
ಇವಳ ಹೆಸರು ಲೂಸಿಯಾನ. ಇನ್ನೂ ಹತ್ತೊಂಭತ್ತರ ಹರೆಯ. ಈಕೆಗೆ ಎರಡು ವರ್ಷದ ಕೆಳಗೆ ಅವಳಿ ಮಕ್ಕಳು ಹುಟ್ಟಿದ್ದಾರೆ. ಹೀಗೆ ನೋಡಿದರೆ ಎಲ್ಲೋ ಈಕೆಯ ತಮ್ಮಂದಿರಿರಬೇಕು ಅನಿಸುತ್ತೆ. ಆದರೆ ಅವು ಈ ಹುಡುಗಿಯ ಹೊಟ್ಟೆಯಲ್ಲೇ ಹುಟ್ಟಿದ ಮಕ್ಕಳು. ವೈದ್ಯಲೋಕವನ್ನೇ ಅಚ್ಚರಿಗೆಡವಿದ ವಿಚಿತ್ರ ಕಥೆ ಈ ಲೂಸಿಯಾನಳದ್ದು. ವಿದೇಶದಲ್ಲಿ ಲೈಂಗಿಕತೆ ಮುಕ್ತ ಅವಕಾಶ ಇದೆ. ಟೀನ್‌ಗೆ ಬರ್ತಿದ್ದ ಹಾಗೆ ಬಾಯ್‌ಫ್ರೆಂಡ್, ಗರ್ಲ್ ಫ್ರೆಂಡ್ ಜೊತೆ ಓಡಾಡೋದು, ಡೇಟಿಂಗ್ ಮಾಡೋದು, ರಿಲೇಶನ್‌ಶಿಪ್‌ನಲ್ಲಿರೋದು.. ಇವೆಲ್ಲ ಕಾಮನ್. ಟೀನ್ ಏಜ್‌ನಲ್ಲಿ ಸೆಕ್ಸ್ ಮಾಡೋದು ಇಲ್ಲೆಲ್ಲ ಅಂಥ ದೊಡ್ಡ ವಿಷಯ ಅಲ್ಲ. ತೀರ ಕಾಮನ್ ಅನಿಸೋ ವಿಚಾರ. ಲೂಸಿಯಾನ ವಿಷಯದಲ್ಲೂ ಆಗಿದ್ದು ಹೀಗೆ. ಆದರೆ ನಂತರ ನಡೆದ ಸಂಗತಿ ಬಗ್ಗೆ ಈಗಲೂ ವೈದ್ಯಕೀಯ ರಂಗದ ಸಂಶೋಧಕರು ಸಂಶೋಧನೆಯಲ್ಲಿ ತೊಡಗಿದ್ದಾರೆ. ಅಪರೂಪದಲ್ಲಿ ಅಪರೂಪದ ಸಂಗತಿಗೆ ಈ ಹುಡುಗಿ ಸಾಕ್ಷಿಯಾಗಿದ್ದಾಳೆ. ಅಷ್ಟಕ್ಕೂ ಈ ಎಳೆಯ ತಾಯಿಯ ಕಥೆ ಏನು..
ಈ ಬಗ್ಗೆ ಲೂಸಿಯಾನ ವೀಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾಳೆ. ಬ್ರೆಸಿಲಿನ ಈ ಹುಡುಗಿಗೆ ಆಗಲೇ ಹೇಳಿದಂತೆ ಇಬ್ಬರು ಬಾಯ್‌ಫ್ರೆಂಡ್‌ಗಳು. 2021ರಲ್ಲಿ ಈಕೆ ಅವಳಿಗಳಿಗೆ ಜನ್ಮ ನೀಡ್ತಾಳೆ. ಈ ಮಕ್ಕಳ ಜನ್ಮದ ಹಿಂದಿನ ರಹಸ್ಯವನ್ನೂ ಈ ಹುಡುಗಿ ಹೇಳಿದ್ದಾಳೆ. ಅದು ಮತ್ತೇನಲ್ಲ ಈ ಇಬ್ಬರು ಮಕ್ಕಳ ತಂದೆ ಬೇರೆ ಬೇರೆ. ಲೂಸಿಯಾನ ಒಂದೇ ದಿನ ಇಬ್ಬರು ಹುಡುಗರ ಜೊತೆಗೆ ಸೆಕ್ಸ್ ಮಾಡಿದ್ದಾಳೆ. ಅವರಿಬ್ಬರಿಂದಲೂ ಈಕೆ ಗರ್ಭವತಿಯಾಗಿದ್ದಾಳೆ. ಅವಳಿ ಮಕ್ಕಳನ್ನೂ ಹಡೆದಿದ್ದಾಳೆ. ಈ ಮಕ್ಕಳಿಗೆ ಎಂಟು ತಿಂಗಳಾಗುತ್ತಿದ್ದ ಹಾಗೆ ಲೂಸಿಯಾನಗೆ ಯಾಕೋ ಡೌಟ್ ಬಂದಿದೆ. ಈ ಮಕ್ಕಳ ತಂದೆ ಯಾರು ಅಂತ.
