Love Bites: ಲವ್ ಬೈಟ್ಸ್ ಬಗ್ಗೆ ವಾತ್ಸಾಯನ ಕಾಮಸೂತ್ರದಲ್ಲಿ ಹೇಳಿದ್ದೇನು ಗೊತ್ತೆ?

By Suvarna News  |  First Published Dec 24, 2021, 2:37 PM IST

ಪ್ರಣಯ ಸಂದರ್ಭದಲ್ಲಿ ಚುಂಬನದೊಂದಿಗೆ ಕಚ್ಚುವಿಕೆಯೂ ಸ್ವಾಭಾವಿಕ. ಭಾರತದ ಪುರಾತನ ಕಾಮಸೂತ್ರದಲ್ಲೂ ಈ ಲವ್‌ಬೈಟ್‌ಗಳ ಬಗ್ಗೆ ವಾತ್ಸಾಯನ ವಿವರವಾದ ವಿವರಗಳನ್ನು ಕೊಟ್ಟಿದ್ದಾನೆ. ನೀವೂ ನೋಡಿ, ಪ್ರಯತ್ನಿಸಿ, ಪ್ರಣಯ ರಸಾಸ್ವಾದ ಹೆಚ್ಚಿಸಿಕೊಳ್ಳಿ.


ಪುರಾತನ ಕಾಮಗ್ರಂಥ ಕಾಮಸೂತ್ರದಲ್ಲಿ (Kamasutra) ವಾತ್ಸಾಯನ ಸೆಕ್ಸ್‌ಗೆ (Sex) ಸಂಬಂಧಿಸಿದ ಯಾವುದನ್ನೂ ವಿವರಿಸದೇ ಬಿಟ್ಟಿಲ್ಲ. ಕಾಮೋದ್ರಿಕ್ತ ಗಂಡು- ಹೆಣ್ಣು ತಮ್ಮ ಸಂಗಾತಿಯ ದೇಹವನ್ನು ಕಚ್ಚಿ ಅವರ ದೇಹದಲ್ಲಿ ಗುರುತು ಬಿಡುವುದನ್ನು ವಾತ್ಸಾಯನ ಪ್ರೋತ್ಸಾಹಿಸುತ್ತಾನೆ. ಇದು ಒಂದು ರೀತಿಯಲ್ಲಿ ಸಂಗಾತಿಯ (Spouse) ದೇಹದ ಮೇಲೆ ಅವರು ಸಾಧಿಸುವ ಅಧಿಕಾರವೂ ಹೌದು, ಸೆಕ್ಸ್‌ನ ಆವೇಗವನ್ನು ಹೆಚ್ಚು ಮಾಡುವ ಕ್ರಿಯೆಯೂ ಹೌದು. ಇದಕ್ಕೆ ಸಂಸ್ಕೃತದಲ್ಲಿ ದಂತಕ್ಷತ ಎಂದು ಹೆಸರು. ಹಾಗಾದರೆ ಎಲ್ಲಿ ಲವ್‌ಬೈಟ್ (Lovebite) ಮಾಡಬೇಕು, ಹೇಗೆ ಮಾಡಬೇಕು?

ಕಾಮಸೂತ್ರದ ಪ್ರಕಾರ ಸಾಮಾನ್ಯವಾಗಿ ಉತ್ತರ ಭಾರತದ ಮಹಿಳೆಯರು (ಹಿಮಾಲಯದಿಂದ ವಿಂಧ್ಯಪರ್ವತಗಳವರೆಗೆ ವಿಸ್ತರಿಸಿರುವ ಪ್ರದೇಶ, ಈಗಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ) ಒರಟು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ ಎಂದು ಅದು ಹೇಳುತ್ತದೆ. ದಕ್ಷಿಣ ಭಾರತದವರು ಕಚ್ಚುವಿಕೆ ಇಷ್ಟಪಡುತ್ತಾರೆ.

Tap to resize

Latest Videos

ಕಾಮಸೂತ್ರದ ಪ್ರಕಾರ ಸೆಕ್ಸ್‌ನಲ್ಲಿ ಎಂದಿಗೂ ಆತುರಪಡಬಾರದು ಮತ್ತು ವಿರಾಮದಲ್ಲಿ, ಎಲ್ಲ ಇಂದ್ರಿಯಗಳ್ನೂ ಬಳಸಿಕೊಂಡು ಅದನ್ನು ಆನಂದಿಸಬೇಕು. ಆದ್ದರಿಂದ ದಂತಕ್ಷತ ಸೇರಿದಂತೆ ಅನೇಕ ಅಭ್ಯಾಸಗಳು ನಿಖರತೆಯನ್ನು ತಲುಪಲು ಸಮಯ, ಗಮನ ಮತ್ತು ಏಕಾಗ್ರತೆಯನ್ನು ನೀಡಬೇಕಾಗಿತ್ತು. ಹೆಣ್ಣು ಅಥವಾ ಗಂಡುಗಳು ಹಿಂದಿನ ರಾತ್ರಿ ತಾವು ಪಡೆದ ದಂತಕ್ಷತಗಳನ್ನು ಪ್ರದರ್ಶಿಸುತ್ತಿದ್ದರು. ಇದು ಅವರು ತಾವು ಆನಂದಕರ ಸೆಕ್ಸ್ ಹೊಂದುತ್ತಿದ್ದೇವೆ, ತಮ್ಮ ಪ್ರಣಯಿಯು ಕಾಮಕಲೆಯಲ್ಲಿ ನಿಪುಣನಾಗಿದ್ದಾನೆ/ಳೆ ಎಂದು ಹೇಳುವ ವಿಧಾನ ಆಗಿತ್ತು.   

