ಪ್ರೇಮಿಗಳ ನಡುವೆ ಊಟ ಆಯ್ತಾ, ತಿಂಡಿ ಆಯ್ತಾಗಳೆಲ್ಲ ವಿನಿಮಯವಾಗುತ್ತಲೇ ಇರುತ್ತವೆ. ಐ ಲವ್ಯೂ ಕೂಡಾ ಕಾಮನ್ ಎಂಬಂತಾಗಿರುತ್ತದೆ. ಆದರೆ ಅವುಗಳ ನಡುವೆ ತೂರಿ ಬರುವ ಒಂದು ಉದ್ದದ ಮೆಸೇಜ್ ನೋಡಿದಾಗ ಆಗುವ ಸಂದೇಶ ಅಷ್ಟಿಷ್ಟಲ್ಲ.
ಪ್ರೀತಿಗೆ ದೈಹಿಕವಾಗಿ ಹತ್ತಿರವಿರಲೇಬೇಕೆಂದಿಲ್ಲ. ದೂರದಲ್ಲಿದ್ದಾಗಲೂ ಭಾವನಾತ್ಮಕವಾಗಿ ಕನೆಕ್ಟ್ ಆಗಿರುವ ಅಪರೂಪದ ಎರಡು ಆತ್ಮಗಳ ಬಂಧ ಪ್ರೀತಿ. ಹಾಗಿದ್ದೂ ಕೆಲವೊಮ್ಮೆ ಒಬ್ಬರಿಗೊಬ್ಬರು ದೂರವಿರಬೇಕಾಗಿ ಬಂದಾಗ ಪ್ರೀತಿಯಿದ್ದೂ ಏನೋ ಮಿಸ್ ಆದಂತೆನಿಸಬಹುದು. ಲಾಂಗ್ ಡಿಸ್ಟೆನ್ಸ್ ಸಂಬಂಧದಲ್ಲಿದ್ದಾಗಲೂ ಅಥವಾ ಕೆಲ ಕಾಲ ದೂರವಿರಬೇಕಾಗಿ ಬಂದಾಗಲೂ ಈ ಹಂತವನ್ನು ಪ್ರಬುದ್ಧವಾಗಿ ನೀವು ನಿಭಾಯಿಸಿದರೆ ಸಂಬಂಧ ಸದಾ ತಾಜಾವಾಗಿಯೇ ಇರುತ್ತದೆ.
ಸಂಗಾತಿಯಿಂದ ದೂರವಿದ್ದಾಗ ಕೂಡಾ ಅವರಿಗೆ ಸ್ಪೆಶಲ್ ಫೀಲಿಂಗ್ ನೀಡಿ, ಮುಖದಲ್ಲಿ ನಗು ತರಿಸುವ ಕೆಲಸ ಮಾಡಬಹುದು. ಇಷ್ಟಕ್ಕೂ ಸಂಬಂಧಗಳಲ್ಲಿ ಸಣ್ಣ ಸಂಗತಿಗಳೇ ಹೆಚ್ಚು ಖುಷಿ ಕೊಡುವುದು. ಹಾಗೆ ದೂರದಲ್ಲಿರುವ ನಿಮ್ಮ ಸಂಗಾತಿಯ ಮನಸ್ಸಲ್ಲಿ ಮತ್ತಷ್ಟು ಆಳಕ್ಕಿಳಿಯಲು, ಅವರನ್ನು ಖುಷಿ ಪಡಿಸಲು ಇಲ್ಲಿವೆ ಕೆಲ ಐಡಿಯಾಗಳು.
