
ಇಂದು ಯಾವ ಕಾರಣಕ್ಕೆ ಡಿವೋರ್ಸ್ ಆಗುತ್ತವೆ ಎಂದು ಹೇಳೋದು ಕಷ್ಟ ಆಗಿದೆ. ಅಂಥಹದರಲ್ಲಿ ಪತಿ ನನ್ನನ್ನು ಪ್ರಶ್ನೆ ಮಾಡ್ಲಿಲ್ಲ ಎನ್ನೋ ಕಾರಣಕ್ಕೆ ಮಹಿಳೆಯೊಬ್ಬಳು ಡಿವೋರ್ಸ್ ತಗೊಳ್ಳಲು ಮುಂದಾಗಿದ್ದಳು ಎನ್ನೋದನ್ನು ವಕೀಲ ಬಿ ಎನ್ ನಾಗರಾಜ್ ಅವರು ಪಾಡ್‌ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ 20000 ಫ್ಯಾಮಿಲಿ ಕೇಸ್‌ಗಳನ್ನು ಬಗೆಹರಿಸಿದ ವಕೀಲ ನಾಗರಾಜ್ ಅವರು Allrounders ಎನ್ನುವ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾಕೆ ಡಿವೋರ್ಸ್ ಆಗತ್ತೆ? ದಂಪತಿ ಏನು ಮಾಡಬೇಕು? ಮದುವೆ ಮಾನದಂಡ ಹೇಗಿರಬೇಕು ಎಂದು ಹೇಳಿದ್ದಾರೆ. ಆ ವೇಳೆ ಅಪರೂಪದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಒಂದು ಹುಡುಗಿ ಡಿವೋರ್ಸ್ ಬೇಕು ಅಂತ ಬಂದಳು!
“ಒಂದು ಕೇಸ್‌ನಲ್ಲಿ ಹುಡುಗಿ ಡಿವೋರ್ಸ್ ಬೇಕು ಅಂತ ನನ್ನ ಬಳಿ ಬಂದಿದ್ದಳು. ನಿನ್ನ ಜೊತೆ ಜಗಳ ಆಡ್ತಾರಾ? ಹೊರಗಡೆ ಕರೆದುಕೊಂಡು ಹೋಗಲ್ವಾ? ಸರಿಯಾಗಿ ಊಟ ಹಾಕಲ್ವಾ? ಅವಾಚ್ಯ ಶಬ್ದಗಳಿಂದ ಬೈತಾರಾ ಅಂತ ನಾನು ಕೇಳಿದೆ” ವಕೀಲ ಬಿ ಎನ್ ನಾಗರಾಜ್ ಅವರು ಕೇಳಿದ್ದಾರೆ.
ಸಮಸ್ಯೆ ಆಗಿ 2ನೇ ಮದುವೆಯಾದ ತುಂಬ ಜನ ಚೆನ್ನಾಗಿದ್ದಾರೆ: ಶ್ರೀರಸ್ತು ಶುಭಮಸ್ತು ನಟಿ ಸಪ್ನಾ ದೀಕ್ಷಿತ್ Interview
ಗಂಡ ಬೈಯ್ಯಲ್ಲ ಎನ್ನೋದು ನನ್ನ ಸಮಸ್ಯೆ ಅಂದಳು!
“ನಾನು ಏನು ಮಾಡಿದ್ರೂ ನನ್ನ ಗಂಡ ಬೈಯ್ಯೋದಿಲ್ಲ. ಪೊಸೆಸ್ಸಿವ್‌ನೆಸ್ ಇರಬೇಕು, ಪ್ರೀತಿಸಬೇಕು, ಗದರಿಸಬೇಕು, ಬೈಬೇಕು, ವಾರ್ನ್ ಮಾಡಬೇಕು. ಆದರೆ ನನ್ನ ಗಂಡ ಆ ಥರ ಇಲ್ಲ. ಆಗ ಅವಳು ನನ್ನ ಮನೆಗೆ ಫ್ರೆಂಡ್ಸ್ ಬರುತ್ತಿರುತ್ತಾರೆ, ಬಾಯ್‌ಫ್ರೆಂಡ್ ಕೂಡ ಬರುತ್ತಾನೆ. ನಾನು ಏನೇ ಮಾಡಿದರೂ ನನ್ನ ಗಂಡ ಪ್ರಶ್ನೆ ಮಾಡಲ್ಲ. ಒಂದು ದಿನ ಬಾಯ್‌ಫ್ರೆಂಡ್ ತೊಡೆ ಮೇಲೆ ಮಲಗಿದ್ದೆ. ಅದನ್ನು ನೋಡಿದ ಗಂಡ ಏನೂ ಹೇಳಲಿಲ್ಲ. ನಾನು ನನ್ನ ಗಂಡನನ್ನು ಪರೀಕ್ಷೆ ಮಾಡೋಕೆ ಈ ರೀತಿ ಮಾಡಿದ್ದೆ. ನನಗೆ ಈ ರೀತಿ ಗಂಡ ಬೇಡ. ನಾನು ಏನೇ ತಪ್ಪು ಮಾಡಿದ್ರೂ ಏನೂ ಹೇಳದ ಗಂಡನ ಜೊತೆ ನನಗೆ ಇರೋಕೆ ಆಗೋದಿಲ್ಲ, ನಿಜವಾಗಿಯೂ ಭಯ ಆಗತ್ತೆ. ಇದರಿಂದಲೇ ನಾನು ಮುಂದೆ ತಪ್ಪು ಕೂಡ ಮಾಡಬಹುದು. ಅವಳ ಈ ಮಾತು ಕೇಳಿದಾಗ ನನಗೆ ಏನೂ ಹೇಳೋಕೆ ಆಗಲೇ ಇಲ್ಲ” ಎಂದು ಬಿ ಎನ್ ನಾಗರಾಜ್ ಅವರು ಹೇಳಿದ್ದಾರೆ.
