ಅಕ್ರಮ ಸಂಬಂಧವಿಲ್ಲ ಸಾಬೀತುಪಡಿಸಲು ಕಾದ ಕಬ್ಬಿಣ ಹಿಡಿಯುವ ಅಗ್ನಿಪರೀಕ್ಷೆ!

By Suvarna News  |  First Published Mar 2, 2023, 4:30 PM IST

ಪತಿವೃತೆ ಸಾಬೀತುಪಡಿಸಲು ಸೀತಾ ದೆವಿ ಬೆಂಕಿಯ ಅಗ್ನಿಪರೀಕ್ಷೆ ಒಳಗಾಗಿ ಪರಿಶುದ್ಧತೆ ಸಾಬೀತುಪಡಿಸಿದ ಪುರಾಣ ನಾವೆಲ್ಲ ಕೇಳಿದ್ದೇವೆ. ಇದೀಗ ತನ್ನ ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಲ್ಲ ಅನ್ನೋದನ್ನು ಸಾಬೀತುಪಡಿಸಲು ವ್ಯಕ್ತಿಯೊಬ್ಬ ಕೆಂಡದ ಮೇಲಿಟ್ಟ ಕಾದ ಕಬ್ಬಿಣ ಹಿಡಿದು ಸಾಬೀತುಪಡಿಸುವ ಶಿಕ್ಷೆ ನೀಡಲಾಗಿದೆ. ವಿಶೇಷ ಅಂದರೆ ಗ್ರಾಮಸ್ಥರು ಪಂಚಾಯಿತಿ ನಡೆಸಿ ಈ ಶಿಕ್ಷೆ ನೀಡಲಾಗಿದೆ.


ತೆಲಂಗಾಣ(ಫೆ.02): ರಾವಣನನ್ನು ಸಂಹರಿಸಿ ಸೀತಾ ಮಾತೆಯನ್ನು ಶ್ರೀರಾಮ ಕರೆತಂದ ಬಳಿಕ, ತನ್ನ ಪತಿವೃತೆ ಸಾಬೀತುಪಡಿಸಲು ಸೀತಾದೇವಿ ಅಗ್ನಿಪರೀಕ್ಷೆ ಎದುರಿಸಿದಳು. ಈ ಮೂಲಕ ಪರಿಶುದ್ಧತೆಯನ್ನು ಸಾಬೀತುಪಡಿಸುವ ಅನಿವಾರ್ಯ ಸಂದರ್ಭ ಎದುರಾಗಿತ್ತು. ಸೀತಾ ಮಾತೆ ಈ ಅಗ್ನಿಪರೀಕ್ಷೆ ಎದುರಿಸಿ ಪತಿವೃತೆಯನ್ನು ಸಾಬೀತುಪಡಿಸಿದ್ದಳು. ಇದೀಗ ಇದೇ ರೀತಿ,ಆದರೆ ಇಲ್ಲಿ ಪತಿವೃತೆ ಸಾಬೀತುಪಡಿಸುವ ಪ್ರಮೇಯ ಇರಲಿಲ್ಲ. ಇಲ್ಲಿ ಅಕ್ರಮ ಸಂಬಂಧ ಇಲ್ಲ ಅನ್ನೋದನ್ನು ಸಾಬೀತುಪಡಿಸಬೇಕಿತ್ತು. ಇದಕ್ಕೆ ಶಿಕ್ಷೆ ಕೆಂಡದ ಮೇಲೆ ನಡೆಯುವ ಅಗ್ನಿಪರೀಕ್ಷೆ. ತೆಲಂಗಾಣದ ವ್ಯಕ್ತಿ ತನ್ನ ತಮ್ಮನ ಮೇಲೆ ಆರೋಪ ಹೊರಿಸಿದ್ದ. ತನ್ನ ಪತ್ನಿ ಜೊತೆ ತಮ್ಮನಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪ ಮಾಡಿ ಗ್ರಾಮ ಪಂಚಾಯಿತ್‌ಗೆ ದೂರು ನೀಡಿದ್ದ. ಗ್ರಾಮದ ಮುಖಂಡರು ಸಭೆ ಸೇರಿದ್ದಾರೆ. ಅಲ್ಲೊಂದು ಇಲ್ಲೊಂದು ಹಾಳೆಯಲ್ಲಿ ರಾಮಾಯಣ ಓದಿದ್ದ ಮುಖಂಡರು ಹಾಗೂ ಈ ವ್ಯಕ್ತಿ  ಅಕ್ರಮ ಸಂಬಂಧ ಇಲ್ಲ ಅನ್ನೋದನ್ನು ಸಾಬೀತುಪಡಿಸಲು ಕೆಂಡದ ಮೇಲೆ ಇಟ್ಟ ಕಾದ ಕಬ್ಬಿಣವನ್ನ ಕೈಯಿಂದ ತೆಗೆದು, ಕೆಂಡದ ಮೇಲೆ ನಡೆಯಬೇಕಕು ಅನ್ನೋ ಶಿಕ್ಷೆ ವಿಧಿಸಿದ್ದಾರೆ. ಈ ಶಿಕ್ಷೆ ಬಳಿಕ ಮುಖಂಡರಿಗೆ ತೃಪ್ತಿ ಬಂದಿಲ್ಲ. ಹೀಗಾಗಿ ತಪ್ಪುಒಪ್ಪಿಕೊಳ್ಳುವಂತೆ ತಾಕೀತು ಮಾಡಿದ ಘಟನೆ ಇಂದಿನ ಆಧುನಿಕ ಯುಗದಲ್ಲಿ ನಡೆದಿದೆ.

