62ರ ಪ್ರಾಯದಲ್ಲಿ ತ್ರಿಬಲ್ ಧಮಾಕ: ತ್ರಿವಳಿಗೆ ಜನ್ಮ ನೀಡಿದ 2ನೇ ಪತ್ನಿ!

Published : Jun 14, 2023, 03:30 PM ISTUpdated : Jun 14, 2023, 03:39 PM IST
 62ರ ಪ್ರಾಯದಲ್ಲಿ ತ್ರಿಬಲ್ ಧಮಾಕ: ತ್ರಿವಳಿಗೆ ಜನ್ಮ ನೀಡಿದ 2ನೇ ಪತ್ನಿ!

ಸಾರಾಂಶ

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ತಮ್ಮ ಇಳಿವಯಸ್ಸಿನಲ್ಲಿ ತ್ರಿವಳಿ ಮಕ್ಕಳಿಗೆ ಅಪ್ಪನಾಗಿದ್ದು, ಆ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ಸತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ತಮ್ಮ ಇಳಿವಯಸ್ಸಿನಲ್ಲಿ ತ್ರಿವಳಿ ಮಕ್ಕಳಿಗೆ ಅಪ್ಪನಾಗಿದ್ದು, ಆ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ.  ಸತ್ನಾ ಜಿಲ್ಲೆಯ ಉಚೆಹ್ರಾ ಬ್ಲಾಕ್‌ನಲ್ಲಿ ಬರುವ  ಅತರ್ವೇದಿಯಾ ಖುರ್ದ್ ಗ್ರಾಮದ ನಿವಾಸಿ ಗೋವಿಂದ ಕುಶ್ವಾಹ್ ಅವರೇ  62ನೇ ವರ್ಷದಲ್ಲಿ ಮೂವರು ಮಕ್ಕಳಿಗೆ ತಂದೆಯಾದವರು. ಇವರ 2ನೇ ಪತ್ನಿ 30 ವರ್ಷದ ಹೀರಾಬಾಯ್ ಕುಶ್ವಾಹ್ ಅವರು ಜೂನ್ 13 ರಂದು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 

ಗೋವಿಂದ್ ಕುಶ್ವಾಹ್ (Govind Kushwah) ಅವರಿಗೆ ತಮ್ಮ ಮೊದಲ ಪತ್ನಿ ಕಸ್ತೂರಿಬಾಯಿ ಅವರಿಂದ ಓರ್ವ ಗಂಡು ಮಗನಿದ್ದ ಆತ 18 ವರ್ಷದವನಿದ್ದಾಗ ಅಪಘಾಥದಲ್ಲಿ ತೀರಿಕೊಂಡಿದ್ದ,  ಇದರಿಂದ ಕುಲೋದ್ಧಾರಕನಿಲ್ಲದ ಗೋವಿಂದ್ ಕುಶ್ವಾಹ್ ಬಹಳ ನೊಂದಿದ್ದರು, ಮಗನ ಸಾವಿನಿಂದ ಅವರು  ನಿರಂತರ ಕೊರಗುತ್ತಿದ್ದಿದ್ದನ್ನು ನೋಡಿದ ಮೊದಲ ಪತ್ನಿ 60 ವರ್ಷದ ಕಸ್ತೂರಿಬಾಯಿ (KasturiBai) ಅವರು, ಆರು ವರ್ಷಗಳ ಹಿಂದೆ ಹೀರಾಬಾಯಿ ಎಂಬಾಕೆಯ ಜೊತೆ ಗಂಡನಿಗೆ ಮದುವೆ ಮಾಡಲು ನಿರ್ಧರಿಸಿದ್ದರು, ಇದಕ್ಕಾಗಿ ಪತ್ನಿಯೇ ಮನೆಯವರನ್ನೆಲ್ಲಾ ಒಪ್ಪಿಸಿದ್ದರು. ಅದರಂತೆ ಗೋವಿಂದ್ ಮದುವೆ ಹೀರಾಬಾಯಿ ಜೊತೆ ನಡೆದಿತ್ತು. ಇದಾಗಿ ಆರು ವರ್ಷ ಕಳೆದರು ಮಕ್ಕಳಾಗುವ ಲಕ್ಷಣವಿಲ್ಲದೇ ಕುಟುಂಬದವರು ಸಂತಾನಕ್ಕಾಗಿ ಸಂಕಟ ಪಡುತ್ತಿದ್ದರು. ಅದೇನು ದೇವರು ಕಣ್ ಬಿಟ್ಟ ಎಂಬಂತೆ ಈಗ ಗೋವಿಂದ ಪತ್ನಿ ಹೀರಾಬಾಯಿ (Hirabai)ಒಟ್ಟೊಟ್ಟಿಗೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದು, ಗೋವಿಂದ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. 

