ಮನೆಯಲ್ಲಿ ಪತಿಯ ಸ್ಥಾನದಲ್ಲಿದ್ದ ವ್ಯಕ್ತಿ ಏಕಾಏಕಿ ಹೆಣ್ಮಕ್ಕಳಂತೆ ಬಟ್ಟೆತೊಟ್ಟು, ಮಹಿಳೆಯಂತೆ ನಡೆದುಕೊಂಡ್ರೆ ಹೇಗಾಗ್ಬೇಡ? ಅಪ್ಪ ಅದ್ಕೊಂಡಿದ್ದ ಮಕ್ಕಳ ಮುಂದೆ ಅಮ್ಮ ಬಂದು ನಿಂತ್ರೆ? ಇಂಥಹದ್ದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ.
ಪ್ರೀತಿಸುವ ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರ ಖುಷಿಗಾಗಿ ಏನು ಬೇಕಾದ್ರೂ ಮಾಡ್ತಾರೆ. ಪ್ರೀತಿಸುವ ವ್ಯಕ್ತಿಗಳು ಸಂತೋಷವಾಗಿರಬೇಕು ಎಂಬುದು ಅವರ ಮೂಲ ಉದ್ದೇಶವಾಗಿರುತ್ತದೆ. ಇದೇ ಪ್ರೀತಿಗಾಗಿ ಅವರು ಜೀವನದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ತಾರೆ. ಸದ್ಯ ಇಂಥದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ಅವರಿಬ್ಬರು ಎಲ್ಲ ಜೋಡಿಯಂತೆ ಮದುವೆಯಾಗಿದ್ದರು. ಸುಖ ಸಂಸಾರ ನಡೆಸುತ್ತಿದ್ದರು. ಮೂರು ಮಕ್ಕಳ ಪೋಷಕರಾಗಿ ಇವರು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದ್ರೆ ಮದುವೆಯಾದ 18 ವರ್ಷಕ್ಕೆ ಎಲ್ಲವೂ ಬದಲಾಯ್ತು. ಸಮಾಜ ನಂಬಲಾಗದ ಬದಲಾವಣೆಯನ್ನು ಪತಿ, ಪತ್ನಿ ಸ್ವೀಕರಿಸಿದ್ರು. ಎಲ್ಲವೂ ಸರಿಯಾಗಿದೆ ಎನ್ನುವಂತೆ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಕಥೆ ಅಮೆರಿಕ (America) ದ ಉತಾಹ್ ನಿವಾಸಿಗಳಾದ ಶಾಯ್ ಸ್ಕಾಟ್ ಮತ್ತು ಅಮಂಡಾ ಅವರ ಬಗ್ಗೆ. ಮೂರು ವರ್ಷದಲ್ಲಿದ್ದಾಗಲೇ ಶಾಯ್ ಎಲ್ಲರಂತೆ ಖುಷಿ (Happy) ಯಾಗಿರಲಿಲ್ಲ. ಆತನಿಗೆ ದೊಡ್ಡವನಾಗುವವರೆಗೂ ಏನೂ ಅರ್ಥವಾಗ್ಲಿಲ್ಲ. ತನ್ನ 39ನೇ ವಯಸ್ಸಿನಲ್ಲಿ ಶಾಯ್ ಸ್ಕಾಟ್ ಮದುವೆ (Marriage) ಯಾದ. ವಿಡಿಯೋ ಪ್ರಕಾರ ಆತ ಹಾಗೂ ಅಮಂಡಾ 2006ರಲ್ಲಿ ವಿವಾಹವಾದ್ರು. 2012ರಲ್ಲಿ ದಂಪತಿಗೆ ಒಂದು ಹೆಣ್ಣು ಮಗುವಾಯ್ತು. ಎರಡು ವರ್ಷಗಳ ನಂತ್ರ ಗಂಡು ಮಗುವಿಗೆ ಪಾಲಕರಾದ್ರು. ನಂತ್ರ 2018ರಲ್ಲಿ ಮೂರನೇ ಮಗುವಿಗೆ ಅಮಂಡಾ ಜನ್ಮ ನೀಡಿದಳು.
ಉಪ ಮುಖ್ಯಮಂತ್ರಿ, ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದ ಇಂಟ್ರೆಸ್ಟಿಂಗ್ ಸ್ಟೋರಿ!
