ಇಲ್ಲಿರುವ ಚಿತ್ರವನ್ನು ಒಮ್ಮೆ ನೋಡಿ. ನಿಮ್ಮ ಮಿದುಳಿಗೆ ಯಾವ ಸಂದೇಶ ಮೊದಲು ರವಾನೆ ಆಗಿದೆ ಎನ್ನುವುದನ್ನು ಗುರುತಿಸಿ. ಕುತೂಹಲಕಾರಿಯಾಗಿರುವ ಜತೆಗೆ, ವಿನೋದವನ್ನೂ ನೀಡುವ ಈ ಚಿತ್ರದಲ್ಲಿ ಯಾವ ಆಕೃತಿ ಮೊದಲು ನಿಮ್ಮ ಗಮನ ಸೆಳೆದಿದೆ? ಯಾವ ಚಿತ್ರವನ್ನು ಮೊದಲು ನೀವು ಗುರುತಿಸಿದ್ದೀರಿ ಎನ್ನುವ ಆಧಾರದ ಮೇಲೆ ನೀವು ಉತ್ತಮ ಕೇಳುಗರೋ ಅಥವಾ ಸಹಾನುಭೂತಿ ಉಳ್ಳವರೋ ಎಂದು ಹೇಳಬಹುದು.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮನ್ನು ಗೊಂದಲಗೊಳಿಸುತ್ತವೆ. ನಿಜವಾಗಿಯೂ ಅಲ್ಲಿರುವುದೇನು ಎಂದು ಗುರುತಿಸಲು ಸ್ವಲ್ಪ ಚಿಂತನೆಗೆ ಹಚ್ಚುತ್ತವೆ. ಅಷ್ಟೇ ಅಲ್ಲ, ಇಂತಹ ಚಿತ್ರಗಳು ನಮ್ಮ ವ್ಯಕ್ತಿತ್ವವನ್ನೂ ತಿಳಿಸುತ್ತವೆ. ಇಲ್ಲೊಂದು ಚಿತ್ರವಿದೆ, ಇದನ್ನು ಗಮನವಿಟ್ಟು ನೋಡಿ. ಇದರಲ್ಲಿ ನಿಮಗೇನು ಕಾಣಿಸುತ್ತದೆ ಎನ್ನುವುದರ ಆಧಾರದ ಮೇಲೆ ನೀವು ಎಷ್ಟರ ಮಟ್ಟಿಗೆ ಉತ್ತಮ ಕೇಳುಗರಾಗಿದ್ದೀರಿ, ಮತ್ತೊಬ್ಬರ ಕಷ್ಟಗಳನ್ನು ಎಷ್ಟು ಆಲಿಸುತ್ತೀರಿ, ಇನ್ನೊಬ್ಬರ ಬಗ್ಗೆ ಯಾವ ರೀತಿಯಲ್ಲಿ ಸಹನಾನುಭೂತಿ ಹೊಂದಿದ್ದೀರಿ ಎನ್ನುವುದನ್ನು ತಿಳಿಯಬಹುದು. ಎಷ್ಟೋ ಬಾರಿ, ನಮ್ಮದೇ ವ್ಯಕ್ತಿತ್ವದ ಬಗ್ಗೆ ನಮಗೆ ಸ್ಪಷ್ಟತೆ ಇರುವುದಿಲ್ಲ. ನಮ್ಮಲ್ಲಿ ಅಡಗಿರುವ ಕೆಲವು ಗುಣಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅರಿತುಕೊಳ್ಳುತ್ತಲೇ ಇರುತ್ತೇವೆ. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇದಕ್ಕೆ ಅವಕಾಶ ನೀಡುತ್ತವೆ. ಮೇಲ್ನೋಟಕ್ಕೆ ಅವು ಹೇಗೆ ಕಾಣುತ್ತವೆಯೋ ಅದಷ್ಟೇ ಸತ್ಯವಾಗಿರುವುದಿಲ್ಲ. ಅವುಗಳಲ್ಲಿ ಇನ್ನೇನೋ ಅಡಗಿರುತ್ತದೆ. ಅವುಗಳನ್ನು ನೋಡಲು ವಿಶೇಷ ಮನಸ್ಥಿತಿ, ದೃಷ್ಟಿಕೋನ ಬೇಕಾಗುತ್ತದೆ. ಇದನ್ನು ಜಾಗೃತಗೊಳಿಸಿಕೊಳ್ಳಲು ಸಹ ಇಂತಹ ಚಿತ್ರಗಳು ಅನುಕೂಲಕಾರಿಯಾಗಿವೆ. ಬಣ್ಣ, ಬೆಳಕು, ರಚನೆಗಳಿಂದ ರೂಪುಗೊಂಡಿರುವ ಈ ಚಿತ್ರಗಳ ಮೂಲಕ ನಮ್ಮ ವ್ಯಕ್ತಿತ್ವವನ್ನು ಅರಿತುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.
