ಗಿಲ್ಟ್ ಫೀಲ್ ಮಾಡಿಕೊಳ್ಳೋದು ಬೇಕಾ? ಏನು ಮಾಡಿದ್ರೆ ಲೈಫ್ ಬಿಂದಾಸ್ ಇರುತ್ತೆ?

By Suvarna News  |  First Published Sep 20, 2023, 5:23 PM IST

ನಮ್ಮನ್ನು ನಾವು ಖುಷಿಯಾಗಿ ಇಟ್ಟುಕೊಳ್ಳುವುದು, ನೇರವಾಗಿ ಭಾವನೆ ವ್ಯಕ್ತಪಡಿಸುವುದು, ಸಂಬಂಧಗಳನ್ನು ಪ್ರೀತಿಯಿಂದ ಪೊರೆಯುವುದು, ಅವಕಾಶಗಳನ್ನು ಮಿಸ್ ಮಾಡಿಕೊಳ್ಳದೇ ಇರುವ ಅನೇಕ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಹೆಚ್ಚು ವಿಷಾದಗಳಿಲ್ಲದಂತೆ ನೋಡಿಕೊಳ್ಳಬಹುದು.
 


ವಿಷಾದ ಎನ್ನುವುದು ಕೆಟ್ಟ ಭಾವನೆಗಳಲ್ಲಿ ಒಂದು. ಪಶ್ಚಾತ್ತಾಪ ಪಡುವುದು, ಆಗಿ ಹೋದ ಕೆಲಸಗಳಿಗೆ ವಿಷಾದಿಸುವುದು ಮನಸ್ಸನ್ನು ತೀವ್ರವಾಗಿ ಹದಗೆಡಿಸುವ ಸಂಗತಿಗಳು. ಏಕೆಂದರೆ, ಈ ಭಾವನೆಗಳಿಂದ ಯಾವ ಪ್ರಯೋಜನವೂ ಇಲ್ಲ. ಆದರೆ, ಇವು ಮನಸ್ಸನ್ನು ತಿದ್ದಬಲ್ಲವು, ಜೀವನದ ಬಹುಮುಖ್ಯ ಪಾಠಗಳನ್ನು ತಿಳಿಸಬಲ್ಲವು. ಹೀಗಾಗಿ, ಆಗಿ ಹೋದ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ಮತ್ತೆ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕೇ ವಿನಾ ಕೇವಲ ದುಃಖಿಸುತ್ತ, ವಿಷಾದಿಸುತ್ತ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ವಿಷಾದದ ಭಾವನೆ ಬೇಡವಾಗಿದ್ದರೆ ಕೆಲವು ಗುಣಗಳನ್ನು ಅಳವಡಿಸಿಕೊಳ್ಳಬೇಕು. ವಿಷಾದದ ಭಾವನೆಯಿಂದ ಮುಕ್ತರಾಗಿ ಬದುಕುವವರಲ್ಲಿ ಈ ಗುಣಗಳು ಧಾರಾಳವಾಗಿರುತ್ತವೆ. ಹೀಗಾಗಿ, ಪಶ್ಚಾತ್ತಾಪದ ಭಾವನೆಯಿಂದ ಮುಕ್ತರಾಗಬೇಕು ಎನ್ನುವವರು ಈ ಕೆಲವು ಕಾರ್ಯಗಳಿಗೆ ಸದಾಕಾಲ ಸಿದ್ಧವಾಗಿರಬೇಕು. ಅವುಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇವುಗಳಿಂದ ವಿಷಾದದ ಭಾವನೆ ಎಂದಿಗೂ ಹತ್ತಿರ ಸುಳಿಯುವುದಿಲ್ಲ. ನಿಮಗೂ ಇಂಥದ್ದೊಂದು ನಿರಾಳತೆ ಬೇಕೆಂದಾದರೆ ಹೀಗ್ಮಾಡಿ.

