
ಪ್ರಶ್ನೆ: ವಿವಾಹಿತೆ. ನಮ್ಮಿಬ್ಬರ ವಯಸ್ಸು ಮೂವತ್ತರ ಆದುಪಾದು. ನನ್ನ ಗಂಡ ಲಾಕ್‌ಡೌನ್ ನಂತರ ಮನೆಯಲ್ಲೇ ಇದ್ದಾರೆ. ಮೊದಲು ಆಫೀಸ್ ಕೆಲಸ ಮುಗಿಸಿ ಬಂದು ದಣಿವಾಯ್ತು ಎಂದು ಮಲಗಿಬಿಡುತ್ತಿದ್ದರು. ಇಬ್ಬರ ಮಧ್ಯೆ ಸೆಕ್ಸ್ ಅಪರೂಪ ಆಗಿತ್ತು. ಈಗ ಮನೆಯಲ್ಲೇ ಇರುವುದರಿಂದ ಸುಖಸಂಸಾರ ಸಾಧ್ಯ ಆಗಬಹುದು ಅಂದುಕೊಂಡಿದ್ದೆ. ಆದರೆ ಹಾಗಾಗಿಲ್ಲ. ಗಂಡ ಯಾವತ್ತೂ ಲ್ಯಾಪ್‌ಟಾಪ್ ಅಥವಾ ಫೋನ್‌ನಲ್ಲಿ ಇರುತ್ತಾರೆ. ರಾತ್ರಿ ಅದರಿಂದ ಸುಸ್ತಾಯಿತೆನ್ನುತ್ತಾರೆ. ಅವರ ಫೋನ್ ನಾನು ಮುಟ್ಟಲು ಬಿಡುವುದಿಲ್ಲ. ಫೋನ್ ಬಂದರೆ ದೂರ ಅಥವಾ ಟೆರ್ರೇಸ್‌ಗೆ ಹೋಗಿ ಮಾತಾಡುತ್ತಾರೆ. ಅವರಿಗೆ ಇನ್ನೊಂದು ಸಂಬಂಧ ಇರಬಹುದಾ? ಇದನ್ನು ಸರಿ ಮಾಡುವುದು ಹೇಗೆ?
ಉತ್ತರ: ಲಾಕ್‌ಡೌನ್ ಸಂದರ್ಭದಲ್ಲಿ ಇಂಥ ಸಂಶಯ, ಗೊಂದಲಗಳು ಹುಟ್ಟಿಕೊಂಡಿರುವುದು ಸಹಜವೇ. ಇದನ್ನು ನಾಜೂಕಾಗಿ ಪರಿಹರಿಸಿಕೊಳ್ಳಬೇಕಿದೆ. ಗಂಡನ ಕೆಲಸದ ಪ್ರಮಾಣ ಎಷ್ಟು ಎಂಬುದನ್ನು ಜಾಣ್ಮೆಯಿಂದ ತಿಳಿಯಿರಿ. ನಿಜಕ್ಕೂ ಅಷ್ಟೊಂದು ಕೆಲಸ ಇದೆಯೇ, ಇಲ್ಲವೇ ಎಂದು ತಿಳಿದುಕೊಳ್ಳಿ. ನಿಜಕ್ಕೂ ಅಷ್ಟು ಕೆಲಸವಿದ್ದರೆ, ಸಾಧ್ಯವಿದ್ದರೆ ನೀವು ಅವರಿಗೆ ನೆರವಾಗಬಹುದು. ಅಥವಾ ಕಚೇರಿ ಕೆಲಸದ ಜೊತೆಗೆ ಉಪ ದುಡಿಮೆಯನ್ನೂ ಮಾಡುತ್ತಿದ್ದಾರಾ ತಿಳಿದುಕೊಳ್ಳಿ. ಏನಿದ್ದರೂ ಇದು ಮಾತನಾಡಿ ಪರಿಹರಿಸಿಕೊಳ್ಳಬೇಕಾದ ವಿಷಯ. ಅವರ ಇನ್ನೊಂದು ಸಂಬಂಧದ ಬಗ್ಗೆ ನೀವೇ ಸುಮ್ಮನೆ ಊಹಿಸಿಕೊಂಡು ಗಾಬರಿಯಾಗುತ್ತಿದ್ದೀರಿ. ಇದಕ್ಕೂ ಸಾಕ್ಷಿಗಳು ಸಿಕ್ಕದೆ ಮುಂದುವರಿಯುವಂತಿಲ್ಲ.