ಶಾಯ್ ಬಯಸಿದ್ದೆಲ್ಲ ಇದ್ರೂ ಆತನಿಗೆ ತೃಪ್ತಿ ಇರಲಿಲ್ಲ. ತನ್ನ ಜೀವನದಲ್ಲಿ ಯಾವುದೂ ಸರಿ ಇಲ್ಲ ಎನ್ನುವ ನೋವಿನಲ್ಲಿದ್ದ. ಕೊನೆಯಲ್ಲಿ ತನ್ನ ಮನಸ್ಸಿನ ಮಾತನ್ನು ಹೇಳಿಕೊಂಡ. ನನಗೆ ಒಂದು ಮಹಿಳೆಯಂತೆ ಜೀವನ ನಡೆಸಬೇಕೆಂಬ ಆಸೆ ಇದೆ ಎಂದು ಶಾಯ್ ಸ್ಕಾಟ್, ಅಮಂಡಾ ಮುಂದೆ ಹೇಳಿದ್ದ. ಅಮಂಡಾ, ಪತಿಯನ್ನು ತುಂಬಾ ಪ್ರೀತಿ ಮಾಡ್ತಿದ್ದಳು. ಈ ಬಗ್ಗೆ ಆಲೋಚನೆ ಮಾಡಲು ಸಮಯ ತೆಗೆದುಕೊಂಡ್ಲು. ಕೊನೆಯಲ್ಲಿ ಪತಿಯ ಆಸೆಯನ್ನು ಈಡೇರಿಸುವ ನಿರ್ಧಾರಕ್ಕೆ ಬಂದ್ಲು. ಪತಿಯನ್ನು ಕಳೆದುಕೊಳ್ಳುವ ಬೇಸರವಿದ್ದರೂ ಶಾಯ್ ಆಸೆಯೇ ಆಕೆಯ ಆಸೆಯಾಗಿತ್ತು. ಹಾಗಾಗಿ ಆತನಿಗೆ ಲಿಂಗ ಬದಲಿಸಿಕೊಳ್ಳಲು ಅನುಮತಿ ನೀಡಿದಳು.
ಆ ನಂತ್ರ ಶಾಯ್ ತನ್ನ ಲಿಂಗ ಬದಲಿಸಿಕೊಂಡ. ಅಮಂಡಾ ಪತಿ ಶಾಯ್ ಪತ್ನಿಯಾಗಿ ಬದಲಾದ. ನಾನು ಅಮಂಡಾ ಮುಂದೆ ಹೇಳಲು ತುಂಬಾ ಭಯಗೊಂಡಿದ್ದೆ. ಆಕೆ ಅದನ್ನು ಹೇಗೆ ಸ್ವೀಕರಿಸುತ್ತಾಳೆ ಎಂಬ ಆತಂಕವಿತ್ತು. ಆದ್ರೆ ಮೊದಲ ಬಾರಿ ಈ ವಿಷ್ಯವನ್ನು ಆಕೆ ಮುಂದೆ ಹೇಳಿದಾಗ ನಿರಾಳನಾದೆ ಎಂದು ಶಾಯ್ ಹೇಳಿದ್ದಾನೆ. ನಂತ್ರ ಅಮಂಡಾ ನನ್ನನ್ನು ಅರ್ಥ ಮಾಡಿಕೊಂಡ್ಲು. ಲಿಂಗ ಬದಲಾವಣೆಗೆ ಅನುಮತಿ ನೀಡಿದಳು ಎಂದ ಶಾಯ್, ಲಿಂಗ ಪರಿವರ್ತನೆ ನಂತ್ರ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ತೆಗೆದುಕೊಂಡಿರೋದಾಗಿ ಶಾಯ್ ಹೇಳಿದ್ದಾನೆ. ಮೇಯೊ ಕ್ಲಿನಿಕ್ ಪ್ರಕಾರ, ಲಿಂಗ ಡಿಸ್ಫೊರಿಯಾ ಎನ್ನುವುದು ವ್ಯಕ್ತಿಯ ಲಿಂಗ ಗುರುತಿಸುವಿಕೆ ಅವರು ಹುಟ್ಟಿನಿಂದಲೇ ನಿಗದಿಪಡಿಸಿದ ಲಿಂಗದೊಂದಿಗೆ ಹೊಂದಿಕೆಯಾಗದಿದ್ದಾಗ ಅನುಭವಿಸುವ ಅಸ್ವಸ್ಥತೆಯ ಭಾವನೆಯಾಗಿದೆ.
ಗಂಡನಿಗಾಗಿ 9 ತಿಂಗಳು ಗರ್ಭಿಣಿ ಮಾಡಿದೆಂಥಾ ಕೆಲಸ ಗೊತ್ತಾ? ನೆಟ್ಟಿಗರು ಫುಲ್ ಶಾಕ್!
ಶಾಯ್, 2023ರಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾನೆ. ತನ್ನ ಮುಖ ಹಾಗೂ ದೇಹವನ್ನು ಹುಡುಗಿಯಂತೆ ಬದಲಿಸಿಕೊಂಡಿದ್ದಾನೆ. ಈಗಲೂ ಅವರೆಲ್ಲ ಒಟ್ಟಿಗಿದ್ದಾರೆ. ಇಬ್ಬರು ಅಮ್ಮಂದಿರ ಜೊತೆ ಮಕ್ಕಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಕಥೆ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿದ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ಮಕ್ಕಳಿಗೆ ಇದ್ರಿಂದ ಮೋಸವಾಗಿದೆ ಎಂದು ಕೆಲವರು ಹೇಳಿದ್ದಾರೆ. ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆಂದು ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಆದ್ರೆ ಸಂದರ್ಭ ಯಾವುದೇ ಇರಲಿ, ಎಲ್ಲರೂ ಒಟ್ಟಿಗಿರುವ ಈ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿದವರ ಸಂಖ್ಯೆ ಹೆಚ್ಚಿದೆ.