Relationship Tips: ಸಂಗಾತಿ ಜೊತೆ ಹೇಗಿದ್ರೆ ಸಂಬಂಧ ಚೆನ್ನಾಗಿರುತ್ತೆ?

By Suvarna News  |  First Published Dec 24, 2021, 12:45 PM IST

ಸಂಗಾತಿಯೊಂದಿಗೆ ಹೇಗಿರಬೇಕು ಎನ್ನುವುದು ಎಲ್ಲರಿಗೂ ಇರೋ ಕಾಮನ್ ಪ್ರಶ್ನೆ. ಅವರವರ ಸ್ವಭಾವಕ್ಕೆ ತಕ್ಕಂತೆ ನಿರ್ಮ ವರ್ತನೆ ಇರಲಿ ಎನ್ನುವುದು ತೀರ ವ್ಯಾವಹಾರಿಕವೆನಿಸುತ್ತದೆ. ಹೀಗಾಗಿ, ನೀವು ಮಾಡಬೇಕಾದುದು ಏನೂ ಇಲ್ಲ. ಸಿಂಪಲ್ಲಾಗಿ ನಿಮ್ಮನ್ನು ನೀವು ಮೌಲ್ಯಯುತ ವ್ಯಕ್ತಿಯನ್ನಾಗಿ ರೂಪಿಸಿಕೊಂಡರೆ ಎಲ್ಲವೂ ಸರಳಾತಿಸರಳ.


ಸಂಬಂಧ(Relationship)ವೊಂದು ನಳನಳಿಸುವಂತಿರಬೇಕಾದರೆ ಏನು ಅಗತ್ಯ ಎನ್ನುವ ಪ್ರಶ್ನೆ ಒಂದಿಲ್ಲೊಮ್ಮೆಯಾದರೂ ಎಲ್ಲರನ್ನೂ ಕಾಡುತ್ತದೆ. ಪರಸ್ಪರ ಪ್ರೀತಿ(Love)ಯೇ? ವಿಶ್ವಾಸ(Confidence)ವೇ? ಆಕರ್ಷಣೆ(Atraction)ಯೇ? ನಂಬಿಕೆ(Faith)ಯೇ? ಯಾವುದು? ಪ್ರೀತಿಯಿಂದ ಸಂಬಂಧ ಸ್ಥಿರವಾಗಿರಲು ಸಾಧ್ಯ. ಆದರೆ, ಅಲ್ಲೊಂದು ಅಪನಂಬಿಕೆಯೂ ಇರಬಹುದು. ಆಕರ್ಷಣೆಯಿಂದ ಸಂಬಂಧವೊಂದು ಹುಟ್ಟಬಲ್ಲದೇ ವಿನಾ ಸ್ಥಿರವಾಗಿರಲು ಸಾಧ್ಯವಿಲ್ಲ. ಪರಸ್ಪರರ ವಿಶ್ವಾಸ ಹಾಗೂ ನಂಬಿಕೆಗಳೇ ಸಂಬಂಧವನ್ನು ಚಿರಕಾಲ ಉಳಿಸಬಲ್ಲದು. ಅಲ್ಲವೇ? ಇದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೂ ಪರಸ್ಪರ ವಿಶ್ವಾಸ, ನಂಬಿಕೆ ಮೂಡುವುದು ಹೇಗೆ ಎನ್ನುವ ಗೊಂದಲವೂ ಅನೇಕರಿಗೆ ಇರಬಹುದು.

ಬದುಕು ಹಾಯೆನಿಸಲು ವೈವಾಹಿಕ (Married) ಅಥವಾ ಪ್ರೀತಿಯ ಸಂಬಂಧವೊಂದು ಸುರಕ್ಷಿತವಾಗಿರಬೇಕು. ಪ್ರೀತಿ ತುಂಬಿದ ಬದುಕು ನಿಮ್ಮದಾಗಲು, ಗೌರವಪೂರ್ಣ (Respectfull) ಮನಸ್ಥಿತಿ ತುಂಬಿರಲು, ವಿಶ್ವಾಸಾರ್ಹ ಹಾಗೂ ಸುರಕ್ಷಿತ ಸಂಬಂಧಕ್ಕೆ ಕೆಲವು ಗುಟ್ಟುಗಳನ್ನು ಅರಿತುಕೊಳ್ಳಬೇಕು.

