ಎಲ್ಲವೂ ಸರಿ ಹೊದ್ಮೇಲೆ ನಾವು ಊಹಿಸದ ಕಡೆಯಿಂದ ಚಿಗುರಲಿದೆಯಾ ಬದುಕು?

By Suvarna News  |  First Published May 8, 2020, 3:59 PM IST

ಮನುಷ್ಯಕುಲ ಉಳಿಯುವಂಥ ಕೆಲವು ಸನ್ನಿವೇಶಗಳನ್ನೂ ಇದೇ ಸಂದರ್ಭದಲ್ಲಿ ಪ್ರಕೃತಿ ಸೃಷ್ಟಿಸಿದೆ. ಅವುಗಳಿಂದಾಗಿಯೇ ಮುಂದಿನ ದಿನಗಳಲ್ಲಿ ನಮ್ಮ ಬದುಕು ಸಹನೀಯ ಆಗಬಹುದು. ಅವುಗಳಿಂದಾಗಿಯೇ ನಮ್ಮ ಬದುಕು ಹೊಸ ರೀತಿಯಲ್ಲಿ ಚಿಗುರಿಕೊಳ್ಳಬಹುದು. ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ.


ಎರಡು ಮೂರು ತಿಂಗಳು ಲಾಕ್‌ಡೌನ್‌, ಕೆಲಸ ಇಲ್ಲ. ಕೆಲವರ ಕೆಲಸಗಳು ಹೋಗಿವೆ. ಸಂಬಳದಲ್ಲಿ ಕಡಿತವಾಗಿವೆ, ಉದ್ಯಮಗಳು ನೆಲಕಚ್ಚಿವೆ. ಕೆಲಸಗಾರರಿಗೆ ಸಂಬಳ ಕೊಡೋಕೆ ಆಗುತ್ತಿಲ್ಲ. ಸರಕಾರಗಳೇ ದಿವಾಳಿಯಾಗಿವೆ. ಎಲ್ಲಿಂದ ಹಣ ತರುವುದು ಅಂತ ಅವುಗಳಿಗೂ ಗೊತ್ತಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲ ಹಣಕಾಸು ಚಟುವಟಿಕೆಗಳೂ ನೆಲಕಚ್ಚುವುದು ಸಹಜ ತಾನೆ?

ಹೌದು, ಆದರೆ ಮನುಷ್ಯಕುಲ ಉಳಿಯುವಂಥ ಕೆಲವು ಸನ್ನಿವೇಶಗಳನ್ನೂ ಇದೇ ಸಂದರ್ಭದಲ್ಲಿ ಪ್ರಕೃತಿ ಸೃಷ್ಟಿಸಿದೆ. ಅವುಗಳಿಂದಾಗಿಯೇ ಮುಂದಿನ ದಿನಗಳಲ್ಲಿ ನಮ್ಮ ಬದುಕು ಸಹನೀಯ ಆಗಬಹುದು. ಅವುಗಳಿಂದಾಗಿಯೇ ನಮ್ಮ ಬದುಕು ಹೊಸ ರೀತಿಯಲ್ಲಿ ಚಿಗುರಿಕೊಳ್ಳಬಹುದು. ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ.

