ಕಾಲ್‌-ಮೆಸೇಜ್‌ನಲ್ಲಿ ಹೇಳ್ತೀರಾ, ಹಗ್‌-ಕಿಸ್ ಮಾಡ್ತೀರಾ; ನಿಮ್ಮ ಲವ್ ಲಾಂಗ್ವೇಜ್‌ ಹೇಗಿರುತ್ತೆ ತಿಳ್ಳೊಳ್ಳಿ

Published : Feb 17, 2024, 01:02 PM ISTUpdated : Feb 17, 2024, 01:10 PM IST
ಕಾಲ್‌-ಮೆಸೇಜ್‌ನಲ್ಲಿ ಹೇಳ್ತೀರಾ, ಹಗ್‌-ಕಿಸ್ ಮಾಡ್ತೀರಾ; ನಿಮ್ಮ ಲವ್ ಲಾಂಗ್ವೇಜ್‌ ಹೇಗಿರುತ್ತೆ ತಿಳ್ಳೊಳ್ಳಿ

ಸಾರಾಂಶ

ಲವ್‌ ಅನ್ನೋದು ತುಂಬಾ ಬ್ಯೂಟಿಫುಲ್ ಫೀಲಿಂಗ್. ಆದ್ರೆ ಅದನ್ನು ತೋರ್ಪಡಿಸೋ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾ ಚೇಂಜ್ ಇರುತ್ತೆ. ಕೆಲವೊಬ್ಬರು ಮಾತಿನಲ್ಲಿ, ಇನ್ನು ಕೆಲವರು ಗಿಫ್ಟ್ ಮೂಲಕ, ಇನ್ನು ಕೆಲವರು ಟೆಕ್ಸ್ಟ್ ಮೂಲಕ ಪ್ರೀತಿ ವ್ಯಕ್ತಪಡಿಸ್ತಾರೆ. ಇದರಲ್ಲಿ ನೀವು ಎಂಥವರು ಅಂಥ ತಿಳ್ಕೊಳ್ಳೋಕೆ ಈ ಫೋಟೋ ನೋಡಿ.

ಪ್ರೀತಿ ಅನ್ನೋ ಭಾವನೆಯೇ ಸುಂದರ. ಆದರೆ ಈ ಬ್ಯೂಟಿಫುಲ್ ಫೀಲಿಂಗ್‌ನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಹೀಗಾಗಿಯೇ ಹಲವರು ಪ್ರೀತಿಯನ್ನು ವ್ಯಕ್ತಪಡಿಸೋಕೆ ಒದ್ದಾಡುತ್ತಾರೆ. ಲವ್ ತೋರ್ಪಡಿಸೋ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾ ಚೇಂಜ್ ಇರುತ್ತೆ. ಕೆಲವೊಬ್ಬರು ಮಾತಿನಲ್ಲಿ, ಇನ್ನು ಕೆಲವರು ಗಿಫ್ಟ್ ನೀಡುವ ಮೂಲಕ, ಇನ್ನು ಕೆಲವರು ಟೆಕ್ಸ್ಟ್ ಮೂಲಕ ಪ್ರೀತಿ ವ್ಯಕ್ತಪಡಿಸ್ತಾರೆ. ಮತ್ತೆ ಕೆಲವರು ಲವ್‌, ಕಿಸ್‌ ಮೂಲಕವೂ ತಾವು ಪ್ರೀತಿ ಮಾಡುವ ರೀತಿಯನ್ನೂ ತಿಳಿಸುತ್ತಾರೆ ಇದರಲ್ಲಿ ನೀವು ಎಂಥವರು ಅಂಥ ತಿಳ್ಕೊಳ್ಳೋಕೆ ಈ ಫೋಟೋ ನೋಡಿ. 