ತೆಲಂಗಾಣದ ಬಂಜಾಪುಪಲ್ಲಿ ಗ್ರಾಮದ ವ್ಯಕ್ತಿಗೆ ತನ್ನ ಪತ್ನಿಯ ಮೇಲೆ ಅನುಮಾನ. ತನ್ನ ತಮ್ಮ ಹಾಗೂ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಮನೆಯಲ್ಲಿ ಒಂದೆರೆಡು ಸುತ್ತಿನ ಜಟಾಪಟಿ ನಡೆದಿದೆ. ಅಣ್ಣ ಹಾಗೂ ತಮ್ಮ ಇಬ್ಬರಿಗೂ ಮದುವೆಯಾಗಿದೆ. ಆದರೆ ಅಣ್ಣನಿಗೆ ಎಲ್ಲರ ಮೇಲೂ ಸಂಶಯ. ಅಕ್ರಮ ಸಂಬಂಧ ಅನುಮಾನ ಹೆಚ್ಚಾಗತೊಡಗಿತು. ಕೊನೆಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದೆ.

Latest Videos

undefined

 

ಪತಿಗೆ ವಂಚಿಸಿ ಸರ್ಕಲ್ ಇನ್ಸ್‌ಪೆಕ್ಟರ್ ಜೊತೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸರಸ!

ಶಾಲೆಯಲ್ಲಿ ಓದಿದ, ಕೇಳಿ ತಿಳಿದುಕೊಂಡ ಅಲ್ಪ ಸ್ವಲ್ಪ ರಾಮಾಯಣ ನೆನಪಿಸಿಕೊಂಡು ದೂರು ದಾಖಲಿಸಿದ್ದ. ಈ ದೂರಿನಲ್ಲಿ ತನ್ನ ತಮ್ಮನಿಗೆ ಪತ್ನಿ ಜೊತೆ ಅಕ್ರಮ ಸಂಬಂಧವಿದೆ. ಆತನಿಗೆ ಅಕ್ರಮ ಸಂಬಂಧ ಇಲ್ಲ ಅನ್ನೋದನ್ನು ಸಾಬೀತುಪಡಿಸಲು ಅಗ್ನಿಪರೀಕ್ಷೆ ನೀಡಬೇಕು ಎಂದು ಉಲ್ಲೇಖಿಸಿದ್ದ. ಇತ್ತ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರರೂ ಸೀತಾ ದೇವಿಯ ಅಗ್ನಿಪರೀಕ್ಷೆ ಘಟನೆ ಮಾಹಿತಿ ಎಲ್ಲೋ ಕೇಳಿದ್ದಾರೆ. ಆದರೆ ಸ್ಪಷ್ಟೆತೆ ಇಲ್ಲ. ಈತನ ದೂರಿನಲ್ಲಿನ ಉಲ್ಲೇಖ ನೋಡಿ ಮುಖಂಡರು ಹಾಗೂ ಸದಸ್ಯರಿಗೆ ಇದು ಸರಿಯಾದ ಮಾರ್ಗ ಅನ್ನೋದು ಮನದಟ್ಟಾಗಿದೆ. ರಾಮಾಯಣ ಕಾಲದಲ್ಲಿ ಪರಿಶುದ್ಧತೆ ಪರೀಕ್ಷಿಸಿದ ರೀತಿ ಈಗಲೂ ಪ್ರಸ್ತುತವಾಗಿದೆ ಎಂದು ನಿರ್ಧರಿಸಿದ್ದಾರೆ.