ಇನ್ನು ನಿಮ್ಮ ಲೈಂಗಿಕ ಚಟುವಟಿಕೆಯ ಬಗ್ಗೆ. ಮನೆಯಲ್ಲಿ ಕುಳಿತೇ ಇದ್ದರೆ ಲೈಂಗಿಕವಾಗಿ ಹುರುಪಾಗಿ ಇರಬಹುದು ಎಂಬುದು ನಿಜವಲ್ಲ.ದೇಹಕ್ಕೆ ಅತ್ಯಗತ್ಯವಾದ ವ್ಯಾಯಾಮ ಹಾಗೂ ಪೋಷಕಾಂಶಗಳು ಸಿಕ್ಕಿದರೆ ಮಾತ್ರವೇ ದೇಹ ಸುಟಿಯಾಗಿ, ಚುರುಕಾಗಿ, ಲವಲವಿಕೆಯಿಂದ ಇರಲು ಸಾಧ್ಯ. ಆಗ ಮನಸ್ಸು ಕೂಡ ಮುದಗೊಂಡಿರುತ್ತದೆ. ಕುಳಿತಲ್ಲೇ ಇದ್ದು ಆಹಾರ ಸೇವಿಸುತ್ತಿದ್ದರೆ ಕೆಳಹೊಟ್ಟೆಯಲ್ಲಿ ಅನಗತ್ಯ ಕೊಬ್ಬು ಶೇಖರವಾಗಿ, ಲೈಂಗಿಕ ಅಂಗಗಳನ್ನ ಜಡವಾಗಿಸುತ್ತದೆ. ಹೀಗಾಗಿ ದೇಹ ಹಗುರವಾಗಿರಬೇಕು. ನೀವು ಗಂಡನ ಜೊತೆಯಾಗಿ ಒಂದು ಟೈಂ ಟೇಬಲ್ ಹಾಕಿಕೊಳ್ಳಿ. ಬೆಳಗ್ಗೆ ಒಂದಿಷ್ಟು ಯೋಗ, ಆರೋಗ್ಯಪೂರ್ಣ ಆಹಾರ, ಬೆಳಗ್ಗೆ ಹತ್ತರಿಂದ ಸಂಜೆ ಆರರ ವರೆಗೆ ಆಫೀಸ್ ಟೈಮ್. ನಂತರ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗೆ ರೆಸ್ಟ್. ಸಂಜೆ ಒಂದು ವಾಕಿಂಗ್, ಟೆರ್ರೇಸ್‌ನಲ್ಲಿ ಒಂದಿಷ್ಟು ಗಾರ್ಡನಿಂಗ್, ರಾತ್ರಿ ಪುಸ್ತಕ ಓದು- ಹೀಗೆ. ಇದರಿಂದ ನೀವು ಜೊತೆಯಾಗಿರಲು, ಮಾತತನಾಡಲು, ಸರಸ ಸಲ್ಲಾಪಕ್ಕೆ ಸಮಯ ಸಿಗುತ್ತದೆ. ಸೆಕ್ಸ್ ಲೈಫ್ ಕೂಡ ಖುಷಿಯಾಗಿರುತ್ತದೆ.
#Feelfree: ಪೃಷ್ಠ ನೋಡಿದರೆ ಮಾತ್ರವೇ ಆಸಕ್ತಿ ಕೆರಳುತ್ತದೆ!
