ಯಾವುದೇ ಹೊಸ ಹೆಜ್ಜೆ ಇಡುವ ಮೊದಲು ಇಂಟರ್ನೆಟ್ ಒಳಹೊಕ್ಕಿ ನೋಡುವುದು ಈಗ ಎಲ್ಲರ ಅಭ್ಯಾಸ. ಸೆಕ್ಸ್ ಜೀವನಕ್ಕೂ ಇದು ಹೊರತಾಗಿಲ್ಲ. ಮೊದಲ ಬಾರಿ ಸಂಭೋಗ ಬೆಳೆಸುವ ಅನೇಕರು ಪೋರ್ನ್ ಚಿತ್ರಗಳನ್ನು ನೋಡಿ,ಆ ಗುಂಗಿನಲ್ಲಿಯೇ ಸಂಗಾತಿ ಬಳಿ ಹೋಗ್ತಾರೆ. ಆದ್ರೆ ನೋಡಿದ್ದೆಲ್ಲ ಸತ್ಯವಲ್ಲ ಎಂಬುದು ಅವರಿಗೆ ತಿಳಿದಿರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಪೋರ್ನ್ (Porn) ಚಿತ್ರಗಳ ವೀಕ್ಷಣೆ ಹೆಚ್ಚಾಗಿದೆ. ಸುಲಭವಾಗಿ ಇಂಟರ್ನೆಟ್ ಲಭ್ಯವಾಗ್ತಿರುವುದು ಇದಕ್ಕೆ ಮುಖ್ಯ ಕಾರಣ. ಸರ್ಕಾರ ಅನೇಕ ಪೋರ್ನ್ ಸೈಟ್ ಗಳನ್ನು ನಿಷೇಧಿಸಿದೆ. ಆದರೆ ಕಳ್ಳದಾರಿಯಲ್ಲಿ ನೋಡುವವರ ಸಂಖ್ಯೆ ಕಡಿಮೆಯೇನಾಗಿಲ್ಲ. ಈ ಪೋರ್ನ್ ಚಿತ್ರಗಳು ಲೈಂಗಿಕ (sex)ಜೀವನದ ಮೇಲೂ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಏಳುವುದು ಸಾಮಾನ್ಯ.ಇದಕ್ಕೆ ಹೌದು ಎಂಬ ಉತ್ತರ ನೀಡಬೇಕಾಗುತ್ತದೆ. ಪೋರ್ನ್ ಚಿತ್ರಗಳನ್ನು ನೋಡಿದ ನಂತರ, ವ್ಯಕ್ತಿ ಕಲ್ಪನಾ ಲೋಕದಲ್ಲಿ ವಿಹರಿಸಲು ಶುರು ಮಾಡುತ್ತಾನೆ.
ಅನೇಕರು ಪೋರ್ನ್ ಚಿತ್ರಗಳನ್ನು ನಿಜವಾದ ಸೆಕ್ಸ್ ಎಂದುಕೊಂಡಿದ್ದಾರೆ. ಹಾಗಾಗಿ ಚಿತ್ರಗಳಲ್ಲಿ ತೋರಿಸಿದ ದೃಶ್ಯಗಳನ್ನು ಪ್ರಯೋಗಿಸಲು ಮುಂದಾಗುತ್ತಾರೆ. ಅಲ್ಲಿನ ಎಲ್ಲ ದೃಶ್ಯ (Scene)ಗಳನ್ನು ವಾಸ್ತವದಲ್ಲಿ ತರಲು ಸಾಧ್ಯವಿಲ್ಲ. ಅಸಾಧ್ಯ ಎಂಬುದು ಲೈಂಗಿಕ ಜೀವನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಲೈಂಗಿಕ ಶಿಕ್ಷಣ(Education)ದ ಕೊರತೆ ಮತ್ತು ಈ ವಿಷಯದ ಕುರಿತು ಸಾರ್ವಜನಿಕವಾಗಿ ಚರ್ಚೆಯಾಗದ ಕಾರಣ ಜನರು ಪೋರ್ನ್ ಚಿತ್ರಗಳ ಮೊರೆ ಹೋಗ್ತಾರೆ. ಅಲ್ಲಿ ನೋಡಿದ್ದನ್ನು ಹಾಸಿಗೆ ಮೇಲೆ ಪ್ರಯೋಗಿಸಲು ಮುಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಪೋರ್ನ್ ಚಿತ್ರ ಹಾಗೂ ಲೈಂಗಿಕ ಜೀವನಕ್ಕೆ ಸಾಕಷ್ಟು ವ್ಯತ್ಯಾಸವಿದೆ.
