ವಾರದ ಯಾವ ದಿನ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗ್ತೀರಿ? ಸಮೀಕ್ಷೆಯ ಪ್ರಶ್ನೆಗೆ ಟೈಮ್ ಸಹಿತ ಉತ್ತರ ಕೊಟ್ಟ ಜನರು

By Mahmad Rafik  |  First Published Sep 8, 2024, 5:41 PM IST

ಹೊಸ ಸಮೀಕ್ಷೆಯೊಂದು, ಬಹುತೇಕ ಜನರು ಯಾವ ದಿನದಂದು ದೈಹಿಕ ಸಂಪರ್ಕ ಹೊಂದಲು  ಬಯಸುತ್ತಾರೆ ಎಂಬ ಅಚ್ಚರಿಯ ಮಾಹಿತಿ ಬಂದಿದೆ. ಸಮೀಕ್ಷೆಯಲ್ಲಿ ಭಾಗಿಯಾದ ಜನರು ಸಮಯ ಯಾವುದು ಅನ್ನೋದನ್ನು ಸಹ ಹೇಳಿಕೊಂಡಿದ್ದಾರೆ.


ಲಂಡನ್: ಬಹುತೇಕ ಜನರು ವಾರದ ಯಾವ ದಿನದಂದು ತಮ್ಮ ಸಂಗಾತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಬಯಸುತ್ತಾರೆ ಎಂಬುದರ ಕುರಿತ ಅಚ್ಚರಿಯ ಮಾಹಿತಿಯೊಂದು ಹೊರ ಬಂದಿದೆ. ಇಂಗ್ಲೆಂಡ್‌ನ (UK) ಲಕ್ಷುರಿ ಲಾಂಜರಿ ರಿಟೇಲರ್ ಬ್ರಾಂಡ್ Pour Moi ಈ ಸಂಬಂಧ ಸಮೀಕ್ಷೆಯನ್ನು ನಡೆಸಿದೆ. ಮನುಷ್ಯನಲ್ಲಿನ ಲೈಂಗಿಕತೆ ಚಟುವಟಿಕೆಯನ್ನು ತಿಳಿದುಕೊಳ್ಳುವುದು ಈ ಸಮೀಕ್ಷೆಯ ಉದ್ದೇಶವಾಗಿತ್ತು. 

ಈ ಸಮೀಕ್ಷೆಯ ಪ್ರಕಾರ, ಬಹುತೇಕ ಜನರು ಶನಿವಾರವನ್ನು ಹಂಪ್ ಡೇ ಎಂದು ಪರಿಗಣಿಸುತ್ತಾರೆ. ಶನಿವಾರ ರಾತ್ರಿ ಸುಮಾರು 10 ಗಂಟೆಗೆ (10.09 PM) ರೊಮ್ಯಾನ್ಸ್ ಆರಂಭಿಸುತ್ತಾರೆ. ಈ ಸಮೀಕ್ಷೆಯಲ್ಲಿ 2,000 ಜನರು ಭಾಗಿಯಾಗಿದ್ದು, ತಮ್ಮ ರೊಮ್ಯಾನ್ಸ್ ಹಾಗೂ ಲೈಂಗಿಕ ಜೀವನದ ಕುರಿತಾದ ಖಾಸಗಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾದ ಬಹುತೇಕರು ನಿಯಮಿತವಾಗಿ ಲೈಂಗಿಕ ಸಂಪರ್ಕ ಹೊಂದುತ್ತೇವೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಶೇ.43ರಷ್ಟು ಜನರು ಶನಿವಾರವೇ  ಶಾರೀರಕ ಸಂಬಂಧ ಬೆಳೆಸಲು ಆಯ್ಕೆ ಮಾಡಿಕೊಳ್ಳುತ್ತೇವೆ. ಶನಿವಾರವೇ ನಾವು ರೊಮ್ಯಾನ್ಸ್ ಮಾಡಲು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಸಮೀಕ್ಷೆಯಲ್ಲಿ ಭಾಗಿಯಾದ ಶೇ.22ರಷ್ಟು ಜನರು ಹೇಳುವ ಪ್ರಕಾರ, ದೈಹಿಕ ಸಂಬಂಧ ಬೆಳೆಸಲು ಶುಕ್ರವಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಶೇ.10ರಷ್ಟು ಜನರು ಭಾನುವಾರ,  ಶೇ.6ರಷ್ಟು ಜನರು ಗುರುವಾರವನ್ನು ಸೆಕ್ಸ್‌ ಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ವಾರದ ಆರಂಭದ ದಿನಗಳಲ್ಲಿ ಜನರು ರೊಮ್ಯಾನ್ಸ್‌ಗಾಗಿ ಮನಸ್ಸು ಮಾಡಲ್ಲ. ಶೇ.2ರಷ್ಟು ಮಂದಿ ಮಾತ್ರ  ಸೋಮವಾರ ಎಂದು ಉತ್ತರ ನೀಡಿದ್ದಾರೆ. ಈ ಸಮೀಕ್ಷೆಯಲ್ಲಿ ತಿಳಿದು ಬಂದ ಅಂಶವಂದ್ರೆ ಭಾಗಶಃ ಎಲ್ಲರೂ ರಾತ್ರಿಯೇ ಸಂಬಂಧ ಬೆಳೆಸಲು ಉತ್ತಮ ಸಮಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಅಚ್ಚರಿಯ ವಿಷಯವೆಂದರೆ ಬಹುತೇಕರು ರೊಮ್ಯಾನ್ಸ್‌ಗೆ 10.09 ನಿಮಿಷದ ಸಮಯವನ್ನೇ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ರೊಮ್ಯಾನ್ಸ್‌ಗೆ ಮಧ್ಯಾಹ್ನ ಸಮಯ ಅಲ್ಲ ಅಂದಿದ್ದಾರೆ.

