ಉತ್ತರ ಕೊರಿಯಾದ ಸರ್ವಾಧಿಕಾರಿ ತನ್ನ ಅಂಕಲ್ ಅನ್ನು ಕೊಲ್ಲಿಸಿದ್ದು ನಿಮಗೆ ಗೊತ್ತಿರಬಹುದು. ಅದರ ಬಗ್ಗೆ ವಿವರಗಳನ್ನು ಆತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೇಳಿದ್ದಾನಂತೆ!
ಉತ್ತರ ಕೊರಿಯಾದ ರಾಕ್ಷಸ ಪ್ರವೃತ್ತಿಯ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತನ್ನ ಬೆಳವಣಿಗೆಗೆ ಆತಂಕ ಒಡ್ಡಬಹುದು ಎಂಬ ಕಾರಣಕ್ಕೆ ತನ್ನ ಅಂಕಲ್ಲನ್ನೇ ಕೊಲ್ಲಿಸಿದ್ದ. ಕಿಮ್ ಜಾಂಗ್ ಉನ್‌ನ ತಂದೆ ಕಿಮ್ ಜಾಂಗ್ ಇಲ್ 2011ರಲ್ಲಿ ಕಾಯಿಲೆಯಿಂದ ತೀರಿಕೊಂಡಾಗ ದೇಶದ ಆಡಳಿತದ ಹಂಗಾಮಿ ಚುಕ್ಕಾಣಿ ಹಿಡಿದಿದ್ದವನು ಕಿಮ್‌ನ ಅಂಕಲ್ ಜನರಲ್ ಜಾಂಗ್ ಸಾಂಗ್ ತಾಯೇಕ್. ಆಗ ಆತ ಸೈನ್ಯದ ಹಲವು ಮಂದಿಯನ್ನು ತನ್ನ ಕಡೆಗೆ ಒಲಿಸಿಕೊಂಡು ಪ್ರಭಾವಿಯಾಗಿ ಬೆಳೆದಿದ್ದ. ಕಿಮ್ ಅಧ್ಯಕ್ಷನಾದ ಬಳಿಕ, ಇದನ್ನು ಗಮನಿಸಿ, ಈತ ಯಾವತ್ತಿದ್ದರೂ ತನ್ನ ಬೆಳವಣಿಗೆಗೆ ಅಡ್ಡಿಯಾಗುವವನೇ ಎಂದು ಅರ್ಥ ಮಾಡಿಕೊಂಡ, ಜ.ಜಾಂಗ್‌ನನ್ನು ಕೊಲ್ಲಿಸಿದ. ಜಾಂಗ್‌ನನ್ನು ಎಳೆತರಿಸಿ ತನ್ನ ಗುಂಡಿಕ್ಕಲು ತನ್ನ ಫೈರಿಂಗ್ ಸ್ಕ್ವಾಡ್‌ಗೆ ಆರ್ಡರ್ ಮಾಡಿದ. ನಂತರ ಜ.ಜಾಂಗ್‌ನ ದೇಹದ ಮೇಲಿದ್ದ ಬಟ್ಟೆಗಳನ್ನೆಲ್ಲ ಬಿಚ್ಚಿಸಿ, ದೇಹವನ್ನು ಬೀದಿನಾಯಿಗಳು ತಿನ್ನಲೆಂದು ಬೀದಿಯಲ್ಲಿ ಬಿಸಾಡಿಸಿದ. ಅವನ ತಲೆಯನ್ನು ಕತ್ತರಿಸಿ, ತನ್ನ ಸರಕಾರದ ಮಂತ್ರಿಗಳು, ಸೈನ್ಯದ ಜನರಲ್‌ಗಳು ಓಡಾಡುವ ಜಾಗದಲ್ಲಿ ಇಟ್ಟ. ಅದಕ್ಕೆ ಕಾರಣ, ಇದನ್ನು ನೋಡಿ ಅವರೆಲ್ಲ ಪಾಠ ಕಲಿಯಲಿ- ತನ್ನ ಎದುರಾಡದಿರಲಿ ಎಂಬುದಾಗಿತ್ತು. ನಂತರ ಜ.ಜಾಂಗ್‌ನ ಮನೆಯವರನ್ನೂ ಕಾನ್ಸಂಟ್ರೇಶನ್ ಕ್ಯಾಂಪ್‌ಗಳಿಗೆ ಕಳಿಸಿದ. ಜಾಂಗ್‌ನ ಆಪ್ತರನ್ನೂ ಕೊಲ್ಲಿಸಿದ.