ಗ್ರಾಮದ ಮುಖಂಡರ ಜೊತೆ ಸಭೆ ನಡಸೆಲಾಯಿತು. ಅಣ್ಣ ಹಾಗೂ ತಮ್ಮ ಇಬ್ಬರು ಹಾಜರಿದ್ದರು. ಇತ್ತ ತಮ್ಮ ತನ್ನ ವಾದವನ್ನು ಮಂದಿಟ್ಟಿದ್ದ. ತನಗೆ ಅಕ್ರಮ ಸಂಬಂಧ ಇಲ್ಲ ಎಂದು ಹೇಳಿದ್ದ. ಆದರೆ ಈ ಮಾತನ್ನು ಸಾಬೀತುಪಡಿಸಬೇಕು. ಹೀಗಾಗಿ ಕೆಂಡದ ಮೇಲೆ ನಡೆದು ತೋರಿಸಬೇಕು ಎಂದು ಆದೇಶ ನೀಡಿದರು. ಇದಕ್ಕಾಗಿ ನಿಗಿ ನಿಗಿ ಕೆಂಡ ತರಲಾಯಿತು. ಕಟ್ಟಿಗಳಿಗೆ ಬೆಂಕಿ ಇಟ್ಟು ಕೆಂಡ ತಯಾರಿಸಲಾಯಿತು.ತಮ್ಮನಿಗೆ ಬೇರಿ ಮಾರ್ಗವಿಲ್ಲ. ಅಕ್ರಮ ಸಂಬಂಧ ಇಲ್ಲ ಅನ್ನೋದನ್ನು ಸಾಬೀತುಪಡಿಸಲು ಕೆಂಡದ ಮೇಲೆ ನಡೆಬೇಕು ಹಾಗೂ ಕೆಂಡ ಮೇಲಿಟ್ಟಿರುವ ಕಾದ ಕಬ್ಬಿಣವನ್ನು ಕೈಯಿಂದ ತೆಗೆಯಬೇಕು ಅನ್ನೋದು ಆದೇಶ.

ಸೀತಾಮಾತೆಗೆ ಅಗ್ನಿಪರೀಕ್ಷೆ ತಪ್ಲಿಲ್ಲ, ಇನ್ನು ನಾನು ಯಾವ ಲೆಕ್ಕ : ಲಕ್ಷ್ಮೀ ಹೆಬ್ಬಾಳ್ಕರ್

ಕೆಂಡಕ್ಕೆ ಐದಾರು ಸುತ್ತು ಹಾಕಿದ ಈತ, ಕೈಯಿಂದ ಕಾದ ಕಬ್ಬಿಣವನ್ನು ಬದಿಗೆ ಸರಿಸಿ ಅಲ್ಲಿಂದ ತೆರಳಿದ್ದಾನೆ. ಆದರೆ ಇದು ಅಣ್ಣ ಹಾಗೂ ಸದಸ್ಯರ ಆಕ್ರೋಶಕ್ಕೆ ಕಾರಣಾಗಿದೆ. ತಮ್ಮ ಮಾತು ಮೀರಿದ್ದಾನೆ. ಶಿಕ್ಷೆ ಪೂರ್ಣಗೊಳಿಸಿಲ್ಲ. ಹೀಗಾಗಿ ಅಕ್ರಮ ಸಂಬಂಧ ಇದೆ ಅನ್ನೋದನ್ನು ಒಪ್ಪಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ತನ್ನ ಪತಿಯ ಅಣ್ಣಮ ಉಪಟಳ ಹೆಚ್ಚಾಗುತ್ತಿದ್ದಂತೆ ತಮ್ಮನ ಪತ್ನಿ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲಿಗೆ ಅಣ್ಣನ ಅನುಮಾನ ತಣ್ಣಗಾಗಿದೆ, ಮುಖಂಡರಿಗೆ ಇವೆಲ್ಲಾ ಪುರಾಣದ ಘಟನೆಗಳು, ಈಗ ಈ ರೀತಿ ಮಾಡಿ ಪರಿಶುದ್ಧತೆ ಸಾಬೀತುಪಡಿಸಲು ಸಾಧ್ಯವೆ ಎಂದು ಉಲ್ಟಾ ಹೊಡೆದಿದ್ದಾರೆ.

click me!