ಪ್ರಶ್ನೆ: ಇಪ್ಪತ್ತೈದರ ಮಹಿಳೆ. ವರ್ಕಿಂಗ್. ಒಬ್ಬ ಗೆಳೆಯನಿದ್ದಾನೆ. ನಾನು ಸ್ವಲ್ಪ ವಾಚಾಳಿ. ಆತನಿಗೆ ಮಾತು ಕಡಿಮೆ. ನಾನು ಒಂದು ಕಾದಂಬರಿಯಷ್ಟು ಉದ್ಧದ ಮೆಸೇಜ್ ಕಳಿಸಿದರೆ, ಆತ ಮೂರೇ ಸಾಲಿನ ಪ್ರತ್ಯುತ್ತರ ಕಳಿಸುತ್ತಾನೆ. ಯಾಕೆ ಹೀಗೆ? ಆತನಿಗೆ ನನ್ನಲ್ಲಿ ಆಸಕ್ತಿ ಇರಲಿಕ್ಕಿಲ್ವಾ? ಅಥವಾ ಗಂಡಸರೆಲ್ಲ ಹೀಗೇನಾ?
ನಿಮ್ಮ ಬ್ಲಡ್ ಗ್ರೂಪ್‌ಗೆ ತಕ್ಕ ಆಹಾರ ಯಾವುದು ನಿಮಗೆ ಗೊತ್ತಾ?
ಉತ್ತರ: ನೀವು ನಿಮ್ಮ ಆಂಗಲ್‌ನಿಂದಷ್ಟೇ ಈ ವಿಚಾರವನ್ನ ನೋಡಿದ್ದೀರಿ. ಸ್ವಲ್ಪ ಆತನ ಕಡೆಯಿಂದಲೂ ನೋಡಿ. ಇವಳ್ಯಾಕಪ್ಪಾ ಇಷ್ಟೊಂದು ಮಾತಾಡ್ತಾಳೆ, ಹುಡುಗಿಯರೆಲ್ಲ ಹೀಗೇನಾ ಅಂತ ಆತ ಅಂದುಕೊಂಡಿರಲಿಕ್ಕಿಲ್ವಾ? ಇದರಿಂದ ಗಂಡಸಿನ ಆಸಕ್ತಿ ಅನಾಸಕ್ತಿಗಳು ನಿರ್ಧಾರ ಆಗಲ್ಲ. ಆತ ಕ್ರಿಟಿಕಲ್ ಕ್ಷಣಗಳಲ್ಲಿ ನಿಮ್ಮ ಕುರಿತು ಕಾಳಜಿ ತಗೊಳ್ತಾನಾ ಇಲ್ವಾ ಅಂತನ್ನೋದಷ್ಟೇ ಮುಖ್ಯ. ಭಾವನೆಗಳನ್ನು ಹೇಳೋಕೆ ಹೆಂಗಸು ಹೆಚ್ಚು ಪದಗಳನ್ನು ಬಳಸ್ತಾಳೆ. ಆದರೆ ಗಂಡಸು ಕಡಿಮೆ ಮಾತುಗಳನ್ನು ಬಳಸುತ್ತಾನೆ. ಹೆಂಗಸರ ವೊಕ್ಯಾಬುಲರಿ ಹೆಚ್ಚು. ಇದು ಪ್ರೂವ್‌ಡ್ ವಿಚಾರ. ಅಂದ ಹಾಗೆ, ಗಂಡಸರನ್ನು ಸರಿ ಮಾಡುವ ತಂಟೆಗೆ ಹೋಗಬೇಡಿ. ಅವರಲ್ಲಿ ಹೆಚ್ಚಿನವರು ಇರೋದೇ ಹಾಗೆ! ಆದರೆ ಅವರು ಹೆಚ್ಚು ಮಾತನಾಡಲು ಶುರು ಮಾಡಿದರೆ ಆಮೇಲೆ ನೀವೇ ಸಹಿಸಿಕೋಬೇಕಾಗುತ್ತೆ ಹುಷಾರ್!
ಮೈಕೈ ನೋವು ಹೋಗಲಾಡಿಸಲು ಬಿಕೆಎಸ್ ಅಯ್ಯಂಗಾರರ ಸರಳ ಯೋಗ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.