ಕಳೆದ ಕೆಲವು ದಿನಗಳಿಂದ ಓದಿಸಿ ಸರ್ಕಾರಿ ಅಧಿಕಾರಿ ಮಾಡಿದ ಗಂಡನ ಮೇಲೆಯೇ ವರದಕ್ಷಿಣೆ ಆರೋಪ ಮಾಡಿ ಜೈಲಿಗಟ್ಟಿದ SDM ಜ್ಯೋತಿ ಮೌರ್ಯರದ್ದೇ ಸುದ್ದಿ ಎಲ್ಲೆಡೆ ಕೇಳಿ ಬರ್ತಿದೆ. ಈ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಜ್ಯೋತಿ ಮೌರ್ಯರ ಬಾಯ್ಫ್ರೆಂಡ್ ಮನೀಶ್ ದುಬೆ ಅಮಾನತು ಆಗುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ಓದಿಸಿ ಸರ್ಕಾರಿ ಅಧಿಕಾರಿ ಮಾಡಿದ ಗಂಡನ ಮೇಲೆಯೇ ವರದಕ್ಷಿಣೆ ಆರೋಪ ಮಾಡಿ ಜೈಲಿಗಟ್ಟಿದ SDM ಜ್ಯೋತಿ ಮೌರ್ಯರದ್ದೇ ಸುದ್ದಿ ಎಲ್ಲೆಡೆ ಕೇಳಿ ಬರ್ತಿದೆ. ನನ್ನ ದುಡಿಮೆಯಲ್ಲಿ ಎಸ್‌ಡಿಎಂ ಆದ ಬಳಿಕ ನನ್ನಿಂದ ದೂರವಾಗಿ ಅಧಿಕಾರಿಯೊಬ್ಬರ ಜತೆ ಸಂಬಂಧ ಹೊಂದಿದ್ದಾರೆ ಎಂದು ಜ್ಯೋತಿ ಮೌರ್ಯ ವಿರುದ್ಧ ಅವರ ಪತಿ ಅಲೋಕ್ ಮೌರ್ಯ ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆಯೊಂದು ಹೊರ ಬಿದ್ದಿದ್ದು, ಜ್ಯೋತಿ ಮೌರ್ಯರ ಬಾಯ್ಫ್ರೆಂಡ್ ಮನೀಶ್ ದುಬೆ ಅಮಾನತು ಆಗುವ ಸಾಧ್ಯತೆ ಇದೆ.
ಎಸ್‌ಡಿಎಂ ಜ್ಯೋತಿ ಮೌರ್ಯ ಅವರ ಆಪಾದಿತ ಗೆಳೆಯ ವಿಚಾರಣೆಯಲ್ಲಿ (Enquiry) ತಪ್ಪಿತಸ್ಥನೆಂದು ಕಂಡುಬಂದಿದ್ದು, ಅಮಾನತುಗೊಳ್ಳುವ ಸಾಧ್ಯತೆಯಿದೆ. ಎಸ್‌ಡಿಎಂ ಜ್ಯೋತಿ ಮೌರ್ಯ ಅವರ ಆಪಾದಿತ ಗೆಳೆಯ ಮನೀಶ್ ದುಬೆ ಇಲಾಖೆಯ ಪ್ರತಿಷ್ಠೆಗೆ ಕಾರಣವೆಂದು ತನಿಖೆಯು ಕಂಡುಹಿಡಿದಿದೆ. ನಂತರ ಅವರನ್ನು ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಹುದ್ದೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ. ಮನೀಶ್ ದುಬೆ ಗಾಜಿಯಾಬಾದ್‌ನಲ್ಲಿ ಹೋಮ್ ಗಾರ್ಡ್ ಕಮಾಂಡೆಂಟ್ ಆಗಿ ನೇಮಕವಾಗಿದ್ದರು. ಜ್ಯೋತಿ ಮೌರ್ಯ, ಮನೀಶ್ ದುಬೆಯೊಂದಿಗೆ ಅನೈತಿಕ ಸಂಬಂಧ (Extra marital affair) ಹೊಂದಿದ್ದಾರೆಂದು ಪತಿ ಅಲೋಕ್ ಮೌರ್ಯ ಆರೋಪಿಸಿದ್ದರು.
ಎರಡು ಮಕ್ಕಳ ತಾಯಿಗೆ ಮೂರು ಮಕ್ಕಳ ತಂದೆ ಮೇಲೆ ಪ್ರೀತಿ! ಪತಿಗೆ ಗೊತ್ತಾದ್ಮೇಲೆ?
