ಪವಿತ್ರಾ ಸಹವಾಸ ಬಿಟ್ಟರೆ ಮಾತ್ರ ಸಪೋರ್ಟ್ ಎಂದ ಫ್ರೆಂಡ್ಸ್, ಸಂಧಾನಕ್ಕೆ ದರ್ಶನ್ ಒಪ್ಪಿದ್ರಾ?

By Gowthami K  |  First Published Aug 22, 2024, 7:41 PM IST

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದಲ್ಲಿ ಬಿರುಕು ಮೂಡಿದೆ. ಜೈಲಿನಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗದಿರುವುದು ಕೂಡ ಈ ಸಂಶಯವನ್ನು ಬಲಪಡಿಸಿದೆ.


ಬೆಂಗಳೂರು (ಆ.22): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಮಾಡಿದ ಪ್ರಕರಣದಲ್ಲಿ  ಆರೋಪಿ ಆಗಿರುವ ನಟ ದರ್ಶನ್ (Actor Darshan), ಆತ್ಮೀಯ ಗೆಳತಿ ಪವಿತ್ರಾ ಗೌಡ  ( Pavithra Gowda) ಸೇರಿ ಒಟ್ಟು 17 ಮಂದಿ ಈಗ ಜೈಲ್ಲಿನಲ್ಲಿದ್ದಾರೆ.

ಆರೋಪಿಗಳು ಜೈಲಿಗೆ ಹೋಗಿ 60 ದಿನ ಕಳೆದಿದೆ. ಆದರೆ ಈಗ ಪ್ರಶ್ನೆ ಅದಲ್ಲ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಮುರಿದು ಬಿತ್ತಾ? ಅನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣವೂ ಇದೆ. ಸದ್ಯ ಎ1 ಆರೋಪಿ ಪಟ್ಟಿಯಲ್ಲಿರುವ ಪವಿತ್ರಾ ಗೌಡ ತನ್ನ ಆತ್ಮೀಯ ಗೆಳೆಯನನ್ನು ಬಿಟ್ಟು ಪ್ರತ್ಯೇಕವಾಗಿ ಜಾಮೀನು ಅರ್ಜಿ ಸಲ್ಲಿಸಿದ್ಯಾಕೆ ಎಂಬ ಅನುಮಾನವೇ ಇವರಿಬ್ಬರ ಸಂಬಂಧ ಹಳಸಿದೆ ಎಂದು ಬೊಟ್ಟು ಮಾಡುತ್ತಿದೆ.

Latest Videos

ಕೇವಲ 1200 ಕುಟುಂಬಗಳಿರುವ ಭಾರತದ ಈ ಹಳ್ಳಿಯು ಏಷ್ಯಾದ ಶ್ರೀಮಂತ ಗ್ರಾಮವಾಗಿದ್ದು ಹೇಗೆ?

ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಈವರೆಗೂ ಕೊಲೆ ಕೇಸ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿಲ್ಲ. ಆದರೆ ಅದಕ್ಕಿಂತಲೂ ಮುನ್ನ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿ  ಒಟ್ಟಿಗೆ ಭಾಗಿಯಾದ ಕೊಲೆ ಕೇಸ್​ನಲ್ಲಿ ಕಾನೂನು ಹೋರಾಟ ಮಾತ್ರ ಬೇರೆ ಬೇರೆಯಾಗಿ ಮಾಡುತ್ತಿದ್ದಾರೆ.

ಅವಕಾಶ ಇದ್ರೂ ಜೈಲಲ್ಲಿ ಭೇಟಿಯಾಗಿಲ್ಲ ದರ್ಶನ್-ಪವಿತ್ರ!
ಇನ್ನು ಪರಪ್ಪನ ಅಗ್ರಹಾರದಲ್ಲಿ ಕಳೆದ ಎರಡು ತಿಂಗಳಿನಿಂದ ಇದ್ದರೂ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಭೇಟಿಯಾಗಿಲ್ಲ. ಜೈಲು ನಿಯಮಾವಳಿ ಪ್ರಕಾರ ಪರಸ್ಪರ ಭೇಟಿಗೆ ವಾರದಲ್ಲಿ ಒಂದು ದಿನ ಅವಕಾಶ ಇದೆ. ಈ ಅವಕಾಶ ಇದ್ದರೂ ದರ್ಶನ್-ಪವಿತ್ರಾ ಮಧ್ಯೆ ಮಾತಿಲ್ಲ, ಕಥೆಯಿಲ್ಲ. ನಿಯಮಗಳ ಪ್ರಕಾರ ಒಂದೇ ಕೇಸ್​ನಲ್ಲಿ ಆರೋಪಿಗಳಾಗಿದ್ದರೆ, ರಕ್ತ ಸಂಬಂಧಿಗಳು, ಗಂಡ-ಹೆಂಡತಿ, ಗೆಳೆತನ ಇದ್ದರೆ ಜೈಲಾಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದು ಭೇಟಿಯಾಗಬಹುದು. ಕೊಲೆ ಕೇಸ್​ನಲ್ಲಿ ಜೈಲು ಸೇರಿದ ನಂತರ ಇಬ್ಬರು ಕೂಡ ದೂರವೇ ಉಳಿದು, ನಾನೊಂದು ತೀರ ನೀನೊಂದು ತೀರ ಅನ್ನುವಂತಿದ್ದಾರೆ.

