ರಾಮಮಂದಿರಕ್ಕೆ ಜೊತೆಯಾಗಿ ಬಂದ್ರು ಮಾಜಿ ಪ್ರೇಮಿಯತ್ತ ತಲೆಯೆತ್ತಿಯೂ ನೋಡದ ಕತ್ರೀನಾ

By Suvarna News  |  First Published Jan 24, 2024, 6:12 PM IST

ಅಯೋಧ್ಯೆಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಕತ್ರೀನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡರೆ ಮಾಜಿ ಗೆಳೆಯ ಹಾಗೂ ನಟ ರಣ್ಬೀರ್ ಕಪೂರ್ ತಮ್ಮ ಪತ್ನಿ ಆಲಿಯಾ ಜೊತೆ ಕಾಣಿಸಿಕೊಂಡಿದ್ದರು. ಈ ಮಾಜಿ ಜೋಡಿ ಜೊತೆ ಜೊತೆಯಾಗಿಯೇ ತಮ್ಮ ಪತಿ/ಪತ್ನಿ ಜೊತೆ ಕಾಣಿಸಿಕೊಂಡಿದ್ದ ವೀಡಿಯೋ ನೋಡಿದ ಜನ ಈ ಬಗ್ಗೆ ದೊಡ್ಡ ಚರ್ಚೆಯನ್ನೇ ಮಾಡಿದ್ದಾರೆ.


ಬಾಲಿವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ಕತ್ರಿನಾ ಕೈಫ್ ಕೂಡ ಒಬ್ಬರು. ವಿದೇಶಿ ಮೂಲದವರಾಗಿದ್ದರು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಪರಿಶ್ರಮದಿಂದ ಸಾಕಷ್ಟು ಹೆಸರು ಮಾಡಿದವರು. ಪ್ರಸ್ತುತ ನಟ ವಿಕ್ಕಿ ಕೌಶಲ್ ಮದ್ವೆಯಾಗಿ ಸುಮಧುರ ದಾಂಪತ್ಯ ಜೀವನ ಮಾಡುತ್ತಿದ್ದರೂ ಎಲ್ಲಾ ನಟ ನಟಿಯರಂತೆ ಕತ್ರೀನಾ ಅವರ ಕೆಲ ಹಳೆಯ ಪ್ರೇಮ ಸಂಬಂಧಗಳು ಆಗಾಗ ಮುನ್ನೆಲೆಗೆ ಬರುತ್ತದೆ. ಅದೇ ರೀತಿ ಈಗ ಕತ್ರೀನಾ ಅವರು ತಮ್ಮ ಮಾಜಿ ಪ್ರೇಮಿಗಳ ಜೊತೆ ಹೇಗೆ ವರ್ತಿಸುತ್ತಾರೆ ಎಂಬ ಬಗ್ಗೆ ಇಂಟರ್‌ನೆಟ್‌ನಲ್ಲಿ ನೆಟ್ಟಿಗರು ಚರ್ಚೆ ಮಾಡಿದ್ದು, ಈ ವಿಚಾರ ಈಗ ವೈರಲ್ ಆಗಿದೆ. ಅದಕ್ಕೆ ಕಾರಣವಾಗಿದ್ದು, ಅಯೋಧ್ಯೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಎಂಬುದು ಕೂಡ ವಿಶೇಷ

ಅಯೋಧ್ಯೆಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ನಟಿಯರು ಕ್ರಿಕೆಟಿಗರು ಉದ್ಯಮಿಗಳು, ಸಾಮಾನ್ಯರಾಗಿದ್ದು, ಅಸಾಮಾನ್ಯರೆನಿಸಿದ ಸಾವಿರಾರು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಈ ಆಹ್ವಾನ ಸ್ವೀಕರಿಸಿದ ಬಹುತೇಕ ಸಿನಿಮಾ ತಾರೆಯರು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅದೇ ರೀತಿ ಬಾಲಿವುಡ್ ನಟಿ ಕತ್ರೀನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡರೆ ಮಾಜಿ ಗೆಳೆಯ ಹಾಗೂ ನಟ ರಣ್ಬೀರ್ ಕಪೂರ್ ತಮ್ಮ ಪತ್ನಿ ಆಲಿಯಾ ಜೊತೆ ಕಾಣಿಸಿಕೊಂಡಿದ್ದರು. ಈ ಮಾಜಿ ಜೋಡಿ ಜೊತೆ ಜೊತೆಯಾಗಿಯೇ ತಮ್ಮ ಪತಿ/ಪತ್ನಿ ಜೊತೆ ಕಾಣಿಸಿಕೊಂಡಿದ್ದ ವೀಡಿಯೋ ನೋಡಿದ ಜನ ಈ ಬಗ್ಗೆ ದೊಡ್ಡ ಚರ್ಚೆಯನ್ನೇ ಮಾಡಿದ್ದಾರೆ.

