ಸಲಿಂಗಿ ಸಮುದಾಯ: ಪುರಾಣಗಳೇ ಒಪ್ಪಿದ್ದನ್ನು ನಮಗೆ ಒಪ್ಪಿಕೊಳ್ಳಲೇನು ಅಡ್ಡಿ?

By Suvarna News  |  First Published May 5, 2020, 5:48 PM IST

ಬಹಳ ಮುಂದುವರಿದವರು ಎಂದು ಹೇಳಿಕೊಳ್ಳುವವರೂ ಸಲಿಂಗಿಗಳನ್ನು, ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವುದು ಕಷ್ಟವೆನ್ನುತ್ತಾರೆ. ಆದರೆ, ನಮ್ಮ ಪುರಾಣಗಳನ್ನು ಕೆದಕಿದರೆ ಅವರಾಗಲೇ ಸಲಿಂಗಿಗಳನ್ನು ಒಪ್ಪಿಯಾಗಿತ್ತು. 


ಭಾರತದ ಕಾನೂನು ಸೆಕ್ಷನ್ 377 ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿದ್ದರೂ ಎಲ್‌ಜಿಬಿಟಿಕ್ಯೂ ಸಮುದಾಯವನ್ನು ಸಮಾಜ ಇನ್ನೂ ಒಪ್ಪಿಕೊಂಡಿಲ್ಲ. ಸಲಿಂಗಿಗಳನ್ನು ಜನರು ವಿಚಿತ್ರವಾಗಿ ನೋಡಿದರೆ ತೃತೀಯ ಲಿಂಗಿಗಳನ್ನಂತೂ ಈ ಸಮಾಜಕ್ಕೆ ಸೇರಿದವರಲ್ಲ ಎಂಬಂತೆ ನಡೆಸಿಕೊಳ್ಳುತ್ತದೆ. ಅದರಲ್ಲೂ ಹೆಚ್ಚು ಧಾರ್ಮಿಕ ಮನೋಭಾವದವರು, ದೇವರು ಇದನ್ನು ಹೀಗೆ ಸೃಷ್ಟಿ ಮಾಡಿರಲಿಕ್ಕಿಲ್ಲ ಎನ್ನುತ್ತಾರೆ. ಆದರೆ, ಈ ಯೋಚನೆಯನ್ನೊಮ್ಮೆ ವಿಮರ್ಶೆಗೆ ಹಚ್ಚಬೇಕಿದೆ. ಏಕೆಂದರೆ ಪುರಾಣಗಳೇ ಈ ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಂಡಿದ್ದವು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. 

ಈ ಗರ್ಭ ನಿರೋಧಕ ಆಯ್ಕೆಗಳ ಬಗ್ಗೆ ನಿಮಗೆ ತಿಳಿದಿರಲಿ

ಹೌದು, ಮುಂದುವರಿದವರು  ಎಂದುಕೊಂಡ ನಾವಿನ್ನೂ ನಮ್ಮ ಯೋಚನೆಗಳಲ್ಲಿ, ವರ್ತನೆಯಲ್ಲಿ ಎಷ್ಟು ಹಿಂದೆ ಬಿದ್ದಿದ್ದೇವೆಂಬುದನ್ನು ತಿಳಿಯಲು ಸ್ವಲ್ಪ ಹಿಂದೆ ಹೋಗಿ ಬರೋಣ. ಏಕೆಂದರೆ ಹಿಂದೂ ಪುರಾಣಪುಣ್ಯಕತೆಗಳಲ್ಲಿ ಹಲವೆಡೆ ಲೈಂಗಿಕ ಅಲ್ಪಸಂಖ್ಯಾತರ ವಿಷಯಗಳು ಸಾಮಾನ್ಯವೆಂಬಂತೆ ಬರುತ್ತವೆ. ಕೆಲ ದೇವಾಲಯಗಳು ಕೂಡಾ ಸಲಿಂಗ ಕಾಮವನ್ನು ಕೆತ್ತನೆಯಲಲ್ಲಿ ಹೊಂದಿವೆ. ಇವೆಲ್ಲವೂ ಅಂದಿನ ಸಮಾಜ ಇವರನ್ನೆಲ್ಲ ಒಪ್ಪಿಕ್ಕೊಂಡಿತ್ತು ಎಂಬುದಕ್ಕೆ ನಿದರ್ಶನವಲ್ಲವೇ?