ಪ್ರಭಾವಿ ರಾಜಕಾರಣಿಯ ಮನೆಯಲ್ಲಿ ನಡೆದಿತ್ತು ಪವಿತ್ರಾ-ದರ್ಶನ್​ ಸಹವಾಸ ಬಿಟ್ಟುಬಿಡುವಂತೆ ಆಪ್ತರ ಸಭೆ
ಪವಿತ್ರಾ ಗೌಡ ಸಹವಾಸ ಬಿಟ್ಟು ವಿಜಯಲಕ್ಷ್ಮೀ ಜತೆಯಲ್ಲಿದ್ರೆ ಮಾತ್ರ ನಿನಗೆ ನಮ್ಮ ಬೆಂಬಲ ಎಂದು  ಆಪ್ತರು, ಕುಟುಂಬಸ್ಥರು ಜೈಲಿನಲ್ಲಿರುವ ದರ್ಶನ್‌ ಗೆ ತಿಳಿ ಹೇಳಿದ್ದಾರಂತೆ. ಈ ಸಂಬಂಧ ಪ್ರಭಾವಿ ರಾಜಕಾರಣಿಯೊಬ್ಬರ ಮನೆಯಲ್ಲಿ ನಡೆದ ಸಭೆ ನಂತರ  ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ ಜತೆ ಆಪ್ತರಿಂದ ಸಂಧಾನ ಮಾತುಕತೆ ನಡೆದಿದ್ದು, ಪವಿತ್ರಾ ಗೌಡಳನ್ನ ಬಿಟ್ಟರೆ ಮಾತ್ರ  ಕಾನೂನು ಹೋರಾಟ ಮಾಡ್ತೀವಿ. ಪವಿತ್ರಾಳನ್ನ ಬಿಟ್ಟರೆ ಮಾತ್ರ ಇಡೀ ಕುಟುಂಬ ನಿನ್ನ ಜತೆಗಿರುತ್ತೆ  ಎಂದು ಮನವರಿಕೆ ಮಾಡಿದ್ದಾರಂತೆ.

ಕುಟುಂಬಸ್ಥರು, ಆಪ್ತರು ಹಾಕಿದ ಷರತ್ತಿಗೆ ಆರೋಪಿ ದರ್ಶನ್ ಒಪ್ಪಿಕೊಂಡಿದ್ದು, ಪವಿತ್ರಾಗೌಡ ಸಹವಾಸ ಬಿಡ್ತೀನಿ ಎಂದು ಭರವಸೆ ಕೊಟ್ಟಿದ್ದು, ನೀವು ಹೇಳಿದಂತೆ ಕೇಳುತ್ತೇನೆ,  ಸಹಾಯ ಮಾಡಿ ಎಂದು ದರ್ಶನ್ ಕೇಳಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಸ್ಲೀಪರ್‌ನಿಂದ AC ಕ್ಲಾಸ್‌ಗೆ ಉಚಿತ ಅಪ್‌ಗ್ರೇಡ್, ರೈಲ್ವೆ ಇಲಾಖೆಯ ಈ ನಿಯಮ ನಿಮಗೆ ತಿಳಿದಿರಲಿ

