ಸಣ್ಣ ವಿಚಾರಕ್ಕೆ ಜಗಳ, ದೂರು, ಕೇಸು, ಬಳಿಕ ವಿಚ್ಚೇದನ. ಇದು ದಾಂಪತ್ಯದಲ್ಲಿ ಸಾಮಾನ್ಯವಾಗುತ್ತಿದೆ. ಆದರೆ ಇಲ್ಲೊಂದು ದಂಪತಿ ಕೆಮೆಸ್ಟ್ರಿ ಅಚ್ಚರಿ ತರುತ್ತೆ. ಇತ್ತೀಚೆಗೆ ಕಿರುಕುಳ ಹಾಗೂ ದೈಹಿಕ ಹಲ್ಲೆ ಕಾರಣದಿಂದ ಪತಿಯನ್ನು ಜೈಲಿಗೆ ಕಳುಹಿಸಿದ್ದಾಳೆ. 7ನೇ ಬಾರಿಯೂ ಜಾಮೀನಿನ ಮೇಲೆ ಪತಿಯನ್ನು ಬಂಧಮುಕ್ತ ಗೊಳಿಸಿ ಮತ್ತೆ ಒಂದಾಗಿದ್ದಾರೆ.
ಮೆಹಸಾನ(ಜು.12) ದಾಂಪತ್ಯದಲ್ಲಿ ಸಿಕ್ಕ ಸಿಕ್ಕ ವಿಷಯಕ್ಕೆ ಜಗಳ, ಮನಸ್ತಾಪ, ಮುನಿಸು ಡಿವೋರ್ಸ್. ಈ ರೀತಿಯ ಹಲವು ಪ್ರಕರಣಗಳು ವರದಿಯಾಗುತ್ತಲೇ ಇದೆ. ಸಂಬಂಧದಲ್ಲಿ ಒಮ್ಮೆ ಬಿರುಕು ಮೂಡಿದರೆ ಮತ್ತೆ ಒಂದಾಗುವ ಕಾಲ ಈಗಿಲ್ಲ. ಮನಸ್ತಾಪ ಶಮನಗೊಂಡರು ಸಂಬಂಧ ಮುಂದುವರಿಯ ಯಾವುದೇ ಖಾತ್ರಿ ಇಲ್ಲ. ಆದರೆ ಇಲ್ಲೊಂದು ದಂಪತಿ ಮಾತ್ರ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ. ಪ್ರೇಮ್‌ಚಂದ್ ಮಾಲಿ ಹಾಗೂ ಸೋನು ದಾಂಪತ್ಯ ಹಲವು ಏರಿಳಿತ, ಪೊಲೀಸ್ ಕೇಸು, ಜೈಲು ಎಲ್ಲವನ್ನು ನೋಡಿದೆ. ಆದರೆ ಕೆಲ ತಿಂಗಳಲ್ಲೇ ಮತ್ತೆ ಒಂದಾಗಿ ಜೀವನ ಸಾಗಿಸುತ್ತಾರೆ. ಇದೀಗ 7ನೇ ಬಾರಿಗೆ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ ಬಳಿಕ ಖುದ್ದು ಜಾಮೀನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಇಷ್ಟೇ ಅಲ್ಲ ಇದೀಗ ಮತ್ತೆ ಜೊತೆಯಾಗಿ ಸಂಸಾರದ ಬಂಡಿ ಸಾಗಿಸುತ್ತಿದ್ದಾರೆ.
ಗುಜರಾತ್ ಮೆಹಸಾನ ಗ್ರಾಮದ ಪ್ರೇಮಚಂದ್ ಮಾಲಿ ಹಾಗೂ ಸೋನು 2001ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 13 ವರ್ಷಗಳ ಕಾಲ ಇವರ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಕೂಲಿ ಕೆಲಸ ಮಾಡುವ ಪ್ರೇಮ್‌ಚಂದ್ ಮಾಲಿ, ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಂಸಾರ ನಡೆಸಿದ್ದ. ಆರ್ಥಿಕ ಸಮಸ್ಯೆ ಬಿಟ್ಟರೆ ಇನ್ನೇನು ಗಂಭೀರ ಸಮಸ್ಯೆ ಇವರ ನಡುವೆ ಇರಲಿಲ್ಲ. ಆದರೆ 2014ರಲ್ಲಿ ಇವರಿಬ್ಬರ ನಡುವೆ ಜಗಳ ಶುರುವಾಗಿತ್ತು.