- ಈ ಲಾಕ್‌ಡೌನ್‌ ಸಂದರ್ಭದಲ್ಲಿ ಅತ್ಯಂತ ಹೆಚ್ಚ ಮಂದಿ ಸ್ತ್ರೀಯರು ಗರ್ಭಿಣಿಯರಾಗಿದ್ದಾರೆ. ಬಹುಶಃ ಏನಿಲ್ಲವೆಂದರೂ ಜಗತ್ತಿನಲ್ಲಿ 20 ಕೋಟಿ ಮಂದಿ ಗರ್ಭಿಣಿಯರಾಗಿದ್ದಾರೆ ಎಂದು ಊಹಿಸಲಾಗಿದೆ. ಇದು ಲಾಕ್‌ಡೌನ್‌ ಸಂದರ್ಭದಲ್ಲಿ ದಂಪತಿಗಳಿಗೆ ಸಿಕ್ಕಿದ ಏಕಾಂತದ ಫಲ. ಇವೆಲ್ಲ ಮಕ್ಕಳೂ ಆರೋಗ್ಯವಂತರಾಗಿ ಜನಿಸಿದ್ದೇ ಆದರೆ, ಇನ್ನು ಒಂದೆರಡು ವರ್ಷದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ. ಮಕ್ಕಳನ್ನು ನೋಡಿಕೊಂಡು ಬದುಕಿನ ಎಲ್ಲ ದುಃಖಗಳನ್ನು ಕಳೆದುಕೊಳ್ಳುವ ದಂಪತಿಗಳ ಸಂಖ್ಯೆ ಹೆಚ್ಚಾಗಲಿದೆ. ಅದು ಒಟ್ಟಾರೆ ಸಮಾಜದ ಮನಸ್ಥಿತಿ ಮತ್ತು ಆರ್ಥಿಕ ವ್ಯವಹಾರದ ಮೇಲೆ ಪಾಸಿಟಿವ್‌ ಪರಿಣಾಮ ಬೀರಲಿದೆ. ಮಕ್ಕಳು ಹೆಚ್ಚುವುದೆಂದರೆ ವೈದ್ಯಕೀಯ ಸೇವೆ, ತಾಯ್ತನ ಸೇವೆ, ಮಕ್ಕಳ ಉತ್ಪನ್ನಗಳು, ಶಿಕ್ಷಣ ವ್ಯವಸ್ಥೆ, ಈ ಎಲ್ಲದರಲ್ಲೂ ಹೆಚ್ಚಳ ಆಗುತ್ತದಲ್ಲವೇ? ಅಂದರೆ ಇವೆಲ್ಲವೂ ಕೆಲಸ, ಉತ್ಪಾದನೆ, ಹೆಚ್ಚಿಸಲೇಬೇಕು. ಇಕಾನಮಿ ಚಿಗುರಲೇಬೇಕು.

ಈ ಮಹಿಳೆಯರ ಗರ್ಭಕ್ಕೆ ಲಾಕ್‌ಡೌನ್ ಕಾರಣ

- ಓಜೋನ್‌ ಪದರದಲ್ಲಿ ಮೂಡಿದ್ದ ದೊಡ್ಡ ದೊಡ್ಡ ತೂತುಗಳು ಮುಚ್ಚಿವೆ. ಈ ತೂತುಗಳ ಮೂಲಕ ಸೂರ್ಯನಿಂದ ಬರುತ್ತಿದ್ದ ಅತಿನೇರಳೆ ಕಿರಣಗಳು, ವಿಕಿರಣಗಳು ಈಗ ಬರುತ್ತಿಲ್ಲ. ಭೂಮಿಯಲ್ಲಿ ಬಹುತೇಕ ಎಲ್ಲ ಫ್ಯಾಕ್ಟರಿಗಳು ಕೆಲಸ ನಿಲ್ಲಿಸಿದ್ದರಿಂದ ವಾತಾವರಣ ನಿಷ್ಕಲ್ಮಷವಾಗಿದ್ದು, ಭೂಮಿಯ ಮೇಲೆ ಅಷ್ಟರ ಮಟ್ಟಿಗೆ ಆರೋಗ್ಯಕರ ಪರಿಣಾಮ ಬೀರಿದೆ. ಶುಭ್ರ ಸ್ವಚ್ಛ ವಾತಾವರಣದಲ್ಲಿ ಬದುಕುವುದರ ಮಹತ್ವವನ್ನು ಮನುಷ್ಯ ಕಂಡುಕೊಂಡಿದ್ದಾನೆ. ಅಷ್ಟರ ಮಟ್ಟಿಗೆ ಮನುಷ್ಯನ ಕಾಯಿಲೆಗಳು ಕಡಿಮೆಯಾಗಲಿವೆ. ಈ ಬೇಸಿಗೆಯಲ್ಲಿ ವಾಹನಗಳ ಓಡಾಟ, ದೂಳು, ಹೊಗೆ ಇತ್ಯಾದಿಗಳಿಂದ ಭಾರತದ ಮಹಾನಗರಗಳಲ್ಲಿ ಅಸ್ತಮಾ, ಉಸಿರಾಟದ ತೊಂದರೆಗಳು ಹೆಚ್ಚಾಗಿ ಹಲವು ಮಂದಿ ಸಾಯುತ್ತಿದ್ದರು. ಅಂಥ ಪ್ರಕರಣಗಳು ಈ ಸಂದರ್ಭದಲ್ಲಿ ವರದಿಯೇ ಆಗಿಲ್ಲ ಅಥವಾ ಕಡಿಮೆಯಾಗಿವೆ. ಗಂಗಾನದಿ ಮುಂತಾದ ನದಿಗಳು ತನ್ನಿಂತಾನೇ ಶುಭ್ರವಾಗಿವೆ. ಜಲಚರ ಜೀವಿಗಳು ನಿರಾಳವಾಗಿ ಓಡಾಡುತ್ತಿವೆ. ಮುಂದೊಂದು ದಿನ, ಎಲ್ಲ ಕೈಗಾರಿಕಾ ಚಟುವಟಿಕೆಗಳೂ ಅತಿಯಾದಾಗ, ವಾತಾವರಣ ಹಾಳಾದಾಗ ಅದನ್ನು ಸರಿಪಡಿಸಲು ಲಾಕ್‌ಡೌನ್‌ ದಾರಿ ಎಂಬುದನ್ನು ಸರಕಾರಗಳು ಅರ್ಥ ಮಾಡಿಕೊಂಡಿವೆ. 