Latest Videos

undefined

ಪುರಿ ಜಗನ್ನಾಥ ದೇವಾಲಯ
ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಕಲ್ಲುಗಳ ಮೇಲಿನ ಕೆತ್ತನೆಯಲ್ಲಿ ಹಲವಾರು ವಿಷಯಗಳನ್ನು ಕಾಣಬಹುದು. ಸೇನಾನಿಗಳು, ದೇವರು, ದೇವತೆಗಳು, ರಾಕ್ಷಸರು ಹಾಗೂ ಆಧುನಿಕ ಸಮಾಜ ಕಾನೂನುಬಾಹಿರವೆಂದೂ, ಪ್ರಕೃತಿಗೆ ವಿರುದ್ಧವೆಂದೂ ಭಾವಿಸುವ ಸಲಿಂಗಿಗಳ ಕಾಮ ಮತ್ತು ಪ್ರಾಣಿಗಳೊಂದಿಗೆ ಲೈಂಗಿಕ ಸಂಪರ್ಕವನ್ನೂ ಈ ಕೆತ್ತನೆಗಳು ಒಳಗೊಂಡಿವೆ. 

ಖಜುರಾಹೋ ದೇವಾಲಯ
ಈ ದೇವಾಲಯಕ್ಕೆ ಖ್ಯಾತಿ ತಂದುಕೊಟ್ಟಿರುವುದೇ ಇದರ ಕಲ್ಲಿನ ಗೋಡೆಗಳ ಮೇಲಿರುವ ಉನ್ಮತ್ತ ಸ್ಥಿತಿಯ ವಿವಿಧ ಶಿಲಾ ಕೆತ್ತನೆಗಳು. ಈ ಕೆತ್ತನೆಗಳಲ್ಲಿ ರಾಜರ ಲೈಂಗಿಕ ಚಟುವಟಿಕೆಗಳು, ಗ್ರೂಪ್ ಸೆಕ್ಸ್, ಸಲಿಂಗ ಕಾಮ ಎಲ್ಲವನ್ನೂ ಕಾಣಬಹುದು. ಇವುಗಳಲ್ಲಿ ಹೆಣ್ಣು ಸಲಿಂಗಿಗಳ ಕೆತ್ತನೆಗಳು ಬಹಳಷ್ಟಿದ್ದು, ಪುರುಷ ಸಲಿಂಗಿಗಳ ಕೆತ್ತನೆಗಳು ವಿರಳವಾಗಿವೆ. ಇವು ಅಂದಿನ ಕಾಲದ ಸಾಮಾನ್ಯ ಜನಜೀವನದ ಲೈಂಗಿಕ ಬದುಕನ್ನೇ ಬಿಂಬಿಸುತ್ತದೆಯಲ್ಲವೇ? ಅಂದ ಮೇಲೆ ಸಲಿಂಗಿಗಳನ್ನು ಅಂದಿನ ಸಮಾಜ ಒಪ್ಪಿತ್ತೆಂದೂ, ಹೊಸ ತಲೆಮಾರಷ್ಟೇ ಇವನ್ನು ವಿರೋಧಿಸಿದೆ ಎಂದೂ ಆಯಿತಲ್ಲವೇ?

