* ಕೊರೊನಾ ನಂತರ ಹೆಚ್ಚಾಗ್ತಿವೆ ಲವ್ ಮ್ಯಾರೇಜ್ ಬ್ರೇಕಪ್ ಕೇಸ್‌ಗಳು
* ಲವ್ ಬ್ರೇಕಪ್ ಕೇಸ್‌ಗಳಿಂದ ತಲೆಕೆಡಿಸಿಕೊಂಡ ಮಹಿಳಾ ಆಯೋಗ
* ಮಾನಸಿಕವಾಗಿ ಕುಗ್ಗಿ ಡಿಪ್ರೆಶಸ್‌ಗೊಳಗಾಗಿದ ಕೆಲ ದಂಪತಿಗಳು
ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಜೂ.23): ಹೆಮ್ಮಾರಿ ಕೊರೋನಾ ಇಡೀ ವಿಶ್ವವನ್ನೇ ಅಲ್ಲಾಡಿಸಿ ಬಿಟ್ಟಿತ್ತು. ಇತ್ತಿಚೆಗೆ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೊಂಚ ಕಡಿಮೆಯಾದ್ರೂ ಜನರ ಮೇಲೆ ಆಗಿರುವ ಪರಿಣಾಮ ಕಡಿಮೆಯಾಗಿಲ್ಲ. ಕೋವಿಡ್ ಅಟ್ಟಹಾಸಕ್ಕೆ ಜನ ತಮ್ಮ ವೃತ್ತಿಯನ್ನೇ ಕಳೆದುಕೊಳ್ಳುವಂತಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಕೋವಿಡ್ ನಂತರ ಲವ್ ಮ್ಯಾರೇಜ್ ಬ್ರೇಕಪ್ ಪ್ರಕರಣಗಳು ಹೆಚ್ಚಾಗ್ತಿವೆ.
undefined
ಪ್ರತಿದಿನ ಮಹಿಳಾ ಆಯೋಗಕ್ಕೆ 15ಕ್ಕೂ ಹೆಚ್ಚು ದೂರುಗಳು ದಾಖಲಾಗ್ತಿದ್ದು ಮಹಿಳಾ ಆಯೋಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯೆಸ್ ಕೊರೋನಾ ಸಮಯದಲ್ಲಿ ಅದೆಷ್ಟೋ ಜನರು ಕೆಲಸ ಕಳೆದುಕೊಂಡ್ರು. ಇನ್ನೆಷ್ಟೋ ಜನರು ನಗರಗಳನ್ನು ತೊರೆದು, ಹಳ್ಳಿಗಳನ್ನ ಸೇರಿದ್ರು. ಜೊತೆಗೆ ಕೋವಿಡ್ ಸುಮಾರು ವರ್ಷಗಳಿಂದ ಲವ್ ಮಾಡಿ, ಕುಟುಂಬದವರನ್ನ ವಿರೋಧಿಸಿ ಮದುವೆ ಮಾಡಿಕೊಂಡ ಜೋಡಿಗಳನ್ನು ಬಿಟ್ಟಿಲ್ಲ. ಕೊರೋನಾ ನಂತರ ಲವ್ ಬ್ರೇಕಪ್ ಕೇಸ್‌ಗಳು ಸಹ ಹೆಚ್ಚಾಗ್ತಿವೆ. ಹೀಗಾಗಿಯೇ ನಿತ್ಯ ಮಹಿಳಾ ಆಯೋಗಕ್ಕೆ ದೂರು ಹೊತ್ತು ತರುವ ದಂಪತಿಗಳ ಸಂಖ್ಯೆ ಹೆಚ್ಚಾಗ್ತಿದೆ. ದಿನಕ್ಕೆ 15 ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗ್ತಿದ್ದು ದಂಪತಿಗಳಿಗೆ ತಿಳಿ ಹೇಳುವುದೇ ದೊಡ್ಡ ಸಾಹಸದ ಕೆಲಸವಾಗಿದೆ ಮಹಿಳಾ ಆಯೋಗಕ್ಕೆ.
breakup ಬೇಡ ಅಂದ್ರೆ ಅವ್ಳ ಜೊತೆ ಇಂಥದ್ದೆಲ್ಲ ಮಾತಾಡಬೇಡಿ!