undefined
ಮೆಸೇಜ್
ಪ್ರೇಮಿಗಳ ನಡುವೆ ಊಟ ಆಯ್ತಾ, ತಿಂಡಿ ಆಯ್ತಾಗಳೆಲ್ಲ ವಿನಿಮಯವಾಗುತ್ತಲೇ ಇರುತ್ತವೆ. ಐ ಲವ್ಯೂ ಕೂಡಾ ಕಾಮನ್ ಎಂಬಂತಾಗಿರುತ್ತದೆ. ಆದರೆ ಅವುಗಳ ನಡುವೆ ತೂರಿ ಬರುವ ಒಂದು ಉದ್ದದ ಮೆಸೇಜ್ ನೋಡಿದಾಗ ಆಗುವ ಸಂದೇಶ ಅಷ್ಟಿಷ್ಟಲ್ಲ. ನಿಮ್ಮ ಸಂಗಾತಿಗಾಗಿ, ಅವರನ್ನು ನೀವು ಮಿಸ್ ಮಾಡಿಕೊಳ್ಳುವ ಬಗ್ಗೆ, ಅವರ ಯಾವೆಲ್ಲ ಗುಣಗಳಿಷ್ಟ, ಅವರು ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ, ನಿಮ್ಮ ಮೊದಲ ಭೇಟಿ ಸಂಬಂಧವಾಗಿ ಬೆಳೆದದ್ದು ಹೇಗೆ ಎಂಬುದನ್ನೆಲ್ಲ ಉದ್ದಕ್ಕೆ ಟೈಪ್ ಮಾಡಿ ಅಗತ್ಯವಾದ ಎಮೋಜಿಗಳನ್ನೆಲ್ಲ ಬಳಸಿ ಕಳಿಸಿ. ಈ ಸಂದೇಶವನ್ನು ಅವರೆಂದಿಗೂ ಡಿಲೀಟ್ ಮಾಡಲಾರರು. ಅಷ್ಟೇ ಏಕೆ, ನೂರು ಸಾರಿಯಾದರೂ ಓದಿ ಖುಷಿ ಪಡುತ್ತಾರೆ. ಇದನ್ನು ನೀವು ಮೇಲ್ ಕೂಡಾ ಮಾಡಬಹುದು.
ಹಾಡು ರೆಕಾರ್ಡ್ ಮಾಡಿ ಕಳಿಸಿ
ನಿಮ್ಮ ಪ್ರೀತಿಪಾತ್ರರಿಗಾಗಿ ಅವರಿಗೆ ಸೂಟ್ ಆಗುವ ಹಾಡೊಂದನ್ನು ರೆಕಾರ್ಡ್ ಮಾಡಿ ಕಳಿಸಿ. ನೀವು ಪದಗಳಲ್ಲಿ ಜೋಡಿಸಲಾಗದ್ದನ್ನು ಕೆಲವು ಹಾಡುಗಳು ಸರಿಯಾಗಿ ಹೇಳುತ್ತವೆ. ನಿಮಗಾಗಿಯೇ ಬರೆದಂತಿರುತ್ತವೆ. ಈ ಹಾಡುಗಳನ್ನು ಅವರು ದೂರದಲ್ಲಿ ಕುಳಿತು ಕೇಳುವಾಗ ಖಂಡಿತಾ ತಾವೇ ಹೀರೋ/ ಹೀರೋಯಿನ್ ಆಗಿ ಕಲ್ಪಿಸಿಕೊಂಡು ಖುಷಿ ಪಡಬಲ್ಲರು.
ನಿಮ್ಮಿಬ್ಬರ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿ
ನೀವಿಬ್ಬರೂ ದೂರವಿರುವ ಸಂದರ್ಭದಲ್ಲಿ ನಿಮ್ಮಿಬ್ಬರ ರೊಮ್ಯಾಂಟಿಕ್ ಫೋಟೋವೊಂದನ್ನು ಸೋಷ್ಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ. ಅದಕ್ಕೊಂದು ಚೆಂದದ ಕ್ಯಾಪ್ಶನ್ ಕೊಡುವುದನ್ನು ಮರೀಬೇಡಿ. ಲೈಕ್ ಹಾಗೂ ಕಾಮೆಂಟುಗಳು ಬಂದೆಂತೆಲ್ಲ ಇಬ್ಬರೂ ಎಂಜಾಯ್ ಮಾಡಬಹುದು.