Latest Videos

undefined

ಸಂಗಾತಿ(Partner)ಯನ್ನು ಗೌರವಿಸಿ

ಮೊದಲನೆಯದಾಗಿ, ನೀವು ಯಾರನ್ನಾದರೂ ಪ್ರೀತಿಸುತ್ತೀರಿ ಎಂದಾದರೆ, ಅವರನ್ನು ಗೌರವಿಸಿ. ಗೌರವವಿಲ್ಲದೆಡೆ ಪ್ರೀತಿ ಇರಲು ಸಾಧ್ಯವಿಲ್ಲ. ಇದ್ದರೂ ಅದು ಉಸಿರುಕಟ್ಟಿಸುವಂಥದ್ದಾಗಿರುತ್ತದೆ, ಹೆಚ್ಚು ಕಾಲ ಬಾಳಲು ಸಾಧ್ಯವಿಲ್ಲ. ನಿಮ್ಮ ನಡುವೆ ಗೌರವವಿದ್ದಷ್ಟೂ ಸಂಬಂಧ ಸುಭದ್ರವಾಗುತ್ತದೆ. ಸುರಕ್ಷಿತವಾಗಿರುವ ಭಾವನೆ ಬರುತ್ತದೆ. ಒಂದೊಮ್ಮೆ ನಿಮ್ಮ ಪ್ರೀತಿಯಲ್ಲಿ ಗೌರವವಿಲ್ಲ ಎಂದಾದರೆ ನಿಮಗೆ ಅದೆಷ್ಟು ನೋವಾಗುತ್ತದೆ, ಹೀನಸ್ಥಿತಿಯಲ್ಲಿರುವ ಭಾವನೆ ಬರುತ್ತದೆ ಎನ್ನುವುದನ್ನು ಯಾವಾಗಲಾದರೂ ಅನುಭವಿಸಿರುತ್ತೀರಿ. ಅಂತಹ ಸಂಬಂಧ ನೋವನ್ನು ನೀಡಬಹುದೇ ವಿನಾ ಗೌರವದ ಬದುಕನ್ನಲ್ಲ. 

ನೈಜತೆ (Reality) ಇರಲಿ

ಸಿನಿಮಾಗಳಲ್ಲಿ ಕಾಣಸಿಗುವ ಅತ್ಯಂತ ಥ್ರಿಲ್ (Thrill) ಎನಿಸುವ ರೋಮಾಂಚನಕಾರಿ ರೋಮ್ಯಾನ್ಸ್ (Romance) ಅನ್ನು ನೈಜ ಜೀವನದಲ್ಲಿ ನಿರೀಕ್ಷೆ ಮಾಡಬೇಡಿ! ಇದೇನು ವಿಚಿತ್ರ ಎನಿಸಬಹುದಲ್ಲವೇ? ಹೌದು, ನಿಜ ಜೀವನದಲ್ಲಿ ಅಂತಹ ಅದ್ಭುತ ರೋಮ್ಯಾನ್ಸ್ ಇರುವುದು ಸಹಜವೆನಿಸುವುದಿಲ್ಲ. ಬದಲಿಗೆ, ನಿಜವಾದ ಪ್ರಣಯ ಪರಸ್ಪರರ ಗೌರವ, ನಂಬಿಕೆ ಹಾಗೂ ಸ್ವಾತಂತ್ರ್ಯದಿಂದಲೇ ಬರುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಿ. 

ಕುಟುಂಬಗಳ ನಡುವೆ ಸೌಹಾರ್ದ ಸಂಬಂಧ ಸಾಕು

ಇಂದಿನ ಬದುಕು ಹಿಂದಿನಂತಲ್ಲ. ಹಿಂದೆಲ್ಲ ಮದುವೆ ಎಂದರೆ ಎರಡು ಕುಟುಂಬಗಳ ನಡುವೆ ಏರ್ಪಡುವ ಸಂಬಂಧ ಎಂದು ವಿಶ್ಲೇಷಿಸಲ್ಪಡುತ್ತಿತ್ತು. ಹೀಗಾಗಿ, ಎರಡೂ ಕುಟುಂಬಗಳು ಒಂದುಗೂಡುವ ಸಂದರ್ಭಗಳು ಹೆಚ್ಚಾಗಿ ಒದಗುತ್ತಿದ್ದವು. ಆದರೆ, ಇಂದಿನ ಪರಿಸ್ಥಿತಿ ಹಾಗಿಲ್ಲ. ಮದುವೆಗೆ ಮುನ್ನವಾಗಲೀ, ಮದುವೆಯ ನಂತರವಾಗಲೀ ಎರಡು ಕುಟುಂಬಗಳನ್ನು ಎಷ್ಟು ಬೇಕೋ ಅಷ್ಟು ಹತ್ತಿರ, ಎಷ್ಟು ಬೇಕೋ ಅಷ್ಟೇ ದೂರದಲ್ಲಿ ಸೌಹಾರ್ದವಾಗಿ ಇಟ್ಟುಕೊಳ್ಳುವುದು ಸಂಬಂಧದ ದೃಷ್ಟಿಯಿಂದ ಕ್ಷೇಮ.