ಮಹಾಮಾರಿ ಕೋವಿಡ್ ಹೊಡೆತಕ್ಕೆ ಸಿಲುಕಿ ಹಲವು ಉದ್ಯೋಗಗಳು ನೆಕಚ್ಚಿದ್ವು. ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡ್ವು. ರಿಯಲ್ ಎಸ್ಟೇಟ್ ನಂತ ದೊಡ್ಡ ಬ್ಯುಸಿನೆಸ್ಗಳು ಅರ್ಧಕ್ಕೆ ನಿಂತೋದ್ವು. ಕಚೇರಿ ಕೆಲಸಗಳು ವರ್ಕ್ ಫ್ರಂ ಹೋಂ ಅನ್ನೋ ಹಾಗಾಯ್ತು. ಇಲ್ಲಿಂದಲೇ ಶುರುವಾಯ್ತು ನೋಡಿ ಸಮಸ್ಯೆ. ಆರ್ಥಿಕ ಸಮಸ್ಯೆಯಿಂದ ಜನ ಮನೆಯಲ್ಲೇ ಕಾಲ ಕಳೆಯುವಂತಾಯ್ತು. ಹೀಗಾಗಿಯೇ ಲವ್ ಮ್ಯಾರೇಜ್ ಬ್ರೇಕಪ್‌ಗಳು ಹೆಚ್ಚಾದವು. ಗಂಡ ಹೆಂಡತಿ ಮನೆಯಿಂದಲೇ ಕೆಲಸ ಮಾಡೋದು ಆರಂಭವಾದಾಗಿಂದ ಕುಟುಂಬದವರಿಂದ ಕಿರುಕುಳ ಹೆಚ್ಚಾಯಿತು. ಅಲ್ಲದೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿ ಅದು ಬ್ರೇಕಪ್ ಹಂತಕ್ಕೆ ಬಂದು ನಿಂತಿದೆ. ಕೋವಿಡ್ ಬಳಿಕ ಕಳೆದೆರಡು ವರ್ಷದಲ್ಲಿ 1168 ಲವ್ ಮ್ಯರೆಜ್ ಬ್ರೇಕಪ್ ಕೇಸ್ ಗಳು ಮಹಿಳಾ ಆಯೋಗದಲ್ಲಿ ದಾಖಲಾಗಿವೆ.
ಕಳೆದ ಏಪ್ರಿಲ್ ತಿಂಗಳೊಂದರಲ್ಲೇ 96 ಕೇಸ್‌ಗಳು ದಾಖಲಾಗಿದ್ದು, ಅದ್ರಲ್ಲಿ 10 ದಂಪತಿಗಳು ಅನ್ಯೋನ್ಯವಾದ್ರೆ ಉಳಿದ 86 ಜೋಡಿಗಳು ಬೇರೆಯಾಗಿದ್ದಾರೆ. ಇದಕ್ಕೆಲ್ಲ ಕಾರಣ ವರ್ಕ್ ಫ್ರಂ ಹೋಮ್ ನಿಂದಾಗಿ ಹೆಚ್ಚಾದ ಕೌಟುಂಬಿಕ ಕಲಹ. ದಂಪತಿಗಳಿಗೆ ತಿಳಿ ಹೇಳಿ ಒಂದು ಮಾಡಲು ಆಯೋಗ ಮುಂದಾದ್ರೆ ದಂಪತಿಗಳು ಕೇಳುವ ಸ್ಥಿತಿಯಲ್ಲಿಲ್ಲ. ಪತಿ ಮಾತು ಪತ್ನುಗೆ ಇಷ್ಟವಾಗೋದಿಲ್ಲ, ಪತ್ನಿ ಮಾತು ಗಂಡ ಒಪ್ಪೋದಿಲ್ಲ ಅನ್ನುವಷ್ಟರ ಮಟ್ಟಿಗೆ ಬೇರಾಗಿದ್ದಾರೆ ಅಂತಾರೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು.
ಕೆಲವರಂತೂ ಮನೆಯಲ್ಲಿ ಜಗಳ ಮಾಡಿ ಬೇರೆಯಾಗಿ ತಮ್ಮ ತಮ್ಮ ಮನೆಗಳಿಗೆ ಹೋಗಿ ಅಲ್ಲಿ ಬೇರೆ ಮದ್ವೆಯಾಗಿರೋ ಕೇಸ್‌ಗಳು ದಾಖಲಾಗಿವೆ. ಪ್ರೀತಿಸಿ ಮದ್ವೆಯಾಗಿ ವರ್ಷಗಳ ನಂತರ ಈಗೋ, ಹೊಂದಾಣಿಕೆ ಸಮಸ್ಯೆಗಳು ಉಂಟಾಗಿ ಸಂಬಂಧಗಳು ಬ್ರೇಕಪ್ ಮಾಡುವಂತಾಗಿವೆ. ಅಲ್ಲದೆ ಕೆಲ ದಂಪತಿಗಳು ಮಾನಸಿಕವಾಗಿ ಕುಗ್ಗಿ ಡಿಪ್ರೆಶನ್ ಗೊಳಗಾಗಿದ್ದಾರೆ.