ಎಂಥಾ.. ಮಕ್ಕಳನ್ನ ಹೆತ್ತುಬಿಟ್ಟೆ ಪಂಕಜಾಕ್ಷೀ; ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಕ್ಕಳು

By Sathish Kumar KHFirst Published Feb 17, 2024, 11:43 AM IST
Highlights

ಆಸ್ತಿಗಾಗಿ ಹೆತ್ತು, ಹೊತ್ತು, ಸಾಕಿ, ಸಲುಹಿದ ತಾಯಿಯನ್ನೇ 11 ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು ಕಿರುಕುಳ ನೀಡಿದ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ. 

ತುಮಕೂರು (ಫೆ.17): ಆಸ್ತಿಗಾಗಿ ಹೆತ್ತು, ಹೊತ್ತು, ಸಾಕಿ, ಸಲುಹಿದ ತಾಯಿಯನ್ನೇ 11 ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು ಕಿರುಕುಳ ನೀಡಿದ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ. 

ತುಮಕೂರಿನಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮಗ ಮತ್ತು ಸೊಸೆ ಸೇರಿ ಆಸ್ತಿಗಾಗಿ ಹೆತ್ತ ತಾಯಿಯನ್ನ ಗೃಹ ಬಂದನದಲ್ಲಿಟ್ಟು ಕಿರುಕುಳ ನೀಡಿದ್ದಾರೆ. ಬರೋಬ್ಬರಿ 11 ತಿಂಗಳ ಕಾಲ ಹೆತ್ತ ತಾಯಿಯನ್ನ ಮನೆಯಲ್ಲಿ ಕೂಡಿ ಹಾಕಿರುವ ಘಟನೆ ತುಮಕೂರಿನ ಶಿರಾ ಗೇಟ್ ಸಾಡೆಪುರದಲ್ಲಿ ನಡೆದಿದೆ. ಗೃಹ ಬಂಧನದಲ್ಲಿದ್ದ ಸಂತ್ರಸ್ತೆ ತಾಯಿಯನ್ನು ಪಂಕಜಾಕ್ಷಿ (80) ಎಂದು ಗುರುತಿಸಲಾಗಿದೆ. ಇನ್ನು ಪಂಕಜಾಕ್ಷೀ ಅವರು ಸಿಡಿಪಿಓ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. 

ತಮ್ಮ ಸೇವಾ ಅವಧಿಯಲ್ಲಿ ಬಂದ ಹಣವನ್ನೆಲ್ಲ ಒಡವೆಗಳು ಹಾಗೂ ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದಾರೆ. ಒಟ್ಟು 12 ಮನೆಗಳು ಸೇರಿದಂತೆ ಒಟ್ಟು ಆಸ್ತಿಗೆ ಪಂಕಜಾಕ್ಷೀ ಹಕ್ಕುದಾರಾಗಿದ್ದಾರೆ. ಈಗಾಗಲೇ ವೃದ್ದೆಯ ಬಳಿ ಇದ್ದ ಒಡವೆಗಳನ್ನು ಮಕ್ಕಳು ಪಡೆದುಕೊಂಡಿದ್ದಾರೆ. ಸದ್ಯ ಮನೆಗಳನ್ನ ಮಕ್ಕಳ ಹೆಸರಿಗೆ ಮಾಡಿಕೊಡುವಂಯೆ ಕಿರುಕುಳ ನೀಡಿದ್ದಾರೆ. ಆಗ ಮನೆಯನ್ನು ಮಗನ ಹೆಸರಿಗೆ ಮಾಡಿಕೊಡದ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಬೀಗ ಜಡಿದು ದಿಗ್ಬಂದನ ಮಾಡಿದ್ದಾರೆ.

ಹಾವೇರಿ: ಹೆಂಡ್ತಿ ಜತೆ ಅಕ್ರಮ ಸಂಬಂಧ, ತಮ್ಮನ ಎದೆಗೆ ಚೂರಿ ಹಾಕಿ ಕೊಲೆಗೈದ ಅಣ್ಣ..!