ಆಪ್ಟಿಕಲ್ ಭ್ರಮೆಯ ಚಿತ್ರದಿಂದ ನೀವು ಪ್ರೀತಿ ಮಾಡೋ ರೀತಿಯನ್ನು ಕಂಡುಕೊಳ್ಳೋಕೆ ಮೊದಲ ಬಾರಿಗೆ ಪೋಟೋ ನೋಡಿದ ತಕ್ಷಣ ನಿಮಗೇನು ಕಾಣುತ್ತೆ ನೋಡಿ. ಫೋಟೋದಲ್ಲಿ ತಕ್ಷಣಕ್ಕೆ ನಿಮಗೇನು ಕಂಡಿತು ಅನ್ನೋದು ನೀವು ಮಾಡು ರೀತಿಯ ಬಗ್ಗೆ ವಿಶ್ಲೇಷಿಸುತ್ತದೆ. ಆಪ್ಟಿಕಲ್ ಇಲ್ಯೂಶ್‌ನನ ಈ ಫೋಟೋದಲ್ಲಿ ನಕ್ಷತ್ರದಿಂದ ತುಂಬಿದ ಆಕಾಶದ ಕೆಳಗೆ ಮರವನ್ನು ನೋಡಿದ್ದೀರಾ ಅಥವಾ ಕೂದಲು ಇಳಿಬಿಟ್ಟ ಮಹಿಳೆಯ ಪೋಟೋ ನೋಡಿದ್ದೀರಾ ಗಮನಿಸಿ. ನೀವು ಮೊದಲು ಏನನ್ನು ಗುರುತಿಸುತ್ತೀರಿ ಎಂಬುದರ ಆಧಾರದ ಮೇಲೆ, ಈ ಆಪ್ಟಿಕಲ್ ಭ್ರಮೆಯು ನೀವು ಬಹಿರ್ಮುಖತೆ ಅಥವಾ ಅಂತರ್ಮುಖತೆಯ ಕಡೆಗೆ ಒಲವು ತೋರುತ್ತಿದೆಯೇ ಎಂದು ಸೂಚಿಸುತ್ತದೆ.

Optical Illusion: ನೀವ್‌ ತುಂಬಾ ಸೆನ್ಸಿಟೀವಾ ಅಥವಾ ಸ್ಟ್ರಾಂಗ್ ವ್ಯಕ್ತೀನಾ? ಫೋಟೋ ನೋಡಿ ತಿಳ್ಕೊಳ್ಳಿ

ಮರ
ಫೋಟೋವನ್ನು ನೋಡಿದ ತಕ್ಷಣ ನೀವು ಮರವನ್ನು ನೋಡಿದರೆ, ನೀವು ವಿನಮ್ರ ವ್ಯಕ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಮಾತ್ರವಲ್ಲ ನೀವು ಮಾತಿನ ಮೂಲಕ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಎಕ್ಸ್‌ಪರ್ಟ್ ಆಗಿರುತ್ತೀರಿ. ಹೆಚ್ಚು ಅಂತರ್ಮುಖಿಯಾಗಿರುವುದರಿಂದ, ಉಡುಗೊರೆಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಒಲವು ತೋರುತ್ತೀರಿ. ನೀವು ಇದಲ್ಲದೆ, ಪ್ರತಿಯೊಬ್ಬರನ್ನುನ್ನೂ ಗೌರವದಿಂದ ನಡೆಸಿಕೊಳ್ಳುತ್ತೀರಿ

ಮಹಿಳೆಯ ಮುಖ
ಫೋಟೋದಲ್ಲಿ ಮಹಿಳೆಯ ಮುಖ ನಿಮಗೆ ಮೊದಲ ನೋಟದಲ್ಲೇ ಕಂಡರೆ ನೀವು ಇತರರೊಂದಿಗೆ ಸಲೀಸಾಗಿ ಸಂಬಂಧ ಬೆಳೆಸಿಕೊಳ್ಳುತ್ತೀರಿ. ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತೀರಿ ಎಂಬುದನ್ನು ಗಮನಿಸಬೇಕು. ಹಗ್‌, ಕಿಸ್‌ ಮೊದಲಾದ ದೇಹ ಭಾಷೆಯ ಮೂಲಕ ಲವ್‌ನ್ನು ವ್ಯಕ್ತಪಡಿಸುತ್ತೀರಿ. ಓಪನ್ ಆಗಿ ಭಾವನೆಗಳನ್ನು ವ್ಯಕ್ತಪಡಿಸೋಕೆ ನೀವು ಹಿಂಜರಿಯೋದಿಲ್ಲ ಎಂದು ಅರ್ಥವಾಗುತ್ತದೆ.

Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

ಆಪ್ಟಿಕಲ್ ಇಲ್ಯೂಷನ್ ತಜ್ಞ ಮಿಯಾ ಯಿಲಿನ್, ವೈರಲ್ ವೀಡಿಯೊದಲ್ಲಿ ಈ ಆಪ್ಟಿಕಲ್ ಇಲ್ಯೂಶನ್ ಇಮೇಜ್‌ನ್ನು ಪರಿಚಯಿಸಿದರು, ಈ ಕುತೂಹಲಕಾರಿ ಒಗಟು ಹಲವಾರು ಆನ್‌ಲೈನ್ ವೀಕ್ಷಕರನ್ನು ಅವರ ವ್ಯಕ್ತಿತ್ವವನ್ನು, ಲವ್‌ಲೈಫ್‌ನ್ನು ಬಹಿರಂಗಪಡಿಸುವಲ್ಲಿ ನೆರವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!