• ಕರಡಿ (Bear) ಅಥವಾ ಪಾಂಡ (Panda)
ನೀವು ಈ ಚಿತ್ರದಲ್ಲಿ ಮೊದಲು ಕರಡಿ ಅಥವಾ ಪಾಂಡದ ಮುಖವನ್ನು ಕಂಡಿದ್ದರೆ, ನೀವು ಜನರನ್ನು ಹೆಚ್ಚಾಗಿ ನಂಬುವುದಿಲ್ಲ. ಮೇಲ್ನೋಟಕ್ಕೆ ಎಲ್ಲರೊಂದಿಗೆ ಬೆರೆತರೂ, ಮಾತನಾಡಿದರೂ, ಒಡನಾಡಿದರೂ (Interact) ಎಲ್ಲವನ್ನೂ ಮುಕ್ತವಾಗಿ ಜನರೊಂದಿಗೆ ಹಂಚಿಕೊಳ್ಳಲು (Share) ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮ ನೈಜವಾದ ಭಾವನೆಗಳನ್ನು (Feelings) ಮರೆಮಾಚಬಹುದು. ಜನರೊಂದಿಗೆ ಆಪ್ತವಾಗಲು (Close) ನಿಮಗೆ ನೀವೇ ತಡೆ ಒಡ್ಡಿಕೊಳ್ಳಬಹುದು.
undefined
ಇಲ್ಲಿ ಮೊದಲು ನಿಮಗೇನು ಕಾಣುತ್ತೆ? ಜಗತ್ತನ್ನು ಹೇಗೆ ಗ್ರಹಿಸುತ್ತೀರೋ ಗೊತ್ತು ಮಾಡ್ಕೊಳ್ಳಿ!
ಏಕೆಂದರೆ, ನಿಮ್ಮಲ್ಲಿ ಜನರ ಕುರಿತು ನಂಬಿಕೆ (Trust) ಕಡಿಮೆ. ಈ ಗುಣ ಹಳೆಯ ಅನುಭವಗಳಿಂದ ಬಂದಿರಬಹುದು. ನೀವು ಪದೇ ಪದೆ ವಂಚನೆ, ಮೋಸ (Cheat) ಅಥವಾ ವಿಶ್ವಾಸದ್ರೋಹಕ್ಕೆ ಒಳಗಾಗಿದ್ದರೆ ಕ್ರಮೇಣ ನೀವು ಜನರನ್ನು ನಂಬುವುದನ್ನು ಬಿಟ್ಟಿರಬಹುದು. ಯಾವುದಾದರೂ ವಿಚಾರದ ಬಗ್ಗೆ ನೀವು ಅತಿಯಾಗಿ ಯೋಚನೆ (Think) ಮಾಡುತ್ತೀರಿ. ನೀವು ಎಷ್ಟರ ಮಟ್ಟಿಗೆ ಚಿಂತಿಸುತ್ತೀರಿ ಎಂದರೆ ಕೆಲವೊಮ್ಮೆ ನಿಮ್ಮ ಮನಸ್ಸು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ನಿಮಗೇ ಸುಸ್ತೆನಿಸಬಹುದು. ಅತಿಯಾದ ಯೋಚನೆಯಿಂದ ಬಸವಳಿಯುವುದು ನಿಮ್ಮ ಅಭ್ಯಾಸ. ನಿಮ್ಮ ಯೋಚನೆಗಳಲ್ಲೇ ನೀವು ಮುಳುಗುವ ಸ್ವಭಾವ ಹೊಂದಿರುವುದರಿಂದ ಬೇರೆಯವರ ಮಾತುಗಳನ್ನು (Voice) ಕೇಳಿಸಿಕೊಳ್ಳುವುದು ನಿಮಗೆ ಕಷ್ಟವಾಗುತ್ತದೆ. ಮತ್ತೊಬ್ಬರನ್ನು ಅರಿತುಕೊಳ್ಳುವ ಗುಣ ನಿಮ್ಮಲ್ಲಿ ಕಡಿಮೆ ಇರುತ್ತದೆ. ಅವರ ಬಗ್ಗೆ ಸಹಾನುಭೂತಿಯೂ ಕಡಿಮೆ ಇರುತ್ತದೆ.