ವಾಲ್ಮೀಕಿ ರಾಮಾಯಣ
ವಾಲ್ಮೀಕಿ ಮಹರ್ಷಿ ಬರೆದ ರಾಮಾಯಾಣದಲ್ಲಿ ಒಂದು ಕಡೆ ಹೀಗಿದೆ; ಹನುಮಂತನು ಲಂಕೆಯಲ್ಲಿ ಹೆಣ್ಣು ರಾಕ್ಷಣಸಿಯೊಬ್ಬಳು ಮತ್ತೊಬ್ಬ ಹೆಣ್ಣಿಗೆ ಮುತ್ತನ್ನು ಕೊಡುತ್ತಾ ತಬ್ಬಿಕೊಂಡು ಮುದ್ದಾಡುತ್ತಿದ್ದುದ್ದನ್ನು ನೋಡಿದ್ದಾಗಿ ರಾಮನಲ್ಲಿ ವರದಿ ನೀಡುತ್ತಾನೆ. 

ಶಿಖಂಡಿನಿ
ಹಿಂದೂ ಪುರಾಣ ಕತೆಗಳಲ್ಲಿ ಅತಿ ಜನಪ್ರಿಯ ತೃತೀಯ ಲಿಂಗಿ ಪಾತ್ರವಿದು. ದ್ರುಪದನ ಮಗಳಾಗಿ ಹುಟ್ಟಿದವಳು ಶಿಖಂಡಿನಿ. ಆದರೆ, ಮಗನಾಗಿ ಬೆಳೆಯುತ್ತಾಳೆ. ನಂತರ ಆತನನ್ನು ಮಹಿಳೆಯೊಬ್ಬಳೊಂದಿಗೆ ವಿವಾಹ ಮಾಡಿಕೊಡಲಾಗುತ್ತದೆ. ಈ ಪತ್ನಿಗೆ ಶಿಖಂಡಿಯ ಸೀಕ್ರೆಟ್ ತಿಳಿಯುತ್ತಿದ್ದಂತೆಯೇ ಆಕೆ ಆತನ ಜೊತೆಗಿನ ವಿವಾಹವನ್ನು ವಿರೋಧಿಸುತ್ತಾಳೆ. 

ಎಣ್ಣೆ ಹೊಡೆಯೋರಿಗೆ ಕೊರೋನಾ ಬರಲ್ವಾ?

ಭಗೀರಥನ ತಾಯಿಯ ಕತೆ
ರಾಜ ದಿಲೀಪ ಸಾಯುವಾಗ ಯಾವುದೇ ಉತ್ತರಾಧಿಕಾರಿಯಿರಲಿಲ್ಲ. ಆತನಿಗೆ ಇಬ್ಬರು ಪತ್ನಿಯರಿದ್ದರು. ಆ ಸಂದರ್ಭದಲ್ಲಿ ಶಿವ ಅವರಿಬ್ಬರ ಕನಸಿನಲ್ಲಿ ಬಂದು ಅವರಿಬ್ಬರೂ ಪ್ರೀತಿಸಿ, ಮಗು ಪಡೆದುಕೊಳ್ಳಬಹುದು ಎಂದು ಹೇಳಿದ. ಆ ಮಗುವೇ ಭಗೀರಥ ಎಂಬ ಕತೆಯಿದೆ. ಈ ಭಗೀರಥನೇ ಗಂಗೆಯನ್ನು ಕೈಲಾಸದಿಂದ ಭೂಮಿಗೆ ತಂದ ಖ್ಯಾತಿ ಹೊಂದಿರುವುದು. 

ಬಹುಚಾರ ಮಠ 
ಈ ಹಿಂದೂ ದೇವಿ ತೃತೀಯ ಲಿಂಗಿಯಾಗಿದ್ದು, ಬಾಂಗ್ಲಾದೇಶದ ಎಲ್‌ಜಿಬಿಟಿಕ್ಯೂ ಸಮುದಾಯ ಇಂದಿಗೂ ಆಕೆಯನ್ನು ಪೂಜಿಸುತ್ತದೆ. 

click me!