•    ನೈಜತೆಯೊಂದಿಗೆ ಬದುಕಿ (True to Yourself)
ಇತರರ ನಿರೀಕ್ಷೆಗಳಿಗೆ (Expectations) ತಕ್ಕಂತೆ ಜೀವನದ ಬಹುಮುಖ್ಯ ನಿರ್ಧಾರಗಳನ್ನು (Decision) ಕೈಗೊಳ್ಳುವುದು ಹಲವರ ಅಭ್ಯಾಸ. ಆದರೆ, ಇದರಿಂದ ಮುಂದೊಂದು ದಿನ ಭಾರೀ ಪಶ್ಚಾತ್ತಾಪವಾಗಬಹುದು. ಹೀಗಾಗಿ, ನಿಮಗೇನು ಅನಿಸುತ್ತದೆಯೋ ಅದನ್ನು ಮಾಡಿ.

Latest Videos

undefined

Viral Video: ಗಂಡನಾದವ ಈ ವಿಷಯ ತಿಳಿದುಕೊಂಡ್ರೆ ಸಂಸಾರದಲ್ಲಿ ಸುಖವೋ ಸುಖ...

ಗೊಂದಲವಿದ್ದಾಗ ಬೇರೆಯವರ ಸಲಹೆ, ಸಹಕಾರ ಪಡೆದುಕೊಳ್ಳುವುದು ಬೇರೆ. ಆದರೆ, ಇತರರ ಆಶಯಗಳನ್ನು (Wish) ದೃಷ್ಟಿಯಲ್ಲಿಟ್ಟುಕೊಂಡು ಜೀವಿಸುವುದು ಬೇರೆ ಎನ್ನುವ ಅರಿವು ಇರಲಿ. ಅಧ್ಯಯನಗಳ ಪ್ರಕಾರ, “ನಮಗೆ ತಕ್ಕಂತೆ ನಾವು ಬದುಕಲಿಲ್ಲ, ನಿರ್ಧಾರ ಕೈಗೊಳ್ಳಲಿಲ್ಲ’ ಎನ್ನುವುದು ಬಹಳಷ್ಟು ಜನರ ಜೀವನದ (Life) ಅಂತ್ಯದಲ್ಲಿ ಉಂಟಾಗುವ ಬಹುದೊಡ್ಡ ಪಶ್ಚಾತ್ತಾಪವಂತೆ.

•    ಕೆಲಸದ ಭಾರಕ್ಕಿಂತ ಹೆಚ್ಚಾಗಿ ಖುಷಿ
ಜೀವನದ ಮುಖ್ಯ ಸಮಯವನ್ನೆಲ್ಲ (Time) ಕಚೇರಿಯಲ್ಲೋ, ದುಡಿಮೆಯಲ್ಲೋ ಕಳೆಯುವ ಮಂದಿಗೆ ಕೊನೆಗೊಮ್ಮೆ ತೀವ್ರ ಪಶ್ಚಾತ್ತಾಪವಾಗುವುದು (Regret) ಇದೇ ಕಾರಣಕ್ಕೆ. ಅವರು ಅಮೂಲ್ಯ ಸಮಯವನ್ನೆಲ್ಲ ಮನೆಯಿಂದ ಹೊರಗೇ ಕಳೆದುಬಿಡುತ್ತಾರೆ. ತಮ್ಮವರೊಂದಿಗೆ ಎಂದಿಗೂ ಬೆರೆಯದೇ, ಅವರನ್ನು ಅರ್ಥ ಮಾಡಿಕೊಳ್ಳದೆ ಸಾಗುತ್ತಾರೆ. ಆರ್ಥಿಕ ಕಾರಣಕ್ಕಾಗಿ ಆಂತರಿಕ (Inner) ಸುಖವನ್ನು ಪರಿಗಣಿಸುವುದಿಲ್ಲ. ಚೆನ್ನಾಗಿ ಬದುಕಬೇಕು ಎನ್ನುವ ಸಾಮಾಜಿಕ ಒತ್ತಡವೂ (Social Stress) ಇದರ ಹಿಂದಿರಬಹುದು. ಆದರೆ, ಖುಷಿ (Happiness) ಅನುಭವಿಸದ ಜೀವನದಿಂದ ವಿಷಾದವೇ ಹೆಚ್ಚು.