ಉಡುಗೊರೆ ಕಳುಹಿಸಿ
ದೂರ ದೂರವಿದ್ದಾಗ ಮೂವಿ ಡೇಟ್ಸ್, ಡಿನ್ನರ್ ಡೇಟ್ಸ್ ಎಂಬ ಮುಂತಾದ ಸ್ಪೆಶಲ್ ಸಮಯವನ್ನೆಲ್ಲ ಕಳೆದುಕೊಳ್ಳಬೇಕಾಗಿ ಬರುತ್ತದೆ. ಹಾಗಾಗಿ, ಈ ಕೊರತೆಗಳನ್ನು ನೀಗಿಸಲು, ಬುಕ್ಸ್, ಬಟ್ಟೆ, ಸ್ಪೆಶಲ್ ಗ್ರೀಟಿಂಗ್ ಕಾರ್ಡ್ ಹೀಗೆ ಅವರಿಗೆ ಸಂತೋಷ ಕೊಡುವಂಥ ಉಡುಗೊರೆಗಳನ್ನು ಪಾರ್ಸೆಲ್ ಮಾಡಬಹುದು. ಇಲ್ಲವೇ ಅವರಿರುವ ಅಡ್ರೆಸ್ ಕೊಟ್ಟು ಆನ್‌ಲೈನ್ ಡೆಲಿವರಿ ಮಾಡಿಸಬಹುದು. ಇದು ಸರ್ಪ್ರೈಸ್ ಆಗಿದ್ದಷ್ಟೂ ಒಳ್ಳೆಯದು.
ದಿನಾಂತ್ಯದಲ್ಲೊಂದು ಕಾಲ್
ಯಾವುದೇ ಸಂಬಂಧಕ್ಕಾದರೂ ಉತ್ತಮ ಸಂವಹನ ಬೇಕೇ ಬೇಕು. ಅದರಲ್ಲೂ ಲಾಂಗ್ ಡಿಸ್ಟೆನ್ಸ್ ರಿಲೇಶನ್ಶಿಪ್‌ಗೆ ಇದು ಅತ್ಯಗತ್ಯ. ಹಾಗಾಗಿ, ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕರೆ ಮಾಡಿಕೊಂಡು ಆದಿನದ ಆಗುಹೋಗುಗಳನ್ನೆಲ್ಲ ಮಾತಾಡಿಕೊಳ್ಳಿ. ಯಾವೆಲ್ಲ ಸಂದರ್ಭದಲ್ಲಿ ಅವರನ್ನು ನೆನೆಸಿಕೊಂಡಿರಿ ಎಂಬುದನ್ನು ಹೇಳಿ. ಇದು ನೀವು ಅವರ ನೆನಪಿನಲ್ಲೇ ದಿನ ದೂಡುತ್ತಿರುವುದನ್ನು ತಿಳಿಸುತ್ತದೆ. ಈ ಕರೆಗಾಗಿ ಸಮಯ ನಿಗದಿ ಮಾಡಿಕೊಳ್ಳಿ. ಪ್ರತಿದಿನ ಈ ಕರೆ ಮಾಡುವ ಸಮಯಕ್ಕಾಗಿ ಕಾಯುವಂತಾಗಿರುತ್ತದೆ ನೋಡಿ ಬೇಕಾದರೆ.
ಸರ್ಪ್ರೈಸ್ ಭೇಟಿ
ನಿಮಗೆ ಸಾಧ್ಯವಾದ ದಿನ ಸಂಗಾತಿಯಿರುವ ಜಾಗಕ್ಕೆ ಸರ್ಪ್ರೈಸ್ ಆಗಿ ಹೋಗಿ ಅವರೆದುರು ನಿಂತು ಬಿಡಿ. ಇದಕ್ಕಿಂತಾ ಖುಷಿಯ ವಿಚಾರ ಅವರಿಗೆ ಇನ್ನೊಂದಿರಲು ಸಾಧ್ಯವೇ ಇಲ್ಲ. ಇದನ್ನು ಅನುಭವಿಸಿಯೇ ತೀರಬೇಕು.