relationship

ವಿಚ್ಛೇದನ ಪ್ರಕರಣ ಹೆಚ್ಚಳ

ವರ್ಲ್ಡ್‌ ಆಫ್‌ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಪ್ರಪಂಚದ ಹತ್ತು ದೇಶಗಳಲ್ಲಿ ಪತಿ ಮತ್ತು ಪತ್ನಿಯ ನಡುವಿನ ಸಂಬಂಧವು ಮದುವೆಯ ನಂತರ ಹೆಚ್ಚು ಕಾಲ ಉಳಿಯುವುದಿಲ್ಲ. ಇಲ್ಲಿ ಅತಿ ಬೇಗನೇ ಡಿವೋರ್ಸ್ ಆಗುತ್ತದೆ. 

Image credits: pexels

ಪೋರ್ಚುಗಲ್

ಪೋರ್ಚುಗಲ್‌ನಲ್ಲಿ ಹೆಚ್ಚಿನ ಗಂಡ-ಹೆಂಡತಿ ಸಂಬಂಧ ಬೇಗ ಕೊನೆಯಾಗುತ್ತದೆ. ಇಲ್ಲಿ ವಿಚ್ಛೇದನ ಪ್ರಮಾಣ ಶೇ.94ರಷ್ಟಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಇಲ್ಲಿ ವಿಚ್ಛೇದನ ಪ್ರಮಾಣ ಅತಿ ಹೆಚ್ಚು.

Image credits: pexels

ಸ್ಪೇನ್‌

ಸ್ಪೇನ್‌ನಲ್ಲಿ ಮದುವೆಗೆ ವಿಭಿನ್ನ ವಿಧಾನವಿದೆ. ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಇಲ್ಲಿನ ಜನರಿಗೆ ತಿಳಿದಿಲ್ಲ. ಸ್ಪೇನ್‌ನ ವಿಚ್ಛೇದನ ಪ್ರಮಾಣ 85 ಶೇಕಡವಾಗಿದೆ.
 

Image credits: pexels

ರಷ್ಯಾ

ಮದುವೆ ಮತ್ತು ವಿಚ್ಛೇದನದ ಬಗ್ಗೆ ರಷ್ಯನ್ನರ ವರ್ತನೆ ಬದಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚಾಗಿದೆ. ಇಲ್ಲಿ ಶೇಕಡಾ 73ರಷ್ಟು ಮಂದಿ ವಿವಾಹ ಸಂಬಂಧವನ್ನು ಮುರಿದುಕೊಳ್ಳುತ್ತಾರೆ.

Image credits: Getty

ಉಕ್ರೇನ್‌

ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿದೆ. ಆದರೆ ವಿಚ್ಛೇದನದಲ್ಲಿ ಉಕ್ರೇನ್‌ ರಷ್ಯಾಗಿಂತ ಹಿಂದಿದೆ. ಇಲ್ಲಿ ವಿಚ್ಛೇದನ ಪ್ರಮಾಣ ಶೇಕಡಾ 70ರಷ್ಟಿದೆ.
 

Image credits: freepik

ಕ್ಯೂಬಾ

ಕ್ಯೂಬಾ ಒಂದು ಕಮ್ಯುನಿಸ್ಟ್ ದೇಶ. ಇಲ್ಲಿ ಅಧಿಕಾರದ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ ಇಲ್ಲಿಯವರಿಗೆ ಮದುವೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ದೇಶದ ವಿಚ್ಛೇದನ ಪ್ರಮಾಣ ಶೇ.55.
 

Image credits: freepik

ಫಿನ್‌ಲ್ಯಾಂಡ್‌

ಫಿನ್‌ಲ್ಯಾಂಡ್‌ನ ವಿಚ್ಛೇದನ ಪ್ರಮಾಣವು ಶೇಕಡಾ 55.ಈ ದೇಶವನ್ನು ಅತ್ಯಂತ ಸಂತೋಷದಾಯಕ ದೇಶವೆಂದು ಪರಿಗಣಿಸಲಾಗಿದೆ. ಆದರೆ ಇಲ್ಲಿನ ಜನರು ಮದುವೆ ಸಂಬಂಧವನ್ನು ಉಳಿಸಿಕೊಳ್ಳುವುದರಲ್ಲಿ ಹಿಂದಿದ್ದಾರೆ.

Image credits: freepik

ಫ್ರಾನ್ಸ್‌

ಫ್ರಾನ್ಸ್‌ನ ವಿಚ್ಛೇದನ ಪ್ರಮಾಣವು ಶೇಕಡಾ 51ರಷ್ಟಿದೆ. ವಿಚ್ಛೇದನ ಪ್ರಮಾಣವನ್ನು ಕಡಿಮೆ ಮಾಡಲು ಇಲ್ಲಿನ ಸರ್ಕಾರ ಪ್ರಯತ್ನಿಸುತ್ತಲೇ ಇದೆ.

Image credits: freepik

ಬೆಲ್ಜಿಯಂ

ಕಳೆದ ಕೆಲವು ವರ್ಷಗಳಲ್ಲಿ ಬೆಲ್ಜಿಯಂನಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಿವೆ. ಇಲ್ಲಿ ವಿಚ್ಛೇದನ ಪ್ರಮಾಣ ಶೇ.53ರಷ್ಟಿದೆ.
 

Image credits: freepik

ಭಾರತ

ಸದ್ಯ ಭಾರತದಲ್ಲಿ ಮದುವೆಯ ಜೀವಿತಾವಧಿ ಸುದೀರ್ಘವಾಗಿದೆ. ಆದ್ದರಿಂದಲೇ ಇಲ್ಲಿ ವಿಚ್ಛೇದನ ಪ್ರಮಾಣ ಸಹ ಕಡಿಮೆ. ವಿಚ್ಛೇದನ ದರ ಕೇವಲ 1 ಪ್ರತಿಶತವಾಗಿದೆ.

Image credits: freepik

ಈ ದೇಶದಲ್ಲಿರೋ ಹುಡುಗೀನ ಮದ್ವೆಯಾದ್ರೆ ಭರ್ತಿ ಮೂರು ಲಕ್ಷ ಸಿಗುತ್ತಂತೆ!

ಬಾಯ್ಸ್‌..ಹೆಣ್ಣು ನೋಡೋಕೆ ಹೋಗುವಾಗ ಈ ವಿಚಾರ ಗಮನದಲ್ಲಿರಲಿ

ಮತ್ತೇರಿಸೋ ಮುತ್ತಿನ ಗಮ್ಮತ್ತೇ ಬೇರೆ, ಕಿಸ್‌ ಕುರಿತಾದ ಸ್ವಾರಸ್ಯಕರ ಸಂಗತಿಯಿದು

ಪ್ರೀತಿಯಲ್ಲಿ ಬಿದ್ದ ಹುಡುಗರು ಹೀಗೆಲ್ಲಾ ಮಾಡ್ತಾರಂತೆ