ತನ್ನ ಮಗಳನ್ನೇ ಮದುವೆಯಾದ ಆ ರಾಜನ ಬಗ್ಗೆ ನಿಮಗೆ ಗೊತ್ತಾ?

By Bhavani Bhat  |  First Published Aug 23, 2024, 10:03 PM IST

ಆತನೊಬ್ಬ ಭಾರತದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದ ರಾಜ. ಮೊಘಲ್‌ ಸಾಮ್ರಾಜ್ಯದ ಈ ಸಾಮ್ರಾಟನ ಬಗ್ಗೆ ಇತಿಹಾಸಕಾರರು ಸಾಕಷ್ಟು ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಆದರೆ ಈತ ಸ್ವತಃ ತನ್ನ ಮಗಳನ್ನೇ ಮದುವೆಯಾದವನು ಎಂಬ ವಿಷಯ ನಿಮಗೆ ಗೊತ್ತೆ? ಅವನ್ಯಾರು ಎತ್ತ ತಿಳಿಯೋಣ ಬನ್ನಿ.
 


ಆತ ತನ್ನ ಮಗಳನ್ನೇ ಮದುವೆಯಾದವನು ಎಂದು ತಿಳಿದರೆ, ಮಗಳನ್ನೇ ಮದುವೆಯಾಗುವವರೂ ಈ ಲೋಕದಲ್ಲಿ ಇರುತ್ತಾರಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಹೌದು, ನಾವು ಇಲ್ಲಿ ಮತನಾಡುತ್ತಿರುವುದು ಅಂಥ ಒಬ್ಬ ವ್ಯಕ್ತಿಯ ಬಗ್ಗೆ. ಆತ ಸಾಮಾನ್ಯದವನಲ್ಲ, ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾದವನು. ಸುಪ್ರಸಿದ್ಧ ಮೊಘಲ್ ಚಕ್ರವರ್ತಿ. ಆ ರಾಜ ಇತಿಹಾಸದಲ್ಲಿ ನೆನಪುಳಿಯುವಂಥ ಸ್ಮಾರಕವನ್ನು ದೇಶಕ್ಕೆ ಬಿಟ್ಟುಕೊಟ್ಟು ಹೋದ. ಆದರೆ ಭವಿಷ್ಯದಲ್ಲಿ ಯಾರೂ ಅನುಸರಿಸಬಾರದ ಕೆಲಸವನ್ನೂ ಮಾಡಿದ.ಈತ ತನ್ನ ಪತ್ನಿ ಮರಣವನ್ನಪ್ಪಿದ ಬಳಿಕ ಆಕೆಯ ಹೊಟ್ಟೆಯಲ್ಲಿ ಹುಟ್ಟಿದ್ದ ಮಗಳನ್ನೇ ಮದುವೆಯಾದ!

ಅವನು ಬೇರ್ಯಾರೂ ಅಲ್ಲ, ತಾಜ್‌ಮಹಲ್‌ ಅನ್ನು ನಿರ್ಮಿಸಿದ ಮೊಘಲ್ ಚಕ್ರವರ್ತಿ ಷಹಜಹಾನ್. ತನ್ನ ಪತ್ನಿ ಮುಮ್ತಾಜ್ ಮರಣದ ನಂತರ ಈತ ತಾಜ್ ಮಹಲ್ ಅನ್ನು ನಿರ್ಮಿಸಿದ. ಮುಮ್ತಾಜ್‌ ತನ್ನ ಹದಿನಾಲ್ಕನೆಯ ಮಗುವಿಗೆ ಜನ್ಮ ನೀಡುವಾಗ, ಜೂನ್ 17, 1631ರಂದು ನಿಧನಳಾದಳು. 