Tap to resize

Latest Videos

undefined

ಆಮೀರ್ ಖಾನ್ ಮಗಳ ರಿಸೆಪ್ಷನಲ್ಲಿ ಕತ್ರೀನಾ ಹೀಗೆ ಮಾಡಿರೋದು ಸರೀನಾ ಅಂತಿದ್ದಾರೆ ಫ್ಯಾಷನ್ ಪ್ರಿಯರು!

ಸಲ್ಮಾನ್ ಖಾನ್  ಹೆಸರು ಕೂಡ ನಟಿ ಕತ್ರೀನಾ ಜೊತೆ ಸಾಕಷ್ಟು ಬರೀ ತಳುಕು ಹಾಕಿಕೊಂಡಿತ್ತು. ಆದರೆ ಕತ್ರೀನಾ ಸಲ್ಮಾನ್ ಖಾನ್ ಜೊತೆ ಈಗಲೂ ಉತ್ತಮ ಒಡನಾಟವನ್ನು ಹೊಂದಿದ್ದಾಳೆ. ಆದರೆ ರಣ್‌ಬೀರ್ ಜೊತೆ ಆಕೆಯ ಓಡನಾಟ ಆ ರೀತಿ ಆತ್ಮೀಯವಾಗಿ ಇಲ್ಲ, ಅಯೋಧ್ಯೆಯ ಸಮಾರಂಭದಲ್ಲಿ ಜೊತೆ ಜೊತೆಗೆ ಓಡಾಡ್ತಿದ್ರು ಕತ್ರೀನಾ ರಣ್‌ಬೀರ್‌ನ ಮಾತನಾಡಿಸುವ ಗೋಜಿಗೆ ಹೋಗಿಲ್ಲ, ಇದು ಅನೇಕರ ಗಮನ ಸೆಳೆದಿದೆ.  

ಈ ದೃಶ್ಯ ನೋಡಿದ ರೆಡ್ಡಿಟ್ ಬಳಕೆದಾರರೊಬ್ಬರು ಕತ್ರೀನಾ ಸಲ್ಮಾನ್ ಜೊತೆ  ಹೇಗಿದ್ದಾಳೆ ಹಾಗೂ  ರಣ್‌ಬೀರ್ ಕಪೂರ್ ಜೊತೆ ಹೇಗೆ ಇದ್ದಳು ಎಂಬುದನ್ನು ತೋರಿಸುವ ಎರಡೂ ಫೋಟೋಗಳನ್ನು ಕೊಲಾಜ್ ಮಾಡಿ ಪೋಸ್ಟ್ ಮಾಡಿದ್ದು, ಇಬ್ಬರೂ ಮಾಜಿ ಗೆಳೆಯರೇ ಆದರೂ ಏಕೆ ಸಲ್ಮಾನ್ ಖಾನ್ ಜೊತೆ ಕತ್ರೀನಾ ಚೆನ್ನಾಗಿದ್ದಾರೆ. ಏಕೆ ರಣ್‌ಬೀರ್ ಕಪೂರ್‌ನ ನಿರ್ಲಕ್ಷ್ಯ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ.

