ನಲ್ಲಿ ಅನೇಕ ಬಾರಿ ಕಾಣ್ತಿರುತ್ತದೆ. ಇದು ಬರೀ ರೀಲ್ ಲೈಫ್ ಗೆ ಸೀಮಿತವಾಗಿಲ್ಲ. ಕೆಲ ಬಾರಿ ರಿಯಲ್ ಲೈಫ್ ನಲ್ಲೂ ನಡೆದಿರುತ್ತದೆ. ಜಗಳ ಮಾಡಿಕೊಂಡು ಮುಖ ಊದಿಸಿಕೊಂಡು ಒಬ್ಬೊಬ್ಬರು ಒಂದೊಂದು ಕಡೆ ಹೋಗುವ ದಂಪತಿ ಒಂದು ಗುಂಪಾದ್ರೆ, ಜಗಳವನ್ನು ಸೆಕ್ಸ್ ಮೂಲಕ ಬಗೆಹರಿಸಿಕೊಳ್ಳುವ ದಂಪತಿ ಗುಂಪು ಇನ್ನೊಂದು. ಗಲಾಟೆಯನ್ನು ಸೆಕ್ಸ್ ಮೂಲಕ ಬಗೆ ಹರಿಸಿಕೊಳ್ಳುವುದಕ್ಕೆ ಮೇಕಪ್ ಸೆಕ್ಸ್ ಎಂದು ಕರೆಯಲಾಗುತ್ತದೆ. ಇಲ್ಲಿ ಸಾಮಾನ್ಯ ದಿನಕ್ಕಿಂತ ತೀವ್ರತೆಯನ್ನು ನೀವು ಕಾಣಬಹುದು. ಪರಸ್ಪರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಜನರು ಇದ್ರಲ್ಲಿ ಸೇರಿದ್ದಾರೆ. ಜಗಳವಾದ್ಮೇಲೆ ನಡೆಯುವ ಈ ಮೇಕಪ್ ಸೆಕ್ಸ್ ಎಷ್ಟು ಒಳ್ಳೆಯದು, ಅದ್ರಿಂದಾಗುವ ನಷ್ಟವೇನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ಮೇಕಪ್ (Makeup) ಸೆಕ್ಸ್ ಎಂದರೇನು? :  ಲೈಂಗಿಕ (Sex) ಅನ್ಯೂನ್ಯತೆಗೆ ಬಳಸುವ ಪದವಾಗಿದೆ. ದಂಪತಿ (Couple) ಮಧ್ಯೆ ನಡೆಯುವ ವಾದ – ವಿವಾದಗಳು ಧೈಹಿಕ ಅನ್ಯೂನ್ಯತೆಗೆ ಕಾರಣವಾದ್ರೆ ಅದನ್ನು ಮೇಕಪ್ ಸೆಕ್ಸ್ ಎಂದು ಕರೆಯಲಾಗುತ್ತದೆ. ಕಹಿ ಜಗಳದ ನಂತ್ರ ಪಡೆಯುವ ವಿಶ್ರಾಂತಿಯಾಗಿದೆ.

Tap to resize

Latest Videos

ಶಿಶ್ನ ನಿಮಿರದೇ ಇರೋದಕ್ಕೆ ನಿಮ್ಮ ಹಲ್ಲೂ ಕಾರಣವಾಗಿರಬಹುದು!

ಇದು ಬ್ರೇಕ್ ಅಪ್ ಸೆಕ್ಸ್ ಗೆ ಸಮವಾಗಿದೆಯೆ? : ಬ್ರೇಕ್ ಅಪ್ ಸೆಕ್ಸ್ ಹಾಗೂ ಮೇಕಪ್ ಸೆಕ್ಸ್ ಮಧ್ಯೆ ವ್ಯತ್ಯಾಸವಿದೆ. ಬ್ರೇಕ್ ಅಪ್ ಸೆಕ್ಸ್ ನಲ್ಲಿ ದಂಪತಿ ಬ್ರೇಕ್ ಅಪ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ ಮೇಲೆ ಅಂತಿಮವಾಗಿ ಒಂದಾಗುತ್ತಾರೆ. 