ಮುಕ್ತ ಅಭಿವ್ಯಕ್ತಿ (Expression)

ನಿಮಗೇನನ್ನಿಸುತ್ತದೆಯೋ ಅದನ್ನು ನೇರವಾಗಿ ಹೇಳುವಂತಹ ವಾತಾವರಣ ಇದ್ದರೆ ಒಳ್ಳೆಯದು. ನಿಮಗೆ ಏನನ್ನಿಸುತ್ತದೆಯೋ ಅದನ್ನು ಅಭಿವ್ಯಕ್ತಿಪಡಿಸುವಂತಹ ವಾತಾವರಣವಿಲ್ಲ ಎಂದಾದರೆ ಕ್ರಮೇಣ ಸಂವಹನದ ಕೊರತೆಯಾಗುತ್ತದೆ. ಇದರಿಂದ ಸಂಬಂಧದಲ್ಲಿ ಬಿರುಕುಗಳು ಏಳುವ ಸಾಧ್ಯತೆ ಹೆಚ್ಚಾಗುತ್ತದೆ. 

Wifes Secret: ಗಂಡನಿಗೆ ಗೊತ್ತಾಗಬಾರದು ಎಂದು ಹೆಂಡತಿ ಬಚ್ಚಿಡುವ ಟಾಪ್ ಸೀಕ್ರೆಟ್ಸ್ !

ನಡುವೆ “ಅಂತರ’ವಿರಲಿ!

ಸಂಗಾತಿಗಳ ನಡುವೆ ಸ್ಪೇಸ್ (Space) ಇರಬೇಕು. ಮನೆಯದಾಗಲೀ, ನಿಮ್ಮದಾಗಲೀ, ಎಲ್ಲ ಕೆಲಸಗಳನ್ನೂ ಇಬ್ಬರೂ ಸೇರಿಯೇ ಮಾಡಬೇಕೆಂದಿಲ್ಲ. ನಿಮಗೇನಾದರೂ ಖರೀದಿ ಇದ್ದರೆ ನೀವೊಬ್ಬರೇ ಹೋಗುವುದು, ಅವರ ಕೆಲಸವನ್ನು ಅವರು ಮಾಡಿಕೊಳ್ಳುವುದು ಹೀಗೆ ಇಬ್ಬರ ನಡುವೆ ಸ್ವಲ್ಪವಾದರೂ ಸ್ಪೇಸ್ ಇದ್ದರೆ ಹೆಚ್ಚು ಸ್ವಾತಂತ್ರ್ಯವಿರುತ್ತದೆ. ಈ ಸ್ವಾತಂತ್ರ್ಯಕ್ಕೆ ಧಕ್ಕೆ ತಂದುಕೊಳ್ಳಬಾರದು.

ಎಲ್ಲವನ್ನೂ ಕಕ್ಕುವ ಖಯಾಲಿ (Habit) ಬೇಡ

ಕೆಲವರಿಗೆ ಸಂಗಾತಿಗೆ ಎಲ್ಲವನ್ನೂ ಹೇಳಿಕೊಳ್ಳುವ ಚಟವಿರುತ್ತದೆ. ಇದು ಖಂಡಿತವಾಗಿ ಒಳ್ಳೆಯ ಅಭ್ಯಾಸವಲ್ಲ. ಗುಟ್ಟು (Secracy) ಮೆಂಟೇನ್ ಮಾಡಬೇಕೆಂದಲ್ಲ. ಆದರೆ, ಎಲ್ಲವನ್ನೂ ಹೇಳಿಕೊಳ್ಳುವುದು ಒಳ್ಳೆಯದಲ್ಲ. 

ಬದಲಾವಣೆ (Change) ಒಪ್ಪಿಕೊಳ್ಳಿ

ಬದಲಾವಣೆ ಜಗದ ನಿಯಮ ಎಂದು ಶ್ರೀಕೃಷ್ಣನೇ ಹೇಳಿದ್ದಾನೆ. ಇನ್ನು ನಾವೆಷ್ಟರವರು? ನೀವು ಪ್ರೀತಿಸುವ ವ್ಯಕ್ತಿ ಬದಲಾಗಬಹುದು. ಅಥವಾ ನೀವೂ ಬದಲಾಗಬಹುದು. ಹಿಂದೊಮ್ಮೆ ಪ್ರೀತಿಸಿದ್ದವರು ಇವರೇನಾ ಎನ್ನಿಸಬಹುದು. ಆಗ ಖಿನ್ನತೆಗೆ ಬೀಳದೆ ಸತ್ಯವನ್ನು ಒಪ್ಪಿಕೊಳ್ಳಬೇಕು. ಏಕಾಏಕಿ ಸಂಬಂಧದಿಂದ ಹೊರಬರಲು ಯತ್ನಿಸದೆ ಸುಧಾರಣೆಗೆ ಯತ್ನಿಸಬೇಕು. ಪರಸ್ಪರ ಪ್ರೀತಿ-ವಿಶ್ವಾಸವಿದ್ದಾಗ ಸುಧಾರಣಾ ಪ್ರಯತ್ನಗಳು ಖಂಡಿತವಾಗಿ ಫಲ ನೀಡುತ್ತವೆ.

click me!