200 ಮಿಲಿಯನ್‌ಗಳಲ್ಲಿ ಒಬ್ಬರಿಗಷ್ಟೇ ಜನಿಸುವ ವಿಶೇಷ ತ್ರಿವಳಿಗಳ ಜನನ..

ಸೋಮವಾರ ರಾತ್ರಿ ಹೀರಾಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಮನೆಯವರು ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸಿಸೇರಿಯನ್ ಮೂಲಕ ಹೀರಾಬಾಯಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.  ಆದರೆ ಮಕ್ಕಳ ಆರೋಗ್ಯ ಸ್ಥಿರವಿಲ್ಲ ಎಂಬುದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಅಮರ್ ಸಿಂಗ್ (Amar singh)ಮಾತನಾಡಿ, ಅತರ್ವೇದಿಯಾ ಖುರ್ದ್ ಗ್ರಾಮದ  ಹೀರಾಬಾಯಿ ಕುಶ್ವಾಹ್ ಅವರನ್ನು ಹೆರಿಗೆ ನೋವಿನ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ಮೂವರು ಮಕ್ಕಳನ್ನು ಹೊರತೆಗೆಯಲಾಗಿದೆ. ಆದರೆ 34 ವಾರಗಳಲ್ಲೇ ಅವರು ಮಕ್ಕಳಿಗೆ ಜನ್ಮ ನೀಡಿರುವುದರಿಂದ ಶಿಶುಗಳು ದುರ್ಬಲವಾಗಿದೆ. ಹೀಗಾಗಿ ಮಕ್ಕಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯವಾಗಿ ಗರ್ಭಾವಸ್ಥೆ ಅವಧಿ 35 ವಾರಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. 

ನಾನು ಎರಡು ಮದ್ವೆಯಾಗಿದ್ದೇನೆ, ಮೊದಲ ಪತ್ನಿ 60 ವರ್ಷದ ಕಸ್ತೂರಿ ಬಾಯಿ, ನನಗೆ ಮೊದಲ ಹೆಂಡತಿಯಿಂದ ಮಗ ಹುಟ್ಟಿದ್ದ, ಆದರೆ ಪ್ರಾಯ 18ರವೇಳೆಗೆ ಆತ ಅಪಘಾತದಲ್ಲಿ ಸಾವನ್ನಪ್ಪಿದ, ಇದಾದ ಬಳಿಕ ತನ್ನ ಪತ್ನಿ ತನಗೆ ಹೀರಾಬಾಯಿ ಜೊತೆ 2ನೇ ಮದುವೆ ಮಾಡಿದ್ದಳು. ಈಗ ಮಕ್ಕಳು ಜನಿಸಿರುವುದು ಖುಷಿಯಾಗಿದ್ದು, ಮಕ್ಕಳು ಬೇಗ ಆರೋಗ್ಯಪೂರ್ಣರಾಗಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ವೃದ್ಧ ಗೋವಿಂದ್ ಕುಶ್ವಾಹ್ ಹೇಳಿದ್ದಾರೆ.

34 ವರ್ಷದ ಹೋರಾಟ..ಕೇರಳದ 59ರ ಪತಿ 55ರ ಪತ್ನಿಗೆ ತ್ರಿವಳಿ ಮಕ್ಕಳು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!