ಕತ್ರೀನಾ ಕಾಮ್ ಆ್ಯಂಡ್ ಕಂಪೋಸ್ಡ್ ಆಗಿರಲು ವಿಕ್ಕಿ ಕಾರಣವಂತೆ, ಸಂಬಂಧ ಉತ್ತಮವಾಗಿರಲು ಇಲ್ಲಿದೆ ಒಂದು ಅದ್ಭುತ ಟಿಪ್

ಈ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 'ಕತ್ರೀನಾಗೆ ಬಾಲಿವುಡ್‌ನಲ್ಲಿ ತನ್ನ ಆರಂಭದ ದಿನಗಳಿಂದಲೂ ಸಲ್ಮಾನ್ ಕುಟುಂಬ ಮಾಡಿದ ಸಹಾಯವನ್ನು ಯಾರು ಮರೆಯುವಂತಿಲ್ಲ, ಹೀಗಾಗಿ ಸಹಜವಾಗಿಯೇ ಕತ್ರೀನಾಗೆ ಸಲ್ಮಾನ್ ಖಾನ್ ಮೇಲೆ ಅತೀವವಾದ ಗೌರವವಿದೆ.  ಅಂದರೆ ಅವರು ಒಳ್ಳೆಯವರಲ್ಲ ಎಂದು ನಿಮಗೆ ತಿಳಿದಿದೆ. ಆದರೆ ಅವರದ್ದೇ ಕಾರಣದಿಂದ ತಾನು ಈ ಹಂತಕ್ಕೆ ಬೆಳೆದೇ ಎಂಬುದನ್ನು ಆಕೆ ಮರೆತಿಲ್ಲ ಇದೇ ಕಾರಣಕ್ಕೆ ಸಲ್ಮಾನ್ ಜೊತೆ ಆತ್ಮೀಯವಾಗಿದ್ದಾಳೆ' ಎಂದು ಒಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸಲ್ಮಾನ್‌ಗಿಂತ ಕತ್ರೀನಾ ಅತೀಆಗಿ ಹಚ್ಚಿಕೊಂಡಿದ್ದು, ರಣ್‌ಬೀರ್ ಕಪೂರ್‌ನ್ನು ಹೀಗಾಗಿ ಮನಸ್ಸನ್ನು ಘಾಸಿಗೊಳಿಸುವ ಹಳೆಯ ನೆನಪುಗಳಿಂದ ದೂರ ಉಳಿಯಲು ಬಯಸಿದ್ದಾರೆ ಕತ್ರೀನಾ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಇನ್ನು ಬಾಲಿವುಡ್‌ನಲ್ಲಿ ಕತ್ರೀನಾ ಗೆ ಮೆಂಟರ್ ರೀತಿ ಇದ್ದವರು ಸಲ್ಮಾನ್ ಖಾನ್, ಕತ್ರೀನಾ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡಿದವರು ಅವರೇ, ಇವರ ಮಧ್ಯೆ ಪ್ರೀತಿ ಇತ್ತು ಎಂದು ಆಗ  ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ಆದರೂ 2010ರಲ್ಲಿ ಈ ಜೋಡಿ ಬೇರೆಯಾಗಿತ್ತು. 2003ರಲ್ಲಿ ಬೂಮ್ ಸಿನಿಮಾ ಮೂಲಕ ಕತ್ರೀನಾ ಬಾಲಿವುಡ್ ಪ್ರವೇಶ ಮಾಡಿದ್ದರು. ಇದಾದ ನಂತರ ಸಲ್ಮಾನ್ ಜೊತೆ ಕತ್ರೀನಾ ಮೈನೇ ಪ್ಯಾರ್ ಕ್ಯೂಂ ಕಿಯಾ, ಯುವರಾಜ್, ಪಾರ್ಟನರ್ ಮುಂತಾದ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. 

ಇನ್ನು ರಣ್ಬೀರ್ ಜೊತೆ ಸಂಬಂಧದಲ್ಲಿದ್ದ ವೇಳೆ ಕತ್ರೀನಾ ಹಾಗೂ ರಣ್ಬೀರ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿ ಎನಿಸಿದ್ದರು. ಅಭಿಮಾನಿಗಳಂತೂ ಇವರಿಬ್ಬರು ಮದ್ವೆಯಾಗ್ತಾರೆ ಅಂತ ತುದಿಗಾಲಲ್ಲಿ ಕಾಯ್ತಿದ್ದಾಗಲೇ ಇಬ್ಬರು ಬೇರೆ ಬೇರೆಯಾದರು. 2016ರಲ್ಲಿ ಪರಸ್ಪರ ದೂರಾದ ಜೋಡಿ ಈಗ ಬೇರೆ ಬೇರೆಯೇ ಮದ್ವೆಯಾಗಿದ್ದು ತಮ್ಮ ಕುಟುಂಬದೊಂದಿಗೆ ಚೆನ್ನಾಗಿದ್ದಾರೆ.

click me!