ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದೆ. ಹಾಗಿದ್ರೂ ಜನರು ಇಂಥಹವುಗಳನ್ನು ಮಾಡೋದನ್ನು ಮಾತ್ರ ನಿಲ್ಲಿಸಲ್ಲ. ಗಂಡ ಹೆರಿಗೆಗೆ ಅಂತಾ ತವರಿಗೆ ಬಂದಿದ್ದ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಮಂಗಳೂರು: ಭಾರತದಲ್ಲಿ ತ್ರಿವಳಿ ತಲಾಖ್‌ಗೆ ನಿಷೇಧ ಹೇರಲಾಗಿದೆ. ಯಾರಾದರೂ ತ್ರಿವಳಿ ತಲಾಖ್ ಘೋಷಿಸಿದರೆ ಅಂಥವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹೀಗಿದ್ದರೂ ದಕ್ಷಿಣಕನ್ನಡದಲ್ಲೊಬ್ಬ ವ್ಯಕ್ತಿ ವಿದೇಶದಿಂದಲೇ ಮೊಬೈಲ್ ಮೂಲಕವೇ ಪತ್ನಿಗೆ ತಲಾಕ್ ಹೇಳಿದ್ದಾನೆ. ಹೆರಿಗೆಗೆ ಅಂತಾ ತವರಿಗೆ ಬಂದಿದ್ದ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಕ್ ತಿಳಿಸಿದ್ದಾನೆ. ವಾಟ್ಸಾಪ್ ನಲ್ಲಿ ತ್ರಿವಳಿ ತಲಾಕ್ ನೀಡಿದ ಗಂಡನ ವಿರುದ್ಧ ಹೆಂಡತಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕೇರಳದ ಯುವಕನ ಜೊತೆ ಸುಳ್ಯದ ಮಿಸ್ರಿಯಾೆ ಎಂಬವರಿಗೆ ಮದುವೆ (Marriage)ಯಾಗಿತ್ತು. ಗಂಡ ಗಲ್ಫ್‌ನಲ್ಲಿದ್ದು, ಮಿಸ್ರಿಯಾ ಮೊದಲನೇ ಹೆರಿಗೆಗಾಗಿ ಭಾರತಕ್ಕೆ ಬಂದು ಮರಳಿ ಹೋಗಿದ್ದಳು. ಎರಡನೇ ಮಗುವಿನ ಹೆರಿಗೆಗೆ ಭಾರತಕ್ಕೆ ಬಂದಿದ್ದ ಪತ್ನಿ ಮಿಸ್ರೀಯಾ ಗೆ ಪತಿ ಅಬ್ದುಲ್ ರಷೀದ್ ಜಗಳವಾಡಿ ನಂತರ ತಲಾಕ್ ನೀಡಿದ್ದಾನೆ. ಕಳೆದ ಏಳು ವರ್ಷದ ಹಿಂದೆ ಮದುವೆಯಾಗಿದ್ದು, ಮೊದಲ ಮಗುವಾಗಿ ವಿದೇಶದಲ್ಲಿ ಪತಿ ಜೊತೆ ಮಿಸ್ರಿಯಾ ನೆಲೆಸಿದ್ದರು. ಎರಡನೇ ಮಗುವಿನ ಹೆರಿಗೆಗೆ ಬಂದಾಗ ಮನಸ್ತಾಪವಾಗಿದ್ದು, ಹೀಗಾಗಿ ತಲಾಕ್ ನೀಡಿದ್ದಾನೆ. ಸುಳ್ಯ ಪೊಲೀಸರಿಂದ ದೂರು ದಾಖಲಿಸಿ ತನಿಖೆ ನಡೆಯುತ್ತಿದೆ.
ಮದ್ವೆಯಾಗಿ ಎರಡೇ ಗಂಟೆಯಲ್ಲಿ ಹೆಂಡ್ತಿಗೆ ತಲಾಖ್ ಕೊಟ್ಟ ಭೂಪ..ಕಾರಣ ಇಷ್ಟೆ!
ಮಹಿಳೆ ನೀಡಿದ ದೂರಿನಲ್ಲೇನಿದೆ?
ಮಿಸ್ರಿಯಾ ಗಂಡ ಆರೋಪಿ ಮೊಹಮ್ಮದ್ ರಶೀದ್ (35)ಅಬುದಾಭಿಯಲ್ಲಿ ಉದ್ಯೋಗ (Job) ಮಾಡಿಕೊಂಡಿದ್ದು, 08.09.2016 ರಂದು ವಿವಾಹವಾಗಿರುತ್ತಾರೆ. ಮಿಸ್ರಿಯಾ ತನ್ನ 2ನೇ ಮಗುವಿನ ಗರ್ಭಿಣಿಯಿರುವ ಸಂದರ್ಭ ಆರೋಪಿಯು 2022 ಆಕ್ಟೋಬರ್ ತಿಂಗಳಂದು ಹೆರಿಗೆಗಾಗಿ ಅಕೆಯ ತಾಯಿಯ ಮನೆಯಾದ ಸುಳ್ಳದ ಜಯನಗರ ಎಂಬಲ್ಲಿಗೆ ಕಳುಹಿಸಿ ಕೊಟ್ಟಿದ್ದ. ಈ ಮಧ್ಯೆ ಸಣ್ಣ ಪುಟ್ಟ ಸಾಂಸಾರಿಕ ಕಲಹ ನಡೆಯುತ್ತಿದ್ದು, ನಂತರ ಮಾರ್ಚ್ 12ರಂದು ಏಕಾಏಕಿಯಾಗಿ ಫೋನ್ ಕರೆ ಮಾಡಿ ಹಾಗೂ ವಾಟ್ಸ್ ಆಪ್ ಸಂದೇಶಗಳ ಮೂಲಕ ಅವಾಚ್ಯ ಶಬ್ದಗಳಿಂದ ಹಾಗೂ ಮಾನಹಾನಿಕರವಾಗಿ ನಿಂದಿಸಿದ್ದಾನೆ.
ಆ ಬಳಿಕ ವಾಟ್ಸ್ ಆಫ್ ಸಂದೇಶದ ಮೂಲಕ 'ನೀನು ನಿನ್ನ ತಾಯಿಯೊಂದಿಗೆ ಜೀವಿಸು, ನೀನು ನನಗೆ ಬೇಡ. ಮೂರು ಸಲ ತಲಾಖ್ ಹೇಳುತ್ತೇನೆ. ತಲಾಖ್ ತಲಾಖ್, ತಲಾಖ್' ಎಂದು ತಿಳಿಸಿ ವಿಚ್ಛೇದನ ನೀಡಿದ್ದಾನೆ. ಮತ್ತೆ ದಿನಾಂಕ 08.07.2023 ರಂದು 'ತ್ರಿಪಲ್ ತಲಾಖ್' ವಿಚ್ಛೇದನ ನೀಡಿರುವುದರ ಬಗ್ಗೆ ಮತ್ತೆ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ಸ್ಟಾಗ್ರಾಂ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಹೆಂಡತಿಗೆ ತಲಾಖ್; ಕೊಲೆ ಬೆದರಿಕೆಯನ್ನೂ ಹಾಕಿದ ಪಾಪಿ ಪತಿ