ಪೋರ್ನ್ ನಟಿಯರ ಕೆಲಸ ಬಹಿರಂಗವಾದಾಗ...

By Suvarna News  |  First Published Jul 13, 2020, 5:14 PM IST

ಪೋರ್ನ್ ಸಿನಿಮಾಗಳಲ್ಲಿ ನಟಿಸುವ ನಟಿಯರ ಕೆಲಸದ ಬಗ್ಗೆ ಅವರ ಬಂಧುಗಳಿಗೆ ಗೊತ್ತಾದಾಗ ಏನಾಯ್ತು ಗೊತ್ತಾ?


ಇತರ ಉದ್ಯೋಗಗಳ ಹಾಗಲ್ಲ ಪೋರ್ನ್‌ನಲ್ಲಿ ನಟಿಸುವುದು ಅಂದರೆ. ಅಲ್ಲಿ ನಟರು ಹೇಗೋ ಮುಜುಗರ ಇಲ್ಲದೆ ಬದುಕಿಕೊಳ್ಳಬಹುದು. ಭಾರತದಲ್ಲಿ ಸಿನಿಮಾಗಳ ಕಿಸ್ಸಿಂಗ್ ಸೀನ್, ಹಾಟ್ ಸೀನ್‌ಗಳಲ್ಲಿ ಭಾಗವಹಿಸುವುದಕ್ಕೇ ನಟಿಯರು ಅಂಜುವುದುಂಟು. ಹೀಗಿರುವಾಗ, ಸೆಕ್ಸ್ ದೃಶ್ಯಗಳಲ್ಲಿ ಪೂರ್ತಿ ನಗ್ನವಾಗಿ ಕಾಷಿಸಿಕೊಳ್ಖುವುದು ಒಂದು ಸವಾಲು. ಸಮಾಜದ ಮುಂದೆ ಅದು ಬಹಿರಂಗವಾದಾಗ, ಸಮಾಜವನ್ನು ಎದುರಿಸುವುದು ಇನ್ನೊಂದು ಸವಾಲು. 

ಭಾರತದ ಹಾಗೇ ಅಮೆರಿಕದಲ್ಲಿ ಕೂಡ, ಸಾಂಪ್ರದಾಯಿಕ ಕ್ರಿಶ್ಚಿಯನ್ ಮನೆತನಗಳಲ್ಲಿ, ಮಗಳು ಪೋರ್ನ್‌ನಲ್ಲಿ ನಟಿಸುತ್ತಾಳೆ ಎಂದು ಗೊತ್ತಾದರೆ ಕುಟುಂಬದವರಿಗೆ ತುಂಬ ಆಘಾತವಾಗುತ್ತದೆ.ಇವರಲ್ಲಿ ಹೆಚ್ಚಿನ ನಟಿಯರು ಪೋರ್ನ್ ನಟನೆಯ ಜೊತೆಗೆ ಇತರ ಕೆಲಸಗಳನ್ನೂ ಮಾಡುವವರು. ಅಂದರೆ ಹಗಲು ಮಾಲ್‌ಗಳಲ್ಲೋ, ಥಿಯೇಟರ್‌ಗಳಲ್ಲೋ ಕೆಫೆಗಳಲ್ಲೋ, ಅಥವಾ ಡಿಲಿವರಿ‌ ಹುಡುಗಿಯರಾಗಿ ದುಡಿದು, ರಾತ್ರಿ ಪೋರ್ನ್ ಫಿಲಂಗಳಲ್ಲಿ ನಟಿಸುತ್ತಾರೆ. ನಟನೆಗೆ ಬೇರೆ ಹೆಸರನ್ನೇ ಇಟ್ಟುಕೊಳ್ಳುತ್ತಾರೆ. ತಮ್ಮ ಅಸಲಿ ಅವತಾರ ಇತರ ಕಡೆ ರಿವೀಲ್ ಆದಾಗ ಮುಜುಗರ ಅನುಭವಿಸುತ್ತಾರೆ.