undefined
ಲೈಂಗಿಕ ಜೀವನ ಹಾಗೂ ಪೋರ್ನ್ ಚಿತ್ರಕ್ಕಿರುವ ವ್ಯತ್ಯಾಸಗಳು (Differences):
ಪುರುಷರ ಖಾಸಗಿ ಅಂಗದ (Sex organ )ಗಾತ್ರ : ಪೋರ್ನ್ ಚಿತ್ರಗಳಲ್ಲಿ ಸಾಮಾನ್ಯವಾಗಿ ಖಾಸಗಿ ಅಂಗದ ಗಾತ್ರ ದೊಡ್ಡದಿರುತ್ತದೆ. ಪ್ರತಿಯೊಬ್ಬ ಪುರುಷನಿಗೆ ಒಂಬತ್ತು ಇಂಚಿನ ಖಾಸಗಿ ಅಂಗ ಇರುವುದಿಲ್ಲ. ಸಾಮಾನ್ಯವಾಗಿ ಪುರುಷರ ಖಾಸಗಿ ಗಾತ್ರ ಇದಕ್ಕಿಂತ ಚಿಕ್ಕದಾಗಿರುತ್ತದೆ. ಪೋರ್ನ್ ನಲ್ಲಿ ತೋರಿಸುವ ದೃಶ್ಯಗಳು ಕಾಲ್ಪನಿಕ. ಅದನ್ನು ಸತ್ಯವೆಂದು ತಿಳಿದುಕೊಳ್ಳುವ ಅನೇಕರು ಖಾಸಗಿ ಅಂಗದ ಗಾತ್ರ ಹೆಚ್ಚಿಸುವ ಪ್ರಯತ್ನಕ್ಕಿಳಿಯುತ್ತಾರೆ. ಇಲ್ಲವೆ ಗಾತ್ರ ಚಿಕ್ಕದಾಗಿದೆ ಎಂಬ ಕಾರಣಕ್ಕೆ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಹಿಂದೇಟು ಹಾಕುತ್ತಾರೆ. ಇದು ಅವರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಮಹಿಳೆಯರು ಪುರುಷರ ಖಾಸಗಿ ಅಂಗದ ಗಾತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ : ಗಾತ್ರ ಲೈಂಗಿಕ ಜೀವನದಲ್ಲಿ ಅತಿ ಹೆಚ್ಚು ಮಹತ್ವ ಪಡೆಯುವುದಿಲ್ಲ. ಮಹಿಳೆಯರು ಪುರುಷರ ಅಂಗದ ಗಾತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ತನ್ನ ಸಂಗಾತಿಯ ಖಾಸಗಿ ಅಂಗದ ಗಾತ್ರ 9 ಇಂಚುಗಳಷ್ಟು ಇರಬೇಕೆಂದು ಆಕೆ ಎಂದೂ ಯೋಚಿಸುವುದಿಲ್ಲ. ಸಂಭೋಗ ಆರಾಮದಾಯಕ ಹಾಗೂ ಸಂತೋಷದಿಂದ ಕೂಡಿರಬೇಕೆಂದು ಮಾತ್ರ ಆಕೆ ಬಯಸುತ್ತಾಳೆ.