Menstruation and Sex: ಮುಟ್ಟಾದಾಗ ಸೆಕ್ಸ್‌ಗೆ ಒತ್ತಾಯಿಸುವ ಗಂಡ, ಇದೇನು ವಿಚಿತ್ರ!

ಲವ್‌ಬೈಟ್‌ಗಳ ವಿಧಗಳು ಹೀಗಿವೆ:

ಗೂಢಕ: ಕಚ್ಚುವಿಕೆಗಳಲ್ಲಿ ಹಗುರವಾದ, ಗೂಢಕವು ಮಹಿಳೆಯ ಕೆಳಗಿನ ತುಟಿಗೆ ಮಾತ್ರ ನೀಡಬೇಕು.ಇದೊಂದು ಎಚ್ಚರಿಕೆಯ ಕಚ್ಚುವಿಕೆ ಎಂದು ಅರ್ಥೈಸಲಾಗುತ್ತದೆ. ಇದು ಯಾವುದೇ ಗುರುತನ್ನು ಬಿಡುವುದಿಲ್ಲ.

ಉಚ್ಚುನಕ: ಸಾಮಾನ್ಯವಾಗಿ ಇದನ್ನು ಕಿವಿಗಳಲ್ಲಿ ಕಿವಿಗಳ ಕೆಳಭಾಗದಲ್ಲಿ,ಮಾಡಲಾಗುತ್ತದೆ. ಕಿವಿಗಳ ಕೆಳಭಾಗದಲ್ಲಿ ಚುಂಬಿಸುವುದು ಅಥವಾ ಕಚ್ಚುವುದು ಲೈಂಗಿಕ ಉದ್ರಿಕ್ತತೆಗೆ ಪೂರಕವಾಗಿದೆ. ಸಾಮಾನ್ಯವಾಗಿ ಮಸುಕಾದ ಗುರುತು ಬಿಡುತ್ತದೆ. ಇದನ್ನು ಕೆನ್ನೆಗಳ ಮೇಲೆ ಕೂಡ ಮಾಡಲಾಗುತ್ತದೆ, ಸಾಮಾನ್ಯವಾಗಿ ಎಡಭಾಗದಲ್ಲಿ.

ಬಿಂದು: ಒಂದು ಚಿಕ್ಕ ಚುಕ್ಕೆಯಂತೆ ಇದರ ಗುರುತು. ಉಚ್ಚುನಕದಂತೆ ಇದು ಕೂಡ ಅಲಂಕಾರಿಕ ಕಚ್ಚುವಿಕೆಯಾಗಿದೆ. ಕಿವಿ ಮತ್ತು ಕೆನ್ನೆಗಳಲ್ಲದೆ, ಹಣೆಯ ಮೇಲೂ ಮಾಡಬಹುದಾದ ಏಕೈಕ ಕಚ್ಚುವಿಕೆ ಅದು. ಪ್ರೇಮಿಯು ಚರ್ಮವನ್ನು ಎಷ್ಟು ಜಾಣ್ಮೆಯಿಂದ ಕಚ್ಚಬೇಕು ಎಂದರೆ ಗುರುತು ಎಳ್ಳಿನ ಬೀಜದ ಗಾತ್ರದಷ್ಟೇ ಇರಬೇಕು.

ಬಿಂದುಮಾಲಾ: ಇದಕ್ಕೆ ಸಾಕಷ್ಟು ಪರಿಣತಿ ಬೇಕು. ಇದರ ಗುರುತುಗಳು ಒಂದು ಹಾರದಂತೆ ಪೋಣಿಸಿಕೊಂಡು ಇರುವುದರಿಂದ ಬಿಂದುಮಾಲಾ ಎಂಬ ಹೆಸರು. ಒಂದರ ಹಿಂದೊಂದರಂತೆ ಕಚ್ಚಿದ ಸಾಲು ಗುರುತುಗಳು. ಇದು ಆಭರಣ ಧರಿಸಿದಂತೆ ಕಾಣಿಸಬಹುದು. ಕುತ್ತಿಗೆಯಲ್ಲಿ, ಸ್ತನಗಳ ಮೇಲೆ, ತೊಡೆಯ ಮೇಲೆ, ಹೀಗೆ ದೇಹದ ವಿವಿಧ ಭಾಗಗಳಲ್ಲಿ ಸರಪಣಿಯಾಗಿರುತ್ತದೆ.