Tap to resize

Latest Videos

undefined

ಉದಾಹರಣೆಗೆ ನಮ್ಮ ಸನ್ನಿ ಲಿಯೋನ್ ಅನ್ನೇ ತೆಗೆದುಕೊಳ್ಳಬಹುದು. ಈಕೆ ತಾನು ಪೋರ್ನ್ ಫಿಲಂಗಳಲ್ಲಿ ನಟಿಸುತ್ತಿದ್ದೇನೆ ಎಂದು ತಂದೆ ತಾಯಿಗೆ ಹೇಳಿದಾಗ ಅವರು ಬಹಳ ಬೇಸರಪಟ್ಟುಕೊಂಡರು. ತಾಯಿ ಜೋರಾಗಿ ಅಳಲಾರಂಭಿಸಿದಳು. ನಂತರ ತಾಯಿಗೆ ಡಿಪ್ರೆಶನ್ ಆರಂಭವಾಯ್ತು. ತಂದೆ- ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ನಮ್ಮನ್ನು ಒಂದು ಮಾತು ಕೇಳಬೇಕಿತ್ತು ಎಂದು ವಿಷಾದದಿಂದ ನುಡಿದರು. ಈಕೆಯ ತಂದೆ ತಾಯಿ, ಬಂಧುಗಳ ಮನೆಗೆ ಹೋದಾಗ ತುಂಬಾ ಮುಜುಗರಕ್ಕೆ ಒಳಗಾಗುವಂತೆ ಮಗಳ ಕೆಲಸದ ಬಗ್ಗೆ ಬಂಧುಗಳು ಮಾತನಾಡುತ್ತಿದ್ದರು. ಹೀಗಾಗಿ ಅವರು ಬಂಧುಗಳಲ್ಲಿಗೆ ಹೋಗುವುದನ್ನೇ ಬಿಟ್ಟಿದ್ದರು.

ಇನ್ನೊಬ್ಬಾಕೆ, ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಕೆ. ಈಕೆ ಒಂದು ದಿನ ಮಾಲ್‌ಗೆ ಹೋದಾಗ ಅಲ್ಲಿದ್ದ ಪಡ್ಡೆ ಹುಡುಗರು ಈಕೆಯನ್ನೇ ನೋಡುತ್ತಿದ್ದರು. ನಂತರ ಅವರಲ್ಲೊಬ್ಬ, ನೀನು ಅಡಲ್ಟ್ ಫಿಲಂಗಳಲ್ಲಿ ನಟಿಸಿದ್ದೀಯಾ ಎಂದು ಕೇಳಿದ. ಆತ ಬಹುಶಃ ಇವಳ ವಿಡಿಯೋಗಳನ್ನು ನೋಡಿದ್ದಿರಬಹುದು. ಆದರೆ ಈಕೆಗೆ ತನ್ನ ಉದ್ಯೋಗದ ಜಾಗದಲ್ಲಿ ಅದು ಬಹಿರಂಗ ಆಗುವುದು ಇಷ್ಟವಿರಲಿಲ್ಲ. ಹೀಗಾಗಿ, ನನ್ನನ್ನು ಅವಮಾನ ಮಾಡ್ತಿದೀಯಾ, ಕೇಸ್ ಹಾಕ್ತೀನಿ ನೋಡು ಎಂದು ಬೆದರಿಸಿ ಓಡಿಸಿಬಿಟ್ಟಳು.

ಇನ್ನೊಬ್ಬಳು ಇನ್ನೂ ಕಿಲಾಡಿ. ಈಕೆಯ ಅಂಕಲ್ ಆಗಾಗ ಪೋರ್ನ್ ಸೈಟ್‌ಗಳನ್ನು ನೋಡುತ್ತಿರುತ್ತಾನೆ. ಆತ ಹೀಗೊಮ್ಮೆ ನೋಡುವಾಗ ಈಕೆಯ ವಿಡಿಯೋ ಸಿಕ್ಕಿದೆ. ಆತ ಈಕೆಯ ಬಳಿಗೆ ಬಂದು ವಿಚಿತ್ರವಾಗಿ ವರ್ತಿಸಲು ಆರಂಭಿಸಿದ. ಈಕೆ ತನ್ನ ಜೊತೆಗೂ ಮಲಗಲಿ ಎಂಬುದು ಅವನ ಉದ್ದೇಶವಾಗಿತ್ತು. ಆದರೆ ಈಕೆ ಮಣಿಯಲಿಲ್ಲ. ನೋಡಪ್ಪ ದೊರೆ, ಪೋರ್ನ್ ನನ್ನ ಉದ್ಯೋಗ. ಅಲ್ಲಿ ನಟಿಸಿದರೆ ನಂಗೆ ಇಂತಿಷ್ಟು ಕಾಸು ಕೊಡ್ತಾರೆ. ನಾನೇನು ಹಣಕ್ಕಾಗಿ ಕಂಡವರೊಡನೆ ಮಲಗುವ ದಂಧೆಯವಳಲ್ಲ ಅಂತ ಸರಿಯಾಗಿಯೇ ದಬಾಯಿಸಿದಳು. ಇಷ್ಟಾದರೂ ಅಂಕಲ್ ಸುಮ್ಮನಾಗಲಿಲ್ಲ. ನಿನ್ನ ಅಪ್ಪ ಅಮ್ಮನಿಗೆ ನಿನ್ನ ಬಂಡವಾಳ ಬಯಲು ಮಾಡ್ತೀನಿ ಎಂದು ಪೀಡಿಸಲು ಶುರು ಮಾಡಿದ. ಸರಿ, ಹಾಗೇ ಮಾಡು, ನೀನೂ ನಂಗೆ ಲೈಂಗಿಕ ಕಿರುಕುಳ ನೀಡಿದೆ ಅಂತ ಕೇಸ್ ಹಾಕ್ತೀನಿ ನೋಡು ಎಂದು ಪ್ರತ್ಯುತ್ತರ ನೀಡಿದಾಗ ಸುಮ್ಮನಾದ. ಹೀಗೆ ನಟಿಯರನ್ನು ಬಳಸಿಕೊಳ್ಳಲು ಬಯಸುವವರು ಜಾಸ್ತಿ. ಇದೂ ಕೂಡ ಒಂದು ಉದ್ಯೋಗ, ಇದಕ್ಕೂ ಒಂದು ಘನತೆ ಇದೆ ಎಂದು ಭಾವಿಸುವವರು ತುಂಬ ಕಡಿಮೆ.

