
ಕೆಲವು ಪ್ರಶ್ನೆ (Question) ಗಳಿಗೆ ಉತ್ತರ ಸುಲಭವಾಗಿ ಸಿಗೋದಿಲ್ಲ. ಪ್ರೀತಿ (Love) ವಿಷ್ಯದಲ್ಲೂ ಇದೇ ಆಗುತ್ತದೆ. ಯಾರನ್ನಾದ್ರೂ ನಾವು ಇಷ್ಟಪಡಲು ಶುರು ಮಾಡಿದ್ರೆ ಅದು ಪ್ರೀತಿಯೇ ಅಥವಾ ಅಟ್ಯಾಚ್ಮೆಂಟ್ ಎಂಬ ಗೊಂದಲ ಶುರುವಾಗುತ್ತದೆ. ಈ ಎರಡರ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಪ್ರೀತಿ ಎನ್ನುವುದು ಸುಲಭವಾಗಿ ಸಿಗುವುದಲ್ಲ. ಅನೇಕ ಬಾರಿ ಅಟ್ಯಾಚ್ಮೆಂಟ್, ಅಟ್ರ್ಯಾಕ್ಷನ್ ಗಳನ್ನೇ ನಾವು ಪ್ರೀತಿ ಎಂದು ನಂಬುತ್ತೇವೆ. ಪ್ರೀತಿ ಹಾಗೂ ಅಟ್ಯಾಚ್ಮೆಂಟ್ (attachment) ಯಾವುದು ಎಂಬ ಸಮಸ್ಯೆಯನ್ನು ನೀವೂ ಎದುರಿಸುತ್ತಿದ್ದರೆ ಮತ್ತು ನಿಮ್ಮ ಸಂಗಾತಿಯನ್ನು ಪ್ರೀತಿಸ್ತೀರಾ ಇಲ್ಲ ಅದು ಅಟ್ಯಾಚ್ಮೆಂಟಾ ಎಂಬ ಪ್ರಶ್ನೆ ನಿಮಗಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಲು ನಾವು ನಿಮಗೊಂದಿಷ್ಟು ಟಿಪ್ಸ್ ನೀಡ್ತೇವೆ.
ಪ್ರೀತಿ ಮತ್ತು ಅಟ್ಯಾಚ್ಮೆಂಟ್ ಎರಡೂ ಸಂಪೂರ್ಣ ವಿರುದ್ಧ : ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರೆ ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅವರ ಅಗತ್ಯತೆಗಳು, ಆಸೆಗಳನ್ನು ಈಡೇರಿಸಲು ಯಾವಾಗಲೂ ಸಿದ್ಧರಿರುತ್ತಾರೆ. ಸಂಗಾತಿ ಯಶಸ್ಸನ್ನು ನೋಡಿ ಸಂತೋಷವಾಗುತ್ತದೆ. ಆದರೆ ನೀವು ಬರಿ ಅಟ್ಯಾಚ್ಮೆಂಟ್ ಸಂಬಂಧ ಹೊಂದಿದ್ದರೆ ನಿಮ್ಮ ಅಗತ್ಯತೆಗಳು ಮತ್ತು ಬಯಕೆಗಳ ಬಗ್ಗೆ ಮಾತ್ರ ನೀವು ಗಮನ ನೀಡುತ್ತೀರಿ. ಯಾವಾಗ ಸಂಬಂಧದಲ್ಲಿ ಈ ಭಿನ್ನಾಭಿಪ್ರಾಯ ಬರುತ್ತದೆಯೋ, ಆಗ ಸಂಬಂಧ ಮುರಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಪ್ರೀತಿಯಿಂದ ಕಟ್ಟಲಾದ ಸಂಬಂಧ (Relationship) ಗಳು ಯಾವಾಗಲೂ ಗಟ್ಟಿಯಾಗಿ ಉಳಿಯುತ್ತವೆ.
MARRIED LIFE PROBLEM: ಈ ಜೋಡಿ ಒಂದಾಗಲು ಚಿಕ್ಕಮ್ಮನೇ ಅಡ್ಡಿಯಂತೆ!
ಪ್ರೀತಿ ಸ್ವಾತಂತ್ರ್ಯವನ್ನು ನೀಡಿದ್ರೆ ಅಟ್ಯಾಚ್ಮೆಂಟ್ ಕಂಟ್ರೋಲ್ (Control) ಮಾಡುತ್ತದೆ : ಪ್ರೀತಿಯಲ್ಲಿ ಸಂಪೂರ್ಣ ಸ್ವಾತಂತ್ರವಿರುತ್ತದೆ. ನಿಮ್ಮನ್ನು ಪ್ರೀತಿಸುವ ವ್ಯಕ್ತಿಯು ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ. ನಿಮ್ಮ ಭಾವನೆಗಳನ್ನು ಗೌರವಿಸುತ್ತಾರೆ. ಆದರೆ ಇದು ಅಟ್ಯಾಚ್ಮೆಂಟ್ ನಲ್ಲಿ ನಡೆಯುವುದಿಲ್ಲ. ಸಂಗಾತಿಯು ನಿಮ್ಮನ್ನು ನಿಯಂತ್ರಿಸಲು ಹಲವು ಬಾರಿ ಪ್ರಯತ್ನಿಸುವುದನ್ನು ನೀವು ಗಮನಿಸಿರಬೇಕು. ಯಾವಾಗ ಏನು ಮಾಡಬೇಕೆಂದು ಅವರು ಹೇಳುತ್ತಾರೆ. ಕೆಲವೊಮ್ಮೆ ಮಾತುಗಳ ಮೂಲಕ ನಿಮ್ಮನ್ನು ನೋಯಿಸಲು ಪ್ರಾರಂಭಿಸುತ್ತಾರೆ. ಆದ್ರೆ ಪ್ರೀತಿಯಲ್ಲಿದ್ದಾಗ ನೀವಾಗಿರಲಿ ಇಲ್ಲ ನಿಮ್ಮ ಸಂಗಾತಿಯಾಗಿರಲಿ ಹೀಗೆ ವರ್ತಿಸುವುದಿಲ್ಲ. ಒಂದ್ವೇಳೆ ನೀವು ಎಲ್ಲರನ್ನು ನಿಯಂತ್ರಣದಟ್ಟಿದ್ದರೆ ಅಥವಾ ಅವರು ನಿಮ್ಮನ್ನು ನಿಯಂತ್ರಣದಲ್ಲಿಟ್ಟಿದ್ದರೆ ಅದನ್ನು ಅಟ್ಯಾಚ್ಮೆಂಟ್ ಎಂದು ನೀವು ಭಾವಿಸಬಹುದು.
