ಸಂಗಾತಿ ಗರ್ಭಿಣಿಯಾಗಿದ್ದಾಗ ಸೆಕ್ಸ್ ಮಾಡೋದು ಎಷ್ಟು ಸೇಫ್?

By Mahmad RafikFirst Published Jun 10, 2024, 6:06 PM IST
Highlights

ಈ ಸಮಯದಲ್ಲಿ ಲೈಂಗಿಕ ಪ್ರಕ್ರಿಯೆ ಹೊಂದುವ ಬಗ್ಗೆ ಎಚ್ಚರಿಕೆಯಿಂದಿರಬೇಕು. ಇತ್ತೀಚೆಗೆ ವೈದ್ಯರು ಸಹ ಮೊದಲ ಮೂರು ತಿಂಗಳು ಲೈಂಗಿಕತೆ ಹೊಂದಬಾರದು ಎಂದು ಸಲಹೆ ನೀಡುತ್ತಿರುತ್ತಾರೆ. ಗರ್ಭಾವಸ್ಥೆಯಲ್ಲಿ ಲೈಂಗಿಕತೆ ಸಂಪೂರ್ಣ ಸುರಕ್ಷಿತ ಎಂಬುವುದು ಡಾ ಜಯರಾಮನ್ ಹೇಳುತ್ತಾರೆ. 

ಜೀವನದಲ್ಲಿ ತಂದೆ-ತಾಯಿ (Parenthood) ಸ್ಥಾನ ಎಲ್ಲದಕ್ಕಿಂತ ದೊಡ್ಡದು ಎಂದು ಹೇಳುತ್ತಾರೆ. ಇಂದು ಯಾವುದೇ ದಂಪತಿ (Couple) ಹೊಸ ಅತಿಥಿಯನ್ನು ತಮ್ಮ ಜೀವನದಲ್ಲಿ ಬರಮಾಡಿಕೊಳ್ಳುವ ಮೊದಲು ಮಗುವಿನ ಭವಿಷ್ಯದ ಕುರಿತು ಚಿಂತಿಸುತ್ತಾರೆ. ಇದು ದಂಪತಿ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ. ಅತಿಥಿ ಆಗಮನದ ಒಂಭತ್ತು ತಿಂಗಳು ದಂಪತಿಗೆ ಶತಮಾನಗಳು ಕಳೆದ ಅನುಭವ ಉಂಟಾಗುತ್ತದೆ. ಪತ್ನಿ ಗರ್ಭಿಣಿಯಾದಾಗ ಆಕೆಯನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಪತಿಯ ಮೇಲಿರುತ್ತದೆ. ಇಂತಹ ಸಂದರ್ಭದಲ್ಲಿ ಗರ್ಭಿಣಿ ಪತ್ನಿ ಜೊತೆ ಲೈಂಗಿಕ ಸಂಪರ್ಕ ನಡೆಸಬೇಕಾ ಅಥವಾ ಬೇಡವಾ ಅನ್ನೋ ಗೊಂದಲ ಬಹುತೇಕ ಪುರುಷರಲ್ಲಿ ಉಂಟಾಗುತ್ತದೆ.

ಗರ್ಭಾವಸ್ಥೆ ಸಮಯದಲ್ಲಿ ಲೈಂಗಿಕ ಸಂಬಂಧ ಹೊಂದುವುದರಿಂದ ಇಬ್ಬರ ನಡುವಿನ ಕಾಳಜಿ ಮತ್ತು ನಂಬಿಕೆ ಹೆಚ್ಚಾಗುತ್ತೆ. ಈ ದೈಹಿಕ ಸಂಬಂಧ ಇಬ್ಬರನ್ನು ಭಾವನಾತ್ಮಕವಾಗಿ ಮತ್ತಷ್ಟು ಹತ್ತಿರವಾಗಿಸುತ್ತದೆ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪತಿಯಲ್ಲಿ ಪತ್ನಿಯ ಬಗೆಗಿನ ಕಾಳಜಿಯನ್ನು ಹೆಚ್ಚಳ ಮಾಡುತ್ತದೆ ಎಂದು ಆರೋಗ್ಯ ತಜ್ಞೆ ಡಾ.ನೀರಜಾ ಅಗರ್ವಾಲ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

Latest Videos

ಇನ್ನು ಗರ್ಭಿಣಿಯರಲ್ಲಿಯೂ ಧನಾತ್ಮಕ ಚಿಂತನೆಗಳಿಗೆ ಇದು ಅವಕಾಶ ಮಾಡಿಕೊಡುತ್ತದೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸೋದರಿಂದ ಪತಿಯ ಮೇಲಿನ ಆಕರ್ಷಣೆ ಮತ್ತು ಭರವಸೆಯನ್ನು ಹೆಚ್ಚಿಸುತ್ತದೆ ಈ ಒಂದು ಪ್ರಕ್ರಿಯೆ ಅನ್ಯೋನ್ಯತೆಯು ಆಕ್ಸಿಟೋಸಿನ್  ಬಿಡುಗಡೆ ಮಾಡುತ್ತದೆ. ಇದನ್ನು 'ಪ್ರೀತಿಯ ಹಾರ್ಮೋನ್' ಎಂದು ಕರೆಯಲಾಗುತ್ತದೆ. ಇದು ಗರ್ಭಿಣಿಯರಲ್ಲಿ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಡಾ.ನೀರಜಾ ಹೇಳುತ್ತಾರೆ. 