#Feelfree: ಪೃಷ್ಠ ನೋಡಿದರೆ ಮಾತ್ರವೇ ಆಸಕ್ತಿ ಕೆರಳುತ್ತದೆ! 
ಹೆಚ್ಚಿನ ನಟಿಯರು ಅಸಾಧ್ಯ ಮುಜುಗರ ಅನುಭವಿಸುವುದು ತಮ್ಮ ಕುಟುಂಬದವರ ಮುಂದೆ. ದಿಟ್ಟವಾಗಿ ಹೇಳಿಕೊಳ್ಳುವವರು ತುಂಬ ಕಡಿಮೆ. ಹಾಗೆ ಹೇಳಿಕೊಂಡ ಒಂದಿಬ್ಬರು ನಟಿಯರು ಮನೆಯಿಂದಲೇ ಆಚೆ ದೂಡಲ್ಪಟ್ಟಿದ್ದಾರೆ. ಮನೆಯವರಿಗೆ ಬಂಧುಗಳಿಂದ ಅವಮಾನ ಇದ್ದದ್ದೇ. ಕೆಲವೊಮ್ಮೆ ಇವರ ಬಂಧುಗಳು, ಗೆಳೆಯರು ಪೋರ್ನ್ ಸೈಟ್ ನೋಡುವಾಗ ಈಕೆ ಕಾಣಿಸಿಕೊಂಡಾಗ ಬೆಚ್ಚಿ ಬೀಳುತ್ತಾರೆ. ಆದರೆ ಆ ಬಗ್ಗೆ ಮಾತಾಡಲು ಧೈರ್ಯ ಸಾಲದೆ, ಸೂಚ್ಯವಾಗಿ ತಿಳಿಸಲು ಯತ್ನಿಸುತ್ತಾರೆ. ಅದಂತೂ ಬಹಳ ತಮಾಷೆಯಾಗಿರುತ್ತೆ ಅನ್ನುತ್ತಾರೆ ಕೆಲವರು.

ಲೈಂಗಿಕ ನಿರಾಸಕ್ತಿಯೇ? ಆಹಾರವೇ ಸೆಕ್ಸ್ ಡ್ರೈವ್ ಕುಗ್ಗಿಸ್ತಿರಬಹುದು! 
ಹೆಚ್ಚಿನವರು ತಾವು ಪೋರ್ನ್‌ ನಟಿ ಅನ್ನುವ ಕಾರಣಗಳಿಂದಲೇ ಸೋಶಿಯಲ್‌ ಗ್ಯಾದರಿಂಗ್‌ಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲಿ ಯಾರಾದರೊಬ್ಬರು ಅವರನ್ನು ಪೋರ್ನ್‌ನಲ್ಲಿ ನೋಡಿದವರು ಇದ್ದೇ ಇರುತ್ತಾರೆ. ಇದು ಮುಜುಗರದ ಸನ್ನಿವೇಶ ಉಂಟುಮಾಡುತ್ತದೆ ಅನ್ನುತ್ತಾರೆ.

ಸಾಮಾನ್ಯ ಬದುಕಿಗಾಗಿ ಪೋರ್ನ್ ಇಂಡಸ್ಟ್ರಿಗೆ ಗುಡ್‌ ಬೈ ಹೇಳಿದ ಪ್ರಸಿದ್ಧ ತಾರೆಯರು
click me!