ಮದ್ವೆಯಾಗಿ ವರ್ಷದಲ್ಲೇ ಡಿವೋರ್ಸ್ ಆಗೋ ದೇಶಗಳಿವು, ಭಾರತ ಎಷ್ಟನೇ ಸ್ಥಾನದಲ್ಲಿದೆ?
2015ರಲ್ಲಿ ಪತ್ನಿ ಸೋನು ಪತಿ ಪ್ರೇಮ್‌ಚಂದ್ ವಿರುದ್ಧ ಮೊದಲ ದೂರು ದಾಖಲಿಸಿದ್ದರು. ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೆ ಕೋರ್ಟ್ ಪ್ರತಿ ತಿಂಗಳು ಪತ್ನಿಗೆ 2,000 ರೂಪಾಯಿ ಮಾಸಿಕ ಭತ್ಯೆ ನೀಡಲು ಸೂಚಿಸಿತ್ತು. ಆದರೆ ಕೂಲಿ ಕೆಲಸ ಮಾಡುತ್ತಿದ್ದ ಪ್ರೇಮ್‌ಚಂದ್‌ಗೆ 2,000 ರೂಪಾಯಿ ನೀಡುವುದು ಅಸಾಧ್ಯವಾಗಿತ್ತು. ಹೀಗಾಗಿ ಜೈಲು ಪಾಲಾದ. 5 ತಿಂಗಳ ಜೈಲಿನಲ್ಲಿ ಕಳೆದ ಪತಿಗೆ ಖುದ್ದು ಸೋನು ಜಾಮೀನು ಕೊಡಿಸಿ ಬಿಡುಗಡೆ ಮಾಡಿದ್ದಳು.
ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಸತಿ ಪತಿಗಳು ಒಂದಾಗಿದ್ದರು. ಇದು ಕೇವಲ ಆರಂಭ ಅಷ್ಟೇ. ಬಳಿಕ ಪ್ರತಿ ವರ್ಷ ದೈಹಿಕ ಹಲ್ಲೆ, ಮಾನಸಿಕ ಕಿರುಕುಗಳ ಪ್ರಕರಣದಡಿ ಪತ್ನಿ ಸೋನು, ಪತಿಯನ್ನು ಜೈಲಿಗಟ್ಟಿದ್ದಾಳೆ. 2016ರಿಂದ 2020 ರ ವರೆಗೆ ಪ್ರತಿ ವರ್ಷ ಜೈಲು ಸೇರಿದ್ದಾರೆ. ಪ್ರತಿ ಬಾರಿ ಜೈಲು ಸೇರಿದ ಬಳಿಕ 5 ರಿಂದ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ. ಬಳಿಕ ಸೋನು ಮನಸ್ಸು ಕರಗಿ ಜಾಮೀನು ಕೊಡಿಸುತ್ತಾಳೆ. ಇತ್ತ ಪ್ರೇಮ್‌ಚಂದ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಪತಿಯ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತದೆ. ಹೀಗಾಗಿ ಒಂದಾಗಿ ಸಂಸಾರ ನಡೆಸುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಅದೇ ಕ್ಯಾಸೆಟ್ ರಿಪೀಟ್ ಆಗುತ್ತದೆ.
ಗಂಡ ಸತ್ತ ಮೇಲೆ 8 ವರ್ಷ ಮಗನನ್ನು ಬಂಧಿಸಿಟ್ಟು ತನ್ನ ಕಾಮಾಸಕ್ತಿ ತೀರಿಸಿಕೊಳ್ತಿದ್ದ ತಾಯಿ!
ಇದೀಗ 2022ರ ಆರಂಭದಲ್ಲೇ ಮತ್ತೆ ಗಂಡನ ವಿರುದ್ಧ ಪತ್ನಿ ಸೋನು ಪ್ರಕರಣ ದಾಖಲಿಸಿದ್ದಾಳೆ. ಇದರ ವಿಚಾರಣೆ ನಡೆದು ಮತ್ತೆ ಪ್ರೇಮ್‌ಚಂದ್ ಜೈಲು ಸೇರಿದ್ದಾನೆ. ಮತ್ತೆ ನೆರವಿನಿಗೆ ಪತ್ನಿ ಸೋನು ಜುಲೈ4 ರಂದು ಪತಿಗೆ ಜಾಮೀನು ಕೊಡಿಸಿ ಬಿಡುಗಡೆ ಮಾಡಿದ್ದಾಳೆ. ಜೈಲಿನಿಂದ ಬಿಡುಗಡೆಯಾದ ಪ್ರೇಮ್‌ಚಂದ್ ಇದೀಗ ಪತ್ನಿ ಸೋನು ಜೊತೆ ಹಾಯಾಗಿದ್ದಾನೆ.