ಜ್ಯೋತಿ ಮೌರ್ಯ ಜತೆಗಿನ ಸಂಬಂಧದಿಂದ ವಿಭಾಗಕ್ಕೂ ಕಳಂಕ
ಮನೀಶ್ ಮತ್ತು ಜ್ಯೋತಿ ನಡುವೆ ನಡೆದ ಚಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದ್ದು, ವಿವಾದ ಮತ್ತಷ್ಟು ಭುಗಿಲೆದ್ದಿತ್ತು. 2020ರಲ್ಲಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವುದಾಗಿ ಅಲೋಕ್ ಹೇಳಿಕೊಂಡಿದ್ದರು. ಈ ವೇಳೆ ಪ್ರಕರಣದ ಇಲಾಖಾ ವಿಚಾರಣೆ ಆರಂಭವಾಗಿದೆ. ಡಿಐಜಿ ಗೃಹ ರಕ್ಷಕ ದಳದ ಡಿಜಿ ಸಂತೋಷ್ ಸಿಂಗ್ ಅವರು ಮಂಗಳವಾರ ಇಲಾಖಾ ತನಿಖಾ ವರದಿಯನ್ನು ಗೃಹ ರಕ್ಷಕ ದಳದ ಡಿಜಿ ಬಿ.ಕೆ.ಮೌರ್ಯ ಅವರಿಗೆ ಸಲ್ಲಿಸಿದರು. ಇಲಾಖೆಯ ಘನತೆಗೆ ಮಸಿ ಬಳಿದಿದ್ದಕ್ಕಾಗಿ ಮನೀಶ್ ದುಬೆ ಅವರನ್ನು ವರದಿಯು ಹೊಣೆಗಾರರನ್ನಾಗಿ ಮಾಡಿದ್ದು, ಅವರನ್ನು ಅಮಾನತುಗೊಳಿಸುವಂತೆ (Suspend) ಶಿಫಾರಸು ಮಾಡಲಾಗಿದೆ.
ಘಟನೆ ಹಿನ್ನೆಲೆ ಏನು?
ಅಲೋಕ್ ಮೌರ್ಯ ಎಂಬವರು ತನ್ನ ಪತ್ನಿ ಎಸ್‌ಡಿಎಂ (ಉಪವಿಭಾಗೀಯ ಮ್ಯಾಜಿಸ್ಟ್ರೇಟ್) ಜ್ಯೋತಿ ಮೌರ್ಯ ವಿರುದ್ಧ ವಾರದ ಹಿಂದೆ ಆರೋಪ ಮಾಡಿದ್ದರು. ಅಲೋಕ್ ಹೇಳಿಕೊಂಡಂತೆ, ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಆದರೆ, ಅಲೋಕ್ ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ (Education) ಕೊಡಿಸಿದರು. ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ದಾಖಲಿಸಿದರು. ಅವರ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಪತ್ನಿ ಜ್ಯೋತಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿ ಸರ್ಕಾರಿ ಕೆಲಸ (Government Job) ಗಿಟ್ಟಿಸಿಕೊಂಡರು.
ಬಾಡಿಗೆಗಿದ್ದ ಯುವತಿ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡ, ಹಿಗ್ಗಾಮುಗ್ಗಾ ಹೊಡೆದ್ಲು ಹೆಂಡ್ತಿ!
ಆದರೆ ಆ ನಂತರ ಜ್ಯೋತಿ, ಗಂಡನನ್ನು ಮರೆತು ತನ್ನ ಘನತೆಗೆ ಸರಿಯಾದ ಹಿರಿಯ ಅಧಿಕಾರಿಯೊಬ್ಬರ ಜೊತೆ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ತನಗೆ ಮ್ಯೂಚುವಲ್ ಆಗಿ (ಪರಸ್ಪರ ಒಪ್ಪಿಗೆಯಿಂದ) ವಿಚ್ಛೇದನ (Divorce) ನೀಡುವಂತೆ ಗಂಡನಿಗೆ ಧಮ್ಕಿ ಹಾಕಿದ್ದು, ತನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಗಂಡ ಅಲೋಕ್ ಅಳಲು ತೋಡಿಕೊಂಡಿದ್ದ. ಮಾತ್ರವಲ್ಲ ಜ್ಯೋತಿ ತನ್ನ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅಲೋಕ್ ಆರೋಪಿಸಿ ಕಣ್ಣೀರಿಟ್ಟಿದ್ದರು.
ಜ್ಯೋತಿ ಮೌರ್ಯ ಪ್ರತಿಕ್ರಿಯೆ ಏನು?
ಪ್ರಕರಣದ ಕುರಿತಾಗಿ ಮಾತನಾಡಿರುವ ಜ್ಯೋತಿ ಮೌರ್ಯ, ಅಲೋಕ್ ಜೊತೆಗಿನ ಸಂಬಂಧ ಉತ್ತಮವಾಗಿಲ್ಲ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾಳೆ. ಮನೀಶ್ ದುಬೆ ಅವರೊಂದಿಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ತನ್ನ ವಾಟ್ಸಾಪ್ ಚಾಟ್‌ಗಳಿಗೆ ಪ್ರತಿಕ್ರಿಯಿಸಿದ ಜ್ಯೋತಿ ಮೌರ್ಯ, "ನನ್ನ ವೈಯಕ್ತಿಕ ಚಾಟ್‌ಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಈಗಾಗಲೇ ನನ್ನ ಪತಿ ವಿರುದ್ಧ ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣವನ್ನು ಪರಿಶೀಲಿಸುತ್ತಾರೆ ಎಂದು ತಿಳಿಸಿದ್ದಾರೆ. ಮದುವೆಗೂ ಮುನ್ನ ತನ್ನನ್ನು ತಾನು ಗ್ರಾಮ ಪಂಚಾಯಿತಿ ಅಧಿಕಾರಿ ಎಂದು ಪರಿಚಯಿಸಿಕೊಂಡ. ಆದರೆ, ಆತ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಸ ಗುಡಿಸುವ ವರ್ಗ-4ರ ಉದ್ಯೋಗಿ ಆಗಿದ್ದಾರೆ ಎಂದು ಜ್ಯೋತಿ ಮೌರ್ಯ ಆರೋಪಿಸಿದ್ದಾರೆ.