ಫೋಟೋದಲ್ಲಿ ಫಸ್ಟ್ ನಿಮಗೇನ್ ಕಾಣುತ್ತೆ, ಇದು ನೀವೆಷ್ಟು Workaholic ತಿಳಿಸುತ್ತೆ!
• ಜಲಪಾತ (Water Falls)
ಒಂದೊಮ್ಮೆ ನೀವು ಜಲಪಾತವನ್ನು ಮೊಟ್ಟಮೊದಲು ಗುರುತಿಸಿದ್ದೀರಿ ಎಂದಾದರೆ, ನೀವು ಸಾಕಷ್ಟು ಸಹಾನುಭೂತಿ (Empathy) ಹೊಂದಿರುವ ವ್ಯಕ್ತಿಯಾಗಿದ್ದೀರಿ ಎಂದರ್ಥ. ನೀವು ಮತ್ತೊಬ್ಬರ ಭಾವನೆಗಳಿಗೆ ಬೆಲೆ ನೀಡುತ್ತೀರಿ. ಅವರ ದೃಷ್ಟಿಕೋನದಿಂದ ಸನ್ನಿವೇಶ ಅಥವಾ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ. ನೀವು ಉತ್ತಮ ಕೇಳುಗರು (Good Listener) ಸಹ. ಹೀಗಾಗಿ, ನಿಮಗೆ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಸ್ನೇಹವಲಯ ನಿಮ್ಮ ಶಕ್ತಿಯಾಗಿದ್ದು, ಎಲ್ಲರ ಬಗೆಗೆ ಕಾಳಜಿ (Care) ಹೊಂದಿದ್ದೀರಿ. ಹೀಗಿದ್ದರೂ ನೀವು ಒಂದು ಸಮಸ್ಯೆ ಎದುರಿಸಬಲ್ಲಿರಿ. ಅದೆಂದರೆ, ಇತರರ ಭಾವನಾತ್ಮಕ ಭಾರಗಳನ್ನು ನೀವು ಹೊರಲು ಮುಂದಾಗಬಹುದು. ಇದರಿಂದಾಗಿ, ಕೆಲವೊಮ್ಮೆ ನಿಮಗೇ ಹತಾಶೆ. ಕಿರಿಕಿರಿ (Frustrate) ಉಂಟಾಗಬಹುದು. ಹೀಗಾಗದಂತೆ ನೋಡಿಕೊಳ್ಳುವುದು ನಿಮ್ಮ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅಗತ್ಯ. ಒಟ್ಟಿನಲ್ಲಿ ನೀವೊಬ್ಬ ಅದ್ಭುತ ಮಾನವೀಯ ವ್ಯಕ್ತಿ ಆಗಿದ್ದೀರಿ ಎನ್ನುವುದನ್ನು ಇದು ಸೂಚಿಸುತ್ತದೆ.