'ನನ್ನ ಜೀವನದಲ್ಲಿ ಏನೇನೋ ಆಯ್ತು, ಇದು ತಂದೆಗೆ ಕಷ್ಟ ಆಯ್ತು'-ನಿವೇದಿತಾ ಗೌಡ ಮಾತು ಕೇಳಿ ರಜತ್ ಕಣ್ಣಲ್ಲೂ ನೀರು...!
ಮಾನಸಿಕವಾಗಿ ಇಷ್ಟಪಡ್ತೀನಿ ಎಂದಿದ್ದ ಗಂಡ!
“ಹೆಂಡ್ತಿಯ ದೂರು ಸತ್ಯವೋ? ಸುಳ್ಳೋ ಎಂದು ಕೇಳೋಕೆ ನಾನು ಆ ಗಂಡನ ಬಳಿ ಮಾತನಾಡಿದೆ. ಆಗ ಅವನು ನನ್ನ ಹೆಂಡ್ತಿ ಹೇಳಿದ್ದು ಸತ್ಯ. ನಾನು ನನ್ನ ಪತ್ನಿಯನ್ನು ಮಾನಸಿಕವಾಗಿ ಇಷ್ಟಪಡ್ತೀನಿ, ದೈಹಿಕವಾಗಿ ಅಲ್ಲ. ಅವಳಿಗೆ ಹುಡುಗಾಟ, ಏನು ಬೇಕಿದ್ರೂ ಮಾಡ್ತಾಳೆ, ಮುಂದೊಂದು ದಿನ ಅವಳು ಸರಿ ಹೋಗ್ತಾಳೆ. ದೈಹಿಕವಾಗಿ ಅವಳು ಏನೇ ಮಾಡಿದ್ರೂ ನನ್ನ ಹೆಂಡ್ತಿನೇ ಅಂತ ಅವನು ಹೇಳಿದ” ಎಂದು ಬಿ ಎನ್ ನಾಗರಾಜ್ ಹೇಳಿದ್ದಾರೆ.
ಈ ರೀತಿ ಮನಸ್ಥಿತಿ ಸರಿಯೇ?
ಬಿ ಎನ್ ನಾಗರಾಜ್ ಅವರ ಮಾತು ಕೇಳಿ ಸಂದರ್ಶಕ "ಎಲ್ಲವೂ ಫಿಸಿಕಲ್ ಅಲ್ಲ, ಎಲ್ಲವೂ ಬರಿ ಎಮೋಷನಲ್ ಅಲ್ಲ, ಆದರೆ ಇದು ರಾಂಗ್ ಮೈಂಡ್ ಸೆಟ್ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರಪಂಚದಲ್ಲಿ ಈ ಥರ ಒಂದು ಮನಸ್ಥಿತಿಗಳನ್ನ ಅರ್ಥ ಮಾಡಿಕೊಳ್ಳುವಂತ ಗಂಡಸರು ಇದ್ದಾರೆ ಅಂದ್ರೆ ಅದು ಆಶ್ಚರ್ಯ" ಎಂದು ಬಿ ಎನ್ ನಾಗರಾಜ್ ಹೇಳಿದ್ದಾರೆ.
ಒಟ್ಟಿನಲ್ಲಿ ಪತ್ನಿಯ ಪ್ರಶ್ನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನೀವು ಏನು ಹೇಳ್ತೀರಿ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.