Tap to resize

Latest Videos

ನಂತರ ಮುಮ್ತಾಜ್‌ ಹೊಟ್ಟೆಯಲ್ಲಿ ಜನಿಸಿದ್ದ ತನ್ನ ಸ್ವಂತ ಮಗಳು ಜಹನಾರಾಳನ್ನು ಮದುವೆಯಾದ. ಅದಕ್ಕೆ ಕಾರಣವಿತ್ತು. ಜಹನಾರಾ ತನ್ನ ಮೊದಲ ಪತ್ನಿ ಮುಮ್ತಾಜ್ ಅನ್ನು ಹೋಲುತ್ತಾಳೆ ಎಂದು ಅವನು ಭಾವಿಸಿದ್ದ. ಮುಮ್ತಾಜ್ ನಿಧನಳಾದಾಗ, ಜಹಾನಾರಾ ಕೇವಲ 17 ವರ್ಷ ವಯಸ್ಸಿನವಳಾಗಿದ್ದಳು. ಮುಮ್ತಾಜ್‌ ಅಗಲಿಕೆಯಿಂದ ಷಹಜಹಾನ್ ತನ್ನ ಪ್ರಜ್ಞೆ, ಮನಸ್ಸು, ವಿವೇಕವನ್ನೆಲ್ಲ ಕಳೆದುಕೊಂಡಿದ್ದಂತೆ ಕಾಣುತ್ತದೆ. ಮುಮ್ತಾಜ್ ನೆನಪಿಗಾಗಿ ತಾಜ್‌ಮಹಲ್‌ ಕಟ್ಟಿಸಿದ್ದು ಸಾಲದು ಎಂದು, ಮಗಳಾದ ಜಹಾನಾರಾಳನ್ನು ನಿಕಾಹ್‌ ಆದ. ಆಕೆ ನಿಖರವಾಗಿ ಮುಮ್ತಾಜ್‌ಳನ್ನೇ ಹೋಲಿಕೆಯನ್ನು ಹೊಂದಿದ್ದಳು. ಈ ಕಾರಣದಿಂದಲಾದರೂ ಮುಮ್ತಾಜ್‌ ಇನ್ನೊಂದು ರೂಪದಲ್ಲಿ ತನ್ನಲ್ಲಿಯೇ ಉಳಿಯಲಿ ಎಂದು ಆತ ಭಾವಿಸಿರಬೇಕು. ಅಥವಾ ಮುಮ್ತಾಜಳೇ ಜಹನಾರಾಳ ರೂಪದಲ್ಲಿ ಬಂದಿದ್ದಾನೆ ಎಂದು ಭಾವಿಸಿರಲೂಬಹುದು. 

ಜಹನಾರಾ ಈ ಮದುವೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಬಹುಶಃ ಆಕೆ ತನ್ನ ತಂದೆ ಆಗ ಇದ್ದ ಪರಿಸ್ಥಿತಿ ನೋಡಿ ತೀವ್ರವಾಗಿ ವಿಚಲಿತಳಾಗಿದ್ದಳು. ಮುಮ್ತಾಜ್ ಮಹಲ್ ಮತ್ತು ಷಹಜಹಾನ್‌ರಿಗೆ ಜಹನಾರಾ ಎರಡನೇ ಮಗು. ಜಹನಾರಾ ತುಂಬಾ ಚೆಲುವೆ. ಜೊತೆಗೆ ಧರ್ಮನಿಷ್ಠ ಮುಸ್ಲಿಂ. ರಾಜಕೀಯದ ಬಗ್ಗೆಯೂ ಸಾಕಷ್ಟು ಅರ್ಥಮಾಡಿಕೊಂಡಿದ್ದಳು ಅನ್ನಬಹುದು. ತಂದೆಗೆ ಎದುರಾಡುವವಳಲ್ಲ. ಇನ್ನು ಅವನ ಆಸ್ಥಾನದಲ್ಲಿದ್ದ ಮಂತ್ರಿಗಳು, ಧರ್ಮಗುರುಗಳು ಸಾಮ್ರಾಟನಿಗೆ ವಿರೋಧ ನುಡಿಯುವವರಲ್ಲ. ಸಾಮ್ರಾಟನಿಗೆ ಎದುರಾಡಿ ಬದುಕಿದವರುಂಟೆ? ಹೀಗಾಗಿ ಯಾರೂ ಏನೂ ಪ್ರತಿಯಾಡಲಿಲ್ಲ. ಆದರೆ ಮಗಳನ್ನೇ ಮದುವೆಯಾದ ಎಂಬ ಮಾತನ್ನು ಹೊರಗೆ ಹೋಗಲು ಷಹಜಹಾನ್‌ ಬಿಡಲಿಲ್ಲ. ಅಪಪ್ರಚಾರವನ್ನು ತಡೆಯಲು ಷಹಜಹಾನ್, ಜಹಾನಾರಾಗೆ "ಪಾದ್ಶಾ ಬೇಗಂ" ಎಂಬ ಹೊಸ ಹೆಸರನ್ನು ನೀಡಿದ. 