Feelfree Bi Sexual: ನೀವು ಬೈಸೆಕ್ಸುಯಲ್ ಆಗಿದ್ದರೆ ತಪ್ಪೇನಿಲ್ಲ, ಆದರೆ ?

ಪ್ರವಾಳಮಣಿ: ಮೇಲಿನ ಹಲ್ಲುಗಳು ಅಥವಾ ಮೇಲಿನ ಬಾಚಿಹಲ್ಲುಗಳನ್ನು ಬಳಸಿ, ಈ ಸಣ್ಣ, ಅಲಂಕಾರಿಕ ಬಾಗಿದ ಗುರುತು, ಪ್ರವಾಲಮಣಿ ಅಥವಾ ಹವಳವನ್ನು ರಚಿಸಲಾಗುತ್ತದೆ. ಇದರ ಗುರುತು ಸ್ಪಷ್ಟವಾಗಿ ಕಾಣುತ್ತದೆ. ತುಸು ಉಗ್ರ ಸ್ವಭಾವದ ಪ್ರೇಮಿಗಳಿಂದ ಇದನ್ನು ನಿರೀಕ್ಷಿಸಬಹುದು.

ಮಣಿಮಾಲಾ: ಬಿಂದುವಿನಂತೆ, ಪರಿಣಿತ ಪ್ರೇಮಿಯು ಈ ಹವಳದ ನೆಕ್ಲೇಸ್‌ಗಳನ್ನು ತರುಣಿಯ ದೇಹದ ಮೇಲೆ ಮೂಡಿಸುತ್ತಾನೆ, ಇವುಗಳನ್ನು ದೇಹದ ನಿರ್ದಿಷ್ಟ ಭಾಗಗಳಲ್ಲಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಸ್ತನಗಳು ಅಥವಾ ತೊಡೆಗಳಲ್ಲಿ ಇರುತ್ತದೆ.

ಖಂಡಭ್ರಕ: ಖಂಡಭ್ರಕಗಳು ಚದುರಿದ, ಮೋಡದಂತಹ ಕಚ್ಚುವಿಕೆಗಳು. ಇದಕ್ಕೆ ಯಾವುದೇ ನಿರ್ದಿಷ್ಟ ವ್ಯವಸ್ಥೆ ಇಲ್ಲ. ಸ್ತನಗಳ ಅಡಿಭಾಗದಲ್ಲ ಮಾಡಲಾಗುತ್ತದೆ.

ವರಾಹ ಚರ್ವಿತ: ಖಂಡಭ್ರಕಗಳು ಹತ್ತಿರಕ್ಕೆ ಬಂದರೆ ಮತ್ತು ಮಧ್ಯದಲ್ಲಿ ಹೆಚ್ಚು ಕೆಂಪಾಗಿದ್ದರೆ, ಅವು ವರಾಹ ಚರ್ವಿತವನ್ನು ರೂಪಿಸುತ್ತವೆ. ಅಂದರೆ ಕಾಡು ಹಂದಿಯನ್ನು ಅಗಿಯುವುದು. ಇದು ಅವ್ಯವಸ್ಥಿತವಾಗಿ ಇರುತ್ತದೆ. ಇವು ಕೆಂಪು ಕೇಂದ್ರಗಳನ್ನು ರಚಿಸುವ ಗಟ್ಟಿಯಾದ ಕಡಿತಗಳಾಗಿವೆ. ಕಾಮೋದ್ರೀಕ್ತತೆಯ ತುರೀಯ ಸ್ಥಿತಿಯಲ್ಲಿ ಇದು ರೂಪುಗೊಳ್ಳಬಹುದು. ಇದಕ್ಕೆ ಯಾವುದೇ ನಿರ್ದಿಷ್ಟ ಕ್ರಮವಿಲ್ಲ.

ಆ ದಿನಗಳಲ್ಲಿ, ಲವ್ ಬೈಟ್‌ಗಳು ಪ್ರೇಮ ಸಂದೇಶಗಳು ಅಥವಾ ಪ್ರೇಮ ಪತ್ರಗಳನ್ನು ಸಹ ಸೂಚಿಸುತ್ತಿದ್ದವು. ಹಲ್ಲುಗಳ ಗುರುತುಗಳನ್ನು ಸಂಗಾತಿಯ ಮೇಲೆ ನೇರವಾಗಿ ಮೂಡಿಸಲು ಸಾಧ್ಯವಾಗದಿದ್ದರೆ, ಬೇರೆ ಮಾಧ್ಯಮದಲ್ಲಿ ಮೂಡಿಸಿ ಕಳಿಸುತ್ತಿದ್ದರು ಕೂಡ. 

click me!