ಚೀನಾದಿಂದ ಉ.ಕೊರಿಯಾಕ್ಕೆ ಹೋದರೆ ಗುಂಡಿಟ್ಟು ಹತ್ಯೆ!
ಈ ಎಲ್ಲ ವಿವರಗಳನ್ನು ಕಿಮ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೇಳಿದ್ದನಂತೆ. ೨೦೧೭ರಲ್ಲಿ ಅವರಿಬ್ಬರೂ ಒಮ್ಮೆ ಮಾತ್ರ ಭೇಟಿಯಾಗಿದ್ದರು. ಆಗ ಇದನ್ನೆಲ್ಲ ಆತ ತನಗೆ ಹೇಳಿದ್ದಾನೆ. ಕಿಮ್ ತನ್ನ ಜೊತೆಗೆ ಪತ್ರ ವ್ಯವಹಾರ ಇಟ್ಟುಕೊಂಡಿದ್ದಾನೆ. ಅದರಲ್ಲಿ ಮುಕ್ತವಾಗಿ ಇಂಥ ವಿಷಯಗಳನ್ನೆಲ್ಲ ಹೇಳಿಕೊಳ್ಳುತ್ತಾನೆ ಎಂದು ಟ್ರಂಪ್ ಜಂಬ ಕೊಚ್ಚಿಕೊಂಡಿದ್ದಾನೆ. ಅಂದಹಾಗೆ ಟ್ರಂಪ್ ಇದನ್ನೆಲ್ಲ ಹೇಳಿರುವುದು ಬಾಬ್ ವುಡ್‌ವರ್ಡ್ ಎಂಬ ಪತ್ರಕರ್ತನ ಮುಂದೆ. ಕಿಮ್ ತನಗೆ ಬರೆದಿರುವ ಹಲವು ಪತ್ರಗಳನ್ನೂ ಟ್ರಂಪ್ ಈ ಪತ್ರಕರ್ತನಿಗೆ ಕೊಟ್ಟಿದ್ದಾನೆ. ಈ ಪತ್ರಕರ್ತ ವುಡ್‌ವರ್ಡ್, ಟ್ರಂಪ್‌ನ ಆತ್ಮಕತೆಯನ್ನು ಬರೆಯುತ್ತಿದ್ದಾನೆ. ಅದರ ಹೆಸರು 'ರೇಜ್'. ಅದರಲ್ಲಿ ಈ ವಿವರಗಳಿವೆ.