•    ಸಂಬಂಧಗಳ ಆರೈಕೆ (Nurturing Relations) 
ಬಹಳಷ್ಟು ಅಧ್ಯಯನಗಳು (Studies) ಇದನ್ನು ಸಾಬೀತುಪಡಿಸಿವೆ. ನಮಗಾಗಿ ನಾವೇನು ಮಾಡಿಕೊಂಡಿದ್ದೇವೆ ಎನ್ನುವುದಕ್ಕಿಂತ ಇತರರಿಗಾಗಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಇದರರ್ಥ, ಅವರ ನಿರೀಕ್ಷೆಗೆ ತಕ್ಕಂತೆ ಬದುಕಬೇಕು ಎಂದಲ್ಲ. ನಾವು ಹೇಗಿದ್ದೇವೆಯೋ ಹಾಗೆಯೇ ಸಂಬಂಧಗಳನ್ನು ಪೊರೆಯಲು ಸಾಧ್ಯ. ಸಾಮಾಜಿಕ ಬಾಂಧವ್ಯ ದೃಢವಾಗಿರುವವರಲ್ಲಿ ಸಂತೋಷ, ಜೀವನಕ್ಕೊಂದು ಅರ್ಥ ಇರುತ್ತದೆ. ಸಂಬಂಧಗಳು ಚೆನ್ನಾಗಿದ್ದರೆ ಉತ್ತಮ ಆರೋಗ್ಯ (Health), ಮಾನಸಿಕ ಶಾಂತಿ ಲಭಿಸುತ್ತವೆ. ಆದರೆ, ಸಂಬಂಧಗಳನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಥರ ತೆಗೆದುಕೊಳ್ಳುತ್ತೇವೆ. ಇದರಿಂದಾಗಿ ಅವು ಹಾಳಾಗುತ್ತವೆ. ಆದರೆ, ವಿಷಾದವನ್ನು ಬಯಸದ ಮಂದಿ ಇದನ್ನು ಚೆನ್ನಾಗಿ ಅರಿತಿರುತ್ತಾರೆ. ಅವರು ಸಂಬಂಧಗಳನ್ನು ಪೋಷಿಸುವುದರಲ್ಲಿ ಸದಾ ಮುಂದಿರುತ್ತಾರೆ. 

Self Love: ನಿಮ್ಮನ್ನು ನೀವು ಪ್ರೀತಿಸುತ್ತಿದ್ರೆ ಈ ಕೆಲಸಗಳಿಂದ ದೂರವಿರಿ!

•    ನಿಮ್ಮ ನಿಜವಾದ ಭಾವನೆ (Feelings)
ಅನೇಕ ಜನ ತಮ್ಮ ನಿಜವಾದ ಭಾವನೆಗಳನ್ನು ಮರೆಮಾಚುತ್ತಾರೆ. ಇದಕ್ಕೆ ಕಾರಣಗಳು ಸಾಕಷ್ಟಿರುತ್ತವೆ. ಬೇರೆಯವರಿಗೆ ನೋವು ನೀಡಬಾರದು ಎನ್ನುವುದೂ ಇರಬಹುದು. ಆದರೆ, ನಿಮ್ಮ ನಿಜವಾದ ಭಾವನೆಗಳನ್ನು ಮರೆಮಾಚಿ ಎಷ್ಟು ಕಾಲ ಸುಖವಾಗಿ ಇರಬಲ್ಲಿರಿ? ಹೀಗಾಗಿ, ನಿಮಗೇನು ಅನಿಸುತ್ತದೆಯೋ ಅದನ್ನು ನೇರವಾಗಿ, ಧೈರ್ಯವಾಗಿ ಹೇಳುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ವಿಷಾದದ ಭಾವನೆ ಹತ್ತಿರ ಸುಳಿಯುವುದಿಲ್ಲ. ವಿಷಾದವಿಲ್ಲದೆ ಬಾಳುವವರಲ್ಲಿ ಈ ಗುಣ ಇದ್ದೇ ಇರುತ್ತದೆ. ಹಾಗೆಯೇ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು, ನಮ್ಮತನವನ್ನು ನಂಬುವುದು, ಕಾಲಕಾಲಕ್ಕೆ ನಮ್ಮನ್ನು ಕ್ಷಮಿಸಿಕೊಳ್ಳುವುದರಿಂದ ವಿಷಾದದ ಭಾವನೆ ಕಾಡದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. 
 

click me!