Tap to resize

Latest Videos

undefined

ಮುಚ್ಚಿತು ಓಝೋನ್ ಪದರದ ದೊಡ್ಡ ರಂಧ್ರ

- ಕಡಿಮೆ ವಸ್ತುಗಳಲ್ಲಿ, ಅವಶ್ಯಕ ವಸ್ತುಗಳನ್ನು ಮಾತ್ರವೇ ಇಟ್ಟುಕೊಂಡು ಸಹ ಬದುಕು ನಡೆಸಬಹುದು ಎಂಬುದು ಮನುಷ್ಯನಿಗೆ ಅರ್ಥವಾಗಿದೆ. ಹೀಗಾಗಿ, ಆದಾಯ ಕಡಿಮೆ ಇದ್ದರೂ, ಅನವಶ್ಯಕ ಖರ್ಚು ಮಾಡದೆ, ಸಾಲ ಮಾಡದೆ ಬದುಕುವುದನ್ನು ಮನುಷ್ಯ ಕಲಿಯಲಿದ್ದಾನೆ.

ಯೋಗದೊಂದಿಗೆ ಕಿಕ್ ಸ್ಟಾರ್ಟ್ ಆಗಲಿ ದಿನ!

- ಕೃಷಿಯ ಮಹತ್ವ ಮನುಷ್ಯನಿಗೆ ಅರ್ಥವಾಗಿದೆ. ಈ ಲಾಕ್‌ಡೌನ್‌ ಕಾಲದಲ್ಲಿ ಮನುಷ್ಯನಿಗೆ ಬೇರೆಲ್ಲದಕ್ಕಿಂತಲೂ ಅಗತ್ಯವಾಗಿ ಬೇಕಾದದ್ದು ಕೃಷಿ ಉತ್ಪನ್ನಗಳು, ಆಹಾರ ಧಾನ್ಯಗಳು. ಎಲ್ಲರೂ ತಮ್ಮ ತಮ್ಮ ಮೂಲದ ಕೃಷಿ ಬದುಕನ್ನು ಈ ಆಪ್ತವಾಗಿ ಗ್ರಹಿಸಲು ಆರಂಭಿಸಿದ್ದಾರೆ. ಕೆಲವರಾದರೂ ಬುದ್ಧಿವಂತರು ಕೃಷಿಗೆ ಮರಳಿದರೆ, ಗ್ರಾಮೀಣ ಜೀವನ ಮತ್ತೆ ಸೊಗಸು ಪಡೆಯಲಿದೆ.

click me!