ಅಟ್ಯಾಚ್ಮೆಂಟ್ ಗಿಲ್ಲ ದೀರ್ಘ ಸಮಯದ ಭವಿಷ್ಯ (Future) : ಪ್ರೀತಿ ಶಾಶ್ವತ. ನೀವು ನಿಜವಾಗಿಯೂ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರನ್ನು ಯಾವುದೇ ಸ್ವಾರ್ಥವಿಲ್ಲದೆ ಬಯಸುತ್ತೀರಿ. ಅವರ ಬಗ್ಗೆ ಯೋಚಿಸುತ್ತೀರಿ. ಅವರಿಂದ ದೂರವಾಗುವ ಬಗ್ಗೆ ಎಂದೂ ಆಲೋಚನೆ ಮಾಡುವುದಿಲ್ಲ. ಆದ್ರೆ ಇದು ಕೇವಲ ಅಟ್ಯಾಚ್ಮೆಂಟ್ ಅಥವಾ ಆಕರ್ಷಣೆಯಾಗಿದ್ದರೆ ಸ್ವಲ್ಪ ಸಮಯದ ನಂತರ ಅವರ ಬಗ್ಗೆ ಇರುವ ಆಸಕ್ತಿ ಕಡಿಮೆಯಾಗುತ್ತದೆ. ಆ ವ್ಯಕ್ತಿಯ ಬಗ್ಗೆ ನಿಮ್ಮ ಭಾವನೆ ಬದಲಾಗಲು ಪ್ರಾರಂಭವಾಗುತ್ತದೆ. ಅವರ ಮೇಲೆ ಪ್ರೀತಿ ಭಾವನೆ ಬರುವುದಿಲ್ಲ. ಮೊದಲಿದ್ದ ಆಸಕ್ತಿ, ಖುಷಿ ಎಲ್ಲವೂ ಕಡಿಮೆಯಾಗ್ತಾ ಬರುತ್ತದೆ.
ಕಾರಿನಲ್ಲಿ ರೊಮ್ಯಾನ್ಸ್ ಮಾಡಿದ ಯುವತಿಗೆ ಸಿಕ್ತು ಬರೋಬ್ಬರಿ 40 ಕೋಟಿ!, ಹೇಗೆ? ಇಲ್ಲಿದೆ ವಿವರ
ಪ್ರೀತಿ ಮುಂದಿನ ಹೆಜ್ಜೆಗೆ ದಾರಿಮಾಡಿ ಕೊಡುತ್ತದೆ : ನಿಜವಾಗಿಯೂ ನಿಮ್ಮನ್ನು ಪ್ರೀತಿಸುವ ವ್ಯಕ್ತಿ, ಯಾವಾಗಲೂ ನೀವು ಜೀವನದಲ್ಲಿ ಮುಂದುವರಿಯಲು ಮತ್ತು ಸಾಕಷ್ಟು ಪ್ರಗತಿಯನ್ನು ಸಾಧಿಸಲು ಬಯಸುತ್ತಾರೆ. ಪ್ರೀತಿಯಲ್ಲಿದ್ದರೆ ಇಬ್ಬರೂ ಪರಸ್ಪರ ಬೆಳವಣಿಗೆಗೆ ಸಹಕರಿಸುತ್ತಾರೆ. ಮೌಲ್ಯಗಳನ್ನು ಗೌರವಿಸುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಪಾಲುದಾರರನ್ನು ಬೆಂಬಲಿಸುತ್ತಾರೆ. ಆದರೆ ಅಟ್ಯಾಚ್‌ಮೆಂಟ್‌ನಲ್ಲಿ ಹಾಗಲ್ಲ. ಸ್ವಲ್ಪ ಸಮಯದ ನಂತರ ಈ ಸಂಬಂಧ ಹಳಸುತ್ತದೆ. ಏಕೆಂದರೆ ಅದರಲ್ಲಿ ಸ್ವಾರ್ಥ ಹೆಚ್ಚಿರುತ್ತದೆ. ಒಬ್ಬ ವ್ಯಕ್ತಿಯು ತನ್ನ ಲಾಭದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾನೆ ಮತ್ತು ಪ್ರತಿದಿನ ಸಂಬಂಧವು ಕ್ಷೀಣಿಸಲು ಪ್ರಾರಂಭಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.