ಸೆಕ್ಸ್‌ನಿಂದ ಸಡನ್ನಾಗಿ ದೂರವುಳಿದರೆ ಇಷ್ಟೆಲ್ಲ ಸಮಸ್ಯೆಯಾಗುತ್ತಾ?!

ಈ ಸಮಯದಲ್ಲಿ ಸೆಕ್ಸ್ ಎಷ್ಟು ಸೇಫ್? 

ಗರ್ಭಾವಸ್ಥೆಯು ಸರಳವಾಗಿದ್ದಾಗ ಎಲ್ಲಾ ತ್ರೈಮಾಸಿಕದಲ್ಲಿಯೂ ಲೈಂಗಿಕ ಸಂಪರ್ಕ ಹೊಂದುವುದು ಸುರುಕ್ಷಿತ. ದೈಹಿಕ ಸಂಬಂಧ ಆಮ್ನಿಯೋಟಿಕ್ ಚೀಲ ಮತ್ತು ಗರ್ಭಾಶಯದ ಬಲವಾದ ಸ್ನಾಯುಗಳು  ಮಗುವನ್ನು ರಕ್ಷಿಸುತ್ತವೆ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆ ಡಾ ಅಪೂರ್ವ ಗುಪ್ತಾ ಹೇಳುತ್ತಾರೆ. 

ಗರ್ಭಿಣಿಯಾಗಿದ್ದ ಸಂಭೋಗ ಹೊಂದುವುದು ಒಂದು ಸಾಮಾನ್ಯ ಪ್ರಕಿಯೆ ಮತ್ತು ಸುರಕ್ಷಿತವಾಗಿದೆ. ಆದ್ರೆ ಗರ್ಭಾವಸ್ಥೆಯಲ್ಲಿ ಲೈಂಗಿಕತೆ ಹೊಂದುವುದು ತಪ್ಪು ಎಂಬ ತಿಳುವಳಿಕೆ ಇದೆ. ಆದ್ರೆ ಮೊದಲ ಮೂರು ತಿಂಗಳು ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಸಮಯದಲ್ಲಿ ಲೈಂಗಿಕ ಪ್ರಕ್ರಿಯೆ ಹೊಂದುವ ಬಗ್ಗೆ ಎಚ್ಚರಿಕೆಯಿಂದಿರಬೇಕು. ಇತ್ತೀಚೆಗೆ ವೈದ್ಯರು ಸಹ ಮೊದಲ ಮೂರು ತಿಂಗಳು ಲೈಂಗಿಕತೆ ಹೊಂದಬಾರದು ಎಂದು ಸಲಹೆ ನೀಡುತ್ತಿರುತ್ತಾರೆ. ಗರ್ಭಾವಸ್ಥೆಯಲ್ಲಿ ಲೈಂಗಿಕತೆ ಸಂಪೂರ್ಣ ಸುರಕ್ಷಿತ ಎಂಬುವುದು ಡಾ ಜಯರಾಮನ್ ಹೇಳುತ್ತಾರೆ. 

ಸಿಕ್ಕಾಪಟ್ಟೆ ಸೆಕ್ಸ್ ಮಾಡಿದ್ರೆ ಹೆಂಗಸರಿಗೆ ಈ ಸಮಸ್ಯೆ ಆಗಬಹುದು, ನೋಡಿ

ಅಪಾಯವನ್ನು ಅಲ್ಲಗಳೆಯುವಂತಿಲ್ಲ

ಕೆಲವೊಮ್ಮೆ ಗರ್ಭಿಣಿ ಆರೋಗ್ಯ ಸೂಕ್ಷ್ಮವಾಗಿದ್ದರೆ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ರಕ್ತಸ್ರಾವ ಸಂಭವಿಸುವ ಸಾಧ್ಯತೆಗಳಿರುತ್ತವೆ. ಈ ರಕ್ತಸ್ರಾವವನ್ನು ವೈದ್ಯಕೀಯ ಭಾಷೆಯಲ್ಲಿ ಸಬ್‌ಕೋರಿಯಾನಿಕ್ ಬ್ಲೀಡ್ ಎಂದು ಕರೆಯಲಾಗುತ್ತದೆ. ಇದು ಮುಂದೆ ಗರ್ಭಪಾತಕ್ಕೂ ಕಾರಣವಾಗಬಹುದು. ದೈಹಿಕ ಸಂಪರ್ಕಕ್ಕೆ ಬರೋ ಸಂಗಾತಿ ಯಾವುದಾರೂ ಸೋಂಕು ಅಥವಾ ರೋಗಕ್ಕೆ ತುತ್ತಾಗಿದ್ದರೆ ಅದು ಮಹಿಳೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ ಎಂದು ಡಾ.ಜಯರಾಮನ್ ವಿವರಣೆ ನೀಡುತ್ತಾರೆ. ಗರ್ಭಿಣಿಯನ್ನು ಪರೀಕ್ಷಿಸಿರುವ ವೈದ್ಯರು ಇಂತಹ ವಿಷಯಗಳ ಬಗ್ಗೆ ಮಹಿಳೆಯ ಸಂಗಾತಿಯ ಗಮನಕ್ಕೆ ತರುತ್ತಾರೆ. 

click me!