ಲಿವ್ ಇನ್ ರಿಲೇಷನ್‌ಷಿಪ್ ಅನ್ನೋದು ಮದುವೆಯಲ್ಲ: ಕೇರಳ ಹೈಕೋರ್ಟ್!
ಏಕೆಂದರೆ ಇಬ್ಬರ ನಡುವೆ ದೈಹಿಕ ಭಿನ್ನತೆಗಳಿದ್ದವು. ಹೀಗಾಗಿ ಈ ಮಕ್ಕಳ ತಂದೆ ಅಂತ ಅವಳ ಭಾವಿಸಿದ ವ್ಯಕ್ತಿಯ ಡಿಎನ್‌ಎ ಟೆಸ್ಟ್ ಮಾಡಿಸಿದಳು. ಆಗ ಬಂದ ರಿಸಲ್ಟ್ ನೋಡಿ ಅವಳು ಮಾತ್ರ ಅಲ್ಲ ವೈದ್ಯಕೀಯ ಲೋಕವೇ ಅಚ್ಚರಿ ಪಟ್ಟಿತು. ಏಕೆಂದರೆ ಅವಳು ತನ್ನ ಮಗುವಿನ ತಂದೆ ಅಂದುಕೊಂಡಿದ್ದ ವ್ಯಕ್ತಿ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಮಾತ್ರ ತಂದೆಯಾಗಿದ್ದ.
ಕೂಡಲೇ ಈ ಹುಡುಗಿ ತಾನು ಸಂಬಂಧದಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿ ಆತನ ಡಿಎನ್ಎ ಟೆಸ್ಟ್ ಮಾಡಿಸಿದಳು. ರಿಸಲ್ಟ್ ಬಂದಾಗ ಆತ ಈಕೆಯ ಅವಳಿಗಳಲ್ಲಿ ಮತ್ತೊಂದು ಮಗುವಿಗೆ ತಂದೆಯಾಗಿದ್ದ. ಈಗ ಈ ಮಕ್ಕಳಿಗೆ ಹದಿನಾರು ತಿಂಗಳು ಕಳೆದಿದೆ. ಈಕೆಯ ಜೊತೆಗಿರುವ ಒಬ್ಬ ತಂದೆ ಕಾನೂನು ಪ್ರಕಾರ ಇಬ್ಬರ ತಂದೆಯೂ ಆಗಿದ್ದಾನೆ. ಈಕೆಯ ಬೆಂಬಲಕ್ಕೆ ನಿಂತು ಮಕ್ಕಳನ್ನು ಬೆಳೆಸಲು ಆತ ಸಹಾಯವನ್ನೂ ಮಾಡುತ್ತಿದ್ದಾನೆ. ಈ ವಿಚಿತ್ರ ಘಟನೆಗೆ ವೈದ್ಯಕೀಯ ಜಗತ್ತು ಹೇಟೆರೊಪೊಟೆರ್‌ನಲ್ ಸೂಪರ್‌ಫೆಕೆಂಡೇಶನ್ (Heteropoternal superfecondation) ಎಂದು ಕರೆಯುತ್ತದೆ. ಒಬ್ಬ ಹೆಣ್ಣಿನ ಅಂಡಾಣು ಇಬ್ಬರು ಗಂಡಸರ ವೀರ್ಯಾಣು ಜೊತೆ ಫಲಿತವಾದಾಗ ಇಂಥ ಅಚ್ಚರಿ ನಡೆಯುತ್ತದೆ. ಆದರೆ ಇಂಥ ಪ್ರಕರಣಗಳು ಅಪರೂಪದಲ್ಲಿ ಅಪರೂಪ. ಒಂದು ಮಿಲಿಯನ್ ಜನರಲ್ಲಿ ಒಬ್ಬ ತಾಯಿಗೆ ಹೀಗಾಗಬಹುದು. ಈಕೆಯ ಬಗ್ಗೆ ಈಕೆಯ ಡಾಕ್ಟರ್, ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ವಿಚಿತ್ರ ಕೇಸ್ ವೈದ್ಯಕೀಯ ಜಗತ್ತಿಗೂ ಕುತೂಹಲ ಹೆಚ್ಚಿಸಿದೆ.
Travel Guide : ಟ್ರಾನ್ಸ್ಜೆಂಡರ್ಸ್ ನಡೆಸೋ ಈ ರೆಸ್ಟೋರೆಂಟಿನಲ್ಲಿ ಸಿಗುತ್ತೆ ರುಚಿ ರುಚಿ ಆಹಾರ
ಇನ್ನುಳಿದ ಹಾಗೆ ಈಕೆಯ ಇಬ್ಬರು ಮಕ್ಕಳು ಅಂದರೆ ಅವಳಿಗಳು ಈಗ ಆರೋಗ್ಯಕರವಾಗಿದ್ದಾರೆ. ಲೂಸಿಯಾನ ಮತ್ತವಳ ಸಂಗಾತಿಯ ಜೊತೆಗೆ ಖುಷಿಯಿಂದ ಬದುಕುತ್ತಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.