ನಿಮ್ಮ ಮುನ್ನಲಿವು ಹೆಚ್ಚು ಕಾಲ ನಡೆಯಲು ಈ ಟಿಪ್ಸ್ ಅನುಸರಿಸಿ
ಪೋರ್ನ್ ಚಿತ್ರದಲ್ಲಿರುವವರು ಸಂಗಾತಿಯಲ್ಲ : ಸಿನಿಮಾ (Cinema) ಹಾಗೂ ವಾಸ್ತವಕ್ಕೆ ಸಾಕಷ್ಟು ವ್ಯತ್ಯಾಸವಿದೆ. ನಟಿಯರು ನೈಜ ಜೀವನದಲ್ಲಿ ಅಷ್ಟು ಸುಂದರವಾಗಿರುವುದಿಲ್ಲ. ಪೋರ್ನ್ ಚಿತ್ರದಲ್ಲಿ ತೋರಿಸಿದ ನಟಿಯಂತೆ ಸಂಗಾತಿಯಿರಬೇಕೆಂದರೆ ಅದು ಅಸಾಧ್ಯ. ಪೋರ್ನ್ ನಟಿಯರು ಅನೇಕ ಶಸ್ತ್ರಚಿಕಿತ್ಸೆ(Surgery )ಗೆ ಒಳಗಾಗಿರುತ್ತಾರೆ. ಅವರಂತೆ ನಿಮ್ಮ ಸಂಗಾತಿ ಇರಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕಾಗುತ್ತದೆ.
ಭಾವನೆಗಿರಲಿ ಮಹತ್ವ : ಸೆಕ್ಸ್ ಎಂದೂ ದೈಹಿಕ ಸುಖಕ್ಕೆ ಸೀಮಿತವಾಗಿರಬಾರದು. ಇಬ್ಬರು ಒಂದಾಗುವುದು ಎಂದರೆ ಇಬ್ಬರ ದೇಹ ಒಂದಾಗುವುದಲ್ಲ. ಮನಸ್ಸುಗಳು ಒಂದಾಗಬೇಕು. ಇಲ್ಲಿ ಅಶ್ಲೀಲತೆಗಿಂತ ಮನಸ್ಸಿಗೆ ಮಹತ್ವ ನೀಡಬೇಕು. ಪೋರ್ನ್ ಚಿತ್ರಗಳಲ್ಲಿ ಬರೀ ಸುಖಕ್ಕೆ ಮಹತ್ವ ನೀಡುತ್ತಾರೆ ಎಂಬುದು ನೆನಪಿರಲಿ.
ಸಂಭೋಗಕ್ಕೂ ಮುನ್ನ ಸಂಗಾತಿ ಜೊತೆ ಈ ವಿಷ್ಯ ಮಾತನಾಡಿ
ಸಂಭೋಗದ ವೇಳೆ ಅಧಿಕ ಮಾತು (Talk) : ಪೋರ್ನ್ ಚಿತ್ರಗಳಲ್ಲಿ ಸಂಭಾಷಣೆ ಇರುತ್ತದೆ. ಮಹಿಳಾ ಸಂಗಾತಿ ಮಾರ್ಗದರ್ಶಕಳಂತೆ ಕೆಲಸ ಮಾಡ್ತಾಳೆ. ಕ್ಯಾಮರದಾದಲ್ಲಿ ಏನು ಸೆರೆ ಹಿಡಿಯಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಆದ್ರೆ ನೈಜ ಜೀವನದಲ್ಲಿ ಯಾವುದೂ ಪ್ಲಾನ್ ಪ್ರಕಾರ ಮಾಡಲು ಸಾಧ್ಯವಿಲ್ಲ. ಹಾಗೆ ದಂಪತಿ ದೈಹಿಕ ಮತ್ತು ಮಾನಸಿಕವಾಗಿ ಒಟ್ಟಿಗೆ ಸೇರುವುದ್ರಿಂದ ಇಲ್ಲಿ ಮಾತು ಕಡಿಮೆಯಿರುತ್ತದೆ.