ಎಂಥಾ.. ಮಕ್ಕಳನ್ನ ಹೆತ್ತುಬಿಟ್ಟೆ ಪಂಕಜಾಕ್ಷೀ; ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಕ್ಕಳು

ಮೇಕಪ್ ಸೆಕ್ಸ್ ನಿಂದಾಗುವ ಲಾಭಗಳು : 

ಭರವಸೆ : ಮೇಕಪ್ ಸೆಕ್ಸ್ ದಂಪತಿ ಮಧ್ಯೆ ಭರವಸೆ, ನಂಬಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಸಂತೋಷದ ಭವಿಷ್ಯದ ಬಗ್ಗೆ ಭರವಸೆ ನೀಡುವ ಕೆಲಸವನ್ನು ಇದು ಮಾಡುತ್ತದೆ. ಸೆಕ್ಸ್ ಒಂದು ಬಂಧವಾಗಿದ್ದು, ಇದು ನಂಬಿಕೆ ಪುನರ್ನಿರ್ಮಿಸಲು ನೆರವಾಗುತ್ತದೆ. 

ಸಂತೋಷ : ಕೋಪದಲ್ಲಿರುವ ಇಬ್ಬರು ಸಂಭೋಗ ಬೆಳೆಸಿದಾಗ ಮನಸ್ಸು ಹಾಗೂ ದೇಹ ಎರಡೂ ಸಂತೋಷ ಪಡೆಯುತ್ತದೆ. ಲೈಂಗಿಕ ಸಮಯದಲ್ಲಿ ಮೆದುಳು ಆಕ್ಸಿಟೋಸಿನ್ ಮತ್ತು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಇವೆರಡೂ ಮನಸ್ಸಿನಲ್ಲಿ ಸಂತೋಷವನ್ನು ಹೆಚ್ಚಿಸುತ್ತವೆ. ಮೇಕಪ್ ಸೆಕ್ಸ್ ಸಂತೋಷದ ಹಾರ್ಮೋನುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಕಡಿಮೆ ಆಗುವ ಒತ್ತಡ : ಸೆಕ್ಸ್ ಒತ್ತಡವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಸಂಗಾತಿಗಳು ಒಂದಾದಾಗ ಇಬ್ಬರಲ್ಲಿದ್ದ ಒತ್ತಡ ಕಡಿಮೆ ಆಗುವುದಲ್ಲದೆ ಇಬ್ಬರೂ ರಿಲ್ಯಾಕ್ಸ್ ಆಗ್ತಾರೆ. ಸೆಕ್ಸ್ ಇಬ್ಬರ ಮನಸ್ಸಿನಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ. ಮಹಿಳೆಯರ ಆತಂಕ, ಖಿನ್ನತೆ ಇದ್ರಿಂದ ಕಡಿಮೆ ಆಗುತ್ತದೆ. 

ಮೇಕಪ್ ಸೆಕ್ಸ್ ನಿಂದಾಗುವ ನಷ್ಟ : ಮೇಕಪ್ ಸೆಕ್ಸ್ ದಂಪತಿಯನ್ನು ಅಲ್ಪಾವಧಿಯಲ್ಲಿ ಶಾಂತಗೊಳಿಸುತ್ತದೆ. ದೀರ್ಘಾವಧಿಯಲ್ಲಿ ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಆರೋಗ್ಯಕರ ಸಂಬಂಧಕ್ಕಾಗಿ, ಸಂಭಾಷಣೆ ಮತ್ತು ದೈಹಿಕ ಅನ್ಯೋನ್ಯತೆಯನ್ನು ಸಮತೋಲನಗೊಳಿಸುವುದು ಮುಖ್ಯ. ಒಬ್ಬರಿಗೆ ಇಷ್ಟವಿದ್ದು, ಇನ್ನೊಬ್ಬರಿಗೆ ಇಷ್ಟವಿಲ್ಲದೆ ಸಂಬಂಧ ಬೆಳೆಸಿದ್ರೆ ಇದ್ರಿಂದಾಗುವ ಪರಿಣಾಮ ನಕಾರಾತ್ಮಕವಾಗಿರುತ್ತದೆ.

ಮೇಕಪ್ ಸೆಕ್ಸ್ ನಿಮ್ಮ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುವುದಿಲ್ಲ. ಸಂಗಾತಿ ಮಧ್ಯೆ ನಡೆಯುವ ಜಗಳವನ್ನು ಶಾಂತವಾಗಿ ಕೇಳಿಸಿಕೊಂಡು ಪರಿಹರಿಸಿಕೊಳ್ಳಬೇಕು. ತಾತ್ಕಾಲಿಕ ಪರಿಹಾರದ ಮೂಲಕ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳಬಾರದು. ಮೇಕಪ್ ಸೆಕ್ಸ್ ಕೆಟ್ಟದ್ದಲ್ಲ, ಆದ್ರೆ ಸೆಕ್ಸ್ ಮೂಲಕವೇ ಎಲ್ಲಕ್ಕೂ ಪರಿಹಾರ ಸಾಧ್ಯವಿಲ್ಲ ಎಂಬುದನ್ನು ತಿಳಿದಿರಿ. 

click me!