ಪವಿತ್ರಾ ವಾದವೇನು?
CRPC ಸೆಕ್ಷನ್ 437 ಅಡಿ ಜಾಮೀನಿಗೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಅಚಾತುರ್ಯ ಆಗಿ ಹೋಗಿದೆ, ಇದರಲ್ಲಿ ನನ್ನ ಪಾತ್ರ ಇಲ್ಲ, ಸಾಮಾನ್ಯವಾಗಿ ಮಹಿಳಾ ಆರೋಪಿಗೆ ವಿನಾಯಿತಿ ಇರುತ್ತೆ. ಗಂಭೀರ ಪ್ರಕರಣ ಇದ್ದರೂ ಜಾಮೀನು ನೀಡಲು ಅವಕಾಶ ಇದೆ. ನನ್ನ ಸ್ಥಾನದಲ್ಲಿ ಯಾವ ಮಹಿಳೆ ಇದ್ದರೂ ಗಮನಕ್ಕೆ ತರ್ತಿದ್ರು. ನಾನು ಈಗಾಗಲೇ ಎರಡು ತಿಂಗಳು ಜೈಲಿನಲ್ಲಿ ಕಳೆದಿದ್ದೇನೆ. ನನಗೆ ಆರೋಗ್ಯ ಸಮಸ್ಯೆಯಿದೆ, ಮಾನಸಿಕವಾಗಿ ಕುಗ್ಗಿದ್ದೇನೆ. ತನಿಖೆಗೆ ಸಹಕರಿಸಿದ್ದೇನೆ, ವಯಸ್ಸಾದ ತಾಯಿಯನ್ನು, ಬೆಳೆಯುತ್ತಿರುವ ಮಗಳನ್ನು ನೋಡಿಕೊಳ್ಳಬೇಕು  ಹೀಗಾಗಿ ನನಗೆ ಜಾಮೀನು ನೀಡಿ ಎಂದು ಪವಿತ್ರ ಪರ ವಕೀಲರ ವಾದವಾಗಿದೆ.

ಪವಿತ್ರಾ ಗೌಡ ಜಾಮೀನಿಗೆ ಪೊಲೀಸರ ಆಕ್ಷೇಪ!
ಪವಿತ್ರಾ ಗೌಡ ಜಾಮೀನಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣದ ತನಿಖೆ ನಡೆಯುತ್ತಿದೆ, ಚಾರ್ಜ್​​ಶೀಟ್ ಕೊನೆಯ ಹಂತದಲ್ಲಿದೆ. ಚಾರ್ಜ್​​​ಶೀಟ್ ವೇಳೆ ಆರೋಪಿ ಪುನರ್ ಹೇಳಿಕೆ ಬೇಕಾಗುತ್ತದೆ. ಬೇರೆ ಆರೋಪಿಗಳ ಉತ್ತರಗಳನ್ನು ಕ್ರಾಸ್ ಚೆಕ್ ಮಾಡಿಸಬೇಕು. ಹೊರಗೆ ಬಂದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ. ಪ್ರಭಾವ ಬಳಸಿ ಸಾಕ್ಷಿ ನಾಶ ಮಾಡುವ ಸಾಧ್ಯತೆಯೂ ಇರುತ್ತೆ. ಬೇಲ್ ಸಿಕ್ಕರೆ ಸಾಕ್ಷಿಗಳಿಗೆ ಹಣದ ಆಮಿಷ ಒಡ್ಡುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ಮನದಟ್ಟು ಮಾಡಿದ್ದಾರೆ. 

ನ್ಯಾಯಾಲಯ ಪವಿತ್ರಾ ಗೌಡ ಮತ್ತು ಮತ್ತೋರ್ವ ಆರೋಪಿ ಅನುಕುಮಾರ್ ಅರ್ಜಿ ವಿಚಾರಣೆಯನ್ನು ಆಗಸ್ಟ್ 27 ಕ್ಕೆ ಮುಂದೂಡಿಕೆ ಮಾಡಿದೆ. ಈ ನಡುವೆ ಪ್ರಕರಣದ ಎ10  ಆರೋಪಿ, ಸ್ಟೋನಿಬ್ರೂಕ್ ಮಾಲೀಕ‌ ವಿನಯ್ ಕೂಡ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು 1ನೇ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲು ಪೊಲೀಸರು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಬಂಧನದ ಬಳಿಕ ದರ್ಶನ್‌ ಸ್ನೇಹಿತೆ ಪವಿತ್ರಾಗೌಡ ಅವರನ್ನು ಎ1 ಎಂದು, ದರ್ಶನ್ ಅವರನ್ನು ಎ2 ಆರೋಪಿ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ ತನಿಖೆ ವೇಳೆ ಇಡೀ ಕೃತ್ಯದ ಸೂತ್ರಧಾರ ದರ್ಶನ್‌ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಎ1 ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರದೂಷ್ ಮೊಬೈಲ್‌ನಲ್ಲಿ ಫೋಟೋ ಪತ್ತೆ:
ಇನ್ನು ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ರಕ್ತಸಿಕ್ತವಾಗಿ ಬಿದ್ದಿರುವ ಭಾವಚಿತ್ರಗಳು ದರ್ಶನ್‌ ಸ್ನೇಹಿತ ಪ್ರದೂಷ್ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಹತ್ಯೆ ಕೃತ್ಯದ ಬಳಿಕ ತನ್ನ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಪ್ರದೂಷ್ ಡಿಲೀಟ್ ಮಾಡಿದ್ದ. ಆದರೆ ಆತನ ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿಯ ರಕ್ತಸಿಕ್ತ ಮೂರು ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

click me!