ಪೋಷಕರು ಮಾಡೋ ಈ ತಪ್ಪಿನಿಂದ ಮಕ್ಕಳು ಮಂಗಳಮುಖಿರಾಗ್ತಾರಾ?
 
ಸಹಜಹಾನನ ಮಗ ಔರಂಗಜೇಬ ತನ್ನ ತಂದೆಯ ಬಗ್ಗೆ ಒಳ್ಳೆಯ ಭಾವನೆ ಹೊಂದಿರಲಿಲ್ಲ. ಆತ ಷಹಜಹಾನ್‌ನನ್ನು ಸೆರೆಮನೆಗೆ ನೂಕಿದ. ತನ್ನ ಸ್ವಂತ ಸಹೋದರ, ಅಣ್ಣ ದಾರಾ ಶಿಕೋನನ್ನು ಹತ್ಯೆಗೈದು ಸಿಂಹಾಸನವನ್ನು ತಾನೇ ಏರಿದ. ಇತಿಹಾಸದ ಈ ಅಧ್ಯಾಯವನ್ನು ಸಾರ್ವಜನಿಕರ ಕಣ್ಣುಗಳಿಂದ ಮರೆಮಾಚಲಾಯಿತು. ಮೊಘಲರ ನಂತರ ಬ್ರಿಟಿಷರು ಅಧಿಕಾರ ವಹಿಸಿಕೊಂಡರು. ಕೆಲವು ಭಾರತೀಯ ಇತಿಹಾಸಕಾರರು ಈ ಕತೆಯನ್ನು ನಿಜವೆಂದಿದ್ದಾರೆ. ಆದರೆ ಇನ್ನು ಕೆಲವು ಇತಿಹಾಸಕಾರರು ಇದು ಗಾಸಿಪ್ ಎಂದು ತಳ್ಳಿಹಾಕಿದ್ದಾರೆ. ಇದು ನಡೆದದ್ದಕ್ಕೂ ಸಾಕ್ಷಿಗಳಿಲ್ಲ. ಆದರೆ ತಾಜ್‌ಮಹಲ್‌ ಕಟ್ಟುವಾಗ ನೂರಾರು ಮಂದಿಯ ಬಲಿದಾನವಾಗಿದೆ ಎಂಬುದಕ್ಕೂ ಸಾಕ್ಷಿಗಳಿಲ್ಲ. ಹಾಗಂತ ಅದು ನಿಜವಲ್ಲ ಎನ್ನಲಾದೀತೆ? 

ಇತಿಹಾಸದಲ್ಲಿ ಇಂಥ ನಿರಂಕುಶ ರಾಜರುಗಳ ಅನೇಕ ಲೀಲಾವಿಲಾಸಗಳು ಹುದುಗಿಹೋಗಿವೆ. ಅವು ಇತಿಹಾಸದಲ್ಲಿ ದಾಖಲಾಗಿಲ್ಲ. ಯಾಕೆಂದರೆ ನಿಖರವಾಗಿ ಅವುಗಳನ್ನೆಲ್ಲ ದಾಖಲಿಸುವ ಇತಿಹಾಸಕಾರರು ಅಂದು ಇರಲಿಲ್ಲ. ನಂತರ ಬಂದ ಅನೇಕ ಇತಿಹಾಸಕಾರರು ಮೊಘಲರನ್ನು ವಿಜೃಂಭಿಸುವುದರಲ್ಲೇ ಆಸಕ್ತರಾದರು ಹೊರತು ವಾಸ್ತವವನ್ನು ದಾಖಲಿಸುವುದರಲ್ಲಿ ಇರಲಿಲ್ಲ. 

ಕೇವಲ 43 ದಿನ ಜೊತೆಗಿದ್ದ ವೈದ್ಯ ದಂಪತಿಗೆ 22 ವರ್ಷದ ಬಳಿಕ ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್‌
 

click me!