ವಯಸ್ಸಿನ ಪ್ರಕಾರ ತಿಂಗಳಿಗೆ ಎಷ್ಟು ಬಾರಿ ಲೈಂಗಿಕ ಸಂಪರ್ಕ ಹೊಂದಬೇಕು? ಸಮೀಕ್ಷೆಯಲ್ಲಿ ಶಾಕಿಂಗ್ ಮಾಹಿತಿ

ಕೆಲಸದ ದಿನಗಳಲ್ಲಿ ಜನರು ವರ್ತನೆಯೇ ತುಂಬಾ ವಿಭಿನ್ನವಾಗಿರುತ್ತದೆ. ಕೆಲವರು ಹೇಳುವ ಪ್ರಕಾರ ಸೋಮವಾರ ಮಧ್ಯಾಹ್ನ 1 ಗಂಟೆಗೆ ದೈಹಿಕ ಸಂಬಂಧ ಬೆಳೆಸುತ್ತೇವೆ ಎಂದಿದ್ದಾರೆ. ಇದೇ  ಸಮೀಕ್ಷೆಯಲ್ಲಿ ವಾರದಲ್ಲಿ ಎಷ್ಟು ಬಾರಿ ದೈಹಿಕ ಸಂಪರ್ಕ ಬೆಳೆಸುತ್ತೀರಿ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಶೇ.48ರಷ್ಟು ಜನರು ವಾರಕ್ಕೆ ಒಂದು ಬಾರಿ ಅಂತ ಉತ್ತರ ನೀಡಿದ್ದಾರೆ. ಶೇ.19ರಷ್ಟು ಜನರು ವಾರದಲ್ಲಿ ಎರಡು ಬಾರಿ, ಶೇ.13ರಷ್ಟು ಮಂದಿ ಮೂರು ಮತ್ತು ಶೇ.7ರಷ್ಟು ಜನರು ನಾಲ್ಕು ಬಾರಿ ರೊಮ್ಯಾನ್ಸ್ ಮಾಡೋದಾಗಿ ಹೇಳಿಕೊಂಡಿದ್ದಾರೆ. ಶೇ.1ರಷ್ಟು ಜನರು ಪ್ರತಿದಿನ ದೈಹಿಕ ಸಂಪರ್ಕ ಬಯಸುತ್ತೇವೆ ಎಂದು ಅಚ್ಚರಿಯ ಉತ್ತರ ನೀಡಿದ್ದಾರೆ.

ವಯಸ್ಕರು ಎಷ್ಟು ಬಾರಿ ರೊಮ್ಯಾನ್ಸ್‌ ಪ್ರಶ್ನೆಗೆ ಪುರುಷರು ಮತ್ತು ಮಹಿಳೆಯರು ಬೇರೆ ಬೇರೆ ಉತ್ತರಗಳನ್ನು ನೀಡಿದ್ದಾರೆ. 25 ರಿಂದ 45 ವರ್ಷದೊಳಗಿನ ಪುರುಷರು ವಾರಕ್ಕೆ ಎರಡು ಬಾರಿ, ಇದೇ ವಯಸ್ಸಿನ ಮಹಿಳೆಯರು ನಾಲ್ಕು ಎಂದು ಉತ್ತರಿಸಿದ್ದಾರೆ. ಪೋರ್ ಮೋಯಿ ಮಾರ್ಕೆಟಿಂಗ್ ಮ್ಯಾನೇಜರ್ ಮರೀನಾ ನಿಕೋಲಿ ಸಮೀಕ್ಷೆ ಬಗ್ಗೆ ಮಾತನಾಡಿದ್ದಾರೆ. ಜನರಿಗೆ ಅವರು ಧರಿಸುವ ಬಟ್ಟೆಯಲ್ಲಿ ಅತ್ಮವಿಶ್ವಾಸವನ್ನುಂಟು ಮಾಡೋದು ನಮ್ಮ ಬ್ರಾಂಡ್ ಉದ್ದೇಶವಾಗಿದೆ. ಅತ್ಯುತ್ತಮ ಸೇವೆಗಳನ್ನು ಒದಗಿಸಲು ಜನರ ವರ್ತನೆ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು ಎಂದು ವರದಿಯಾಗಿದೆ.

ಶೇಕಡಾ 80ರಷ್ಟು ಪುರುಷರು ಸೆಕ್ಸ್‌ಗಾಗಿ ರೆಡ್‌ಲೈಟ್ ಏರಿಯಾಗೆ ಬರಲ್ಲ; ಕತ್ತಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ಮಹಿಳೆ

click me!