ತಾಯಿಯನ್ನು ಕೂಡಿಹಾಕಿದ ಮಗ ಜೇಮ್ ಸುರೇಶ್ ಹಾಗೂ ಸೊಸೆ ಆಶಾ ಆಗಿದ್ದಾರೆ. ಈ ಬಗ್ಗೆ ಸ್ಥಳಿಯರು ಪೊಲೀಸ್‌ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ನಂತರ ನಾಗರಿಕರ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತುಮಕೂರು ‌ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರ ಅಧಿಕಾರಿಗಳು ವೃದ್ಧೆಯನ್ನು ಕೂಡಿ ಹಾಕಿದ್ದ ಮನೆಗೆ ಭೇಟಿ ಮಾಡಿದ್ದಾರೆ. ನಂತರ ವೃದ್ದೆಯನ್ನ ರಕ್ಷಿಸಿ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ರಕ್ಷಣೆ ಮಾಡಿದ್ದಾರೆ. ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅಧಿಕಾರಿಗಳು ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. 

ಮಕ್ಕಳು ಬಾರದ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಲಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾರಿಗೆ ಅವರಿಗೆ ದೂರು ನೀಡಲಾಗುದೆ. ನಂತರ ಜಿಲ್ಲಾ ನ್ಯಾಯಾಧೀಶರು ಹಾಗೂ ಸಾಂತ್ವಾನ ಕೇಂದ್ರದ ಸಿಬ್ಬಂದಿ ನೆರವಿನೊಂದಿಗೆ ವೃದ್ಧೆಯನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿ ವಾಪಸ್ ಬಿಟ್ಟು ಬಂದಿದ್ದಾರೆ. ನಂತರ ಮಕ್ಕಳನ್ನು ಸ್ಥಳಕ್ಕೆ ಕರೆಸಿದ ನ್ಯಾಯಾಧೀಶರು ತಾಯಿಯನ್ನ ಸರಿಯಾಗಿ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ನ್ಯಾಯಾಧೀಶರ ಮುಂದೆ ಸರಿಯಾಗಿ ನೋಡಿಕೊಳ್ತಿವಿ ಎಂದು ಮಗ ಮತ್ತು ಸೊಸೆ ಒಪ್ಪಿಕೊಂಡಿದ್ದಾರೆ.

ಬೆಂಗಳೂರು: ಭಿಕ್ಷೆ ಬೇಡೋ ನೆಪದಲ್ಲಿ ದುಬಾರಿ ಫೋನ್‌ಗಳನ್ನು ಎಗರಿಸುತ್ತಿದ್ದ ಖತರ್ನಾಕ್ 'ಲೇಡಿ ಗ್ಯಾಂಗ್ ಅರೆಸ್ಟ್ !

ಇನ್ನು ವೃದ್ಧೆ ಪಂಕಜಾಕ್ಷಿಗೆ ಒಟ್ಟು ನಾಲ್ವರು ಮಕ್ಕಳು. ಈ ವೃದ್ಧೆಗೆ ಮಾಸಿಕ 50,000 ರೂ. ಪೇನ್ಸನ್ ಕೂಡ ಬರುತ್ತಿದೆ. ಈ ಹಣವನ್ನೂ ಕೂಡ ಅವರಿಗೆ ಕೊಡದೇ ಮಕ್ಕಳು ಬಳಸುತ್ತಿದ್ದಾರೆ. ಇಷ್ಟಾದರೂ  ಮಕ್ಕಳು ತಾತಿಯನ್ನು ನೋಡಿಕೊಳ್ಳದೇ ಆಸ್ತಿಗಾಗಿ ಗೃಹಬಂಧನದಲ್ಲಿಟ್ಟು ಕಿರುಕುಳ ನೀಡಿದ್ದಾರೆ. ಜಿಲ್ಲಾ ನ್ಯಾಯಾಧೀಶರ ಮಧ್ಯಪ್ರವೇಶದಿಂದ ಪ್ರಕರಣ ಇತ್ಯರ್ಥವಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!