ಉತ್ತರ ಕೊರಿಯಾದಿಂದ ಇನ್ನೂ ಒಂದು ಭೀಕರ ಸುದ್ದಿ ಹೊರಬಿದ್ದಿದೆ. ಕಿಮ್ ತನ್ನ ವಾಣಿಜ್ಯ ಸಚಿವಾಲಯದ ಐವರು ಸಿಬ್ಬಂದಿಗಳನ್ನೇ ಕೊಲ್ಲಿಸಿದ್ದಾನೆ. ಅದಕ್ಕೆ ಕಾರಣ, ಅವರು ಒಂದು ಪಾರ್ಟಿಯಲ್ಲಿ ಕಿಮ್ ಬಗ್ಗೆ ಏನೋ ಟೀಕೆ ಮಾಡಿಕೊಳ್ಳುತ್ತ ಇದ್ದುದು. ಇದನ್ನು ಗುಟ್ಟಾಗಿ ಕೇಳಿಸಿಕೊಂಡ ಯಾರೋ ಕಿಮ್‌ಗೆ ಚಾಡಿ ಹೇಳಿದ್ದಾರೆ. ಇದು ಹೌದೇ ಅಲ್ಲವೇ ಎಂದು ಕೂಡ ಕಿಮ್ ವಿಚಾರಿಸಲು ಹೋಗಿಲ್ಲ. ಒಂದೇ ಆದೇಶ- ತಲೆ ಕತ್ತರಿಸಿ. ಈಗ ಐವರನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ. ಅವರ ಕುಟುಂಬದವರನ್ನು ಜೈಲುಗಳಿಗೆ ಕಳಿಸಲಾಗಿದೆ. ಶತ್ರುಗಳನ್ನು ಬೇರು ಸಹಿತ ನಾಶ ಮಾಡುವುದು ಕಿಮ್‌ನ ನೀತಿ.
ಅನಾರೋಗ್ಯದ ಮಧ್ಯೆ ಸರ್ವಾಧಿಕಾರಿ ಕಿಮ್ ಸಾವಿನ ಸುದ್ದಿ!
ಇತ್ತೀಚೆಗೆ ಚೀನಾದ ಗಡಿಯಿಂದ ಆಸುಪಾಸಿನ ಒಂದು ಕಿಲೋಮೀಟರ್‌ನಲ್ಲಿ ಯಾರೇ ಸುಳಿದಾಡಿದರೂ ಗುಂಡಿಕ್ಕಿ ಕೊಲ್ಲುವಂತೆ ಕಿಮ್ ನಿರ್ದೇಶಿಸಿದ್ದಾನೆ. ಅದಕ್ಕೆ ಕಾರಣ ಕೊರೋನಾ ಸೋಂಕಿನ ಭೀತಿ. ಇದುವರೆಗೂ ದೇಶದೊಳಗೆ ಒಂದೇ ಒಂದು ಸೋಂಕು ಪತ್ತೆಯಾಗಿಲ್ಲ ಎಂಧು ಉತ್ತರ ಕೊರಿಯಾ ಹೇಳಿಕೊಳ್ಳುತ್ತದೆ. ಪತ್ತೆಯಾದರೆ ವೈದ್ಯರು, ರೋಗಿ ಸಹಿತ ಕಿಮ್‌ನ ಬಂದೂಕಿನ ನಳಿಗೆಯನ್ನು ಎದುರಿಸಬೇಕಾಗುತ್ತದೆ ಎಂಬ ಭಯವೇ ಸೋಂಕು ಇಷ್ಟು ದಿನ ದೇಶದೊಳಗೆ ಹಬ್ಬದಂತೆ ಕಾಪಾಡಿರಬಹುದು. ಕಿಮ್ ಯಾರನ್ನೂ ಕೊಲ್ಲಿಸಲು ಹಿಂದೆ ಮುಂದೆ ನೋಡುವವನಲ್ಲ. ಇತ್ತೀಚೆಗೆ ಆತ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದಾನೆ, ಆತನ ತಂಗಿ ಆಡಳಿತ ನೋಡಿಕೊಳ್ಳಲಿದ್ದಾಳೆ ಎಂದು ಸುದ್ದಿಯಾಗಿತ್ತು. ಈಗ ಆ ತಂಗಿ ಎಲ್ಲಿದ್ದಾಳೆ ಎಂದೇ ಪತ್ತೆಯಿಲ್ಲ. ಆಕೆಯನ್ನೂ ಕೊಲ್ಲಲು ಕಿಮ್ ಹೇಸುವವನೇ ಅಲ್ಲ.
ಹುಚ್ಚುದೊರೆ ಕಿಮ್ ವಿಚಿತ್ರ ಆದೇಶ, ಮೂಕಪ್ರಾಣಿಗಳ ಶಾಪ ತಟ್ಟದೇ ಇರಲ್ಲ!